Select Page

ಮಾನಸಿಕ ಕಾಯಿಲೆಗಳ ಬಗ್ಗೆ ಬಹಳಷ್ಟು ಅಪನಂಬಿಕೆಗಳು ಸಮಾಜದಲ್ಲಿ ಇವೆ. ಈ ಕಾರಣದಿಂದಲೇ ಮಾನಸಿಕ ಕಾಯಿಲೆಯ
ಚಿಕಿತ್ಸೆ ಚೇತರಿಕೆ ಮತ್ತು ಕಾಯಿಲೆ ಇರುವವರು ಸಮಾಜದಲ್ಲಿ ಕಳಂಕವಿಲ್ಲದೆ ಬದುಕುವುದು ಕಷ್ಟವಾಗಿದೆ. ಕೆಲವು ಅಪನಂಬಿಕೆಗಳು
ಈ ಕೆಳಗಿನಂತಿವೆ

  1. ಮಾನಸಿಕ ಕಾಯಿಲೆಗಳು ಭೂತ ದೈವ ಅಲೋಕಿಕ ಶಕ್ತಿಗಳ ಶಾಪ ಮುಂತಾದವುಗಳಿಂದ ಉಂಟಾಗುತ್ತದೆ ಎಂಬ ಅಪನಂಬಿಕೆ
    ಬಹಳಷ್ಟು ಜನರಲ್ಲಿ ಇದೆ. ಇದು ಒಂದು ತಪ್ಪು ನಂಬಿಕೆ. ಬಿಪಿ ಸಕ್ಕರೆ ಕಾಯಿಲೆ ಮುಂತಾದ ದೈಹಿಕ ಕಾಯಿಲೆಗಳ ಹಾಗೆ
    ಕೆಲವುಸಂಕೀರ್ಣ ಅನುವಂಶಿಕ, ಜೈವಿಕ, ಮಾನಸಿಕ ಮತ್ತು ಪರಿಸರದ ಕಾರಣಗಳಿಂದ ಈ ಕಾಯಿಲೆ ಉಂಟಾಗುತ್ತದೆ.
  2. ಮಾನಸಿಕ ಕಾಯಿಲೆಗಳಿಗೆ ಚಿಕಿತ್ಸೆ ಇಲ್ಲ. ಇದು ಒಂದು ತಪ್ಪನಂಬಿಕೆ. ಆಧುನಿಕ ವೈದ್ಯ ವಿಜ್ಞಾನದ ಬೆಳವಣಿಗೆಗಳ ಕಾರಣ
    ಮಾತ್ರೆ ಚಿಕಿತ್ಸೆ ಮಾತು ಚಿಕಿತ್ಸೆ ಮನೋ ಸಾಮಾಜಿಕ ಚಿಕಿತ್ಸೆಗಳು ಮುಂತಾದ ಚಿಕಿತ್ಸೆಗಳ ಕಾರಣದಿಂದ ಹೆಚ್ಚಿನ ಕಾಯಿಲೆಗಳಿಗೆ
    ಚೇತರಿಕೆ ಕಂಡುಬರುತ್ತದೆ.
    3 . ಮಾನಸಿಕ ಕಾಯಿಲೆಯೂ ಇಚ್ಛಾಶಕ್ತಿಯ ಕೊರತೆಯಿಂದ ಉಂಟಾಗುತ್ತದೆ ಎಂಬುದು ಇದು ಒಂದು ತಪ್ಪು ಅಭಿಪ್ರಾಯ. ದೈಹಿಕ
    ಕಾಯಿಲೆಯ ಕಾರಣಗಳಂತೆ ಇದು ಕೂಡ ಜೈವಿಕ ಹಾಗೂ ಮಾನಸಿಕ ಕಾರಣಗಳಿಂದ ಉಂಟಾಗುವ ಒಂದು ಕಾಯಿಲೆ.
  3. ಮದುವೆ ಮಾಡಿದರೆ ಮಾನಸಿಕ ಕಾಯಿಲೆ ಗುಣವಾಗುತ್ತದೆ ಇದು ಬಹಳ ಪ್ರಚಲಿತವಾಗಿರುವಂತಹ ಒಂದು ನಂಬಿಕೆ ಆದರೆ
    ದುರಾದೃಷ್ಟಕರ ಎಂದರೆ ಇದು ಸುಳ್ಳು. ಮಾನಸಿಕ ಕಾಯಿಲೆ ಇರುವವರು ಮದುವೆಯಾದಲ್ಲಿ ಹಲವು ಒಮ್ಮೆ ಅವರಿಗೆ ಹೊಂದಾಣಿಕೆ
    ಮಾಡಿಕೊಳ್ಳಲು ಕಷ್ಟವಾಗಿ ಕಾಯಿಲೆ ಉಲ್ಬಣಗೊಳ್ಳಬಹುದು ಮತ್ತು ವಿಚ್ಛೇದನಗಳು ಹೆಚ್ಚಾಗಿ ಕಂಡುಬರುತ್ತದೆ. ಮಾನಸಿಕ
    ಕಾಯಿಲೆ ಇರುವವರು ತಮ್ಮ ಕಾಯಿಲೆಯನ್ನು ಮರೆಮಾಚಿ ಮದುವೆಯಾಗಲೇ ಬಾರದು.
