ಔಷಧಿ ಚಿಕಿತ್ಸೆಗಳಲ್ಲಿ ಖಿನ್ನತೆಗೆ ಇಂಜೆಕ್ಷನ್ ಮೂಲಕ ಕೊಡುವ ಕೆಟಮಿನ್ ಎಂಬ ಅರಿವಳಿಕೆ ಔಷಧ ಮಧ್ಯಮ ಮಟ್ಟದ ಮತ್ತು
ತೀವ್ರ ಖಿನ್ನತೆಯ ಚಿಕಿತ್ಸೆಯಲ್ಲಿ ಉಪಯೋಗಿಸಲಾಗುತ್ತದೆ .ಅದರಲ್ಲಿಯೂ ಆತ್ಮಹತ್ಯೆಯ ಯೋಚನೆ ನಿಭಾಯಿಸುವಲ್ಲಿ ಕೆಟಮಿನ್
ಬಹಳಷ್ಟು ಕೆಲಸ ಮಾಡುತ್ತದೆ ಎಂದು ವೈಜ್ಞಾನಿಕ ಸಂಶೋಧನೆಗಳು ತಿಳಿಸುತ್ತವೆ .ಕೆಟಮಿನ್ ಅನ್ನು ಇನ್ಫ್ಯೂಷನ್ ಡ್ರಿಪ್(infusion
drip )ಮೂಲಕ ವೈದ್ಯರು ಕೊಡುತ್ತಾರೆ .ಕೆಟಮಿನ್ ಖಿನ್ನತೆಯ ಚಿಕಿತ್ಸೆಯಲ್ಲಿ ಬಹಳಷ್ಟು ಭರವಸೆಯನ್ನು ತೋರಿಸಿದೆ, ವಿಶೇಷವಾಗಿ
ಮಾತ್ರೆ ಚಿಕಿತ್ಸೆಗೆ ಬಗ್ಗದ ಖಿನ್ನತೆ ಇದರ ಚಿಕಿತ್ಸೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ .ಇದನ್ನು ನಿಯಂತ್ರಿತ ಸೆಟ್ಟಿಂಗ್ಗಳಲ್ಲಿ
ಮಾತ್ರ ಕೊಡಲಾಗುತ್ತದೆ .ಇದು ಮಾತ್ರೆಗಳಿಗಿಂತ ತ್ವರಿತ ಖಿನ್ನತೆ-ಶಮನಕಾರಿ ಪರಿಣಾಮಗಳನ್ನು ಹೊಂದಿರಬಹುದು ಎಂದು
ಸಂಶೋಧನೆಗಳು ಸೂಚಿಸುತ್ತದೆ, ಆದರೆ ದೀರ್ಘಕಾಲೀನ ಪ್ರಯೋಜನಗಳು ಮತ್ತು ಸಂಭಾವ್ಯ ಅಪಾಯಗಳನ್ನು ಇನ್ನೂ
ಅಧ್ಯಯನ ಮಾಡಲಾಗುತ್ತಿದೆ.
ಕೆಟಮಿನ್ nmda ಮತ್ತು ಗ್ಲುಟಮೇಟ್ ಎಂಬ ನರವಾಹಕಗಳ ಬದಲಾವಣೆ ಮುಕಾಂತರ ಖಿನ್ನತೆ ನಿವಾರಣಾ ಪ್ರಕ್ರಿಯೆ ಉಂಟು
ಮಾಡುತ್ತದೆ ಎಂದು ಸಂಶೋದನೆಗಳು ತಿಳಿಸುತ್ತದೆ .ಹಾಗೆಯೇ ಮಿದುಳಿನ ನರಕೋಶಗಳ ಸಂಪರ್ಕಗಳಲ್ಲಿ ಬದಲಾವಣೆ ತಂದು
ಖಿನ್ನತೆ ನಿವಾರಣೆಗೆ ಕಾರಣವಾಗುತ್ತದೆ ಎಂದು ವಿಜ್ಞಾನಿಗಳ ಅಂಬೋಣ .
ಕೆಟಮಿನ್ ಖಿನ್ನತೆಗೆ ಮೊದಲ-ಆಯ್ಕೆಯ ಚಿಕಿತ್ಸೆಯಾಗಿಲ್ಲ ಎಂಬುದನ್ನು ನೆನಪಿಟ್ಟುಕೊಳ್ಳುವುದು ಬಹಳ ಮುಖ್ಯ, ಮತ್ತು ಇತರ,
ಹೆಚ್ಚು ದೀರ್ಘಕಾಲದ ಚಿಕಿತ್ಸೆಗಳು ಪರಿಣಾಮಕಾರಿಯಾಗದಿದ್ದಾಗ ಮಾತ್ರ ಇದನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ. ಇದು
ಖಿನ್ನತೆಯನ್ನು ಗುಣ ಮಾಡುತ್ತದೆ ಎಂದು ಭಾವಿಸಲಾಗಿಲ್ಲ; ಬದಲಿಗೆ, ಇದು ನಿರ್ದಿಷ್ಟ ಸಮಯದವರೆಗೆ ರೋಗಲಕ್ಷಣಗಳನ್ನು
ಸುಧಾರಿಸುತ್ತದೆ ಮತ್ತು ಆತ್ಮಹತ್ಯಾ ಯೋಚನೆ ತಡೆಯುತ್ತದೆ ಎಂಬುದು ವೈದ್ಯರುಗಳ ಅಭಿಪ್ರಾಯ .
ಕೆಟಮಿನ್ ಚಿಕಿತ್ಸೆಯ ಅಡ್ಡ ಪರಿಣಾಮಗಳು ಈ ಬಗ್ಗೆ ಕೂಡ ಮಾಹಿತಿ ಅತಿ ಅಗತ್ಯ .ಮುಖ್ಯ ಅಡ್ಡ ಪರಿಣಾಮಗಳೆಂದರೆ ವಿಘಟನೆ,
ಅಮಲುಬರುವುದು , ಅಧಿಕ ರಕ್ತದೊತ್ತಡ ಉಂಟಾಗುವುದು , ತಲೆತಿರುಗುವಿಕೆ, ತಲೆನೋವು, ದೃಷ್ಟಿ ಮಂದವಾಗುವುದು, ಆತಂಕ,
ವಾಕರಿಕೆ ಮತ್ತು ವಾಂತಿ. ಅದರಲ್ಲಿ ಈ “ವಿಘಟನೆ “ಎಂಬ ಪರಿಸ್ಥಿತಿಯ ಬಗ್ಗೆ ಸರಿಯಾದ ಮಾಹಿತಿ ಅತಿ ಅಗತ್ಯ .ಈ ಬಗ್ಗೆ
ರೋಗಿಯೊಂದಿಗೆ ಚರ್ಚಿಸಿ ರೋಗಿಗೆ ಈ “ವಿಘಟನೆ” ಎಂಬ ಪರಿಸ್ಥಿತಿ ಉಂಟಾಗುವ ಬಗ್ಗೆ ಮಾಹಿತಿ ನೀಡಿ ಮನೋವೈದ್ಯರು
ಚಿಕಿತ್ಸೆಗೆ ಮುಂದೆ ಹೋಗುತ್ತಾರೆ .
