ದಿನಾಂಕ 15-02-2026 ರ ಆದಿತ್ಯವಾರದಂದು ಡಾ. ಎ. ವಿ. ಬಾಳಿಗಾ ಸ್ಮಾರಕ ಆಸ್ಪತ್ರೆ, ದೊಡ್ಡಣಗುಡ್ಡೆ, ಉಡುಪಿ; ಕಮಲ್. ಎ. ಬಾಳಿಗಾ ಚಾರಿಟೇಬಲ್ ಟ್ರಸ್ಟ್ ಮುಂಬೈ ಮತ್ತು ಒನ್ ಗುಡ್ ಸ್ಟೆಪ್ ಇವರ ಜಂಟಿ ಆಶ್ರಯದಲ್ಲಿ ನವಜೀವನ ಲೇ ಕೌನ್ಸಿಲರ್ ತರಬೇತಿಯ 8ನೇ ಕಾರ್ಯಾಗಾರದ ಉದ್ಘಾಟನಾ ಸಮಾರಂಭವು ಡಾ. ಎ. ವಿ. ಬಾಳಿಗಾ ಸ್ಮಾರಕ ಆಸ್ಪತ್ರೆಯ ಕಮಲ್. ಎ. ಬಾಳಿಗಾ ಸಭಾಗಂಣದಲ್ಲಿ ಶ್ರೀಮತಿ ಪ್ರತಿಮಾ ಬಾಳಿಗ ಕೆ, ಸ್ಟ್ಯಾಟಿಸ್ಟಿಕ್ಸ್ ಅಧ್ಯಾಪಕರು, ಪೂರ್ಣಪ್ರಜ್ಞಾ ಪಿಯು ಕಾಲೇಜು ಉಡುಪಿ ಇವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ಜೊತೆಗೆ ಮದ್ಯವ್ಯಸನಿ ಪೋಷಕರ ಮಕ್ಕಳ ಜಾಗೃತಿ ಸಪ್ತಾಹದ ಅಂಗವಾಗಿ ಮಕ್ಕಳ ಮಾನಸಿಕ ಆರೋಗ್ಯದ ಕುರಿತು 2 ನೇ ದಿನದ ಮಾಹಿತಿ ಕಾರ್ಯಗಾರವು ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಪಿ. ವಿ. ಭಂಡಾರಿ, ವೈದ್ಯಕೀಯ ನಿರ್ದೇಶಕರು, ಡಾ. ಎ. ವಿ. ಬಾಳಿಗಾ ಸಮೂಹ ಸಂಸ್ಥೆಗಳು ಉಡುಪಿ ಇವರು ವಹಿಸಿದ್ದರು. ಅತಿಥಿಗಳಾಗಿ ಡಾ. ಭಾಗ್ಯಲಕ್ಮಿ, ಸಖಿ ಟ್ರಸ್ಟ್ ಹೊಸಪೇಟೆ, ಶ್ರೀ ರಾಘವೇಂದ್ರ ರಾವ್, ಲೇ ಪರ್ಸನ್ ಕೌನ್ಸಿಲರ್ ಹಾಗೂ ನಿವೃತ ಬ್ಯಾಂಕ್ ಉದ್ಯೋಗಿ ಆಗಮಿಸಿದ್ದರು. ವೇದಿಕೆಯಲ್ಲಿ ಆಸ್ಪತ್ರೆಯ ಮನೋವೈದ್ಯರಾದ ಡಾ. ವಿರೂಪಾಕ್ಷ ದೇವರಮನೆ, ನವಜೀವನ ಲೇ ಕೌನ್ಸಿಲರ್ ತರಬೇತಿ ಕಾರ್ಯಕ್ರಮದ ಸಂಯೋಜಕಿ ಮತ್ತು ಆಸ್ಪತ್ರೆಯ ಆಡಳಿತಾಧಿಕಾರಿಯಾಗಿರುವ ಶ್ರೀಮತಿ ಸೌಜನ್ಯ ಶೆಟ್ಟಿ ಇವರು ಪ್ರಾಸ್ತಾವಿಕ ಮಾತುಗಳನ್ನಾಡಿ ಸರ್ವರನ್ನು ಸ್ವಾಗತಿಸಿದರು. ಶ್ರೀ ಯಶವಂತ ಕಾರ್ಯಕ್ರಮಕ್ಕೆ ಪ್ರಾರ್ಥಿಸಿದರು. ಆಪ್ತ ಸಮಾಲೋಚಕರಾದ ಶ್ರೀಮತಿ ದೀಪಶ್ರೀ ಇವರು ಕಾರ್ಯಕ್ರಮವನ್ನು ನಿರೂಪಿಸಿದರು. ಕುಮಾರಿ ರಕ್ಷಿತಾ ಇವರು ವಂದಿಸಿದರು. ಮದ್ಯವ್ಯಸನಿ ಪೋಷಕರ ಮಕ್ಕಳ ಜಾಗೃತಿ ಸಪ್ತಾಹದ ಅಂಗವಾಗಿ “ಮದ್ಯವ್ಯಸನ ಮತ್ತು ಮಕ್ಕಳ ಭವಿಷ್ಯ”ಎಂಬ ವಿಷಯದ ಕುರಿತು ಆನ್ಲೈನ್ ಭಾಷಣ ಸ್ಪರ್ಧೆಯನ್ನು ಆಯೋಜಿಸಿದ್ದು ಇದರಲ್ಲಿ ವಿಜೇತರಾದವರಿಗೆ ಬಹುಮಾನವನ್ನು ವಿತರಿಸಲಾಯಿತು.

ಮಾನಸಿಕ ಕಾಯಿಲೆಗಳ ಕುರಿತಾದ 12 ವಾರಗಳ ಈ ತರಬೇತಿಯ ಪ್ರಯೋಜನವನ್ನು 25ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಪಡೆದುಕೊಳ್ಳಲಿದ್ದಾರೆ. ಹಾಗೂ ತಮಟೆ ತುಮಕೂರು, ಸಖಿ ಟ್ರಸ್ಟ್ ಹೊಸಪೇಟೆ ಮತ್ತು ಹೀರಾ ಫೌಂಡೇಶನ್ ಬೆಂಗಳೂರಿನ ವಿಧ್ಯಾರ್ಥಿಗಳು ಹಾಗೂ ಸಿಬ್ಬಂದಿ ವರ್ಗದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ನಂತರ ಮಾಹಿತಿ ಕಾರ್ಯಗಾರ ನಡೆಯಿತು.








