Select Page

Date: February 11, 2024

ದಿನಾಂಕ 11-2-2024ರಂದು ಬೆಳಿಗ್ಗೆ 9:30ಕ್ಕೆ ಡಾ. ಎ. ವಿ. ಬಾಳಿಗ ಸ್ಮಾರಕ ಆಸ್ಪತ್ರೆ ಉಡುಪಿ; ಕಮಲ್. ಎ. ಬಾಳಿಗ ಚಾರಿಟೇಬಲ್ ಟ್ರಸ್ಟ್, ಮುಂಬೈ; ಒನ್ ಗುಡ್ ಸ್ಟೆಪ್ ಬೆಂಗಳೂರು; ರೋಟರಿ ಮಣಿಪಾಲ ಮತ್ತು ಮಣಿಪಾಲ ಮಹಿಳಾ ಸಮಾಜ ಇದರ ಜಂಟಿ ಆಶ್ರಯದಲ್ಲಿ ನಡೆದ ಲೇ ಕೌನ್ಸಿಲಿಂಗ್ ತರಬೇತಿ ಕಾರ್ಯಾಗಾರದ 2ನೇ ಬ್ಯಾಚಿನ ಉದ್ಘಾಟನೆ ಮತ್ತು ಮದ್ಯವ್ಯಸನಿ ಮಕ್ಕಳ ಜಾಗೃತಿ ಸಪ್ತಾಹದ ಉದ್ಘಾಟನೆಯನ್ನು ಶ್ರೀ ಮಂಜುನಾಥ ಗೋದಿ, ಸಿವಿಲ್ ಇಂಜಿನಿಯರ್, ಉಡುಪಿ ಇವರು ದೀಪ ಬೆಳಗಿಸುವುದರ ಮೂಲಕ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಡಾ. ಸುಲತಾ ಭಂಡಾರಿ, ಅಧ್ಯಕ್ಷರು, ಮಣಿಪಾಲ ಮಹಿಳಾ ಸಮಾಜ ಮತ್ತು ನೇತ್ರ ತಜ್ಞರು ಕೆಎಂಸಿ ಮಣಿಪಾಲ ಮತ್ತು ರೋಟರಿಯನ್ ಶ್ರೀಪತಿ ಪೂಜಾರಿ, ರೋಟರಿ ಮಣಿಪಾಲ ಹಾಗೂ ಶ್ರೀಮತಿ ಅಮಿತಾ ಪೈ, ಸಂಸ್ಥಾಪಕರುಲ ಒನ್ ಗುಡ್ ಸ್ಟೆಪ್ ಇವರು ಆಗಮಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಪಿ. ವಿ. ಭಂಡಾರಿ, ವೈದ್ಯಕೀಯ ನಿರ್ದೇಶಕರು ಮತ್ತು ಮನೋವೈದ್ಯರು ಡಾ. ಎ. ವಿ. ಬಾಳಿಗ ಸಮೂಹ ಸಂಸ್ಥೆಗಳು, ಉಡುಪಿ ಇವರು ವಹಿಸಿದ್ದರು. ಡಾ. ವಿರೂಪಾಕ್ಷ ದೇವರಮನೆ ಮನೋವೈದ್ಯರು, ಡಾ. ಎ. ವಿ. ಬಾಳಿಗ ಸ್ಮಾರಕ ಆಸ್ಪತ್ರೆ, ಉಡುಪಿ ಇವರು ಪ್ರಾಸ್ತಾವಿಕ ಮಾತುಗಳನ್ನಾಡಿ ಸರ್ವರನ್ನು ಸ್ವಾಗತಿಸಿದರು. ಶ್ರೀ ಜಯರಾಮ ಪ್ರಾರ್ಥಿಸಿದರು. ಧನ್ಯವಾದ ಸಮರ್ಪಣೆಯನ್ನು ಶ್ರೀಮತಿ ಸೌಜನ್ಯ ಶೆಟ್ಟಿ, ಆಡಳಿತಾಧಿಕಾರಿ, ಡಾ. ಎ. ವಿ. ಬಾಳಿಗ ಸ್ಮಾರಕ ಆಸ್ಪತ್ರೆ ಉಡುಪಿ ಇವರು ಮಾಡಿದರು. ಅಪ್ತಸಮಲೋಚಕಿ ಶ್ರೀಮತಿ ದೀಪಶ್ರೀ ಕಾರ್ಯಕ್ರಮವನ್ನು ನಿರೂಪಿಸಿದರು.
ಈ ಕಾರ್ಯಕ್ರಮದಲ್ಲಿ ಮದ್ಯಪಾನದಿಂದ ಕುಟುಂಬಕ್ಕೆ ಆಗುವ ಸಮಸ್ಯೆಗಳ ಕುರಿತಾಗಿ ಶ್ರೀಯುತ ವೆಂಕಿ ಪಲಿಮಾರ್ ಇವರು ಆವೇ ಮಣ್ಣಿನಿಂದ ರಚಿಸಿರುವ ಕಲಾಕೃತಿಯನ್ನು ಮುಖ್ಯ ಅತಿಥಿಯಾಗಿರುವ ಡಾ. ಸುಲತಾ ಭಂಡಾರಿ ಇವರು ಅನಾವರಣಗೊಳಿಸಿದರು.‌ ಮದ್ಯಪಾನದಿಂದ ಆಗುವ ದೈಹಿಕ ಮತ್ತು ಮಾನಸಿಕ ಕಾಯಿಲೆಗಳ ಕುರಿತಾದ ಶ್ರೀನಾಥ್ ಮಣಿಪಾಲ್ ಇವರು ಬಿಡಿಸಿರುವ ಚಿತ್ರವನ್ನು ಅತಿಥಿಯಾಗಿರುವ ಶ್ರೀಮತಿ ಅಮಿತಾ ಪೈ ಇವರು ಅನಾವರಣಗೊಳಿಸಿದರು. ಸಮಾಜಕ್ಕೆ ಕಾಯಿಲೆಗಳ ಕುರಿತು ಮಾಹಿತಿಯನ್ನು ನೀಡಲು ಡಾ. ವಿರೂಪಾಕ್ಷ ದೇವರಮನೆ ಇವರು ಮಾಡಿರುವಂತಹ ಡಾಕ್ಟರ್ ದೇವರಮನೆ ಟಾಕ್ಸ್ ಎಂಬ ಹೆಸರಿನಲ್ಲಿ ಯೂಟ್ಯೂಬ್ ಚಾನೆಲ್ ಅನ್ನು ಡಾ. ಪಿ. ವಿ. ಭಂಡಾರಿ ಇವರು ಅನಾವರಣಗೊಳಿಸಿದರು. ಸಭಾ ಕಾರ್ಯಕ್ರಮದ ನಂತರ ಮಾಹಿತಿ ಕಾರ್ಯಗಾರ ನಡೆಯಿತು.