ಕೆಟಮಿನ್ ಚಿಕಿತ್ಸೆಯ ಸಮಯದಲ್ಲಿ “ವಿಘಟನೆ” ಎಂಬ ತಾತ್ಕಾಲಿಕ ಮಾನಸಿಕ ಸ್ಥಿತಿಉಂಟಾಗುತ್ತದೆ , ಇದರಲ್ಲಿ ವ್ಯಕ್ತಿಯು ತನ್ನ
ಸುತ್ತಮುತ್ತಲಿನ ಪರಿಸರದಿಂದ “ಬೇರ್ಪಡೆಗೊಂಡ “ಅನುಭವ ಹೊಂದುತ್ತಾನೆ , ಅಂದರೆ ವ್ಯಕ್ತಿಯು ತನ್ನ ಸುತ್ತಲಿನ ವಾಸ್ತವಿಕತೆಯ
ಬಗ್ಗೆ ಸ್ವಲ್ಪ ಕಡಿಮೆ ಅರಿವು ಹೊಂದುತ್ತಾನೆ ಮತ್ತು ತನ್ನ ದೇಹದಿಂದ ಸ್ವಲ್ಪ ಮಟ್ಟಿಗೆ ಸಂಪರ್ಕ ಕಡಿತಗೊಳಿಸುವ ಅನುಭವ
ಹೊಂದಲು ಆರಂಭಿಸುತ್ತಾನೆ . ಈ ವಿಘಟನೆಯ ಸನ್ನಿವೇಶದಲ್ಲಿ ದೇಹದಲ್ಲಿ ಮತ್ತು ಪರಿಸರದಲ್ಲಿ ಬಹಳಷ್ಟು ಬದಲಾವಣೆಗಳು
ಅಂದರೆ1)ಸುತ್ತಮುತ್ತಲಿನ ವಿಷಯಗಳು ನಿಧಾನಗತಿಯಲ್ಲಿ ಸಾಗುತ್ತಿವೆ ಅಥವಾ ಅವಾಸ್ತವಿಕವೆಂದು ತೋರುವುದು (slow motion
ಸಿನೆಮಾ ಕಲ್ಪಿಸಿಕೊಳ್ಳಿ )2).ವಾಸ್ತವದಿಂದ ಬೇರ್ಪಟ್ಟ ಭಾವನೆ.3)ದೇಹದ ಹೊರಗಿನ ವಸ್ತುಗಳನ್ನು ದೇಹದಿಂದ ನೋಡುತ್ತಿರುವಂತೆ
ಭಾಸವಾಗುವುದು .3)ನೀವು ನಿಮ್ಮದೇ ವೀಕ್ಷಕರಾಗಿರುವಂತೆ ಅಥವಾ ನಿಮ್ಮನ್ನು ನೀವೇ ಗಮನಿಸಿದಂತೆ
ಭಾಸವಾಗುವುದು.4)ಸುತ್ತಮುತ್ತಲಿನ ವಸ್ತುಗಳು ವಿಭಿನ್ನವಾಗಿ ಕಾಣುವುದು 5)ಬಣ್ಣಗಳು ಸಾಮಾನ್ಯಕ್ಕಿಂತ ಮಂದ ಅಥವಾ
ಪ್ರಕಾಶಮಾನವಾಗಿ ಕಾಣುವುದು .6)ಸಮಯ ವೇಗಗೊಂಡ ಹಾಗೆ ಅಥವಾ ನಿಧಾನ ಗೊಂಡ ಹಾಗೆ ತೋರುವುದು 7).ಮಂಜಿನ
ಮೂಲಕ ವಸ್ತುಗಳನ್ನು ನೋಡಿದ ಹಾಗೆ ಅಥವಾ ವಸ್ತುಗಳು ಸುರಂಗ ದಲ್ಲಿ ನೋಡಿದ ಹಾಗೆ ತೋರುವುದು 8)ಸಮಯದ ಜಾಡನ್ನು
ಕಳೆದುಕೊಳ್ಳುವುದು ಅಥವಾ ಪರಿಸರದಲ್ಲಿ ಏನು ನಡೆಯುತ್ತಿದೆ ಎಂದು ಗೊತ್ತಾಗದೆ ಇರುವುದು 9).ನಿಮ್ಮ ದೇಹ ಬದಲಾಗಿದೆ
ಎಂಬ ಭಾವನೆ ಇವೆಲ್ಲವೂ ವಿಘಟನೆಯ ಸನ್ನಿವೇಶದಲ್ಲಿ ಉಂಟಾಗುತ್ತದೆ .
