Select Page

ಮದುವೆ ಸಮಾರಂಭ ಒಂದರಲ್ಲಿ ಊಟಕ್ಕೆ ಕಾಯುತ್ತ ಇದ್ದಾಗ ಹತ್ತಿರ ಬಂದ ಮೇಸ್ಟ್ರು ಒಬ್ಬರು ಸಾರ್ ನೀವು ಪುನರ್ಜನ್ಮ
ನಂಬುತ್ತೀರಾ ? past life regression therapy ಬಗ್ಗೆ ನಿಮ್ಮ ಅನಿಸಿಕೆ ಏನು ಕೇಳಿದರು .ಊಟದ ಜೊತೆಗೆ ಈ ವಾರದ ಅಂಕಣಕ್ಕೆ
ಕೂಡ ಒಂದು ವಿಷಯ ಸಿಕ್ಕಿತ್ತು .
ಪುನರ್ಜನ್ಮ ಇದೆ ಎಂಬುದರ ಬಗ್ಗೆ ನಂಬಿದವರಲ್ಲಿ ನಾನು ಒಬ್ಬನಾಗಿದ್ದೆ .ಆದರೆ ಬರುಬರುತ್ತಾ ನನ್ನ ನಂಬಿಕೆಗಳು ಅವೈಜ್ಞಾನಿಕ
ಎಂದು ನನಗೆ ಅರ್ಥವಾಯಿತು .ಇಂತಹ ವಿಷಯಗಳನ್ನು ವಿಮರ್ಶಾತ್ಮಕ ಮತ್ತು ಸಂಶಯದ ಮನಸ್ಥಿತಿಯೊಂದಿಗೆ
ಸಮೀಪಿಸುವುದು ಅತ್ಯಗತ್ಯ ಮತ್ತು ಅವುಗಳ ಸಿಂಧುತ್ವವನ್ನು ಮೌಲ್ಯಮಾಪನ ಮಾಡುವಾಗ ಪ್ರಾಯೋಗಿಕ ಪುರಾವೆಗಳ
ಕೊರತೆಯನ್ನು ಪರಿಗಣಿಸಬೇಕಾಗುತ್ತದೆ .
ಪಾಪ ವಿಮೋಚನೆ, ಕರ್ಮ, ಪ್ರತೀಕಾರ, ಸ್ವರ್ಗ ಮತ್ತು ನರಕ, ಸತ್ತ ನಂತರ ಆತ್ಮ ಎಲ್ಲಿ ಹೋಗುತ್ತದೆ,
ಅದು ಇತರೆ ಜೀವಿಗಳಲ್ಲಿ ಸೇರಿಕೊಳ್ಳುತ್ತದೆಯೆ? ಈ ಜನ್ಮದಲ್ಲಿ ನಾವು ಹಿಂದಿನ ಜೀವನದ ಸ್ಮರಣೆ
ಮಾಡಬಲ್ಲೆವೇ ?ಹಿಂದಿನ ಜನ್ಮದ ಪಾಪಗಳು ಈ ಜನುಮದ ಜೀವನದ ಮೇಲೆ ಪರಿಣಾಮ ಬೀರ ಬಲ್ಲದೆ
ಇವೇ ಮೊದಲಾದ ಪುನರ್ಜನ್ಮದ ಕುರಿತಾದ ಕುತೂಹಲಕಾರಿ ಪ್ರಶ್ನೆಗಳು ಶತ ಶತಮಾನಗಳಿಂದಲೂ
ಹಾಗೆಯೇ ಮುಂದುವರಿದುಕೊಂಡು ಬಂದಿದೆ. ಹಿಂದೂ ಧರ್ಮದ ಪ್ರಕಾರ ಸಾವಿನ ಬಳಿಕ ದೇಹದಿಂದ ಆತ್ಮ
ಹೊರಹೋಗಿ ಬೇರೊಂದು ಶರೀರವನ್ನು ಪ್ರವೇಶಿಸುತ್ತದೆ. ಆದ್ದರಿಂದ ದೇಹಕ್ಕೆ ಸಾವೇ ಹೊರತು ಆತ್ಮಕ್ಕೆ ಸಾವಿಲ್ಲ
ಎನ್ನುತ್ತದೆ. ಇದನ್ನೇ “ಪುನರ್ಜನ್ಮ” ಎನ್ನುತ್ತೇವೆ. ಆದ್ದರಿಂದಲೇ ಹೆಚ್ಚಿನವರು ತಮ್ಮ ಆತ್ಮೀಯತೆ ಮತ್ತು ಪ್ರೀತಿಯನ್ನು
ತೋರ್ಪಡಿಸಲು ಮುಂದಿನ ಜನ್ಮದಲ್ಲೂ ನಿನ್ನ ಹೊಟ್ಟೆಯಲ್ಲಿಯೇ ಮತ್ತೊಮ್ಮೆ ಹುಟ್ಟಿ ಬರುವೆ, ಏಳೇಳು ಜನ್ಮಕ್ಕೂ ನೀನೆ
ನನಗೆ ಹೆಂಡತಿಯಾಗಬೇಕು ಎಂಬ ಮಾತುಗಳನ್ನು ಬಳಸುತ್ತಾರೆ.ಆದರೆ ವಿಜ್ಞಾನ ಪುನರ್ಜನ್ಮವನ್ನು ಒಪ್ಪುವುದಿಲ್ಲ.
