Select Page

Date: June 26, 2023

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಉಡುಪಿ ಜಿಲ್ಲೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ ಜಿಲ್ಲೆ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಉಡುಪಿ, ವಿಕಲ ಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಉಡುಪಿ ಜಿಲ್ಲೆ, ಪೊಲೀಸ್ ಇಲಾಖೆ ಉಡುಪಿ ,ಜಿಲ್ಲಾ ಆಸ್ಪತ್ರೆ ಉಡುಪಿ, ಡಾ. ಎ. ವಿ. ಬಾಳಿಗಾ ಸ್ಮಾರಕ ಆಸ್ಪತ್ರೆ ಉಡುಪಿ, ಕಮಲ್ ಎ. ಬಾಳಿಗಾ ಚಾರಿಟೇಬಲ್ ಟ್ರಸ್ಟ್ ಮುಂಬಯಿ, ಭಾರತೀಯ ವೈದ್ಯಕೀಯ ಸಂಘ ಉಡುಪಿ-ಕರಾವಳಿ, ಮಣಿಪಾಲ ಮಹಿಳಾ ಸಮಾಜ ಮಣಿಪಾಲ ಇವರ ಜಂಟಿ ಆಶ್ರಯದಲ್ಲಿ “ನಶಾ ಮುಕ್ತ ಭಾರತ ಅಭಿಯಾನದಡಿ” “ವಿಶ್ವ ಮಾದಕ ದ್ರವ್ಯ ವಿರೋಧಿ ದಿನಾಚರಣೆ” ಅಂಗವಾಗಿ ಹಮ್ಮಿಕೊಂಡಿರುವ “ವಿದ್ಯಾರ್ಥಿಗಳು ಸಹ ಸಲಹೆಗಾರರಾಗಿ” ಕಾಲೇಜು ವಿದ್ಯಾರ್ಥಿಗಳಿಗೆ ಮಾಹಿತಿ ಕಾರ್ಯಾಗಾರವು ಜಿಲ್ಲಾಧಿಕಾರಿ ಕಚೇರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ದಿನಾಂಕ 26/62023ರಂದು ನಡೆಯಿತು. ಮಾದಕ ವಸ್ತುಗಳ ಬಳಕೆ ಹಾಗೂ ಅಕ್ರಮ ಸಾಗಾಣಿಕೆಯಿಂದ ಉಂಟಾಗುವ ಸಮಸ್ಯೆಗಳ ಬಗ್ಗೆ ಜಾಗತಿಕವಾಗಿ ಅರಿವು ಮೂಡಿಸುವ ಸಲುವಾಗಿ ಪ್ರತಿವರ್ಷ ಜೂನ್ 26 ರಂದು ಅಂತರಾಷ್ಟ್ರೀಯ ಮಾದಕ ವಸ್ತುಗಳ ದುರುಪಯೋಗ ಮತ್ತು ಕಾನೂನು ಬಾಹಿರ ಸಾಗಾಟ ವಿರೋಧಿ ದಿನವನ್ನು ಆಚರಿಸಲಾಗುತ್ತದೆ. ವಿಶ್ವ ಮಾದಕ ದ್ರವ್ಯ ವಿರೋಧಿ ದಿನಾಚರಣೆಯ ಈ ವರ್ಷದ ಧ್ಯೇಯವಾಕ್ಯ- ಎಲ್ಲರೂ ಜೊತೆಗೂಡಿ ವಿಶ್ವದಲ್ಲಿ ಮಾದಕ ದ್ರವ್ಯ ಸಮಸ್ಯೆಯನ್ನು ನಿಭಾಯಿಸೋಣ” ಎಂಬುದಾಗಿದೆ. ಈ ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀಮತಿ ಶರ್ಮಿಳಾ ಎಸ್. ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಮಾನ್ಯ ಸದಸ್ಯ ಕಾರ್ಯದರ್ಶಿಗಳು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಉಡುಪಿ ಜಿಲ್ಲೆ. ಇವರು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ವಿದ್ಯುಕ್ತವಾಗಿ ಚಾಲನೆಯನ್ನು ನೀಡಿದರು.