Select Page

ಮದ್ಯವ್ಯಸನ ಚಿಕಿತ್ಸೆಯಲ್ಲಿ ನಾನು ನೋಡಿರುವ ಒಂದು ಪ್ರಮುಖ ತೊಂದರೆ ಅಂದರೆ “ಬ್ಲಾಕ್ ಔಟ್ “ ಗಳು .ಆಲ್ಕೊಹಾಲ್ ಸೇವನೆಯು ಮಿತವಾಗಿ ಮಾಡಿದಾಗ, ಸಾಮಾಜಿಕ ಮತ್ತು ಮನರಂಜನಾ ಚಟುವಟಿಕೆ ಅನ್ನಿಸಿಕೊಳ್ಳುತ್ತದೆ. ಆದಾಗ್ಯೂ, ಅತಿಯಾದ ಮತ್ತು ದೀರ್ಘಕಾಲದ ಆಲ್ಕೊಹಾಲ್ ಉಪಯೋಗವು ಆಲ್ಕೊಹಾಲ್-ಪ್ರೇರಿತ ಬ್ಲ್ಯಾಕೌಟ್ ಸೇರಿದಂತೆ ತೀವ್ರ ಆರೋಗ್ಯ ಪರಿಣಾಮಗಳಿಗೆ ಕಾರಣವಾಗಬಹುದು.ಈ” ಬ್ಲಾಕ್ ಔಟ್” ದೈನಂದಿನ ಜೀವನವನ್ನು ಅಡ್ಡಿಪಡಿಸುವುದಲ್ಲದೆ, ಮದ್ಯವ್ಯಸನಿಗಳಲ್ಲಿ “ಸಂಭಾವ್ಯ ಮಿದುಳಿನ ಹಾನಿ” ಇದರ ನಿರ್ಣಾಯಕ ಎಚ್ಚರಿಕೆಯ ಸಂಕೇತವಾಗಿದೆ .                                                                 ಈ ಲೇಖನದಲ್ಲಿ, ಆಲ್ಕೋಹಾಲ್-ಪ್ರೇರಿತ ಬ್ಲ್ಯಾಕೌಟ್‌ಗಳ ಹಿಂದಿನ ವಿಜ್ಞಾನ, ಮೆದುಳಿನ ಆರೋಗ್ಯಕ್ಕೆ ಅವುಗಳ ಪರಿಣಾಮಗಳು ಮತ್ತು ಮದ್ಯವ್ಯಸನಿಗಳು ಹೆಚ್ಚಿನ ಹಾನಿಯನ್ನು ತಡೆಗಟ್ಟಲು ತೆಗೆದುಕೊಳ್ಳಬೇಕಾದ ಕಾಳಜಿಯನ್ನು ವಿವರಿಸಲುಪ್ರಯತ್ನಿಸುತ್ತೇನೆ . .ಆಲ್ಕೋಹಾಲ್-ಪ್ರೇರಿತ ಬ್ಲ್ಯಾಕೌಟ್‌ಗಳು ಯಾ ಆಲ್ಕೋಹಾಲಿಕ್ ವಿಸ್ಮೃತಿ ಯಾ ಆಲ್ಕೋಹಾಲ್-ಸಂಬಂಧಿತ ಮೆಮೊರಿ ದುರ್ಬಲತೆ (ARMI) ಎಂದೂ ಕರೆಯಲ್ಪಡುವ ಈ ಸ್ಥಿತಿ ಅಲ್ಪಾವಧಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಆಲ್ಕೋಹಾಲ್ ಅನ್ನು ಸೇವಿಸಿದಾಗ ಸಂಭವಿಸುತ್ತದೆ. ಬ್ಲ್ಯಾಕೌಟ್ ಸಮಯದಲ್ಲಿ, ವ್ಯಕ್ತಿಯು ಸಂಪೂರ್ಣ ಪ್ರಜ್ಞೆಯನ್ನು ಹೊಂದಿದ್ದರೂ ಸಹ, ಅಮಲೇರಿದ ಆ ಸಂದರ್ಭದಲ್ಲಿ ಸಂಭವಿಸಿದ ಘಟನೆಗಳ ಬಗ್ಗೆ ತಾತ್ಕಾಲಿಕವಾಗಿ ನೆನಪಿನ ನಷ್ಟವನ್ನು ಅನುಭವಿಸುತ್ತಾನೆ .ಇಲ್ಲಿ ಸ್ಮರಣ ಶಕ್ತಿ ಕಳೆದುಕೊಳ್ಳುವುದಿಲ್ಲ ಆದರೆ ಹೊಸ ನೆನಪುಗಳು ಅಂದರೆ ನಡೆದು ಹೋದ ಘಟನೆಗಳು ಮಿದುಳಿನ ಗಮನಕ್ಕೆ ಬರುವುದಿಲ್ಲ ಅಷ್ಟೇ

