Select Page
ನಮ್ಮ ಮಕ್ಕಳು ಯಾಕೆ ಆಟ ಆಡಬೇಕು ?ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಕ್ರೀಡೆಯ ಪ್ರಭಾವ ನಮ್ಮ ತಾಯಿ ತಂದೆಯರು
ಹಾಗು ಅವರ ಶಿಕ್ಷಕರು ಮತ್ತು ಶಾಲೆಗಳು ತಿಳಿದು ಕೊಳ್ಳಲೇ ಬೇಕು . ಕ್ರೀಡೆಯು ಮಕ್ಕಳ ಸರ್ವಂಗಿನ ಬೆಳವಣಿಗೆಯಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಇದು ದೈಹಿಕ ಸಾಮರ್ಥ್ಯವನ್ನು ಮಾತ್ರವಲ್ಲದೆ ಅವರ ಮಾನಸಿಕ ಸ್ವಾಸ್ಥ್ಯವನ್ನು ಹೆಚ್ಚಿಸುವಲ್ಲಿಯೂ ಸಹ ಕೆಲಸ ಮಾಡುತ್ತದೆ.ಇದು ಬಹಳಶ್ಟು ಸಮಯದಿಂದ ನಮಗೆ ಗೊತ್ತಿದ್ದರೂ ಇತ್ತೀಚಿನ ಸಂಶೋಧನೆಗಳು ಈ ವಿಷಯಕ್ಕೆ ಇನ್ನಷ್ಟು ಪುಷ್ಠಿ ನೀಡಿದೆ . ಮೊದಲು ಕ್ರೀಡೆಗಳ ಧನಾತ್ಮಕ ಪರಿಣಾಮಗಳ ಬಗ್ಗೆ ತಿಳಿದುಕೊಳ್ಳೋಣ.ಒತ್ತಡ ನಿರ್ವಹಣೆಯಲ್ಲಿ ಕ್ರೀಡೆಗಳ ಪಾತ್ರ ಬಹಳ ದೊಡ್ಡದು. ಕ್ರೀಡೆಗಳಲ್ಲಿ ಸಿಗುವ ವ್ಯಾಯಾಮವು endorphins ಎಂಬ ನೈಸರ್ಗಿಕ ರಸದೂತಗಳ ಬಿಡುಗಡೆ ಮಾಡುತ್ತದೆ, ಇದು ಮನುಷ್ಯನಿಗೆ ಖುಷಿಯನ್ನು ಕೊಡುತ್ತದೆ. ಒತ್ತಡವನ್ನು ಜಾಸ್ತಿ ಮಾಡುವ ಕಾರ್ಟಿಸೋಲ್ ಮತ್ತು ಅಡ್ರಿನಾಲಿನ್ ನಂತಹ ರಸದೂತಗಳ ಆಟವಾಡುವಾಗ ರಕ್ತದಲ್ಲಿ ಕಡಿಮೆಯಾಗುತ್ತದೆ. ಇದರ ಪರಿಣಾಮದಿಂದಾಗಿ ಕ್ರೀಡೆಯಲ್ಲಿ ಭಾಗವಹಿಸಿದ ಮಕ್ಕಳು ಕ್ರೀಡೆಯ ನಂತರ ಹಲವಾರು ಗಂಟೆಗಳ ಕಾಲ ಶಾಂತವಾಗಿರುತ್ತಾರೆ.
ಮೂಡ್ ಸುಧಾರಣೆಯಲ್ಲಿ ಕ್ರೀಡೆಗಳ ಪಾತ್ರ.