ವಿಕಲ ಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ವತಿಯಿಂದ ವಿದ್ಯಾರ್ಥಿಗಳು ಮಾದಕ ದ್ರವ್ಯ ವ್ಯಸನದಿಂದ ಹೊರಗುಳಿಯಲು ಪ್ರೇರೆಪಿಸುವ ಉದ್ದೇಶದಿಂದ ಅತಿಥಿ ಗಣ್ಯರು ಹಾಗೂ ಎಲ್ಲಾ ವಿದ್ಯಾರ್ಥಿಗಳು ಎದ್ದು ನಿಂತು ಪ್ರತಿಜ್ಞಾ ವಚನ ವನ್ನು ಸ್ವೀಕರಿಸಿದರು. ರಾಷ್ಟ್ರೀಯ ಟೆಲಿ ಮಾನಸಿಕ ಆರೋಗ್ಯ ಕಾರ್ಯಕ್ರಮ ಉಡುಪಿ ಜಿಲ್ಲೆಯಲ್ಲಿ ಪ್ರಾರಂಭಗೊಂಡಿತು. ಈ ಕಾರ್ಯಕ್ರಮವು ನಿಮಾಸ್ಸ್ ಬೆಂಗಳೂರು ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಂಟಿಯಾಗಿ “ಟೆಲಿ ಮಾನಸ” ಶುಲ್ಕ ರಹಿತ ಮಾನಸಿಕ ಆರೋಗ್ಯಕ್ಕಾಗಿ ಆಪ್ತಸಮಾಲೋಚನೆ ಸೇವೆಯನ್ನು ಪ್ರಾರಂಭಿಸುತ್ತಿದೆ. ಟಿಲಿ ಮಾನಸ್ ಸೇವೆಯನ್ನು ಮುಖ್ಯವಾಗಿ ವ್ಯಥೆಗೆ ಒಳಪಟ್ಟವರು, ಪರೀಕ್ಷಾ ಒತ್ತಡಕ್ಕೆ ಒಳಗಾದವರು ಕೌಟುಂಬಿಕ ಸಮಸ್ಯೆಗೆ ಒಳಗಾದವರು, ಆತ್ಮಹತ್ಯೆ ಆಲೋಚನೆ ಹೊಂದಿದವರು, ಮದ್ಯಮಾದಕ ವ್ಯಸನದಿಂದ ಬಳಲುವವರು ಹಾಗೂ ಇತರೆ ಯಾವುದೇ ಮಾನಸಿಕ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರು ಈ ಸೇವೆಯನ್ನು ಉಚಿತವಾಗಿ ಪಡೆಯಬಹುದು. ಟೊಲ್ ಪ್ರೀ ನಂಬರ್ 14416 ಇದಕ್ಕೆ ಶುಲ್ಕ ರಹಿತ ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು.ವೇದಿಕೆಯಲ್ಲಿ ಡಾ. ನಾಗಭೂಷಣ್ ಉಡುಪ ಹೆಚ್. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಉಡುಪಿ, ಶ್ರೀ ರೋಶನ್ ಕುಮಾರ್ ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿಗಳು ಉಡುಪಿ, ಡಾ. ಕೇಶವ್ ನಾಯಕ್ ಕಾರ್ಯದರ್ಶಿ ಭಾರತೀಯ ವೈದ್ಯಕೀಯ ಸಂಘ ಉಡುಪಿ-ಕರಾವಳಿ ಮತ್ತು ಕೀಲು & ಮೂಳೆ ರೋಗ ತಜ್ಞರು, ಹೈಟೆಕ್ ಆಸ್ಪತ್ರೆ ಉಡುಪಿ, ಡಾ. ವಿ ಭಂಡಾರಿ, ಡಾ. ಪಿ. ವಿ. ಭಂಡಾರಿ ಅಧ್ಯಕ್ಷರು , ಭಾರತೀಯ ವೈದ್ಯಕೀಯ ಸಂಘ ಉಡುಪಿ-ಕರಾವಳಿ ಹಾಗೂ ನಿರ್ಧೇಶಕರು ಡಾ. ಎ. ವಿ. ಬಾಳಿಗಾ ಸಮೂಹ ಸಂಸ್ಥೆಗಳು, ಡಾ ಸುಲತಾ ವಿ. ಭಂಡಾರಿ ಅಧ್ಯಕ್ಷರು ಮಣಿಪಾಲ ಮಹಿಳಾ ಸಮಾಜ ಮಣಿಪಾಲ & ನೇತ್ರ ತಜ್ಞರು ಕೆ.ಎಮ್.ಸಿ. ಮಣಿಪಾಲ ಇವರೆಲ್ಲರು ಉಪಸ್ಥಿತರಿದ್ದರು.ಶ್ರೀ ಅಕ್ಷಯ್ ಎಮ್. ಹಾಕೇ IPS, ಪೊಲೀಸ್ ವರಿಷ್ಠಾಧಿಕಾರಿಗಳು ಉಡುಪಿ ಜಿಲ್ಲೆ, ಇವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿಗಳು ಮಾದಕ ವ್ಯಸನಕ್ಕೆ ಬಲಿಯಾಗಬೇಡಿ,ಹಾಗೆಯೇ ಸಹಪಾಠಿಗಳು ಈ ವ್ಯಸನಕ್ಕೆ ಬಲಿಯಾದಲ್ಲಿ ಹೇಗೆ ಅದರಿಂದ ಮುಕ್ತರಾಗಲು ಸಹಾಯ ಮಾಡಬೇಕು ಎಂದು ವಿದ್ಯಾರ್ಥಿಗಳಿಗೆ ಹೇಳಿದರು. ಡಾ. ಎ ವಿ ಬಾಳಿಗ ಸ್ಮಾರಕ ಆಸ್ಪತ್ರೆಯ ಆಪ್ತ ಸಮಾಲೋಚಕರಾಗಿರುವ  ಶ್ರೀಮತಿ ಪದ್ಮ ರಾಘವೇಂದ್ರ ಇವರು ಕಾರ್ಯಕ್ರಮಕ್ಕೆ ಪ್ರಾರ್ಥಿಸಿದರು.  