ಏಕೆಂದರೆ ವಿಜ್ಞಾನಕ್ಕೆ ಯಾವುದೇ ವಿಷಯವನ್ನು ಪ್ರತಿಪಾದಿಸಲು ಬಲವಾದ ಸಾಕ್ಷ್ಯ ಮತ್ತು ಪುರಾವೆಗಳು
ಬೇಕು. ಪುನರ್ಜನ್ಮ, ಆತ್ಮ, ಪಿಶಾಚಿ, ದೆವ್ವ, ಅತೀಂದ್ರಿಯ ಶಕ್ತಿಗಳು ಮೊದಲಾದವುಗಳನ್ನು ವೈಜ್ಞಾನಿಕ
ವಿಧಾನಗಳನ್ನು ಬಳಸಿಕೊಂಡು ನಾವು ನಿಜವೆಂದು ಸಾಬೀತುಪಡಿಸಲು ಸಾಧ್ಯವಿಲ್ಲ.
ಪುನರ್ಜನ್ಮ ದ ಬಗ್ಗೆ ಚರ್ಚೆ ಹುಟ್ಟು ಹಾಕಿದ ಒಂದು ಪುಸ್ತಕ ಅಂದರೆ ಮನೋವೈದ್ಯ ಬ್ರಿಯಾನ್ ವೈಸ್
ಅವರ ಪುಸ್ತಕ "ಮೆನಿ ಲೈವ್ಸ್, ಮೆನಿ ಮಾಸ್ಟರ್ಸ್" . ಇದರಲ್ಲಿ ಪ್ರಸ್ತುತಪಡಿಸಿದ ವಿಚಾರಗಳ ಬಗ್ಗೆ ಹಲವು
ಖ್ಯಾತನಾಮರು ಕೂಡ ಉಲ್ಲೇಖಿಸಿ ಬ್ರಿಯಾನ್ ವೈಸ್ ಮನೋವೈದ್ಯರು ,ಆದ್ದರಿಂದ ನೀವು ಅವರ ಪುಸ್ತಕ
ಓದಿದರೆ ಖಂಡಿತ “ಪುನರ್ಜನ್ಮ “ಇದರ ಪರಿಕಲ್ಪನೆಯನ್ನು ಒಪ್ಪುತ್ತೀರಿ ಅಂದವರು ಹಲವರು ಇದ್ದಾರೆ
.ಆದರೆ ಈ ಪುಸ್ತಕ ಓದಿ ಈ ಕಲ್ಪನೆ ಅವೈಜ್ಞಾನಿಕ ಎಂದು ಇನ್ನಷ್ಟು ಗಟ್ಟಿಯಾಯಿತು .ವೈಜ್ಞಾನಿಕ
ಮೌಲ್ಯೀಕರಣದ ಕೊರತೆ ಹಲವು ಕಡೆಗಳಲ್ಲಿ ಎದ್ದು ಕಾಣುತ್ತ ಇತ್ತು .ಅಲ್ಲಿ ವಿವರಿಸಿದಂತೆ ಹಿಂದಿನ

ಜನುಮದ ನೆನಪಿಗೆ ಜಾರಿಸಿ ಈ ಜೀವನದ ಸಮಸ್ಯೆಗಳಿಗೆ ಚಿಕಿತ್ಸೆ ಕೊಡುವುದು ಅಂದರೆ past life
regression therapy ಇದು ಕಠಿಣ ವೈಜ್ಞಾನಿಕ ಸಂಶೋಧನೆ ಅಥವಾ ಪ್ರಾಯೋಗಿಕ ಪುರಾವೆಗಳಿಂದ
ಬೆಂಬಲಿತವಾಗಿಲ್ಲ. ವರದಿ ಮಾಡಲಾದ ಹೆಚ್ಚಿನ ಅನುಭವಗಳು ಕೇವಲ ವೈದ್ಯ ವೈಸ್ ಅವರ ಅನುಭವ
ಹಂಚಿಕೆಯೇ ಹೊರತು ನಿಯಂತ್ರಿತ ವೈಜ್ಞಾನಿಕ ಅಧ್ಯಯನಗಳಲ್ಲಿ ಪರಿಶೀಲಿಸಲು ಅಥವಾ
ಪುನರಾವರ್ತಿಸಲು ಕಷ್ಟ. ಪ್ರಾಯೋಗಿಕ ಪುರಾವೆಗಳು ಇಲ್ಲ ಹಾಗು ಅದನ್ನು ಬೇರೆ ವೈದ್ಯರು
