“ಜರ್ನಲಿಂಗ್” ಎಂಬ ಮನೋವೈದ್ಯಕೀಯ ಚಿಕಿತ್ಸಾ ವಿಧಾನ!
ಜರ್ನಲಿಂಗ್ ಅಂದರೆ ನಮ್ಮ ಜೀವನದ ಆಗುಹೋಗುಗಳನ್ನು ಕುರಿತು ನಾವೇ ಸ್ವತಃ ನಿರ್ದಿಷ್ಟವಾಗಿ ಪ್ರತಿದಿನ ಅಥವಾ ವಾರದಲ್ಲಿ
ಒಂದೆರಡು ಬಾರಿ ಒಂದು ಡೈರಿಯಲ್ಲಿಯೋ ಅಥವಾ ಪುಸ್ತಕದಲ್ಲಿ ಅಥವಾ ಮೊಬೈಲ್ ಯಾ ಕಂಪ್ಯೂಟರ್ ಅಥವಾ laptop ನಲ್ಲಿ
ಬರೆದು ಕೊಳ್ಳುವುದು. ನಾವು ಸಣ್ಣ ವಯಸ್ಸಿನಿಂದ ಕೇಳಿಕೊಂಡು ಬಂದಿರುವ ವಿಷಯ ದಿನಚರಿ ಬರೆಯುವುದು ಅಥವಾ “ಡೈರಿ
“ಬರೆಯುವುದು ಎಂದು ಹೇಳುವ ಈ ವಿಧಾನಕ್ಕೆ ಚಿಕಿತ್ಸಕ ಗುಣ ಇದೆ ಅಂದರೆ ಆಶ್ಚರ್ಯ ಅಲ್ಲವೇ!! ಹೌದು..
ಅಲ್ಪ ಮಟ್ಟದ ಆತಂಕ, ಖಿನ್ನತೆ ಹಾಗೆಯೇ ಒತ್ತಡ ಭರಿತ ಸಂದರ್ಭಗಳಲ್ಲಿ ಈ ರೀತಿಯ ಬರವಣಿಗೆ ಒಂದು ಬಗೆಯ ಚಿಕಿತ್ಸಕ ಗುಣ
ಪಡೆದುಕೊಂಡಿದೆ. ಖಿನ್ನತೆ ಮತ್ತು ಆತಂಕದ ಲಕ್ಷಣಗಳನ್ನು ಗಮನಿಸಿದರೆ ಇಲ್ಲಿ ನಾವು ಮನುಷ್ಯರು ಎಷ್ಟೋ cognitive distortions
ಅಥವಾ thinking errors ಅಂದರೆ “ಆಲೋಚನಾ ದೋಷಗಳು “ಮಾಡುತ್ತಾ ಇರುತ್ತೇವೆ. ಇವುಗಳನ್ನು ಕುರಿತು ನಾವೇ ಯೋಚಿಸಿ
ಬರೆದಾಗ ನಮಗೆ ನಮ್ಮಲ್ಲಿ ಇರುವ ಯೋಚನಾ ದೋಷಗಳ ಅರಿವು ಆಗುತ್ತದೆ ಜೇಮ್ಸ್ ಪೆನ್ನೆಬೇಕೇರ್ ಎಂಬ ಸಾಮಾಜಿಕ
ಮನಃಶಾಸ್ತ್ರದಲ್ಲಿ ಪರಿಣಿತ ರೊಬ್ಬರು ಹೇಳುವ ಹಾಗೆ ಜೀವನದಲ್ಲಿ ಭಾವಉದ್ವೇಗಗಳು ಏರು ಇಳಿತಗಳು ಇದ್ದೇಇರುತ್ತವೆ .
