Select Page

ಪೀಳಿಗೆ z ಮತ್ತು ಮಾನಸಿಕ ಆರೋಗ್ಯ
1997ರಿಂದ 2010 ನೇ ಇಸವಿಯವರೆಗೆ ಹುಟ್ಟಿದ ಮಕ್ಕಳಿಗೆ ಪೀಳಿಗೆ z ಎಂದು ಕರೆಯುತ್ತೇವೆ. 2010ರ ನಂತರ ಹುಟ್ಟಿದ ಮಕ್ಕಳಿಗೆ
alpha ಪೀಳಿಗೆ ಎಂದು ಕರೆಯುತ್ತೇವೆ. ಮನೋವೈದ್ಯನಾಗಿ ನಾನು ಗಮನಿಸುವುದೇನೆಂದರೆ ಈ ಪೀಳಿಗೆಯ ಮಕ್ಕಳು
ಹದಿಹರೆಯದವರು ಮತ್ತು ಕಾಲೇಜ್ ವಿದ್ಯಾರ್ಥಿಗಳು ತಮ್ಮದೇ ಆದ ವಿಶಿಷ್ಟ ಸಮಸ್ಯೆಗಳನ್ನು ಹಾಗೆಯೇ ಪರಿಹಾರಗಳನ್ನು
ಹೊಂದಿದ್ದಾರೆ. ಇವರುಗಳು ಇಂಟರ್ನೆಟ್ ,ಸ್ಮಾರ್ಟ್ ಫೋನ್ ಮತ್ತು ಸಾಮಾಜಿಕ ಜಾಲತಾಣ ಇವುಗಳೊಂದಿಗೆ ಹುಟ್ಟಿರುವ
ಮಕ್ಕಳು. ನಮ್ಮ ಪೀಳಿಗೆಗಿಂತ ಹೆಚ್ಚಿನ ಸಾಮಾನ್ಯ ಜ್ಞಾನ, ವಿಶ್ವದ ವಿಚಾರಗಳ ಬಗ್ಗೆ ಮಾಹಿತಿ, ಮಾನಸಿಕ ಆರೋಗ್ಯದ ಬಗ್ಗೆ
ಅರಿವು ಇವರುಗಳಲ್ಲಿ ಇದೆ. ನಾನೇ ಗಮನಿಸಿದಂತೆ ಹಲವರು ಗೂಗಲ್ ಡಾಕ್ಟರ್ ಅಥವಾ chat gpt ಸಹಾಯದಿಂದ ತಮಗೆ ಏನು
ಸಮಸ್ಯೆಗಳಿವೆ ಎಂದು ಊಹಿಸಿಕೊಂಡು ವೈದ್ಯರಲ್ಲಿಗೆ ಬರುತ್ತಿದ್ದಾರೆ. ಹೆಚ್ಚಿನವರು ಜೀವನದಲ್ಲಿ ಮಾನಸಿಕ ಆರೋಗ್ಯದ
ಪ್ರಾಮುಖ್ಯತೆಯ ಬಗ್ಗೆ ಅರಿವುಳ್ಳವರಾಗಿದ್ದಾರೆ. ಇವರಿಗೆ ಮಾನಸಿಕ ಆರೋಗ್ಯದ ಅರಿವು ಅಗತ್ಯಕ್ಕಿಂತ ಹೆಚ್ಚು ಸಿಗುತ್ತಿದೆ.
