Select Page
ಬಿಂಜ್ ಡ್ರಿಂಕಿಂಗ್” ಗಂಭೀರ ಆದರೆ ತಡೆಗಟ್ಟಬಹುದಾದ ಸಾರ್ವಜನಿಕ ಆರೋಗ್ಯ ಸಮಸ್ಯೆಯಾಗಿದೆ”.ಬಿಂಜ್ ಡ್ರಿಂಕಿಂಗ್ “ಅನ್ನು ಪುರುಷರಿಗೆ ಒಂದು ಅವಧಿಯಲ್ಲಿ 5 ಅಥವಾ ಹೆಚ್ಚಿನ ಗುಟುಕು ಪಾನೀಯವನ್ನು ಅಥವಾ ಮಹಿಳೆಯರಿಗೆ ಒಂದು ಅವಧಿಯಲ್ಲಿ 4 ಅಥವಾ ಹೆಚ್ಚಿನ ಗುಟುಕು ಪಾನೀಯವನ್ನು ಸೇವಿಸುವುದು ಎಂದು ವ್ಯಾಖ್ಯಾನಿಸಲಾಗಿದೆ. “ಬಿಂಜ್ ಡ್ರಿಂಕಿಂಗ್ “ಸಮಸ್ಯೆ ಇರುವವರು ಹೆಚ್ಚಾಗಿ ಮದ್ಯ ವ್ಯಸನ ಅಥವಾ alcohol dependence ಹೊಂದಿರುವುದಿಲ್ಲ ಆದರೆ ಒಂದೇ ಗುಟುಕಿನಲ್ಲಿ ಕಡಿಮೆ ಸಮಯದಲ್ಲಿ ಜಾಸ್ತಿ ಕುಡಿದರೆ ರಕ್ತದಲ್ಲಿ ಮದ್ಯದ level ಜಾಸ್ತಿಯಾಗಿ ಅದರಿಂದಲೇ ಹಲವು ಆರೋಗ್ಯ ಸಮಸ್ಯೆಗಳು ಉಂಟಾಗಬಹುದು .
ಬಿಂಜ್ ಡ್ರಿಂಕ್ಸ್ ಮಾಡುವವರು ಯಾರು ?
1)18-34 ವರ್ಷ ವಯಸ್ಸಿನ ಕಿರಿಯ ವಯಸ್ಕರಲ್ಲಿ ಅತಿಯಾಗಿ ಕುಡಿಯುವುದು ಸಾಮಾನ್ಯವಾಗಿದೆ.
2)ಬಿಂಜ್ ಡ್ರಿಂಕ್ಸ್ ಮಹಿಳೆಯರಿಗಿಂತ ಪುರುಷರಲ್ಲಿ ಹೆಚ್ಚು ಸಾಮಾನ್ಯವಾಗಿದೆ.
3)ಹೆಚ್ಚಿನ ಮನೆಯ ಆದಾಯವನ್ನು ಹೊಂದಿರುವ ವಯಸ್ಕರಲ್ಲಿ ಅತಿಯಾಗಿ ಕುಡಿಯುವುದು ಸಾಮಾನ್ಯವಾಗಿದೆ
4)ಕೆಲವು ಬಗೆಯ ವ್ಯಕ್ತಿತ್ವಗಳು borderline ಪರ್ಸನಾಲಿಟಿ,Histrionic ಪರ್ಸನಾಲಿಟಿ ಮುಂತಾದ ವ್ಯಕ್ತಿತ್ವದವರು
5)ಕೆಲವು ಬಗೆಯ ಮಾನಸಿಕ ಸಮಸ್ಯೆ ಇರುವವರು ಬೈಪೋಲಾರ್ ಡಿಪ್ರೆಶನ್ ,impulse control disorder ಮುಂತಾದ ಸಮಸ್ಯೆಗಳಿಂದ ಬಳಲುವವರು .
