Select Page

Date: April 28, 2024

ಕಮಲ್ ಬಾಳಿಗ ಚಾರಿಟೇಬಲ್ ಟ್ರಸ್ಟ್ ಮುಂಬೈ, ಡಾ. ಎ ವಿ ಬಾಳಿಗಾ ಸ್ಮಾರಕ ಆಸ್ಪತ್ರೆ ಉಡುಪಿ ಹಾಗೂ ಆಟಿಸಂ ಸೊಸೈಟಿ ಉಡುಪಿ ಇವರ ಜಂಟಿ ಆಶ್ರಯದಲ್ಲಿ ವಿಶ್ವ ಸ್ವಲೀನತೆ ಜಾಗೃತಿ ಮಾಸದ ಪ್ರಯುಕ್ತ ಮಕ್ಕಳಿಗಾಗಿ ಚಿತ್ರೋತ್ಸವ ಚಟುವಟಿಕೆ, ಪೋಷಕರಿಗಾಗಿ -ಸ್ವಲಿನತೆ, ಮಾತಿನ ತೊಂದರೆ, ಅತಿಚಟುವಟಿಕೆ, ಕಲಿಕಾ ತೊಂದರೆಗಳ ಕುರಿತು ಮಾಹಿತಿ ಕಾರ್ಯಕ್ರಮ ಹಾಗೂ ಡಾ ಎ ವಿ ಬಾಳಿಗ ಸ್ಮಾರಕ ಆಸ್ಪತ್ರೆಯು 20 ವರ್ಷಗಳನ್ನು ಪೂರೈಸಿದ ಅಂಗವಾಗಿ ಡಾ ಎ ವಿ ಬಾಳಿಗ ಸ್ಮಾರಕ ಆಸ್ಪತ್ರೆ ಉಡುಪಿ ಮತ್ತು ರೇಡಿಯೋ ಮಣಿಪಾಲ್ ಜಂಟಿಯಾಗಿ ಆಯೋಜಿಸಿದ ಮನದ ಮಾತು -ವಿವಿಧ ಮಾನಸಿಕ ಆರೋಗ್ಯ ವಿಷಯಗಳ ಮಾಹಿತಿ ಸರಣಿ ಎಂಬ ವಿನೂತನ ಕಾರ್ಯಕ್ರಮದ ಉದ್ಘಾಟನೆಯು ದಿನಾಂಕ 27/04/224 ರಂದು ಕಮಲ್ ಎ ಬಾಳಿಗ ಸಭಾಂಗಣದಲ್ಲಿ ನಡೆಯಿತು.ಶ್ರೀಮತಿ ಡಾ ರಶ್ಮಿ ಅಮ್ಮೆಂಬಳ
ಸಹಾಯಕ ಪ್ರಾಧ್ಯಾಪಕರು ಮತ್ತು ಸಂಯೋಜಕರು ರೇಡಿಯೋ ಮಣಿಪಾಲ್ ಕಮ್ಯೂನಿಟಿ ಸ್ಟೇಷನ್, ಎಂ ಐ ಸಿ ಮಣಿಪಾಲ್ ಇವರು ಉದ್ಘಾಟಿಸಿದರು ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಡಾ ಎ ವಿ ಬಾಳಿಗ ಸ್ಮಾರಕ ಆಸ್ಪತ್ರೆಯ ಮನೋವೈದ್ಯರುಗಳಾದ ಡಾ ವಿರೂಪಾಕ್ಷ ದೇವರಮನೆ, ಡಾ. ದೀಪಕ್ ಮಲ್ಯ, ಡಾ ಮಾನಸ್ ಇ ಆರ್,ಹಾಗೂ ಆಡಳಿತ ಅಧಿಕಾರಿ ಶ್ರೀಮತಿ ಸೌಜನ್ಯ ಶೆಟ್ಟಿ ಇವರು ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾಕ್ಟರ್ ಪಿ ವಿ ಭಂಡಾರಿ ಮನೋವೈದ್ಯರು, ವೈದ್ಯಕೀಯ ನಿರ್ದೇಶಕರು ಡಾ ಎ ವಿ ಬಾಳಿಗ ಸಮೂಹ ಸಂಸ್ಥೆಗಳು ಉಡುಪಿ ಇವರು ವಹಿಸಿದ್ದರು. ಡಾ ವಿರೂಪಾಕ್ಷ ದೇವರಮನೆ ಇವರು ಪ್ರಾಸ್ತಾವಿಕ ಮಾತುಗಳನ್ನಾಡಿ ಸರ್ವರನ್ನು ಸ್ವಾಗತಿಸಿದರು. ಆಪ್ತ ಸಮಾಲೋಚಕರಾದ ಶ್ರೀ ವಿಶ್ವೇಶ್ವರ ಹೆಗಡೆ ಪ್ರಾರ್ಥಿಸಿದರು. ಧನ್ಯವಾದ ಸಮರ್ಪಣೆಯನ್ನು ಶ್ರೀಮತಿ ರೂತ್ ಶೈನಿ ಸ್ಪೀಚ್ ತೆರಪಿಸ್ಟ್ ಇವರು ನೆರವೇರಿಸಿದರು, ಶ್ರೀಮತಿ ಪೂರ್ಣಿಮಾ ಎಸ್ ವೃತ್ತಿಪರ ಚಿಕಿತ್ಸಕರು ಕಾರ್ಯಕ್ರಮವನ್ನು ನಿರೂಪಿಸಿದರು. ಸಭಾ ಕಾರ್ಯಕ್ರಮದ ನಂತರ ಮಕ್ಕಳಿಗೆ ಚಿತ್ರೋತ್ಸವ ಮತ್ತು ಪೋಷಕರಿಗಾಗಿ ಸ್ವಲಿನತೆ, ಕಲಿಕಾ ತೊಂದರೆ, ಅತಿಚಟುವಟಿಕೆ ಹಾಗೂ ಮಾತಿನ ತೊಂದರೆಗಳ ಬಗ್ಗೆ ಸಂಪನ್ಮೂಲ ವ್ಯಕ್ತಿಗಳಾದ ಡಾ. ಪ್ರಿಯದರ್ಶಿನಿ, ಶ್ರೀಮತಿ ದೀಪಶ್ರೀ, ಶ್ರೀಮತಿ ಪೂರ್ಣಿಮಯ ಎಸ್, ಶ್ರೀಮತಿ ರೂತ್ ಶೈನಿ , ಹಾಗೂ ಶ್ರೀಮತಿ ಶ್ವೇತಾ ನಾಯಕ ಇವರುಗಳಿಂದ ಮಾಹಿತಿ ಕಾರ್ಯಗಾರ ನಡೆಯಿತು. ಮಕ್ಕಳಿಗಾಗಿ ವಿವಿಧ ಮನರಂಜನಾ ಹಾಗೂ ಆಟೋಟ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿತ್ತು ಈ ಕಾರ್ಯಕ್ರಮದ ಪ್ರಯೋಜನವನ್ನು 85ಕ್ಕಿಂತಲೂ ಹೆಚ್ಚು ಮಂದಿ ಪಡೆದುಕೊಂಡರು.