ಅಗತ್ಯಕ್ಕಿಂತ ಹೆಚ್ಚು ಆನ್ಲೈನ್ ಮಿತ್ರರಿದ್ದಾರೆ. ಕೆಲವರು ಅಗತ್ಯಕ್ಕಿಂತ ಹೆಚ್ಚು ತಮ್ಮ ಸಮಸ್ಯೆಗಳ ಬಗ್ಗೆ ಮನೆಯವರ ಬಗ್ಗೆ
ಅಪರಿಚಿತರೊಂದಿಗೆ ಚಾಟ್ ರೂಮ್ ಅಥವಾ ಮೆಸೆಂಜರ್ ಗಳಲ್ಲಿ ಚರ್ಚಿಸುತ್ತಿದ್ದಾರೆ ಕೆಲವೊಮ್ಮೆ ಬಹಿರಂಗವಾಗಿ ಕೂಡ ಸ್ಟೇಟಸ್
ಗಳ ಮೂಲಕ ಮಾತಾಡುತ್ತಿದ್ದಾರೆ. ಇವರಲ್ಲಿ ಗಮನ ಕೇಂದ್ರೀಕರಿಸಿ ಕೆಲಸ ಮಾಡುವ ಸಾಮರ್ಥ್ಯ ಕಡಿಮೆಯಾಗಿದೆ. ಮನಸ್ಸಿನ
ಚಂಚಲತೆ ಹೆಚ್ಚಾಗಿದೆ. ಆನ್ಲೈನ್ ಮಿತ್ರರಿದ್ದರು ಏಕಾಂಗಿಗಳಾಗಿದ್ದಾರೆ. ಮುಖತಹ ಮಾತನಾಡುವುದಕ್ಕಿಂತ ಇವರುಗಳು ಡಿಜಿಟಲ್
ಸಂವಹನದಲ್ಲಿ ಹೆಚ್ಚು ನಂಬಿಕೆ ಇಟ್ಟವರಾಗಿದ್ದಾರೆ. ಆನ್ಲೈನ್ ಚಿಕಿತ್ಸೆ ಬೇಕು ಎಂದು ಕೇಳುತ್ತಾರೆ. ಅತಿಯಾದ ಮೊಬೈಲ್ ಮತ್ತು
ಲ್ಯಾಪ್ಟಾಪ್ ಉಪಯೋಗದಿಂದ ನಿದ್ರಾಹೀನತೆ, ಹಾಗೆಯೇ ಒಬ್ಬರೇ ಮನೆಯಲ್ಲಿ ಅಥವಾ ಲೈಬ್ರರಿಯಲ್ಲಿ ಕುಳಿತುಕೊಳ್ಳುವುದರಿಂದ
ಇವರು ಒಂಟಿತನ ಎದುರಿಸುತ್ತಿದ್ದಾರೆ. ಈ ಒಂಟಿತನವನ್ನು ಮರೆಯಲು ಮದ್ಯ ಮಾದಕ ದ್ರವ್ಯ ವ್ಯಸನ, ನಡವಳಿಕೆ ವ್ಯಸನ
ಅಂದರೆ ಹೆಚ್ಚಾಗಿ ಇಂಟರ್ನೆಟ್ ನಲ್ಲಿ ಚಾಟಿಂಗ್ ,ಗೇಮಿಂಗ್, ಜೂಜಾಡುವುದು, ಶಾಪಿಂಗ್ ಮಾಡುವುದು ,ಸಾಮಾಜಿಕ
ಜಾಲತಾಣಗಳ ಅಡಿಕ್ಷನ್ , ಸೈಬರ್ ಲೈಂಗಿಕತೆ, ಸೈಬರ್ ಬುಲ್ಲಿಂಗ್ ಮುಂತಾದ ಸಮಸ್ಯೆಗಳಿಗೆ ಬಲಿಯಾಗುತ್ತಿದ್ದಾರೆ. ಇದೇ
ಸಮಯದಲ್ಲಿ ಮಾಹಿತಿ ತಂತ್ರಜ್ಞಾನದ ಸಾಕ್ಷರತೆ ಹೆಚ್ಚಾಗಿ ತಮಗೆ ಇಲ್ಲದ ಕಾಯಿಲೆಗಳನ್ನು ಇದೆ ಎಂದು ಭಾವಿಸಿ ವೈದ್ಯರಲ್ಲಿ
ಬರುತ್ತಿದ್ದಾರೆ. ವೈದ್ಯರು ಅವರ ನಿಜ ಸಮಸ್ಯೆಗಳ ಬಗ್ಗೆ ಹೇಳಿದರೆ ಅದನ್ನು ತಮಗೆ ತಿಳಿದಿರುವ ಮಾಹಿತಿಯೊಂದಿಗೆ ತಾಳೆ ಹಾಕಿ