ಅತಿಯಾಗಿ ಕುಡಿಯುವಿಕೆಯು ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು . Binge drinking ನಿಂದಾಗಿ ವಾಹನ ಅಪಘಾತಗಳು ,ಅಗ್ನಿ ದುರಂತಗಳು ,ಕುಡಿತದ ಮತ್ತಿನಲ್ಲಿ ಬೀಳುವುದು ,ಒಂದೇ ಸಾರಿ ರಕ್ತದಲ್ಲಿ ಮದ್ಯಪಾನದ level ಜಾಸ್ತಿಯಾಗಿ ಅದು ದೇಹಕ್ಕೆ ವಿಷದಂತೆ ಆಗುವುದು ಸಂಭವವಿದೆ . ಕುಡಿತದ ಮತ್ತಿನಲ್ಲಿ ಕೊಲೆ ,ಆತ್ಮಹತ್ಯೆ , ನಿಕಟ ಸಂಗಾತಿಯ ಮೇಲೆ ಹಿಂಸೆ ಮತ್ತು ಲೈಂಗಿಕ ದೌರ್ಜನ್ಯ ಸೇರಿದಂತೆ ಹಲವು ಘಟನೆಗಳು ನಡೆಯುವ ಸಂಭವ ಇದೆ .ಕುಡಿತದ ಮತ್ತಿನಲ್ಲಿ ಲೈಂಗಿಕ ಸುರಕ್ಷತೆಯ ವಿಧಾನಗಳನ್ನು ಮರೆತು ಲೈಂಗಿಕವಾಗಿ ಹರಡುವ ರೋಗಗಳು ವ್ಯಕ್ತಿಗೆ ಉಂಟಾಗುವ ಸಂಧರ್ಬಗಳು ಇವೆ . ಬಿಂಜ್ ಡ್ರಿಂಕಿಂಗ್ ನ ಕಾರಣದಿಂದ ಗರ್ಭಿಣಿ ಮಹಿಳೆಯರಲ್ಲಿ ಗರ್ಭಪಾತ, ಅನಪೇಕ್ಷಿತ ಗರ್ಭಧಾರಣೆ ಮತ್ತು ಸತ್ತ ಭ್ರೂಣದ ಜನನ ಮುಂತಾದ ಸಮಸ್ಯೆಗಳನ್ನು ನೋಡಬಹುದು .ಅತಿಯಾದ ಮದ್ಯಪಾನವು ಅಧಿಕ ರಕ್ತದೊತ್ತಡ,  ಅನಿಯಮಿತ ಹೃದಯ ಬಡಿತ ಅಥವಾ ಹೃದಯಾಘಾತದಿಂದ ಹಠಾತ್ ಸಾವಿಗೆ ಕಾರಣವಾಗಬಹುದು. ಹಾಗೆಯೇ ಬಿಂಜ್ ಡ್ರಿಂಕಿಂಗ್ ಮಾಡುವವರಲ್ಲಿ ಅಧಿಕ ರಕ್ತದೊತ್ತಡದಿಂದ ಪಾರ್ಶ್ವವಾಯು ಕೂಡ ಸಂಭವಿಸಬಹುದು . ಆಲ್ಕೋಹಾಲ್ ಮೂತ್ರವರ್ಧಕವಾಗಿದೆ, ಇದು ಮೂತ್ರಪಿಂಡಗಳು ಹೆಚ್ಚು ಮೂತ್ರವನ್ನು ಉತ್ಪಾದಿಸಲು ಕಾರಣವಾಗುತ್ತದೆ.  ಅಧಿಕ ಮೂತ್ರ ವಿಸರ್ಜನೆ ಮತ್ತು ಕೆಲವೊಮ್ಮೆ ವಾಂತಿಯೊಂದಿಗೆ, ನಿರ್ಜಲೀಕರಣಕ್ಕೆ ಕಾರಣವಾಗಬಹುದು ಮತ್ತು ಸೋಡಿಯಂ, ಪೊಟ್ಯಾಸಿಯಮ್ ಮತ್ತು ಇತರ ಖನಿಜಗಳು ಮತ್ತು ಲವಣಗಳ ಅಪಾಯಕಾರಿ ಕಡಿಮೆ ಮಟ್ಟಗಳಿಗೆ ಕಾರಣವಾಗಬಹುದು. ಒಮ್ಮೆಲೇ ಹೆಚ್ಚು ಕುಡಿದಾಗ ಅರೆ ಪ್ರಜ್ಞಾವಸ್ಥೆಯಲ್ಲಿ ಇರುವಾಗ ಶ್ವಾಶಕೋಶದಲ್ಲಿ ಆಹಾರ ಅಥವಾ ಲಾಳ ರಸ ಹೋಗಿ ಶ್ವಾಶಕೋಶದ ಉರಿಯೂತ ಉಂಟಾಗಬಹುದು . ದೀರ್ಘಕಾಲೀನ ಅತಿಯಾದ ಕುಡಿತವು ಸ್ತನ ಕ್ಯಾನ್ಸರ್ (ಹೆಣ್ಣುಗಳಲ್ಲಿ), ಯಕೃತ್ತು, ಕೊಲೊನ್, ಗುದನಾಳ, ಬಾಯಿ, ಗಂಟಲಕುಳಿ, ಧ್ವನಿಪೆಟ್ಟಿಗೆ ಮತ್ತು ಅನ್ನನಾಳದ ಕಾನ್ಸರ್ ಉಂಟುಮಾಡುತ್ತದೆ .ಹಾಗೆಯೇ ಬಿಂಜ್ ಡ್ರಿಂಕಿಂಗ್ ಮಾಡುವ ವಿದ್ಯಾರ್ಥಿಗಳಲ್ಲಿ
ನೆನಪಿನ ಶಕ್ತಿ ಮತ್ತು ಕಲಿಕೆಯ ಸಮಸ್ಯೆಗಳು ಕಂಡುಬರುತ್ತವೆ .ಹದಿ ಹರೆಯದಲ್ಲಿ ಈ ರೀತಿ ಬಿಂಜ್ ಡ್ರಿಂಕಿಂಗ್ ಮಾಡಿದಾಗ ಈ ಹದಿಹರೆಯದವರ ಮಿದುಳಿನ ಬೆಳವಣಿಗೆಯಲ್ಲಿ ಕೂಡ ಬದಲಾವಣೆಗಳು ಆಗುತ್ತವೆ ಹಾಗು ಕಲಿಕೆಯ ,ನೆನಪಿನ ಶಕ್ತಿಯ ಸಮಸ್ಯೆಗಳು ಉಂಟಾಗುತ್ತವೆ .