ಧ್ರಡೀಕರಿಸುವುದಿಲ್ಲಎಂದಾಗಅದನ್ನುನಾನುಒಪ್ಪುವುದಿಲ್ಲ .ಹಲವೊಮ್ಮೆ ರೋಗಿಗಳು ವೈದ್ಯರು ಏನಾದರೂ
ವಿಷಯಗಳನ್ನು ಸೂಚಿಸಿದರೆ ಅದನ್ನೇ ಹಿಡಿದುಕೊಂಡು ಒಪ್ಪಿಕೊಂಡು ಮುಂದುವರೆಯುವುದು ಇದನ್ನು
ನಾವು easy suggestibility ಅನ್ನುತ್ತೇವೆ ಅಥವಾ ತನ್ನದೇ ನಂಬಿಕೆಗಳನ್ನು ಸಂರಚಿಸಿ ಕೊಂಡು
ಹೇಳುವುದು ಇದನ್ನು ನಾವು confabulation ಅನ್ನುತ್ತೇವೆ .ಒಟ್ಟಿನಲ್ಲಿ ಕೆಲವೊಮ್ಮೆ ವೈದ್ಯ ರೋಗಿಗಳ
ಸಂಭಂದದ ಕಾರಣ ವೈದ್ಯರು ನೀಡುವ ವಿವರಣೆಗಳನ್ನು ಸರಿ ಎಂಬಂತೆ ಹಲವು ರೋಗಿಗಳು
ಒಪ್ಪಬಹುದು . ಹಲವಾರು ರೋಗಿಗಳು past life regression therapy ಇದನ್ನು ಅನುಭವಿಸಿ ತಮ್ಮ
ಜೀವನದಲ್ಲಿ ಬದಲಾವಣೆ ಆಗಿದೆ ಎಂದು ಹೇಳಿದರು ವೈಜ್ಞಾನಿಕವಾಗಿ ಈ ರೂಪಾಂತರ ಕೇವಲ placebo
effect ಇರಲೂಬಹುದು .ಹಲವೊಮ್ಮೆ ರೋಗಿಗಳು ನಾವು ಅವರಿಗೆ ಕೆಲವು relaxation exercises
ಹೇಳಿಕೊಟ್ಟಾಗ ಹೇಳಿಕೊಟ್ಟು ಒಂದೆರಡು ದಿನಗಳಲ್ಲಿ ತನ್ನ ಸಮಸ್ಯೆ ಗುಣವಾಯಿತು, ಇದೆ ನನ್ನ ಸಮಸ್ಯೆಗೆ
solution ಎಂದು ಬಿಡುತ್ತಾರೆ ಆದರೆ ವೈಜ್ಞಾನಿಕವಾಗಿ ನೋಡಿದರೆ ಈ ವ್ಯಾಯಾಮಗಳು ನಿರಂತರ
ಅಭ್ಯಾಸ ಮಾಡಿದಾಗ ಮಾತ್ರ” ಎಫೆಕ್ಟ್ “ ಬರುತ್ತದೆ .ಇಲ್ಲಿ ಕೆಲಸ ಮಾಡುವುದೇ “ಪ್ಲಸಿಬೋ ಎಫ್ಫೆಕ್ಟ್
“ಪ್ಲಸಿಬೋ ಪರಿಣಾಮವು ಅವರ ಈ “ನನ್ನ ಸಮಸ್ಯೆಗೆ ಇದೆ solution “ಎಂಬ ವರದಿಯ ಯಶಸ್ಸಿನಲ್ಲಿ
ಪಾತ್ರವನ್ನು ವಹಿಸುತ್ತದೆ . ಕೆಲವು ದಿನಗಳು ಕಳೆದಂತೆ ರೋಗಿ ಪುನಃ ಅದೇ ಸಮಸ್ಯೆ ಹಿಡಿದು ಕೊಂಡು
ಮತ್ತೆ ಬರುತ್ತಾರೆ. ಪ್ಲಸಿಬೋ ಪರಿಣಾಮ ದಿಂದಾಗಿ ತಾತ್ಕಾಲಿಕ ಗುಣ ಹೊಂದಿದಂತೆ ಅವರಿಗೆ ಕಾಣುತ್ತದೆ.
ಇದು ನೆಪ ಮಾತ್ರದ ಚಿಕಿತ್ಸೆ. ಇದರ ಪರಿಣಾಮ ಮಾನಸಿಕವಾದದು. ಹೆಚ್ಚಿನ ಸಂದರ್ಭದಲ್ಲಿ ಚಿಕಿತ್ಸೆಯ
ಸಂದರ್ಭದಲ್ಲಿ ದೊರೆತ ಸುಖ ಅನುಭವ ಬಹಳಷ್ಟು ದಿನ ಇರುವುದಿಲ್ಲ .
ಬ್ರಿಯಾನ್ ವೈಸ್ ರ ಪುಸ್ತಕದಲ್ಲಿ ಬರುವ ಕ್ಯಾಥರೀನ್ ಒಬ್ಬ ರೋಗಿಯಾಗಿದ್ದು, ಡಾ. ಬ್ರಿಯಾನ್ ವೈಸ್
ಅವರೊಂದಿಗೆ ಹಿಂದಿನ ಜೀವನದ ನೆನಪುಗಳ ಪಡೆದುಕೊಂಡು ತನ್ನ ಸಮಸ್ಯೆ ಬಗೆಹರಿಸುವ ಚಿಕಿತ್ಸೆಗೆ

ಒಳಗಾಗುತ್ತಾಳೆ. ಈ ಚಿಕಿತ್ಸೆಯ ಮೂಲಕ, ಅವಳು ತನ್ನ ಹಿಂದಿನ ಜೀವನದ ನೆನಪುಗಳನ್ನು
ನೆನಪಿಸಿಕೊಳ್ಳುತ್ತಾಳೆ, ಇದು ಅವಳ ಆಧ್ಯಾತ್ಮಿಕ ಮತ್ತು ವೈಯಕ್ತಿಕ ಬೆಳವಣಿಗೆಯ ಪ್ರಯಾಣಕ್ಕೆ
ಕಾರಣವಾಗುತ್ತದೆಎಂದು ವೈಸ್ ನಂಬುತ್ತಾರೆ . ಪುಸ್ತಕವು ಪುನರ್ಜನ್ಮ ಮತ್ತು ಹಿಂದಿನ ಜೀವನದ
ಕಲ್ಪನೆಯನ್ನು ಪರಿಶೋಧಿಸುತ್ತದೆ, ಜೊತೆಗೆ ಅಂತಹ ಅನುಭವಗಳ ನೆನಪಿಸಿಕೊಳ್ಳುವುದು ಚಿಕಿತ್ಸಕ
ಪ್ರಭಾವ ಅಂದರೆ ಖಾಹಿಲೆ ಗುಣಪಡಿಸುವ ಸಾಮರ್ಥ್ಯವನ್ನು ಹೊಂದಿದೇ ಎಂದು ಬ್ರಿಯಾನ್ ವೈಸ್
ನಂಬುತ್ತಾರೆ .ಕ್ಯಾಥರೀನ್ ಅವರೊಂದಿಗಿನ ಥೆರಪಿ ಬ್ರಿಯಾನ್ ವೈಸ್ ಪುಸ್ತಕದ ನಿರೂಪಣೆಯ ಕೇಂದ್ರ
ಭಾಗವಾಗಿದೆ ಮತ್ತು ಅದರ ಜನಪ್ರಿಯತೆಗೆ ಕೊಡುಗೆ ನೀಡಿದೆ. ಆದರೆ ರೋಗಿ ಗೌಪ್ಯತೆಯ ದ್ರಷ್ಟಿಯಲ್ಲಿ
ಕ್ಯಾಥೆರಿನ್ ಅನುಭವಗಳನ್ನು ಬೇರೆ ಯಾರು ಪರೀಕ್ಷಿಸಿಲ್ಲ .ಇದು ಬ್ರಿಯಾನ್ ವೈಸ್ ಅವರ ಅನುಭವ
ಕಥನವೇ ಹೊರತು ವೈಜ್ಞಾನಿಕ ವಿಶ್ಲೇಷಣೆ ಅಲ್ಲ .
ಒಬ್ಬ ವಿಚಾರವಾದಿ ಮನೋವೈದ್ಯನಾಗಿ ವೈಜ್ಞಾನಿಕ ಪುರಾವೆಗಳು ಇಲ್ಲದೆ ಕೇವಲ ಅನುಭವ ಕಥನ ಸತ್ಯ
ಎಂದು ನಾನು ಒಪ್ಪುವುದಿಲ್ಲ .ಮುಂದೆ ಎಲ್ಲಿಯಾದರೂ ವೈಜ್ಞಾನಿಕ ತಳಹದಿಯಲ್ಲಿ ಸಂಶೋದನೆಗಳು
ಇದನ್ನು ನಿರೂಪಿಸಿದರೆ ನಾನು ಒಪ್ಪುವೆ ಅಷ್ಟರವರೆಗೆ ಇದು ನನಗೆ ಹುಸಿ ವಿಜ್ಞಾನವೇ ..