Select Page

ಟೈಟಲ್ ವಾಟ್ಸಾಪ್ ಮೆಸೇಜುಗಳು ಗ್ರೂಪುಗಳು ಮತ್ತು ಮಾನಸಿಕತೆ, ಸಾಮಾಜಿಕ ಸ್ವಾಸ್ಥ್ಯ!

ವಾಟ್ಸಾಪ್ ಮೆಸೇಜುಗಳು ಗ್ರೂಪುಗಳು ಮತ್ತು ಮಾನಸಿಕತೆ, ಸಾಮಾಜಿಕ ಸ್ವಾಸ್ಥ್ಯ! ಚುನಾವಣೆ ಸಮಯ ಬಂದಾಗ ಹೇಗೆ ನಮ್ಮ ಜನರಲ್ಲಿ ಒಂದು ರೀತಿಯ “ಸಮೂಹ ಸನ್ನಿ “ ಪ್ರಾರಂಭವಾಗುತ್ತದೆ ಎನ್ನುವುದನ್ನು ಗಮನಿಸಿ. ಹಲವಾರು ಶಾಲಾ ಮತ್ತು ಕಾಲೇಜ್ ಹಳೇ ವಿದ್ಯಾರ್ಥಿಗಳವಾಟ್ಸಪ್ ಗುಂಪುಗಳನ್ನು , ಹಲವು ವೃತ್ತಿಪರರ ಗುಂಪುಗಳನ್ನು ಗಮನಿಸುತ್ತಿದ್ದೆ,...

read more

ಟೈಟಲ್ ಮಾನಸಿಕ ಕಾಯಿಲೆಗೆ ಚಿಕಿತ್ಸೆ ಇರುವವರು ವಿದೇಶಕ್ಕೆ ಕೆಲಸ ಮಾಡಲು ಹೋಗಬಹುದೇ?

ಮಾನಸಿಕ ಆರೋಗ್ಯದ ಸಮಸ್ಯೆ ಇರುವವರು ವಿದೇಶದಲ್ಲಿ ಕೆಲಸಕ್ಕೆ ಹೋಗಬಹುದೇ? ಇದು ಬಹಳಷ್ಟು ಜನ ನನ್ನ ಗ್ರಾಹಕರು ಮತ್ತು ಅವರ ಮನೆಯವರು ಕೇಳುವ ಪ್ರಶ್ನೆ. ನನ್ನ 25 ವರ್ಷ ವೃತ್ತಿ ಜೀವನದಲ್ಲಿ ನಾನು ಗಮನಿಸಿರುವ ಕೆಲವು ವಿಷಯಗಳನ್ನು ಪ್ರಸ್ತಾಪಿಸಿದ್ದೇನೆ.ಮಾನಸಿಕ ಸಮಸ್ಯೆಗೆ ಚಿಕಿತ್ಸೆ ಪಡೆಯುತ್ತಿರುವವರು ವಿದೇಶಗಳಲ್ಲಿ ಹೋಗಿ ಕೆಲಸ...

read more

ಫೋಬಿಯ

ಮನುಷ್ಯರನ್ನು ಕಾಡುವ ಪ್ರಮುಖ ಮಾನಸಿಕ ಕಾಯಿಲೆಗಳಲ್ಲಿ ಫೋಬಿಯ ಕೂಡ ಒಂದು. ಫೋಬಿಯ ಅನ್ನುವುದು ಯಾವುದಾದರೂ ಒಂದು ವಸ್ತು ಅಥವಾ ಸ್ಥಳದ ಬಗ್ಗೆ ಅತೀವವಾದ ಮತ್ತು ಅರ್ಥಹೀನವಾದ ಹೆದರಿಕೆ ಮತ್ತು ಆ ಕಾರಣದಿಂದಾಗಿ ಆ ವಸ್ತು ಅಥವಾ ಸ್ಥಳವನ್ನು ಫೋಬಿಯದಿಂದ ಬಳಲುತ್ತಾ ಇರುವವರು ತಿರಸ್ಕರಿಸುತ್ತಾರೆ. ಈ ವಸ್ತು ಅಥವಾ ಸ್ಥಳದ ಬಗ್ಗೆ ಸ್ವಲ್ಪ...