ಸಾಕರ್ ,ಫುಟ್ಬಾಲ್ ನಂತಹ ತಂಡ ಆಧಾರಿತ ಕ್ರೀಡೆಗಳು ಗಾಲ್ಫ್ ನಂತಹ ಆಟಗಳು ಚಿಂತೆಗಳನ್ನು ಬದಿಗಿಟ್ಟು ಪ್ರಸ್ತುತ ಕ್ಷಣದಲ್ಲಿ
ಕೇಂದ್ರೀಕರಿಸಲು ಪ್ರೋತ್ಸಾಹಿಸುತ್ತದೆ ಆ ಸಂದರ್ಭದಲ್ಲಿ ಜಗತ್ತಿನ ಚಿಂತೆಗಳನ್ನೆಲ್ಲ ಬದಿಗೆಟ್ಟು ಗಮನವು ಸಂಪೂರ್ಣವಾಗಿ ಆಟದತ್ತ ವಾಲಿದಾಗ ಮನಸ್ಸು ಸುಧಾರಿಸುತ್ತದೆ.
ಕ್ರೀಡೆಯಿಂದ ದೀರ್ಘಕಾಲಿನ ಮಾನಸಿಕ ಆರೋಗ್ಯ ಪ್ರಯೋಜನಗಳು
ಕ್ರೀಡೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುವ ಮಕ್ಕಳು, ಪ್ರೌಢ ರಾದಾಗ ಉತ್ತಮ ಮಾನಸಿಕ ಆರೋಗ್ಯವನ್ನು ಹೊಂದುತ್ತಾರೆ.
ತಂಡ ಕ್ರೀಡೆಗಳಲ್ಲಿ ತೊಡಗಿರುವ ಮಕ್ಕಳು ಕ್ರೀಡಾಮನೋಭಾವವನ್ನು ಕಲಿತು ಸೋಲು ಗೆಲುವು ಜೀವನದ ಸ್ಥಿತಿಗಳು ಮತ್ತು ಅದು
ಕ್ಷಣಿಕ ಎಂಬುದನ್ನು ತಿಳಿದುಕೊಳ್ಳುತ್ತಾರೆ. ಸೋಲನ್ನು ಸ್ವೀಕರಿಸುವುದು ಅನಿವಾರ್ಯ ಎಂಬುದನ್ನು ಅರಿತುಕೊಳ್ಳುತ್ತಾರೆ. ಗೆದ್ದಾಗ
ಅಹಂಕಾರ ಮುಂದೊಮ್ಮೆ ಸೋತಾಗ ಸಮಸ್ಯೆಯನ್ನು ಉಂಟುಮಾಡುತ್ತದೆ ಎಂಬುದನ್ನು ತಿಳಿದುಕೊಳ್ಳುತ್ತಾರೆ. ತಂಡ ಕ್ರೀಡೆಗಳು
ಒಬ್ಬರಿಗೊಬ್ಬರ ಸಹಕಾರದ ಅಗತ್ಯತೆಯನ್ನು ಹಾಗೂ ತಮ್ಮ ಒಡನಾಟವನ್ನು ಉತ್ತಮಗೊಳಿಸುವ ಅಗತ್ಯತೆಯನ್ನು ಕಲಿಸುತ್ತದೆ.
ತಂಡ ಕ್ರೀಡೆಗಳು ಮನಸ್ಸಿನ ಖುಷಿಯನ್ನು ಕೂಡ ಜಾಸ್ತಿ ಮಾಡುತ್ತದೆ. ಖಿನ್ನತೆ ,ಆತಂಕ ದಿಂದ ಬಳಲುತ್ತಿರುವ ಮಕ್ಕಳು,ಬಾಲ್ಯದ
ಪ್ರತಿಕೂಲ ಘಟನೆಗಳನ್ನು ಅನುಭವಿಸುತ್ತಿರುವ ಮಕ್ಕಳು ಆಟಗಳನ್ನು ನಿಯಮಿತವಾಗಿ ಆಡಿದಾಗ ಉತ್ತಮಗೊಳ್ಳುತ್ತಾರೆ ಎಂದು
ಸಂಶೋಧನೆಗಳು ತಿಳಿಸುತ್ತವೆ.