.ಈ ಬ್ಲ್ಯಾಕ್‌ಔಟ್‌ಗಳನ್ನು ಸಾಮಾನ್ಯವಾಗಿ ಎರಡು ವಿಧಗಳಾಗಿ ವರ್ಗೀಕರಿಸಲಾಗಿದೆ:

1)ಎನ್ ಬ್ಲಾಕ್ ಬ್ಲ್ಯಾಕೌಟ್‌ಗಳು: ಎನ್ ಬ್ಲಾಕ್ ಬ್ಲ್ಯಾಕ್‌ಔಟ್‌ಗಳ ಸಮಯದಲ್ಲಿ, ವ್ಯಕ್ತಿಗಳು ಅಮಲೇರಿದ ಸಂದರ್ಭದಲ್ಲಿ ಸಂಭವಿಸಿದ ಯಾವುದೇ ಘಟನೆಗಳನ್ನುನೆನಪಿನಲ್ಲಿ ಇಟ್ಟುಕೊಳ್ಳುವುದಿಲ್ಲ . ಅವರ ಸ್ಮೃತಿಪಟಲದಲ್ಲಿ ಒಂದಿಷ್ಟು ಸಮಯ ಕಳೆದೇ ಹೋದಂತೆ ಇರುತ್ತದೆ. .2)ಫ್ರಾಗ್ಮೆಂಟರಿ ಬ್ಲ್ಯಾಕೌಟ್‌ಗಳು: ಫ್ರಾಗ್ಮೆಂಟರಿ ಬ್ಲ್ಯಾಕೌಟ್‌ಗಳು ಭಾಗಶಃ ಕೆಲವು ಘಟನೆಗಳನ್ನು ನೆನಪಿಸಿಕೊಳ್ಳಬಹುದು ,ಇದು ಗಮನಿಸಿದಾಗ ವಿಚಿತ್ರ ಅನ್ನಿಸುತ್ತದೆ .ಕೆಲವೊಮ್ಮೆ ಬೇಕಂತೆ ಹಾಗೆ ಮಾಡುತ್ತಾರೆ ಅಂತ ನಾವು ಅಂದುಕೊಂಡರು ವೈಜ್ಞಾನಿಕವಾಗಿ ಈ ಭಾಗಶಃ ಬ್ಲಾಕ್ಕೌಟ್ ಸಾಧ್ಯವಿದೆ . ಬ್ಲಾಕ್ ಔಟ್ ವೈಜ್ಞಾನಿಕ ಕಾರಣ ಮನುಷ್ಯನ ಮಿದುಳಿನಲ್ಲಿ ಹಿಪ್ಪೋಕ್ಸಾಮ್ಪ್ಯಾಸ್ (hippocampus )ಹೊಸ ನೆನಪುಗಳನ್ನು ರೂಪಿಸುವ ಕೇಂದ್ರವಾಗಿದೆ .ಮದ್ಯಪಾನ ತೀವ್ರವಾದಾಗ ನಡೆದು ಹೋದ ಘಟನೆಗಳನ್ನು ನೆನಪಿನಲ್ಲಿ ಶೇಖರಿಸಿ ಅದನ್ನು ದೀರ್ಘಾವಧಿಗೆ ಕ್ರೋಡೀಕರಿಸಲು ಹಿಪ್ಪೋಕ್ಯಾಂಪಸ್ ಅಸಮರ್ಥವಾಗುತ್ತದೆ .ಹಾಗೆ ಈ ಸಂದರ್ಭದಲ್ಲಿ ಉಂಟಾದ ಘಟನೆಗಳು ವ್ಯಕ್ತಿಗೆ ನೆನಪಿಗೆ ಬರುವುದಿಲ್ಲ .ಪ್ರೀತಿಪಾತ್ರರಿಗೆ ಅವಾಚ್ಯವಾಗಿ ಬಯ್ಯುವುದು ಅಥವಾ ಅವರೊಂದಿಗೆ ಅಶ್ಲೀಲವಾದ ನಡವಳಿಕೆ ಇಲ್ಲವೇ ಅಪಾಯಕಾರಿ ನಡವಳಿಕೆಗಳು ಉಂಟಾಗಬಹುದು .ದೀರ್ಘಕಾಲೀನ ಮದ್ಯಪಾನವು ಮಿದುಳಿನ ನರಕೋಶಗಳನ್ನು ಮತ್ತು ನರ ಸಂಪರ್ಕಗಳನ್ನು ಹಾನಿಗೊಳಿಸುತ್ತದೆ ಹಾಗು ಮೆದುಳಿನ ಸಂದೇಶವಾಹಕಗಳು ಗ್ಲುಟಮೇಟ್ ಮತ್ತು ಗಾಬಾ ಇವುಗಳ ಪ್ರಸರಣದಲ್ಲಿ ವ್ಯತ್ಯಯ ತಂದು ಮಿದುಳಿನ ಹಾನಿ ಉಂಟು ಮಾಡುತ್ತದೆ ಮತ್ತು ಈ ಬ್ಲಾಕ್ ಔಟ್ ಪದೇಪದೇ ಸಂಭವಿಸಿದರೆ ಮಿದುಳಿನ ಹಾನಿಯನ್ನು ಜಾಸ್ತಿ ಮಾಡುತ್ತದೆ .