read more

ಮಾನಸಿಕ ಆರೋಗ್ಯ ಮತ್ತು ಜೀವನ ಶೈಲಿ

ಇತ್ತೀಚೆಗೆ ಭಾರತೀಯ ಮೂಲದ ಮನೋವೈದ್ಯರು ಡಾಕ್ಟರ್ ರಾಮಸ್ವಾಮಿ ವಿಶ್ವನಾಥನ್ ಅಮೆರಿಕ ಮನೋವೈದ್ಯಕೀಯ ಸಂಘ ಇದರ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದಾಗ ಅಲ್ಲಿ “ಲೈಫ್ ಸ್ಟೈಲ್ ಸೈಕ್ಯಾಟ್ರಿ” ಎಂಬ ವಿಷಯದ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಮಾನಸಿಕ ಆರೋಗ್ಯ ಚಿಕಿತ್ಸೆಯಲ್ಲಿ ಮಾತ್ರೆ ಚಿಕಿತ್ಸೆ ,ಮನೋಚಿಕಿತ್ಸೆ ಅಥವಾ ಮಾತು ಚಿಕಿತ್ಸೆ,...

read more

Children of Alcoholics Awareness Week

“ಮದ್ಯ ವ್ಯಸನಿಗಳ ಮಕ್ಕಳ ಸಪ್ತಾಹ”. ಪ್ರತಿ ವರ್ಷ ಫೆಬ್ರವರಿ 11 ರಿಂದ 17ರವರೆಗೆ ಈ ಸಪ್ತಾಹವನ್ನು ವಿಶ್ವಾದ್ಯಂತ ಆಚರಿಸಲಾಗುತ್ತದೆ. ಈ ಆಚರಣೆ ತಾಯಿ ಅಥವಾ ತಂದೆ ಮದ್ಯ ವ್ಯಸನದ ಅಭ್ಯಾಸಕ್ಕೆ ಬಲಿಯಾಗಿದ್ದರೆ ಆ ಮನೆಯಲ್ಲಿ ಬೆಳೆಯುವ ಮಕ್ಕಳ ಬಗ್ಗೆ ಸಮಾಜ ಯೋಚಿಸಬೇಕು ಮತ್ತು ಅವರಿಗೆ ಉಂಟಾಗುವ ಸಮಸ್ಯೆಗಳ ಬಗ್ಗೆ ಚರ್ಚಿಸಬೇಕು ಅನ್ನುವ...

read more

Pornography Addiction

ಅಶ್ಲೀಲತೆಯ ಚಟ..ಇದು ಇಂದು ಹಲವರನ್ನು ಕಾಡುತ್ತಾ ಇರುವ ಸಮಸ್ಯೆ. ಅಶ್ಲೀಲ ಚಿತ್ರಗಳು,ಬರವಣಿಗೆಗಳು, ಪುಸ್ತಕಗಳನ್ನು ಅತಿಯಾಗಿ ನೋಡುವುದು,ಅದರಲ್ಲೇ ಕಾಲ ಕಳೆಯುವುದು ಮತ್ತು ಈ ಚಟದ ಕಾರಣದಿಂದ ತಮ್ಮ ಕೆಲಸ,ಸಾಮಾಜಿಕ ಚಟುವಟಿಕೆಗಳು ಎಲ್ಲದರಲ್ಲೂ ಸಮಸ್ಯೆ ಮಾಡಿಕೊಂಡು ಮದ್ಯಮಾದಕದ್ರವ್ಯ ಚಟ ಇರುವವರು ಪರದಾಡುವ ಹಾಗೆ ಇವರು ಕೂಡ ಈ...

read more

Type – “A” Personality What it is?

ಟೈಪ್ A ವ್ಯಕ್ತಿತ್ವ ಏನಿದು? ವೈದ್ಯಕೀಯ ಮತ್ತು ಮನೋವೈದ್ಯಕೀಯ ವೃತ್ತಗಳಲ್ಲಿ ಆಗಾಗ ಕೇಳಿ ಬರುವ ಒಂದು ವಿಷಯ ಎಂದರೆ ಈ ಟೈಪ್A ವ್ಯಕ್ತಿತ್ವ. ಸಮಾಜದಲ್ಲಿ ನಮ್ಮ ನಿಮ್ಮ ನಡುವೆ ಇರುವ ಸಾಧಕರಲ್ಲಿ ಹಲವಾರು ಜನ ಈ ವ್ಯಕ್ತಿತ್ವದ ನಡವಳಿಕೆಗಳನ್ನು ಹೊಂದಿರುತ್ತಾರೆ. ಈ ವ್ಯಕ್ತಿತ್ವದ ವ್ಯಕ್ತಿಗಳಲ್ಲಿ ಕಂಡುಬರುವ ಪ್ರಮುಖ...

read more

ಖಿನ್ನತೆ ಚಿಕಿತ್ಸೆ ಕೆಟಮಿನ್ ಥೆರಪಿ ನೀವೇನು ತಿಳಿಯ ಬೇಕು ?