ಪ್ರತಿಯೊಬ್ಬನ ಜೀವನದಲ್ಲಿ ಭಾವನಾತ್ಮಕ ಸನ್ನಿವೇಶಗಳು ಬಂದು ಹೋಗುತ್ತದೆ. ವ್ಯಕ್ತಿ ಕೆಲಸ ಕಳೆದುಕೊಳ್ಳುವುದು ಅಥವಾ
ವಿವಾಹ ವಿಚ್ಛೇದನ ಪಡೆಯುವುದು ಇವೆಲ್ಲಕ್ಕೂ ಕೂಡ ಮೂಲ ನಮ್ಮ ಯೋಚನೆಗಳು. ಈ ಯೋಚನೆಗಳ ದೋಷಗಳ ಬಗ್ಗೆ ಅರಿವು
ಮೂಡಿಸಲು ನಮ್ಮ ಬರವಣಿಗೆ ಸಹಾಯಕ. ಈ ಬರವಣಿಗೆಯನ್ನು ನಿಯಮಿತವಾಗಿ ದಿನದ ಒಂದು ಸಮಯದಲ್ಲಿ ಒಂದೇ ಸ್ಥಳದಲ್ಲಿ
ನಿಗದಿ ಪಡೆಸಿ ನಿರ್ದಿಷ್ಟವಾಗಿ ಬರೆಯುವುದು ಇದನ್ನು “ಜರ್ನಲಿಂಗ್” ಎನ್ನುತ್ತೇವೆ. ಇದನ್ನು ವ್ಯವಸ್ಥಿತವಾಗಿ ಮಾಡಿದರೆ ನಮ್ಮದೇ
ಅಂಕುಡೊಂಕುಗಳನ್ನು, ನಮ್ಮ ಆರ್ಥಿಕ ಪರಿಸ್ಥಿತಿಯನ್ನು , ಇತರರೊಂದಿಗೆ ನಮ್ಮ ಸಂಭಂದಗಳನ್ನು , ಹಾಗೆಯೇ ನಮ್ಮ ಬಗ್ಗೆ
ನಮ್ಮ ದೃಷ್ಟಿಕೋನವನ್ನು ಅರಿಯಲು ಇದು ಬಹಳಷ್ಟು ಸಹಾಯ ಮಾಡುತ್ತದೆ .ಬರವಣಿಗೆ ನಮ್ಮ ಜೀವನದ ಅನುಭವಗಳನ್ನೂ
ಅಭ್ಯಸಿಸಿ ನಿಜವಾದ ಸಮಸ್ಯೆ ಎಲ್ಲಿದೆ ಎಂದು ಕೇಂದ್ರೀಕರಿಸಲು ಮತ್ತು ಮನಸ್ಸಿನಲ್ಲಿ ಅದನ್ನು ಎದುರಿಸುವುದು ಹೇಗೆ ಎಂಬ
ವಿಷಯದಲ್ಲಿ ನಮ್ಮ ಪ್ರತಿಕ್ರಿಯೆ ಸಂಘಟಿಸಲು ನಮಗೆ ಸಹಾಯ ಮಾಡುತ್ತದೆ.ಹಲವೊಮ್ಮೆ ಖಿನ್ನತೆ ಅಥವಾ ಆತಂಕದಲ್ಲಿ ಮನಸ್ಸಿನ
ಆಲೋಚನೆಗಳು ಒಂದು ರೀತಿಯಲ್ಲಿ ಅತಿರೇಖಗೊಂಡು ಭಾವಉದ್ವೇಗಗಳನ್ನು ಸ್ರಷ್ಟಿಸಿದಾಗ ಬರವಣಿಗೆ ಈ ಆಲೋಚನೆಗಳು
ಎಷ್ಟರಮಟ್ಟಿಗೆ ಸತ್ಯ ಮತ್ತು ಎಷ್ಟರ ಮಟ್ಟಿಗೆ ಸುಳ್ಳು ಎಂದು ನಮ್ಮ ಗಮನಕ್ಕೆ ತರಲು ಸಹಾಯ ಮಾಡುತ್ತದೆ .
ಒಟ್ಟಿನಲ್ಲಿ ಈ ವ್ಯವಸ್ಥಿತ ದಿನಚರಿ ಯ ಬರವಣಿಗೆ ಬಗ್ಗೆ ಹಲವಾರು ಮನೋವೈದ್ಯಕೀಯ ಸಂಶೋದನೆಗಳು ನಡೆಯುತ್ತಿದೆ .ಈ
ರೀತಿ ಬರವಣಿಗೆ ರೋಗ ನಿರೋಧಕ ಶಕ್ತಿ,ರಕ್ತದ ಒತ್ತಡ ,ರಕ್ತದಲ್ಲಿ ಸಕ್ಕರೆ ಅಂಶ ಹೀಗೆ ಹಲವು ವಿಶಯಗಳ ಮೇಲೆ ಪ್ರಭಾವ
ಬೀರುತ್ತದೆ ಎಂದು ನಂಬಿ ವಿಜ್ಞಾನಿಗಳು ಈ ಬಗ್ಗೆ ಸಂಶೋಧನೆ ನಡೆಸುತ್ತಾ ಇದ್ದಾರೆ . ವ್ಯವಸ್ಥಿತ ಬರವಣಿಗೆಯು ವ್ಯಕ್ತಿಗೆ
ಜೀವನದಲ್ಲಿ ಹೆಚ್ಚು ಧನಾತ್ಮಕವಾಗಿ ಯೋಚಿಸಲು ಹಾಗೆಯೇ ತನ್ನ ಬಗ್ಗೆ ಸಮಗ್ರ ಚಿತ್ರವನ್ನು ರಚಿಸಲು ಅನುವು ಮಾಡಿಕೊಡುತ್ತದೆ.