ವೈದ್ಯರು ಹೇಳುವುದು ಸರಿಯೇ ಅಲ್ಲ, ತಮಗೆಲ್ಲ ಗೊತ್ತಿದೆ ಎಂದು ಹೇಳುವವರು ಇದ್ದಾರೆ. ಇನ್ನು ಕೆಲವರು ವೈದ್ಯರನ್ನು
ಸಂಪರ್ಕಿಸಿದರೆ ತಮ್ಮ ಮನಸ್ಸಿನಲ್ಲಿ ತಮ್ಮ ಸಮಸ್ಯೆಗಳ ಬಗ್ಗೆ ಯೋಚಿಸಿಕೊಂಡು ಒತ್ತಡಕ್ಕೇ ಒಳಗಾಗುತ್ತಿದ್ದಾರೆ. ಆನ್ಲೈನ್
ಚಿಕಿತ್ಸೆಗಳು ,ವೆಲ್ನೆಸ್ ಕೋಚ್ ಗಳು, ವ್ಯಕ್ತಿತ್ವ ವಿಕಸನ ವರ್ಕ್ಶಾಪ್ ಗಳು ಹೀಗೆ ಹಲವು ಬಗೆಯ ಹೊಸ ಉದ್ಯಮಗಳು ಬೆಳೆಯಲು
ಆರಂಭಿಸಿವೆ. ಅಮೆರಿಕನ್ ಸೈಕಲಾಜಿಕಲ್ ಅಸೋಸಿಯೇಷನ್ 2021 ರಲ್ಲಿ ನಡೆಸಿದ ಒಂದು ಸಂಶೋಧನೆ ಅಮೆರಿಕದಲ್ಲಿ ಒತ್ತಡ
2021 ಸರ್ವೆ ಏನು ಹೇಳುತ್ತದೆ ಎಂದರೆ ಪೀಳಿಗೆ ನಿರ್ಧಾರಗಳನ್ನು ತೆಗೆದುಕೊಳ್ಳಲು ತಡಕಾಡುತ್ತದೆ. ಶೇಕಡ 50ರಷ್ಟು ಈ
ಪೀಳಿಗೆಯ ಜನರು ಜೀವನದಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳಲು ತುಂಬಾ ಯೋಚನೆ ಮಾಡುತ್ತಾರೆ ಹಾಗೆ ಶೇಕಡ 79 ಒತ್ತಡದ
ಕಾರಣದಿಂದ ನಡವಳಿಕೆ ಸಮಸ್ಯೆಗಳನ್ನು ನಡವಳಿಕೆ ಬದಲಾವಣೆಗಳನ್ನು ಅನುಭವಿಸಿದ್ದಾರೆ. ಕೋವಿಡ್ ಮಹಾಮಾರಿಯಿಂದ
ಉಂಟಾದ ಒತ್ತಡದ ಬಗ್ಗೆ ಶೇಖಡ 45 ಜನ ತಮಗೆ ಅದನ್ನು ಹೇಗೆ ಎದುರಿಸುವುದು ಗೊತ್ತಾಗಲಿಲ್ಲ ಎಂದು ತಿಳಿಸಿರುತ್ತಾರೆ.

ವೈದ್ಯಕೀಯ ಸೇವೆಗಳ ಲಭ್ಯತೆ ,ಶಿಕ್ಷಣ , ಉದ್ಯೋಗ ಪರಿಸ್ಥಿತಿ, ವೈಯಕ್ತಿಕ ಹಣಕಾಸು ಪರಿಸ್ಥಿತಿ ಮತ್ತು ಸಾಲದ ಸಮಸ್ಯೆ ಹಾಗೂ
ದೇಶದ ಆರ್ಥಿಕ ಪರಿಸ್ಥಿತಿ
ಮುಂತಾದ ವಿಷಯಗಳ ಮೇಲೆ ಇವರ ಮಾನಸಿಕ ಪರಿಸ್ಥಿತಿ ನಿರ್ಭರವಾಗಿತ್ತು ಎಂದು ಈ ಸಂಶೋಧನೆ ತಿಳಿಸುತ್ತದೆ. ಈ