ಔಷಧಿ ಚಿಕಿತ್ಸೆಗಳಲ್ಲಿ ಖಿನ್ನತೆಗೆ ಇಂಜೆಕ್ಷನ್ ಮೂಲಕ ಕೊಡುವ ಕೆಟಮಿನ್ ಎಂಬ ಅರಿವಳಿಕೆ ಔಷಧ ಮಧ್ಯಮ ಮಟ್ಟದ ಮತ್ತು ತೀವ್ರ ಖಿನ್ನತೆಯ ಚಿಕಿತ್ಸೆಯಲ್ಲಿ ಉಪಯೋಗಿಸಲಾಗುತ್ತದೆ .ಅದರಲ್ಲಿಯೂ ಆತ್ಮಹತ್ಯೆಯ ಯೋಚನೆ ನಿಭಾಯಿಸುವಲ್ಲಿ ಕೆಟಮಿನ್ ಬಹಳಷ್ಟು ಕೆಲಸ ಮಾಡುತ್ತದೆ ಎಂದು ವೈಜ್ಞಾನಿಕ ಸಂಶೋಧನೆಗಳು ತಿಳಿಸುತ್ತವೆ .ಕೆಟಮಿನ್ ಅನ್ನು...

read more

ಪುನರ್ಜನ್ಮ ದ ಬಗ್ಗೆ ವೈಜ್ಞಾನಿಕ ವಿಶ್ಲೇಷಣೆ

ಮದುವೆ ಸಮಾರಂಭ ಒಂದರಲ್ಲಿ ಊಟಕ್ಕೆ ಕಾಯುತ್ತ ಇದ್ದಾಗ ಹತ್ತಿರ ಬಂದ ಮೇಸ್ಟ್ರು ಒಬ್ಬರು ಸಾರ್ ನೀವು ಪುನರ್ಜನ್ಮ ನಂಬುತ್ತೀರಾ ? past life regression therapy ಬಗ್ಗೆ ನಿಮ್ಮ ಅನಿಸಿಕೆ ಏನು ಕೇಳಿದರು .ಊಟದ ಜೊತೆಗೆ ಈ ವಾರದ ಅಂಕಣಕ್ಕೆ ಕೂಡ ಒಂದು ವಿಷಯ ಸಿಕ್ಕಿತ್ತು . ಪುನರ್ಜನ್ಮ ಇದೆ ಎಂಬುದರ ಬಗ್ಗೆ ನಂಬಿದವರಲ್ಲಿ ನಾನು...

read more

“ಜರ್ನಲಿಂಗ್” ಎಂಬ ಮನೋವೈದ್ಯಕೀಯ ಚಿಕಿತ್ಸಾ ವಿಧಾನ!

“ಜರ್ನಲಿಂಗ್” ಎಂಬ ಮನೋವೈದ್ಯಕೀಯ ಚಿಕಿತ್ಸಾ ವಿಧಾನ! ಜರ್ನಲಿಂಗ್ ಅಂದರೆ ನಮ್ಮ ಜೀವನದ ಆಗುಹೋಗುಗಳನ್ನು ಕುರಿತು ನಾವೇ ಸ್ವತಃ ನಿರ್ದಿಷ್ಟವಾಗಿ ಪ್ರತಿದಿನ ಅಥವಾ ವಾರದಲ್ಲಿ ಒಂದೆರಡು ಬಾರಿ ಒಂದು ಡೈರಿಯಲ್ಲಿಯೋ ಅಥವಾ ಪುಸ್ತಕದಲ್ಲಿ ಅಥವಾ ಮೊಬೈಲ್ ಯಾ ಕಂಪ್ಯೂಟರ್ ಅಥವಾ laptop ನಲ್ಲಿ ಬರೆದು ಕೊಳ್ಳುವುದು. ನಾವು ಸಣ್ಣ ವಯಸ್ಸಿನಿಂದ...

read more

Why Children Should Play?