ವಿಘಟನೆ ಅವಸ್ಥೆಯ ಬಗ್ಗೆ ಅರಿವಿಲ್ಲದಿದ್ದರೆ ರೋಗಿ ಹೆದರಬಹುದು . ನುರಿತ ತಜ್ಞರ ಉಪಸ್ಥಿತಿಯಲ್ಲಿ ಮಾತ್ರ ಈ ಚಿಕಿತ್ಸೆ ಕೊಡಲು
ಪ್ರಮುಖ ಕಾರಣಗಳಲ್ಲಿ ಈ ವಿಘಟನೆ ನಿಭಾಯಿಸುವ ಬಗ್ಗೆ ಗಮನ ಕೊಡುವುದು ಕೂಡ ಅವಶ್ಯಕ .
ಕೆಟಮಿನ್ ಎಷ್ಟು ಅವಧಿಗಳಲ್ಲಿ ಕೊಡಲಾಗುತ್ತದೆ ?ಮತ್ತು ಒಂದು ಅವಧಿ ಯಲ್ಲಿ ಎಷ್ಟು ಸಮಯ ತಗಲುತ್ತದೆ ? ಕೆಟಮಿನ್ ಥೆರಪಿ
ಸಾಧಾರಣವಾಗಿ ಆರರಿಂದ ಹತ್ತು ಅವಧಿಗಳ ವರೆಗೆ ಕೊಡಲಾಗುತ್ತದೆ . ರೋಗಿಯು ಚಿಕಿತ್ಸೆಗೆ ಹೇಗೆ ಸ್ಪಂದಿಸುತ್ತಾನೆ ನೋಡಿ
ಎಷ್ಟು ಅವಧಿಗಳು ಬೇಕು ಎಂದು ವೈದ್ಯರು ನಿರ್ಧರಿಸುತ್ತಾರೆ .ಕೆಟಮಿನ್ ಥೆರಪಿ ಅವಧಿಗಳು ಸಾಮಾನ್ಯವಾಗಿ ಸುಮಾರು 40
ನಿಮಿಷದಿಂದ ಒಂದು ಗಂಟೆಯವರೆಗೆ ಇರುತ್ತದೆ. ಕೆಟಮಿನ್ ಇನ್ಫ್ಯೂಸಿಯೋನ್ ಕೊಡಲು ಇಪತ್ತರಿಂದ ಮೂವತ್ತು ನಿಮಿಷ
ತಗಲುತ್ತದೆ ನಂತರ ಉಳಿದ ಸಮಯ ಅದನ್ನು ಕೊಟ್ಟಾಗ ಉಂಟಾಗುವ ಪ್ರತಿಕ್ರಿಯೆಯನ್ನು ಗಮನಿಸಲು ಹಾಗು ಆ ಸಮಯದಲ್ಲಿ
ರೋಗಿಯ ರಕ್ತದ ಒತ್ತಡ ,ಉಸಿರಾಟ ಮುಂತಾದವುಗಳ ಮೇಲ್ವಿಚಾರಣೆ ಅಗತ್ಯವಾಗಿರುತ್ತದೆ .
ಕೆಟಮಿನ್ ಚಿಕಿತ್ಸೆ ಯಾರಿಗೆ ಕೊಡಲು ಆಗುವುದಿಲ್ಲ ?