ಒಬ್ಬ ವ್ಯಕ್ತಿಗೆ ತನ್ನ ಬಗ್ಗೆ ಸಕಾರಾತ್ಮಕ ಮತ್ತು ಸಮಗ್ರ ದೃಷ್ಟಿಕೋನ ಬಂದಲ್ಲಿ ಆತನಿಗೆ ಖಿನ್ನತೆ ಆತಂಕ ಕಡಿಮೆಯಾಗಿ ದೈಹಿಕ
ಆರೋಗ್ಯ ಸಮಸ್ಯೆಗಳನ್ನು ಕೂಡ ಅದು ಕಡಿಮೆ ಮಾಡಬಹುದು ಎಂಬುದು ಮನೋವಿಜ್ಞಾನಿಗಳು ಅಂಬೋಣ.
ಜರ್ನಲಿಂಗ್ ವ್ಯಕ್ತಿಯ ಜೀವನದ ಎಲ್ಲಾ ಒಳ್ಳೆಯ ವಿಷಯಗಳನ್ನು ಕುಳಿತು ಪ್ರತಿಬಿಂಬಿಸಲು ಒಂದು ಅಭ್ಯಾಸವನ್ನು ಮಾಡುತ್ತದೆ.
ಇದು ಜೀವನದ ಒಳ್ಳೆಯ ಅವಕಾಶಗಳಿಗೆ ಕಾರಣಕರ್ತರಾದವರು ಅವರುಗಳನ್ನು ಸ್ಮರಿಸಿ ಕೃತಜ್ಞರಾಗಲು ಅನುವು
ಮಾಡಿಕೊಡುತ್ತದೆ. “ಕೃತಜ್ಞತೆ ಮತ್ತು ದೈಹಿಕ ಮಾನಸಿಕ ಆರೋಗ್ಯ “ಎನ್ನುವುದರ ಬಗ್ಗೆ ಸಾಕಷ್ಟು ವೈಜ್ಞಾನಿಕ ಸಂಶೋಧನೆಗಳು
ನಡೆಯುತ್ತಲೇ ಇವೆ. ಈ ಕರ್ತಜ್ಞತಾ ಮನೋಭಾವವನ್ನು ಹೆಚ್ಚು ಮಾಡಿಕೊಂಡರೆ ಮನೋದೈಹಿಕ ಆರೋಗ್ಯಕ್ಕೆ ಒಳ್ಳೆಯದು
ಎಂಬುದರ ಬಗ್ಗೆ ಹಲವಾರು ವೈಜ್ಞಾನಿಕ ಸಂಶೋಧನೆಗಳನ್ನು ರಾಬರ್ಟ್ ಎಮನ್ಸ್ ಎಂಬ ಮನಶಾಸ್ತ್ರ ಪರಿಣಿತ ವಿಜ್ಞಾನಿ
ಮಾಡಿರುತ್ತಾರೆ.
ಹಾಗೆಯೇ ಸಣ್ಣ ವಯಸ್ಸಿನಲ್ಲಿ ಲೈಂಗಿಕ ದೌರ್ಜನ್ಯ ಅನುಭವಿಸಿದ ಅನೇಕರು, ಹಾಗೆಯೇ ಜೀವನದಲ್ಲಿ ಸಂಘರ್ಷ ಪರಿಸ್ಥಿತಿ
ಅನುಭವಿಸಿದ ಅನೇಕರು ಈ ರೀತಿ ವ್ಯವಸ್ಥಿತ ಬರವಣಿಗೆಯಿಂದ ಹಳೆಯ ಘಟನೆಗಳನ್ನು ಮರೆಯಲು ಅಥವಾ ಅದರ ಕಾರಣ ಈಗ
ಜೀವನದಲ್ಲಿ ಉಂಟಾಗುತ್ತಾ ಇರುವ ಸಮಸ್ಯೆಗಳ ಬಗ್ಗೆ ಸ್ವ ಅರಿವು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಈ ಬರವಣಿಗೆ ಸಹಾಯಕವಾಗಿದೆ.
ಜರ್ನಲಿಂಗ್ ನಲ್ಲಿ ಯಾವುದೇ ನಿರ್ದಿಷ್ಟ ವಿಧಾನ ಅನುಸರಿಸಬೇಕು ಎಂದೇನೂ ಇಲ್ಲ.
Free flow journalling ಇದರಲ್ಲಿ ನಿಮ್ಮ ಮನಸ್ಸಿಗೆ ಬಂದ ಆಲೋಚನೆಗಳನ್ನು ಯಥಾ ರೀತಿ ಬರೆಯುವುದು , ಇದನ್ನು
ವ್ಯವಸ್ಥಿತವಾಗಿ ಬರೆಯಬೇಕು ಎಂದೇನೂ ಇಲ್ಲ. ಬರೆದ ವಿಷಯಗಳು ಇತರರಿಗೆ ಏನು ಅರ್ಥ ಕೊಡಬೇಕು ಎಂದು ಕೂಡ ಇಲ್ಲ.