ಇದರಿಂದಾಗಿ ಮಿದುಳು ದುರ್ಬಲ ಗೊಂಡು ಅರಿವಿನ ದುರ್ಬಲತೆ ಮತ್ತು ನರವೈಜ್ಞಾನಿಕ ಅಸ್ವಸ್ಥತೆಗಳು ಮದ್ಯವ್ಯಸನಿಗಳಲ್ಲಿ ಉಂಟಾಗುತ್ತದೆ .                                                                                                                                                                                                    ಈ ಕಾರಣದಿಂದ ಯಾರೇ ಆಗಲಿ ಮದ್ಯ ವ್ಯಸನಿಗಳಲ್ಲಿ ಈ ತಾತ್ಕಾಲಿಕ ಮರೆಗುಳಿತನ ಸಂಭವಿಸಿದಲ್ಲಿ ಇದು ಸಂಭಾವ್ಯ ಮಿದುಳಿನ ಹಾನಿಗೆ ಮುಂದೆ ಕಾರಣವಾಗಬಹುದು ಎಂಬುದನ್ನು ವ್ಯಕ್ತಿ ಅಥವಾ ಅದನ್ನು ಗಮನಿಸಿದ ಆತನ ಸಂಭಂದಿಕರು ತಿಳಿದುಕೊಳ್ಳಬೇಕು

ಬ್ಲಾಕ್ ಔಟ್ ತಡೆಗಟ್ಟಲು ಏನು ಮಾಡಬಹುದು ? ಮದ್ಯಪಾನ ಮಿದುಳಿಗೆ ಹಾನಿಕಾರಕ ಎಂಬುದನ್ನು ಮೇಲಿನ ವಿಷಯಗಳ ಓದಿ ತಿಳಿದುಕೊಂಡು ಮದ್ಯಪಾನ ತ್ಯಜಿಸುವುದು ಬಹಳ ಒಳ್ಳೆಯ ನಿರ್ಧಾರ ಆದರೆ ಅದು ಸಾಧ್ಯವಿಲ್ಲ ಅಥವಾ ಅಗತ್ಯವಿಲ್ಲ ಅನ್ನಿಸುವಾಗ ತೆಗೆದುಕೊಳ್ಳಬೇಕಾದ ಒಂದು ನಿರ್ಧಾರ ಎಂದರೆ ಸ್ವಲ್ಪ ಸಮಯದಲ್ಲಿ ಅತಿಯಾದ ಆಲ್ಕೋಹಾಲ್ ಸೇವನೆಮಾಡದೆ ,ಜವಾಬ್ದಾರಿಯುತ ಕುಡಿಯುವ ಅಭ್ಯಾಸಗಳು ಮತ್ತು ಹಿತ ಮಿತವಾಗಿ ಮದ್ಯಸೇವನೆಯ ಅಭ್ಯಾಸಗಳನ್ನು ರೂಡಿಸಿಕೊಳ್ಳಬೇಕು . Binge drinking ಒಂದೇ ಗುಟುಕಿಗೆ ಹೆಚ್ಚು ಮದ್ಯಸೇವನೆ ಮಾಡುವುದನ್ನು binge drinking ಎನ್ನುತ್ತಾರೆ .