ಸಂಶೋಧನೆಯಲ್ಲಿ ತಿಳಿದು ಬಂದ ಸಮಾಧಾನಕರ ವಿಷಯವೆಂದರೆ ಈ ಪೀಳಿಗೆ ಮಾನಸಿಕ ಆರೋಗ್ಯ ಸೇವೆಗಳನ್ನು
ಬಳೆಸಿಕೊಳ್ಳಲು ಸಕಾರಾತ್ಮಕ ನಿಲುವುಗಳನ್ನು ಹೊಂದಿದೆ ಎನ್ನುವ ವಿಷಯ. ಇದಕ್ಕೆ ಪ್ರಮುಖ ಕಾರಣವೆಂದರೆ ಕೋವಿಡ್
ಸಂದರ್ಭದಲ್ಲಿ ಉಂಟಾದ ಸನ್ನಿವೇಶಗಳ ಕಾರಣ ಪ್ರಾರಂಭವಾದ ಟೆಲಿ ಮೆಡಿಸಿನ್ ಸೇವೆ. ಕ್ವಾರಂಟೈನ್ ಸಮಯದಲ್ಲಿ
ಸುಲಭವಾಗಿ ಮನೋವೈದ್ಯರು, ಇತರ ಮನೋವೈದ್ಯಕೀಯ ವೃತ್ತಿಪರರು ಟೆಲಿ ಮೆಡಿಸಿನ್ ಸೇವೆಯಲ್ಲಿ ಮಾತನಾಡಲು
ಸಿಗುತ್ತಿದ್ದರು. ಹೆಚ್ಚಿನವರಿಗೆ ಮನೋವೈದ್ಯರು ಮನೋವೈದ್ಯಕೀಯ ಚಿಕಿತ್ಸೆ ಸುಲಭವಾಗಿ ಸಿಗುತ್ತಿತ್ತು. ಹಲವರು ಪರ್ಯಾಯ
ವೈದ್ಯಕೀಯ ಚಿಕಿತ್ಸೆಯ ಸಹಾಯವನ್ನು ಅಥವಾ ಸ್ವಸಹಾಯ ಗುಂಪುಗಳ ಸಹಾಯವನ್ನು ಪಡೆದು ಮನೋವೈದ್ಯಕೀಯ
ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಹೆಚ್ಚಿನ ಸಂಶೋಧನೆಗಳು ಅಮೆರಿಕ ದೇಶದ ಮೈಂಡ್ ಫುಲ್ ನೆಸ್ಸಂಶೋಧನೆಗಳು ಆದರೂ
ನಮ್ಮ ದೇಶ ಅಥವಾ ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಈ ಪೀಳಿಗೆಯು ಇಂತಹ ಸಮಸ್ಯೆಗಳನ್ನೆ ಅನುಭವಿಸುತ್ತಿದೆ. ಉದ್ವೇಗ
ನಿಯಂತ್ರಣದ ಸವಾಲುಗಳು, ಗುರಿಯೊಂದನ್ನು ಆರಿಸಿಕೊಂಡು ಮುಂದೆ ಹೋಗುವ ನಡವಳಿಕೆ ಅನುಸರಿಸುವುದರಲ್ಲಿ
ತೊಂದರೆಗಳು, ವಿಳಂಬ ಪ್ರವೃತ್ತಿ ಮತ್ತು ಮಾನಸಿಕ ಒತ್ತಡ ಇವು ಎಲ್ಲಾ ದೇಶಗಳ ಯುವಕರ ಸಮಸ್ಯೆಯಾಗಿದೆ. ಹೆಚ್ಚುತ್ತಿರುವ
ಆತ್ಮಹತ್ಯೆ, ಲೈಂಗಿಕ ಅಪರಾಧಗಳು ಈ ಒತ್ತಡದ ಸಂಕೇತವಾಗಿವೆ. ಮದ್ಯ ಮಾದಕ ದ್ರವ್ಯ ವ್ಯಸನ, ನಡವಳಿಕೆ ಅಡಿಕ್ಷನ್
ಮುಂತಾದ ಸಮಸ್ಯೆಗಳು ಕೂಡ ಈ ಪೀಳಿಗೆಯಲ್ಲಿ ಹೆಚ್ಚುತ್ತಿವೆ.