Gratitude journalling ಈ ಹಿಂದೆ ಬರದಂತೆ ಜೀವನದಲ್ಲಿ ನಾವು ಕೃತಜ್ಞರಾಗಿರುವ ಹಲವು ವ್ಯಕ್ತಿಗಳು ಮತ್ತು ಸ್ಥಿತಿಗಳ ಬಗ್ಗೆ
ನಿಯಮಿತವಾಗಿ ಬರೆಯುವುದು ಇದು ಜೀವನದ ಧನಾತ್ಮಕ ವಿಷಯಗಳ ಮೇಲೆ ಕೇಂದ್ರೀಕರಿಸಲು ವ್ಯಕ್ತಿಗೆ ಸಹಾಯ ಮಾಡುತ್ತದೆ.
Bullet journalling ಇದರ ಉದ್ದೇಶವೂ ನಮ್ಮ ಜೀವನವನ್ನು ನಾವು ವ್ಯವಸ್ಥಿತ ವಾಗಿ ಆಯೋಜಿಸುವುದು ,ನಮ್ಮ ಗುರಿಗಳ
ಪಟ್ಟಿಯನ್ನು ಮಾಡುವುದು, ಪ್ರತಿನಿತ್ಯ ಮಾಡಬೇಕಾದ ಕೆಲಸಗಳ ಬಗ್ಗೆ ಆಯೋಜನೆ ಮಾಡುವುದು ,ಪ್ರಮುಖ ದಿನಗಳನ್ನು
ಗುರುತಿಸುವುದು ಹಾಗೂ ನಮ್ಮ ವ್ಯಕ್ತಿತ್ವ ವಿಕಸನಕ್ಕಾಗಿ ಅಥವಾ ದೈಹಿಕ ಆರೋಗ್ಯಕ್ಕಾಗಿ ನಾವು ಅಭಿವೃದ್ಧಿ ಪಡಿಸಲು ಬಯಸುವ
ಅಭ್ಯಾಸಗಳನ್ನು ಟ್ರ್ಯಾಕ್ ಮಾಡುವುದು ಇವೆಲ್ಲವನ್ನು ಮಾಡುವುದಕ್ಕೆ ಬುಲೆಟ್ ಜರ್ನಲಿಂಗ್ಎನ್ನುತ್ತಾರೆ.
Scrapbook journalling and art journalling ಕೆಲವು ಸೃಜನಶೀಲ ವ್ಯಕ್ತಿಗಳು ತಮ್ಮ ಜೀವನದ ಆಗುಹೋಗುಗಳನ್ನು ಬಣ್ಣಗಳ
ಮೂಲಕ ಅಥವಾ ಅಂಕುಡೊಂಕು ಗೆರೆಗಳ ಮೂಲಕ ಅಥವಾ ಚಿತ್ರ ಕಾರ್ಟೂನ್ ಗಳ ಮೂಲಕ ಮಾಡಿ ತಮ್ಮ ಮನಸ್ಸಿನ
ತುಮುಲಗಳನ್ನು ಹೇಳಿಕೊಳ್ಳುವುದು ಮನಸ್ಸಿನ ಭಾವೋದ್ವೇಗ ಕಡಿಮೆ ಮಾಡುವುದು ಈ ಬಗ್ಗೆ ಪ್ರಯತ್ನಗಳನ್ನು ಮಾಡಬಹುದು.
ಒಟ್ಟಿನಲ್ಲಿ ಮನೋವೈದ್ಯ ನಾಗಿ ನನಗೆ ಈ ಜರ್ನಲಿಂಗ್ ಬಗ್ಗೆ ವಯಕ್ತಿಕ ಆಸಕ್ತಿ ಬಹಳಷ್ಟು ವರುಷಗಳಿಂದ ಇದ್ದರೂ ಇತ್ತೀಚೆಗೆ ನನ್ನ
ಜೀವನದಲ್ಲಿ ವ್ಯವಸ್ಥಿತವಾಗಿ ಮೊದಲು ಅಳವಡಿಸಿ ಇದೀಗ ನನ್ನ ಬಳಿ ಬರುವ ಗ್ರಾಹಕರಿಗೂ ಸಹ ಈ ಬಗ್ಗೆ ಹೇಳಲು
ಪ್ರಾರಂಭಿಸಿದ್ದೇನೆ. ನೀವು ಪ್ರಯತ್ನಿಸಿ.. ಮುಂದೊಂದು ದಿನ ಈ ಬಗ್ಗೆ ಇನ್ನೂ ಹೆಚ್ಚಿನ ಅನುಭವ ಹಂಚಿಕೊಳ್ಳುವ.