ನಮ್ಮ ಮಕ್ಕಳು ಯಾಕೆ ಆಟ ಆಡಬೇಕು ?ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಕ್ರೀಡೆಯ ಪ್ರಭಾವ ನಮ್ಮ ತಾಯಿ ತಂದೆಯರು ಹಾಗು ಅವರ ಶಿಕ್ಷಕರು ಮತ್ತು ಶಾಲೆಗಳು ತಿಳಿದು ಕೊಳ್ಳಲೇ ಬೇಕು . ಕ್ರೀಡೆಯು ಮಕ್ಕಳ ಸರ್ವಂಗಿನ ಬೆಳವಣಿಗೆಯಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಇದು ದೈಹಿಕ ಸಾಮರ್ಥ್ಯವನ್ನು ಮಾತ್ರವಲ್ಲದೆ ಅವರ ಮಾನಸಿಕ...

read more

ಹದಿ ಹರೆಯದವರ ಆತ್ಮಹತ್ಯಾ ಪ್ರಯತ್ನಗಳು : ನಾವು ನೀವು ಏನು ಮಾಡಬಹುದು

ಹದಿಹರೆಯದ ಮಕ್ಕಳ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿವೆ. ಮನೋವೈದ್ಯನಾಗಿ ನಾನು ನೋಡುತ್ತಿರುವುದೇನೆಂದರೆ ಮಾರ್ಚ್ ತಿಂಗಳಿನಿಂದ ಜುಲೈವರೆಗೆ ಹದಿಹರೆಯದ ಮಕ್ಕಳು ಮನೋವೈದ್ಯರ ಬಳಿ ಬರುವುದು ಕೂಡ ಹೆಚ್ಚುತ್ತಾ ಇದೆ. ಭಾರತದಲ್ಲಿ ನೂರು ಆತ್ಮಹತ್ಯೆ ಪ್ರಕರಣಗಳು ಸಂಭವಿಸಿದರೆ ಅದರಲ್ಲಿ 30ಕ್ಕೂ ಹೆಚ್ಚು ಈ ಹದಿಹರೆಯದ ವಯಸ್ಸಿನವರದು....

read more

Binge drinking

“ಬಿಂಜ್ ಡ್ರಿಂಕಿಂಗ್” ಗಂಭೀರ ಆದರೆ ತಡೆಗಟ್ಟಬಹುದಾದ ಸಾರ್ವಜನಿಕ ಆರೋಗ್ಯ ಸಮಸ್ಯೆಯಾಗಿದೆ”.ಬಿಂಜ್ ಡ್ರಿಂಕಿಂಗ್ “ಅನ್ನು ಪುರುಷರಿಗೆ ಒಂದು ಅವಧಿಯಲ್ಲಿ 5 ಅಥವಾ ಹೆಚ್ಚಿನ ಗುಟುಕು ಪಾನೀಯವನ್ನು ಅಥವಾ ಮಹಿಳೆಯರಿಗೆ ಒಂದು ಅವಧಿಯಲ್ಲಿ 4 ಅಥವಾ ಹೆಚ್ಚಿನ ಗುಟುಕು ಪಾನೀಯವನ್ನು ಸೇವಿಸುವುದು ಎಂದು ವ್ಯಾಖ್ಯಾನಿಸಲಾಗಿದೆ. “ಬಿಂಜ್...

read more

“ಬ್ಲಾಕ್ ಔಟ್ “

ಮದ್ಯವ್ಯಸನ ಚಿಕಿತ್ಸೆಯಲ್ಲಿ ನಾನು ನೋಡಿರುವ ಒಂದು ಪ್ರಮುಖ ತೊಂದರೆ ಅಂದರೆ “ಬ್ಲಾಕ್ ಔಟ್ “ ಗಳು .ಆಲ್ಕೊಹಾಲ್ ಸೇವನೆಯು ಮಿತವಾಗಿ ಮಾಡಿದಾಗ, ಸಾಮಾಜಿಕ ಮತ್ತು ಮನರಂಜನಾ ಚಟುವಟಿಕೆ ಅನ್ನಿಸಿಕೊಳ್ಳುತ್ತದೆ. ಆದಾಗ್ಯೂ, ಅತಿಯಾದ ಮತ್ತು ದೀರ್ಘಕಾಲದ ಆಲ್ಕೊಹಾಲ್ ಉಪಯೋಗವು ಆಲ್ಕೊಹಾಲ್-ಪ್ರೇರಿತ ಬ್ಲ್ಯಾಕೌಟ್ ಸೇರಿದಂತೆ ತೀವ್ರ ಆರೋಗ್ಯ...