ಬಿಂಜ್ ಕುಡಿಯುವ ಚಿಹ್ನೆಗಳು
ಅತಿಯಾಗಿ ಕುಡಿಯುವುದು ವಿಭಿನ್ನ ಜನರ ಮೇಲೆ ವಿಭಿನ್ನ ಪರಿಣಾಮಗಳನ್ನು ಬೀರುತ್ತದೆ. ಅತಿಯಾದ ಆಲ್ಕೋಹಾಲ್ ಬಳಕೆಯು ಕೆಲಸದಲ್ಲಿ, ಮನೆಯಲ್ಲಿ, ಸಾಮಾಜಿಕ ಸಂದರ್ಭಗಳಲ್ಲಿ ಅಥವಾ ಶಾಲೆಯಲ್ಲಿ ವ್ಯಕ್ತಿಗೆ ತೊಂದರೆಯನ್ನು ಉಂಟುಮಾಡುತ್ತಿದ್ದರೆ, ಅದು ಸಮಸ್ಯೆಯಾಗುತ್ತದೆ .
ಯೋಜಿಸಿದ್ದಕ್ಕಿಂತ ಹೆಚ್ಚು ಕುಡಿಯುವುದು,
ಹೆಚ್ಚಾಗಿ ಕುಡಿಯುವುದು,
ದಿನದಲ್ಲಿ ಬೆಳಿಗ್ಗೆ ಎದ್ದೊಡನೆ ಕುಡಿಯುವುದು,ಯಾರಾದರೂ
ಕುಡಿತದ ಬಗ್ಗೆ ಕೇಳಿದರೆ ರಕ್ಷಣಾತ್ಮಕ ಉತ್ತರ ನೀಡುವುದು ,
ಕುಡಿಯುವಿಕೆಯನ್ನು ನಿಧಾನಗೊಳಿಸಲು ಅಥವಾ ನಿಲ್ಲಿಸಲು ಸಾಧ್ಯವಾಗದಿರುವುದು ,
ಅದೇ ಪರಿಣಾಮವನ್ನು ಪಡೆಯಲು ಹೆಚ್ಚು ಹೆಚ್ಚು ಆಲ್ಕೋಹಾಲ್ ಅಗತ್ಯವಿದೆ ಎಣಿಸಲು ತೊಡಗುವುದು ಮತ್ತು ವ್ಯಕ್ತಿ ಹೆಚ್ಚು ಸಮಯವನ್ನು ಕುಡಿಯಲು ಕಳೆದು ಮನಸ್ಸಿಗೆ ಖುಷಿ ತರುವ ಚಟುವಟಿಕೆಗಳನ್ನು ತ್ಯಜಿಸುವುದು,ಸ್ವಲ್ಪ ಸಮಯದವರೆಗೆ ಪಾನೀಯವನ್ನು ಸೇವಿಸದಿದ್ದಾಗ ಕೈ ಕಾಲು ನಡುಕ ,ಸುಸ್ತು ,ವಾಕರಿಕೆ ಉಂಟಾಗುವುದು ಇವೆಲ್ಲ ಉಂಟಾಗಬಹುದು .