ಈ ಪೀಳಿಗೆಯ ಮಾನಸಿಕ ಆರೋಗ್ಯ ಉತ್ತಮಗೊಳಿಸಲು ಮನೋವೈದ್ಯಕೀಯ ವೃತ್ತಿಪರರು ಯೋಚಿಸಲೇಬೇಕಾಗಿದೆ. ಮುಕ್ತ
ಸಂವಹನವನ್ನು ಉತ್ತೇಜಿಸುವುದು, ಕೆಲವು ಶೈಕ್ಷಣಿಕ ಉಪಕ್ರಮಗಳನ್ನು ಉಪಯೋಗಿಸಿ ಅಲ್ಲಿಯೇ ಮಾನಸಿಕ ಆರೋಗ್ಯದ ಅರಿವು
ಮತ್ತು ತಿಳುವಳಿಕೆಯನ್ನು ಹೆಚ್ಚಿಸುವುದು, ಅಗತ್ಯ ಕೌನ್ಸಿಲಿಂಗ್ ಸೇವೆಗಳನ್ನು ಮತ್ತು ಸಹಾಯವಾಣಿ ಅಂತಹ ಸಂಪನ್ಮೂಲಗಳನ್ನು
ಶಾಲಾ-ಕಾಲೇಜುಗಳಲ್ಲಿ ಸಿಗುವಂತೆ ಮಾಡುವುದು ಹಾಗೂ ಇವರುಗಳಲ್ಲಿ ತಮ್ಮ ಸ್ವಆರೈಕೆಗೆ ತೆಗೆದುಕೊಳ್ಳಬೇಕಾದ ಕೆಲವು
ನಿಲುವುಗಳ ಬಗ್ಗೆ ಮಾಹಿತಿ ಕೊಡುವುದು ಉದಾಹರಣೆಗೆ ಶಾಲಾ ಕಾಲೇಜುಗಳಲ್ಲಿ ಆಟೋಟ, ವ್ಯಾಯಾಮ ಮತ್ತು ಜಿಮ್
ಸಲಕರಣೆಗಳನ್ನು ಹೆಚ್ಚಿಸುವುದು ಹಾಗೂ ಅದನ್ನು ಹೆಚ್ಚು ಹೆಚ್ಚು ಉಪಯೋಗಿಸಲು ತಿಳುವಳಿಕೆ ನೀಡುವುದು, ಮೈಂಡ್ ಫುಲ್ನೆಸ್
ಸಾವಧಾನತೆಯ ವ್ಯಾಯಾಮಗಳನ್ನು ಕಲಿಸುವುದು ತೆಗೆದುಕೊಳ್ಳಬೇಕು. ಶಾಲಾ ಕಾಲೇಜುಗಳಲ್ಲಿ ಅಧ್ಯಾಪಕರು ಆಪ್ತಸಲಹೆ ಬಗ್ಗೆ
ಸರಿಯಾದ ಮಾಹಿತಿ ಪಡೆದುಕೊಳ್ಳುವುದು ,ವಿದ್ಯಾರ್ಥಿಗಳಿಗೆ ಜೀವನ ಕೌಶಲಗಳನ್ನು ಹೇಳಿಕೊಡುವುದು,lಮಾನಸಿಕ
ಸಮಸ್ಯೆಗಳನ್ನು ಬೇಗನೆ ಗುರುತಿಸಿ ಮನೋವೈದ್ಯಕೀಯ ಚಿಕಿತ್ಸೆಗೆ ಕಳುಹಿಸಿಕೊಡುವುದು ಅಗತ್ಯವಾಗಿದೆ.ಹಾಗೆಯೆ ಮಾನಸಿಕ
ವೃತ್ತಿಪರರು ಕೂಡ ಮನೋವೈದ್ಯಕೀಯ ಸಮಸ್ಯೆಗಳು ಮತ್ತು ಆದರ ಚಿಕಿತ್ಸೆಗಳ ಬಗ್ಗೆ ಡಿಜಿಟಲ್ ಕಾರ್ಯಕ್ರಮಗಳನ್ನು ಮತ್ತು
ಭೌತಿಕ ಕಾರ್ಯಕ್ರಮಗಳನ್ನು ನಡೆಸುವುದು ಹಾಗು ಚಿಕಿತ್ಸೆಗೆ ಬರುವ ಯುವಕರಿಗೆ ಸುಲಭವಾಗಿ ಲಭ್ಯರಿರುವುದು ಅತಿ
ಅಗತ್ಯವಾಗಿದೆ.