read more

ಆತ್ಮಹತ್ಯೆ ತಡೆ ದಿನಾಚರಣೆ world suicide  prevention day (WSPD),

ಆತ್ಮಹತ್ಯೆ ತಡೆ ದಿನಾಚರಣೆ world suicide  prevention day (WSPD), ವಾರ್ಷಿಕವಾಗಿ ಸೆಪ್ಟೆಂಬರ್ 10 ರಂದು ಆಚರಿಸಲಾಗುತ್ತದೆ, ಇದನ್ನು ಆತ್ಮಹತ್ಯೆ ತಡೆಗಟ್ಟುವಿಕೆಗಾಗಿ ಇಂಟರ್ನ್ಯಾಷನಲ್ ಅಸೋಸಿಯೇಷನ್ ಫಾರ್ ಸುಯಿಸೈಡ್ ಪ್ರಿವೆಂಷನ್ (IASP) ಆಯೋಜಿಸುತ್ತದೆ ಮತ್ತು ವಿಶ್ವ ಆರೋಗ್ಯ ಸಂಸ್ಥೆ (WHO) ಈ ದಿನಚರಣೆ ಆಚರಣೆಯನ್ನು...

read more

ಮದ್ಯವ್ಯಸನ ಮತ್ತು ದಾಂಪತ್ಯದಲ್ಲಿ ಬಿರುಕು

✍🏼 ಶ್ರೀಮತಿ ಸೌಜನ್ಯ ಶೆಟ್ಟಿ, ಆಡಳಿತಾಧಿಕಾರಿಗಳು ಮತ್ತು ಆಪ್ತಸಮಾಲೋಚಕರು ಡಾ. ಎ.ವಿ. ಬಾಳಿಗಾ ಸ್ಮಾರಕ ಅಸ್ಪತ್ರೆ, ಉಡುಪಿ ಇತ್ತೀಚೆಗಷ್ಟೇ ದಿನ ಪತ್ರಿಕೆಯೊಂದರಲ್ಲಿ ಮದ್ಯವ್ಯಸನಿ ಗಂಡನೋರ್ವನು ತನ್ನನ್ನು ಬಿಟ್ಟು, ಹೆಂಡತಿ ಮಕ್ಕಳು ಸಂಬಂಧಿಕರ ಮನೆಗೆ ಹೋಗಿ ವಾಸವಿದ್ದುದನ್ನು ಸಹಿಸದೆ, ಸಂಬಂಧಿಕರ ಮನೆಗೆ ಹೋಗಿ ರಾತ್ರಿ ಹೊತ್ತು...

read more

ವೈವಾಹಿಕ ಅಪ್ತಸಮಾಲೋಚನೆ

✍🏼 ಶ್ರೀಮತಿ ಸೌಜನ್ಯ ಶೆಟ್ಟಿ, ಆಡಳಿತಾಧಿಕಾರಿಗಳು ಮತ್ತು ಆಪ್ತಸಮಾಲೋಚಕರು ಡಾ. ಎ.ವಿ. ಬಾಳಿಗಾ ಸ್ಮಾರಕ ಆಸ್ಪತ್ರೆ, ಉಡುಪಿ ೨೮ ವರ್ಷದ ಮಹಿಳೆ ತಾಯಿ ತಂದೆ ಮತ್ತು ಗಂಡನೊಂದಿಗೆ ಆಸ್ಪತ್ರೆಗೆ ವೈವಾಹಿಕ ಅಪ್ತಸಮಾಲೋಚನೆಗೆ ಆಗಮಿಸುತ್ತಾಳೆ, ೨ ವರ್ಷದ ಹಿಂದೆ ಮದುವೆ ಮಾಡಿ ಎಂಜಿನಿಯರ್ ಗಂಡನೊಂದಿಗೆ ಬೆಂಗಳೂರಿಗೆ ಹೋಗಿರುತಾಳೆ....

read more