ಇನ್ನೊಂದು ವಿಷಯವೆಂದರೆ ಮದ್ಯ ಮಾದಕ ದ್ರವ್ಯ ವ್ಯಸನ ಕ್ರೀಡೆಗಳಲ್ಲಿ ಭಾಗವಹಿಸುವ ಮಕ್ಕಳಲ್ಲಿ ಕಡಿಮೆ. ಕ್ರೀಡೆಗಳು ಮನಸ್ಸಿನ ಖುಷಿ ಜಾಸ್ತಿ ಮಾಡುವುದರಿಂದ ಈ ರೀತಿಯ ವ್ಯಸನಗಳಿಗೆ ಮಕ್ಕಳು ಬಲಿಯಾಗುವುದು ಬಹಳ ಕಡಿಮೆಯಾಗಿದೆ
ನ್ಯಾಷನಲ್ ಹೆಲ್ತ್ ಸರ್ವಿಸ್ ಇಂಗ್ಲೆಂಡ್ ಇವರ ಪ್ರಕಾರ ಕ್ರೀಡೆ ಮತ್ತು ವ್ಯಾಯಾಮ ಅಲ್ಪ ಮಟ್ಟದ ಖಿನ್ನತೆ ಗೆ ಚಿಕಿತ್ಸೆಯಾಗಿದೆ.
ತೀವ್ರ ಬಗ್ಗೆ ಮನೋರೋಗ ಇಚ್ಚಿತ ಚಿತ್ತ ವಿಕಲತೆಗೆ ಕ್ರೀಡೆ ಮತ್ತು ವ್ಯಾಯಾಮ ಮಾತ್ರೆ ಚಿಕಿತ್ಸೆಯ ಜೊತೆಗೆ ಉಪಯೋಗಕಾರಿ
ಎಂದು ಕೂಡ ತಿಳಿದುಬಂದಿದೆ. ಆದರೆ ಇನ್ನೊಂದು ವಿಷಯ ಎಲ್ಲರೂ ಗಮನಿಸಬೇಕು ಮನೆಯವರು ಮತ್ತು ಕ್ರೀಡಾಪಟುಗಳು ಸಂತೋಷಕ್ಕಿಂತ ಕಾರ್ಯಕ್ಷಮತೆಯ ಮೇಲೆ ಗಮನಹರಿಸಿದಾಗ ಅದು ಒತ್ತಡಕ್ಕೆ ಕಾರಣವಾಗಬಹುದು. ಮಾರ್ಕ್ಸ್ ತೆಗೆಯಲು ಒತ್ತಡ ಹೇರುವ ಪೋಷಕರಂತೆ, ಶಿಕ್ಷಕರಂತೆ ಅಸಾಧಾರಣ ಆಟ ಆಡಲು ಪೋಷಕರು ತರಬೇತುದಾರರು ಒತ್ತಡವನ್ನು ಹಾಕಬಹುದು. ಹಾಗೆಯೇ ಕೆಲವು ಕ್ರೀಡಾಪಟುಗಳು ಉನ್ನತೋನ್ನತಿಯ ದಾಹದಿಂದ ಬಹಳಷ್ಟು ಸ್ವಯಂ ನಿರೀಕ್ಷೆ ಇಟ್ಟುಕೊಂಡು ಆ ನಿರೀಕ್ಷೆ ಪ್ರತಿಫಲಿಸದೇ ಇದ್ದಾಗ ನಿರಾಶರಾಗುವುದು ಖಿನ್ನರಾಗುವುದು ಸರ್ವೇಸಾಮಾನ್ಯ. ದೇಹ ತೂಕ ಆಧಾರಿತ ಕ್ರೀಡೆಗಳು ಅಂದರೆ ದೂರದ ಓಟ, ಜಿಮ್ನಾಸ್ಟಿಕ್ಸ್ಮುಂ ತಾದವುಗಳು ತೂಕದತ್ತ ಅನಾರೋಗ್ಯಕರ ಗಮನಕ್ಕೆ ಕಾರಣವಾಗಿ ತಿನ್ನುವಿಕೆಯ ಅಸ್ವಸ್ಥತೆಗಳಿಗೆ ಕಾರಣವಾಗಬಹುದು. ದೇಹದ ತೂಕ ಜಾಸ್ತಿ ಆಗಬಾರದೆಂದು ಬಹಳಷ್ಟು ಯೋಚಿಸುವುದು ನಿದ್ರೆ ಕೆಡುವುದು ಕೆಲವು ಕ್ರೀಡಾಪಟುಗಳಲ್ಲಿ ಸರ್ವೇಸಾಮಾನ್ಯವಾಗಿದೆ. ಮನೋವೈದ್ಯನಾಗಿ ಮಕ್ಕಳ ಮಾನಸಿಕ ಆರೋಗ್ಯವನ್ನು ಹೆಚ್ಚಿಸುವಲ್ಲಿ ಕ್ರೀಡೆ ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂದು ಹೇಳಬಯಸುತ್ತೇನೆ. ಒತ್ತಡ ನಿರ್ವಹಣೆ ಮನಸ್ಥಿತಿ ಸುಧಾರಣೆ ಮತ್ತು ದೀರ್ಘಕಾಲಿನ ಮಾನಸಿಕ ಆರೋಗ್ಯ ಉತ್ತಮಗೊಳಿಸುವ ಧನಾತ್ಮಕ ಪರಿಣಾಮಗಳು ಕ್ರೀಡೆಯಿಂದ ಉಂಟಾಗುತ್ತದೆ. ಆದರೆ ಅತಿಯಾದ ಪೈಪೋಟಿ, ಅತಿಯಾದ ನಿರ್ವಹಣೆಯ ಒತ್ತಡ ಕೂಡ ಋಣಾತ್ಮಕ ಪರಿಣಾಮಗಳಿಗೆ ಕಾರಣವಾಗಬಹುದು ಎಂಬುದನ್ನು ಹೆತ್ತವರು ಶಿಕ್ಷಕರು ಹಾಗೂ ಈ ಕ್ರೀಡಾಪಟುಗಳ ಕೋಚ್ಗಳು ಹಾಗೆಯೇ ಈ ಕ್ರೀಡಾಪಟುಗಳು ತಿಳಿದುಕೊಳ್ಳಬೇಕು. ಸಮಾಜದಲ್ಲಿ ಹೆಚ್ಚುತ್ತಿರುವ ಹದಿಹರೆಯದ ಮಕ್ಕಳ ಮಾನಸಿಕ ಸಮಸ್ಯೆಗಳು ಅವರ ಆತ್ಮಹತ್ಯ ಪ್ರಯತ್ನಗಳು ಕಡಿಮೆ ಮಾಡುವಲ್ಲಿ ಶಾಲಾ ಕಾಲೇಜುಗಳಲ್ಲಿ ಕ್ರೀಡೆಗಳ ಬಗ್ಗೆ ಪ್ರೋತ್ಸಾಹ ಅತಿ ಅಗತ್ಯ ಎಂದು ಹೇಳಬಯಸುತ್ತೇನೆ. ಮಕ್ಕಳ ಜೀವನ ಕೌಶಲ್ಯಗಳ ಬೆಳವಣಿಗೆಯಲ್ಲಿ ಕೂಡ ಈ ಕ್ರೀಡೆ ಸಾಕಷ್ಟು ಕೆಲಸ ಮಾಡುತ್ತದೆ. ಇಂದಿನ ದಿನಗಳಲ್ಲಿ ಪ್ರೌಢಶಾಲೆ ಮತ್ತು ಪಿಯುಸಿ ಮಕ್ಕಳು ಕ್ರೀಡೆಗಳಿಂದ ದೂರ ಉಳಿದು ಒತ್ತಡಕ್ಕೆ ಒಳಗಾಗುವುದನ್ನು ಕಣ್ಣಾರೆ ಕಂಡಿದ್ದೇನೆ. ಹಾಗೆಯೇ ಅತಿಯಾದ ಮೊಬೈಲ್ ಬಳಕೆ ಹಾಗೂ ಇಂಟರ್ನೆಟ್ ವ್ಯಸನ, ಬೊಜ್ಜು ಬೆಳವಣಿಗೆ ಮುಂತಾದ ಹೊಸ ಸಮಸ್ಯೆಗಳು ಇಂದು ಆಧುನಿಕ ಮಕ್ಕಳ ದೈಹಿಕ ಆರೋಗ್ಯವನ್ನು ಕೂಡ ಹಾಳು ಮಾಡುತ್ತಿದೆ. ಈ ಬಗ್ಗೆ ಸಮಾಜ ಎಚ್ಚೆತ್ತುಕೊಳ್ಳುವ ಅಗತ್ಯತೆ ಇದೆ. ಕ್ರೀಡೆ ಹಾಗು ಕ್ರೀಡಾಮನೋಭಾವ ಇವೆರಡರ ಪ್ರೋತ್ಸಾಹ ಅತಿ ಅಗತ್ಯವಾಗಿದೆ. ಭಾರತವನ್ನು ಸಾಮಾನ್ಯವಾಗಿ 'ಡಯಾಬಿಟಿಸ್ ಕ್ಯಾಪಿಟಲ್ ಆಫ್ ದಿ ವರ್ಲ್ಡ್' ಎಂದು ಕರೆಯಲಾಗುತ್ತದೆ ಏಕೆಂದರೆ ಇದು ವಿಶ್ವದ ಒಟ್ಟು ಮಧುಮೇಹ ರೋಗಿಗಳ ಸಂಖ್ಯೆಯಲ್ಲಿ 17% ನಮ್ಮ ದೇಶದಲ್ಲೇ ಇದ್ದಾರೆ .ಹಾಗೆಯೇ ಭಾರತದಲ್ಲಿ 5-19 ವರ್ಷ ವಯಸ್ಸಿನ ಮಕ್ಕಳು ಮತ್ತು ಹದಿಹರೆಯದವರಲ್ಲಿ ಅಧಿಕ ತೂಕ ಮತ್ತು ಸ್ಥೂಲಕಾಯದ ಇನ್ನೂ ಗಣನೀಯವಾಗಿ ಅಂದರೆ 1975 ರಲ್ಲಿ ಕೇವಲ 4% ರಿಂದ 2016 ರಲ್ಲಿ 18% ಗೆ ಏರಿದೆ. ಈ ಏರಿಕೆಯು ಹುಡುಗರು ಮತ್ತು ಹುಡುಗಿಯರಲ್ಲಿ ಒಂದೇ ರೀತಿಯಲ್ಲಿ ಸಂಭವಿಸಿದೆ. ಭಾರತವು ಸಾಂಕ್ರಾಮಿಕ ರೋಗಗಳು ಮತ್ತು ಅಪೌಷ್ಟಿಕತೆಯ ಸಮಸ್ಯೆಗಳನ್ನು ಎದುರಿಸುತ್ತಿರುವುದನ್ನು ಮುಂದುವರೆಸಿದೆ ಅದರೊಂದಿಗೆ ಹೊಸ ಸಮಸ್ಯೆಗಳು ಬೊಜ್ಜು ಮತ್ತು ಅಧಿಕ ತೂಕದಂತಹ ಡಯಾಬಿಟಿಸ್ ,ರಕ್ತದ ಒತ್ತಡ ಮುಂತಾದ ಸಾಂಕ್ರಾಮಿಕವಲ್ಲದ ಕಾಯಿಲೆಗಳ ಬೆಳವಣಿಗೆ ಕೂಡ ಕಂಡುಕೊಳ್ಳುತ್ತಾ ಇದೆ .ಅದಕ್ಕೆ ಪ್ರಮುಖ ಕಾರಣಗಳಲ್ಲಿ ಬದಲಾಗುತ್ತಿರುವ ಜೀವನ ಶೈಲಿ ಅಂದರೆ ಜಂಕ್ ಫುಡ್ ಮತ್ತು ಕೂಲ್ drik ಹಾಗೆಯೇ ಶಾಲೆಗಳು ಮತ್ತು ಪೋಷಕರು ಆಟ ಓಟ ಗಳ ಬಗ್ಗೆ ಹೆಚ್ಚು ಗಮನ ಕೊಡದೆ ಇರುವುದು