    5.ಮಾನಸಿಕ ಕಾಯಿಲೆ ಇರುವವರು ಯಾವಾಗಲೂ ಆಸ್ಪತ್ರೆಯಲ್ಲಿ ಇರಬೇಕು. ಇದು ಬಹಳ ದೊಡ್ಡ ತಪ್ಪು ನಂಬಿಕೆ. ಮಾನಸಿಕ
    ಕಾಯಿಲೆ ಇರುವವರು ಸರಿಯಾದ ಚಿಕಿತ್ಸೆಯನ್ನು ಪಡೆದು ಸಮುದಾಯದಲ್ಲಿ ನನ್ನಂತೆ ನಿಮ್ಮಂತೆ ಕೆಲಸ ಮಾಡಿಕೊಂಡಿರಬಹುದು.
    ಮಾತ್ರೆಯನ್ನು ಬಿಟ್ಟು ಅಥವಾ ಕೆಲವೊಮ್ಮೆ ಜೈವಿಕ ಕಾರಣಗಳಿಂದ ಖಾಯಿಲೆ ಉಲ್ಬಣಗೊಂಡಾಗ ಮಾತ್ರ ಅವರನ್ನು ಆಸ್ಪತ್ರೆಗೆ
    ದಾಖಲಿಸಲಾಗುತ್ತದೆ.
    6.ಮಾನಸಿಕ ಕಾಯಿಲೆಯೂ ಬಡವರಲ್ಲಿ ಮತ್ತು ಹೆಚ್ಚು ಓದದೇ ಇರುವವರಲ್ಲಿ ಹೆಚ್ಚು ಕಾಣಸಿಗುತ್ತದೆ ಎಂಬುದು ಒಂದು ತಪ್ಪು
    ನಂಬಿಕೆ. ವಿದ್ಯೆ ಬುದ್ಧಿ ಶೈಕ್ಷಣಿಕ ಅರ್ಹತೆ, ಉತ್ತಮ ಸಾಮಾಜಿಕ ಅಥವಾ ಆರ್ಥಿಕ ಸ್ಥಿತಿ ಇವು ಯಾವುವು ಕೂಡ ಮಾನಸಿಕ
    ಕಾಯಿಲೆ ಬಾರದಂತೆ ರಕ್ಷಿಸುವುದಿಲ್ಲ.
  4. ಮಾನಸಿಕ ಕಾಯಿಲೆ ಇರುವವರು ಎಂದಿಗೂ ಸಮಾಜದಲ್ಲಿ ಎಲ್ಲರಂತೆ ಕೆಲಸ ಮಾಡಲು ಆಗುವುದಿಲ್ಲ .. ಇದು ಒಂದು ತಪ್ಪು
    ನಂಬಿಕೆ, ಸರಿಯಾದ ಚಿಕಿತ್ಸೆ ಹಾಗೆಯೇ ಪ್ರೀತಿ ಪಾತ್ರದಿಂದ ಬೆಂಬಲ ಸಿಕ್ಕಲ್ಲಿ ಮಾನಸಿಕ ಕಾಯಿಲೆ ಇರುವವರು ಸಮಾಜದಲ್ಲಿ
    ಉತ್ತಮ ಕೆಲಸ ಮಾಡಿಕೊಂಡು ಬದುಕಬಹುದು. ಅಂತಹ ಹಲವು ನಿರ್ದರ್ಶನಗಳನ್ನು ನಾನು ಕಣ್ಣಾರೆ ನೋಡಿದ್ದೇನೆ.