ಕುಡಿಯುವಾಗ ಅಪಾಯಕಾರಿ ಚಟುವಟಿಕೆಗಳಲ್ಲಿ ಭಾಗವಹಿಸುವುದು ಮತ್ತು ಅದರ ಬಗ್ಗೆ ನೆನಪೇ ಆಗದಿರುವ ಸಾಧ್ಯತೆ ಕೂಡ ಇದೆ .ಕುಡಿದ ನಂತರ “ಬ್ಲಾಕ್ಔಟ್ಗಳು” ಅಥವಾ ಸ್ಮರಣ ಶಕ್ತಿಯಲ್ಲಿ ವ್ಯತ್ಯಾಸ ಹೊಂದಿರುವುದು ಮುಂತಾದ ಸಮಸ್ಯೆಗಳು ಉಂಟಾಗುತ್ತದೆ .
ಬಿಂಜ್ ಡ್ರಿಂಕಿಂಗ್ ನಲ್ಲಿ ಹೃದಯಾಘಾತ ,ರಕ್ತದಲ್ಲಿ ಸಕ್ಕರೆ ಅಂಶ ಇದ್ದಕಿದ್ದಂತೆ ಕಡಿಮೆಯಾಗಿ hypoglycemia ಉಂಟಾಗಿ ಪ್ರಜ್ಞೆಕಳೆದುಕೊಳ್ಳುವಂತೆ ಕೂಡ ಆಗಬಹುದು .
ಅತಿಯಾದ ಆಲ್ಕೋಹಾಲ್ ಸೇವನೆಯು ಕರುಳಿನಲ್ಲಿನ ಜೀವಸತ್ವಗಳು ಮತ್ತು ಇತರ ಪೋಷಕಾಂಶಗಳ ಹೀರಿಕೊಳ್ಳುವಿಕೆಯನ್ನು ಅಡ್ಡಿಪಡಿಸುತ್ತದೆ. ಇದು ಅಪೌಷ್ಟಿಕತೆಗೆ ಕಾರಣವಾಗಬಹುದು.
ಒಟ್ಟಿನಲ್ಲಿ ಈ ರೀತಿ ಒಮ್ಮೆಲೇ ಕುಡಿಯುವವರು ದೈಹಿಕ ಮತ್ತು ಮಾನಸಿಕ ಸಮಸ್ಯೆಗಳನ್ನು ಒಮ್ಮೆಲೇ ಅನುಭವಿಸುತ್ತಾರೆ .ಹಲವರಲ್ಲಿ ರೋಗ ನಿರೋಧಕ ಶಕ್ತಿ ಕೂಡ ಕಡಿಮೆಯಾಗುತ್ತದೆ .ಇಷ್ಟೆಲ್ಲಾ ಸಮಸ್ಯೆಗಳು ಇದ್ದರು ಕೂಡ ಈ ರೀತಿ ಅವಧಿಗೊಂದು ಸಾರಿ ಹೆಚ್ಚು ಕುಡಿದು ತಮ್ಮ ಅರೋಗ್ಯ ಹಾಳು ಮಾಡಿಕೊಳ್ಳುವ ಯುವಕ ಯುವತಿಯರು ಹೆಚ್ಚಾಗುತ್ತಾ ಇದ್ದಾರೆ .ಇಂದು ವಾರಾಂತ್ಯದಲ್ಲಿ ಅತಿ ಹೆಚ್ಚು ಕುಡಿದು ತಮ್ಮ ಒತ್ತಡ ನಿರ್ವಹಣೆ ಮಾಡಿಕೊಳ್ಳುವ ಯುವಕರು ಅನೇಕರು ಹಠಾತ್ ಹೃದಯಾಘಾತಕ್ಕೆ ಬಲಿಯಾಗಿಯೋ ಅಥವಾ ರಸ್ತೆ ಅಪಘಾತಕ್ಕೆ ಒಳಗಾಗಿ ಸಾಯುತ್ತಿರುವುದನ್ನು ನೋಡುತ್ತಾ ಇದ್ದೇವೆ .ಮದ್ಯಪಾನ ಸುಲಭವಾಗಿ ಲಭ್ಯವಾದಲ್ಲಿ ಅಥವಾ ಮದ್ಯಪಾನದ ಔಟ್ಲೆಟ್ ಗಳು ಜಾಸ್ತಿಯಾದಲ್ಲಿ ಈ ರೀತಿ ಅತಿಯಾಗಿ ಮದ್ಯಪಾನ ಮಾಡುವವರ ಸಂಖ್ಯೆ ಜಾಸ್ತಿಯಾಗಬಹುದು ಹಾಗು ಸಮಾಜದಲ್ಲಿ ಅನಾರೋಗ್ಯ ಹೆಚ್ಚಬಹುದು .ಈ ಬಗ್ಗೆ ಸರ್ಕಾರಗಳು ಹಾಗೆಯೇ ಜನರು ಕೂಡ ಎಚ್ಚೆತ್ತಿಕೊಳ್ಳಬೇಕು