ಗರ್ಭಿಣಿಯರಿಗೆ ,ಹದಿಹರೆಯದ ಮಕ್ಕಳಿಗೆ ,ಮದ್ಯ ಮಾದಕ ವ್ಯಸನ ಇದ್ದು ಅದರೊಂದಿಗೆ ಖಿನ್ನತೆಯಿಂದ ಬಳಲುತ್ತಾ
ಇರುವವರಿಗೆ,ಚಿತ್ತವಿಕಲತೆ ಮತ್ತು ಅದರೊಂದಿಗೆ ಖಿನ್ನತೆ ಹೊಂದಿದ ವ್ಯಕ್ತಿಗಳಿಗೆ ಹಾಗೆಯೇ ಮರೆಗುಳಿತನ ಮತ್ತು ಖಿನ್ನತೆ
ಹೊಂದಿರುವ ವಯೋವೃದ್ಧರಿಗೆ ಕೊಡಲು ಆಗುವುದಿಲ್ಲ . ಕೆಟಮಿನ್ ಇತರ ಮಾದಕ ದ್ರವ್ಯಗಳಂತೆ ಇದು ಕೂಡ ಕೆಲವರಲ್ಲಿ” ಚಟ”
ವಾಗಿ ಮಾರ್ಪಡಬಹುದು ಹಾಗೆಯೇ ಬೆಳೆಯುತ್ತಿರುವ ಹದಿ ಹರೆಯದವರ ಮಿದುಳಿನ ಬೆಳವಣಿಗೆಯ ಮೇಲೆ ಪ್ರತಿಕೂಲ ಪರಿಣಾಮ
ಬೀರಬಹುದು ಎಂಬ ಕಾರಣದಿಂದ ಇದರ ಉಪಯೋಗದ ಬಗ್ಗೆ ಎಚ್ಚರ ವಹಿಸಲಾಗಿದೆ .
ಇತ್ತೀಚಿನ ದಿನಗಳಲ್ಲಿ ಕೆಟಮಿನ್ ಸಿರಪ್ ನಂತೆ ನಿಯಂತ್ರಿತವಾಗಿ ಕುಡಿಸಿ ಅಥವ ಮೂಗಿನ ಸ್ಪ್ರೇ ಯಾಗಿ ಕೂಡ ಉಪಯೋಗಿಸುವ
ಬಗ್ಗೆ ಸಂಶೋದನೆಗಳು ನಡೆಯುತ್ತಾ ಇದೆ .
ಈ ಬಗ್ಗೆ ಈ ಚಿಕಿತ್ಸೆ ನೀಡಿ ಅನುಭವ ಇರುವ ವೃತ್ತಿಪರ ಮನೋವೈದ್ಯರ ಸಹಾಯ ಪಡೆದು ಕೆಟಮಿನ್ ಚಿಕಿತ್ಸೆ ಪಡೆಯಬೇಕು
ಹೊರತು ಅದನ್ನು ಸಾಮಾನ್ಯ ಆಸ್ಪತ್ರೆಗಳಲ್ಲಿ ಕೊಡಲು ಆಗುವುದಿಲ್ಲ .
ಔಷಧಿ ಚಿಕಿತ್ಸೆಯಂತಹ ಚಿಕಿತ್ಸೆಗಳು ಖಿನ್ನತೆಯ ಲಕ್ಷಣಗಳನ್ನು ನಿವಾರಿಸಲು ಸಾಧ್ಯವಾಗದಿದ್ದಾಗ, ಇತರ ಆಯ್ಕೆಗಳು ಲಭ್ಯವಿವೆ.
ಮನೋವೈದ್ಯರು ಎಲೆಕ್ಟ್ರೋಕನ್ವಲ್ಸಿವ್ ಥೆರಪಿ (ECT) ಅಥವಾ ಮೆದುಳಿನ ಪ್ರಚೋದನೆಯ ಇತರ ಪ್ರಕಾರಗಳನ್ನು
ಸೂಚಿಸಬಹುದು. ಮಿದುಳಿನ ಪ್ರಚೋದನೆಯ ಚಿಕಿತ್ಸೆಗಳು ಮೆದುಳನ್ನು ನೇರವಾಗಿ ವಿದ್ಯುತ್, ಆಯಸ್ಕಾಂತಗಳು ಅಥವಾ
ಇಂಪ್ಲಾಂಟ್ಗಳೊಂದಿಗೆ ಉತ್ತೇಜಿಸುವುದನ್ನು ಒಳಗೊಂಡಿರುತ್ತದೆ. ಈ ಬಗ್ಗೆ ಲೇಖನ ಮುಂದಿನ ವಾರ ನೀರಿಕ್ಷಿಸಿ .