  5. ಮಾನಸಿಕ ಕಾಯಿಲೆಗಳು ಶಾರೀರಿಕ ಕಾಯಿಲೆಗಳಂತೆ ಅಲ್ಲ ಅದು ಕೇವಲ ವ್ಯಕ್ತಿಯ ಮನಸ್ಸಿನಲ್ಲಿ ಇರುತ್ತದೆ.. ಈ ನಂಬಿಕೆ
    ಬಹಳ ತಪ್ಪಾದ ನಂಬಿಕೆ. ಮಾನಸಿಕ ಕಾಯಿಲೆಗಳು ಕೂಡ ಮನುಷ್ಯನ ಮೆದುಳಿನಲ್ಲಿ ಉಂಟಾಗುವ ರಾಸಾಯನಿಕಗಳ
    ಬದಲಾವಣೆಗಳಿಂದ ಉಂಟಾಗುವ ಸಮಸ್ಯೆಗಳು. ದೈಹಿಕ ಕಾಯಿಲೆ ಎಷ್ಟು ನಿಜವೋ ಮಾನಸಿಕ ಕಾಯಿಲೆ ಕೂಡ ಅಷ್ಟೇ ನಿಜ.
  6. ಮಾನಸಿಕ ಕಾಯಿಲೆಗಳು ದುರ್ಬಲ ವ್ಯಕ್ತಿತ್ವದವರಲ್ಲಿ ಮಾತ್ರ ಉಂಟಾಗುತ್ತದೆ. ಇದು ಒಂದು ತಪ್ಪು ನಂಬಿಕೆ. ಮನುಷ್ಯನ
    ವ್ಯಕ್ತಿತ್ವ ಇಚ್ಛಾಶಕ್ತಿ ಇವು ಯಾವುದನ್ನು ಲೆಕ್ಕಿಸದೆ ಮಾನಸಿಕ ಕಾಯಿಲೆಗಳು ಉಂಟಾಗುತ್ತವೆ. ಎಷ್ಟೋ ಜನ
    ಬಲಿಷ್ಠರೆನಿಸಿಕೊಂಡವರು ಕೂಡ ಕೆಲವು ಸನ್ನಿವೇಶಗಳಲ್ಲಿ ಆತಂಕ ಖಿನ್ನತೆಗೆ ಒಳಗಾಗುವುದು ಸಹಜ.
  7. ಒಮ್ಮೆ ಮಾನಸಿಕ ರೋಗಿ ಆದರೆ ಜೀವನ ಪರ್ಯಂತ ಮಾನಸಿಕ ರೋಗಿ. ಇದು ಕೂಡ ಒಂದು ತಪ್ಪು ನಂಬಿಕೆ. ಎಷ್ಟೋ
    ಕಾಯಿಲೆಗಳು ಒಮ್ಮೆ ಬಂದು ಮತ್ತೆ ಎಂದಿಗೂ ಕೂಡ ಬಾರದೇ ಇರುವುದು ಮನೋವೈದ್ಯನಾಗಿ ನಾನು ನೋಡಿದ್ದೇನೆ. ಇನ್ನು
    ಕೆಲವೊಂದು ಪ್ರಕರಣಗಳಲ್ಲಿ ವರ್ಷಾನುಗಟ್ಟಲೆ ಕಾಯಿಲೆ ಬರದೆ ಎಲ್ಲಿಯೋ ಒಮ್ಮೆಲೇ ಬೇದ್ಯತೆ ಇರುವಂತಹ ಸಂದರ್ಭಗಳಲ್ಲಿ
    ಮಾನಸಿಕ ಕಾಯಿಲೆ ಉಂಟಾಗುತ್ತದೆ. ಹಲವರು ಮಾತ್ರೆ ಅಥವಾ ಚಿಕಿತ್ಸೆ ಇಲ್ಲದೆ ಜೀವನದಲ್ಲಿ ಉತ್ತಮವಾಗಿ ಬದುಕುತ್ತಾರೆ.
    11.ಮಾನಸಿಕ ಕಾಯಿಲೆಗಳು ಮಕ್ಕಳಲ್ಲಿ ಬರುವುದಿಲ್ಲ ಎಂಬುದು ಕೂಡ ಒಂದು ಅಪನಂಬಿಕೆ. ಮಕ್ಕಳು ಮತ್ತು ಹದಿಹರೆಯದ
    ಪ್ರಾಯದಲ್ಲಿ ಬಹಳಷ್ಟು ಕಾಯಿಲೆಗಳು ಪ್ರಪ್ರಥಮವಾಗಿ ಪ್ರಕಟಗೊಳ್ಳುತ್ತವೆ. ಇವುಗಳನ್ನು ಗುರುತಿಸಿ ಅದಕ್ಕೆ ಚಿಕಿತ್ಸೆಯನ್ನು ಬೇಗ
    ಪ್ರಾರಂಭಿಸುವುದು ಅತಿ ಅಗತ್ಯ.