ಆಗಮಿಸಿದ ಅತಿಥಿ ಅಭ್ಯಾಗತರನ್ನು ಡಾ. ನಾಗ ಭೂಷಣ್ ಉಡುಪ ಹೆಚ್. , ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಉಡುಪಿ ಇವರು ಸ್ವಾಗತಿಸಿದರು. ಡಾ. ಲತಾ ನಾಯಕ್, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅಧಿಕಾರಿಗಳು ಉಡುಪಿ. ಇವರು ವಂದಿಸಿದರು. ಡಾ ಎ ವಿ ಬಾಳಿಗ ಸ್ಮಾರಕ ಆಸ್ಪತ್ರೆಯ ಆಡಳಿತ ಅಧಿಕಾರಿಯಾಗಿರುವ ಶ್ರೀಮತಿ ಸೌಜನ್ಯ ಶೆಟ್ಟಿ ಮತ್ತು ಆಪ್ತ ಸಮಾಲೋಚಕರು ಆಗಿರುವ ಶ್ರೀಮತಿ ಪದ್ಮ ರಾಘವೇಂದ್ರ ಇವರು ನಿರೂಪಿಸಿದರು.                                                                                                                          ಸಭಾ ಕಾರ್ಯಕ್ರಮದ ನಂತರ ಮಾಹಿತಿ ಕಾರ್ಯಗಾರ ನಡೆಯಿತು.
ಸಂಪನ್ಮೂಲ ವ್ಯಕ್ತಿಗಳು. ವಿಷಯಗಳು

1.ಡಾ ಮನು ಆನಂದ್, ಮನೋ ವೈದ್ಯರು, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅಧಿಕಾರಿ ಉಡುಪಿ: ಮಾದಕ ದ್ರವ್ಯಗಳ ಪರಿಚಯ
2. ಡಾ ವಾಸುದೇವ್ ಎಸ್ , ಮನೋ ವೈದ್ಯರು ಜಿಲ್ಲಾ ಸರಕಾರಿ ಆಸ್ಪತ್ರೆ ಉಡುಪಿ: ಮಾದಕ ದ್ರವ್ಯಗಳ ವ್ಯಸನದಿಂದ ಆಗುವ ದೈಹಿಕ ಮತ್ತು ಮಾನಸಿಕ ತೊಂದರೆಗಳು
3. ಡಾ ವಿನೋದ ಚಂದ್ರಕಾಂತ್ ನಾಯಕ್  ಪ್ರಾಧ್ಯಾಪಕರು ವಿಧಿವಿಜ್ಞಾನ ಔಷಧ ವಿಭಾಗ: ಮಾದಕ ವಸ್ತುಗಳ ವ್ಯಸನ ಮತ್ತು ಕಾನೂನು                                                                                                                                                    4. ಡಾ ಪಿ ವಿ ಭಂಡಾರಿ, ವೈದ್ಯಕೀಯ ನಿರ್ದೇಶಕರು ಡಾ ಎ ವಿ ಬಾಳಿಗ ಸಮೂಹ ಸಂಸ್ಥೆಗಳು ಉಡುಪಿ :ಸ್ನೇಹಿತರ ಒತ್ತಾಯವನ್ನು ಗುರುತಿಸುವುದು ಮತ್ತು ಮಾದಕ ವಸ್ತುಗಳ ಬಳಕೆಯನ್ನು ನಿರಾಕರಿಸುವುದು                                           5.ಡಾ ದೀಪಕ್ ಮಲ್ಯ, ಮನೋವೈದ್ಯರು, ಡಾ ಎ ವಿ ಬಾಳಿಗ ಸ್ಮಾರಕ ಆಸ್ಪತ್ರೆ ಉಡುಪಿ: ಸಂಪನ್ಮೂಲಗಳನ್ನು ಮತ್ತು ಬೆಂಬಲಗಳನ್ನು ಗುರುತಿಸುವುದು ಮಾಹಿತಿ ಕಾರ್ಯಗಾರದ ನಂತರ ಡಾ ಎ ವಿ ಬಾಳಿಗ ಸ್ಮಾರಕ ಆಸ್ಪತ್ರೆಯ ಸಿಬ್ಬಂದಿ ವರ್ಗದವರಿಂದ ವಿದ್ಯಾರ್ಥಿಗಳು ಸಹ ಸಲಹೆಗಾರರಾಗಿ ಹೇಗೆ ಸಹಾಯ ಮಾಡಬಹುದು ಎಂಬುದರ ಕುರಿತಾದ ಪ್ರಾತ್ಯಕ್ಷಿತೆಯನ್ನು ನಡೆಸಿಕೊಟ್ಟರು.