  8. ತಾಯಿ ತಂದೆಯರು ಮಕ್ಕಳನ್ನು ಸರಿಯಾಗಿ ನೋಡಿಕೊಳ್ಳದೆ ಇರುವುದು ಮಾನಸಿಕ ಕಾಯಿಲೆಗೆ ಕಾರಣ ಎಂಬುದು ಬಹಳ
    ದೊಡ್ಡ ತಪ್ಪು ನಂಬಿಕೆ. ಕೇವಲ ತಾಯಿ ತಂದೆಯರ ಲಾಲನೆ ಪಾಲನೆ ಅಲ್ಲದೆ ಅವರ ಒಡನಾಡಿಗಳೊಂದಿಗೆ ಒಡನಾಟ, ಅವರ
    ಪರಿಸರ, ಅವರ ಜೀವನ ಶೈಲಿ ಮುಂತಾದ ಹಲವು ಕಾರಣಗಳಿಂದ ಮಾನಸಿಕ ಸಮಸ್ಯೆಗಳು ಉಂಟಾಗುತ್ತವೆ. ಆದ್ದರಿಂದ ತಮ್ಮ
    ಪಾಲನೆ ಪೋಷಣೆಯಿಂದ ತಾವು ಮಾಡಿದ ಯಾವುದೋ ತಪ್ಪಿ ನಿಂದ ಮಕ್ಕಳಿಗೆ ಕಾಯಿಲೆ ಬಂತು ಎಂದು ಯಾವ ತಾಯಿ
    ತಂದೆಯರು ಭಾವಿಸಬಾರದು
  9. ಮಾನಸಿಕ ಕಾಯಿಲೆಗಳು ಸಾಂಕ್ರಾಮಿಕ ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತದೆ ಅನ್ನುವುದು ಖಂಡಿತವಾಗಿಯೂ ಸುಳ್ಳು. ಈ
    ಕಾಯಿಲೆಗಳು ಒಬ್ಬರಿಂದ ಒಬ್ಬರಿಗೆ ಹರಡಲು ಸಾಧ್ಯವೇ ಇಲ್ಲ. ಕೆಲವೊಮ್ಮೆ ಕೆಲವು ನಡುವಳಿಕೆಗಳು ಇನ್ನೊಬ್ಬರನ್ನು ನೋಡಿ
    ನಾವು ಕಲಿಯಬಹುದು ಆದರೆ ಒಟ್ಟಾರೆ ಕಾಯಿಲೆ ಇನ್ನೊಬ್ಬರಿಂದ ಬರಲು ಸಾಧ್ಯವಿಲ್ಲ.
  10. ಆತ್ಮಹತ್ಯೆ ಮಾಡಿಕೊಳ್ಳುವುದು ಹೇಡಿತನದ ಲಕ್ಷಣ ಎಂಬುದು ಹಲವರ ನಂಬಿಕೆ. ಆದರೆ ಇದು ಸರಿಯಲ್ಲ. ಆತ್ಮಹತ್ಯೆ
    ಮಾಡಿಕೊಳ್ಳುವವರು ತೀವ್ರವಾದ ಒತ್ತಡದಿಂದ ಬಳಲುತ್ತಿರುತ್ತಾರೆ ಅವರಿಗೆ ಪ್ರೀತಿ ಪಾತ್ರದಿಂದ ಸಹಾನುಭೂತಿ ಮತ್ತು ಬೆಂಬಲ
    ಬೇಕು.
  11. ಮಾನಸಿಕ ಕಾಯಿಲೆ ಇರುವವರು ಅಪಾಯಕಾರಿ ಮತ್ತು ಹಿಂಸಾ ಪ್ರವೃತ್ತಿ ಉಳ್ಳವರು ಎಂಬುದು ತಪ್ಪು ನಂಬಿಕೆ. ನಾನು
    ನೋಡಿರುವಂತೆ ಅವರು ಹಿಂಸಾತ್ಮಕ ಕೃತ್ಯಗಳ ಬಲಿಪಶುಗಳು. ಹಲವರು ತಮ್ಮ ವರ್ತನೆಗಳಿಂದ ಇತರರಿಗೆ ಕಿರಿಕಿರಿ ಮಾಡಿ
    ಅವರಿಂದ ಆಕ್ರಮಣಕ್ಕೆ ಒಳಗಾಗುವುದು ಕಣ್ಣಾರೆ ನೋಡಿದ್ದೇನೆ.
    ಒಟ್ಟಿನಲ್ಲಿ ಸಮಾಜದಲ್ಲಿ ಮಾನಸಿಕ ಕಾಯಿಲೆಗಳ ಬಗ್ಗೆ ಸಾಕಷ್ಟು ಅಪನಂಬಿಕೆಗಳು ಇದೆ. ಇದರ ಕಾರಣದಿಂದ ಮಾನಸಿಕ
    ಆರೋಗ್ಯದ ಚಿಕಿತ್ಸೆ ಸರಿಯಾಗಿ ನಡೆಯುತ್ತಿಲ್ಲ.