ಇದು ತಾತ್ಕಾಲಿಕ ಮರೆಗುಳಿತನ ಅಥವಾ ಬ್ಲಾಕ್ ಔಟ್ ಗೆ ಪ್ರಮುಖ ಕಾರಣ . ಕಡಿಮೆ ಸಮಯದ ಚೌಕಟ್ಟಿನಲ್ಲಿ ಬಹಳಷ್ಟು ಆಲ್ಕೊಹಾಲ್ಯುಕ್ತ ಪಾನೀಯಗಳನ್ನು (ಸಾಮಾನ್ಯವಾಗಿ ಎರಡು ಗಂಟೆಗಳ ಅವಧಿಯಲ್ಲಿ ಪುರುಷರಿಗೆ ಐದು ಯೂನಿಟ್ ಅಥವಾ ಹೆಚ್ಚು ಮತ್ತು ಮಹಿಳೆಯರಿಗೆ ನಾಲ್ಕು ಯೂನಿಟ್ ಅಥವಾ ಹೆಚ್ಚು ಮದ್ಯಪಾನ ಸೇವಿಸುವುದನ್ನು ಬಿಂಜ್ ಡ್ರಿಂಕಿಂಗ್ ಎಂದು ವ್ಯಾಖ್ಯಾನಿಸಲಾಗಿದೆ).ಈ ಸಮಯದಲ್ಲಿ ವ್ಯಕ್ತಿಯು ಬಹಳಷ್ಟು ಅಪಾಯಕಾರಿ ನಡವಳಿಕೆಗಳನ್ನು ಕೂಡ ಮಾಡಬಹುದು .ಅಸುರಕ್ಷಿತ ಲೈಂಗಿಕತೆ, ಪ್ರಭಾವದ ಅಡಿಯಲ್ಲಿ ಅತಿ ವೇಗದಲ್ಲಿ ವಾಹನ ಚಲಾಯಿಸುವುದು ಮಾಡಬಹುದು .ಈ ಕಾರಣದಿಂದ ಸಕ್ಕರೆ ಅಂಶ ರಕ್ತದಲ್ಲಿ ಒಮ್ಮೆಲೇ ಕಡಿಮೆ ಆಗುವುದು ಕೂಡ ತಾತ್ಕಾಲಿಕ ಮರೆಗುಳಿತನಕ್ಕೆ ಕಾರಣ ಆಗಬಹುದು .ಆದರಿಂದ ಕುಡಿಯುವುದೇ ಆದರೆ ನಿಧಾನವಾಗಿ ಕುಡಿಯಿರಿ . ನಿಮ್ಮ ಪಾನೀಯಗಳನ್ನು ನಿಧಾನವಾಗಿ ಕುಡಿಯುವುದರಿಂದ ಮತ್ತು ಪಾನೀಯಗಳ ನಡುವೆ ವಿರಾಮಗಳನ್ನು ತೆಗೆದುಕೊಳ್ಳುವುದರಿಂದ ಆಲ್ಕೋಹಾಲ್ ದೇಹದಲ್ಲಿ ಒಗ್ಗಿಕೊಳ್ಳಲು ಹೆಚ್ಚಿನ ಸಮಯಸಿಗುತ್ತದೆ .                              ನಿಮ್ಮ limit ಮೀರದಿರಿ .ನಿಮ್ಮ ಮಿತಿಗಳನ್ನು ತಿಳಿದುಕೊಳ್ಳಿ.ಆಲ್ಕೊಹಾಲ್ ಒಬೊಬ್ಬರ ಮೇಲೆ ಒಂದೊಂದು ತರಹದ ವೈಯಕ್ತಿಕ ಪರಿಣಾಮ ಬೀರುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಿ. ವಯಸ್ಸು, ತೂಕ ಮತ್ತು ಚಯಾಪಚಯ ಕ್ರಿಯೆಯಂತಹ ಅಂಶಗಳು ದೇಹದಲ್ಲಿ ಆಲ್ಕೋಹಾಲ್ ತನ್ನ ಪರಿಣಾಮಗಳನ್ನು ಬೀರುತ್ತದೆ .ವ್ಯಕ್ತಿಯು ತನ್ನ ಕುಡಿಯುವಿಕೆಯನ್ನು ಅದಕ್ಕೆ ಅನುಗುಣವಾಗಿ ಹೊಂದಿಸಿಕೊಳ್ಳಬೇಕು .ಬೇರೆ ಯಾರೋ ಅವರ capacity ಬಗ್ಗೆ ಕೊಚ್ಚಿಕೊಂಡರು ಎಂದು ಇವರು ಹಾಗೆಯೇ ಕುಡಿಯಲು ಹೋಗಬಾರದು . ಮದ್ಯ ಕುಡಿಯುವ ಸಂಧರ್ಭದಲ್ಲಿ ಸಾಕಷ್ಟು ನೀರು ಕೂಡ ಕುಡಿಯಿರಿ ಏಕೆಂದರೆ ಮದ್ಯವು ಮೂತ್ರ ವರ್ಧಕ ದ್ರವ್ಯ ಹಾಗು ಮದ್ಯ ಅತಿಯಾದಾಗ ನಿರ್ಜಲೀಕರಣ ಉಂಟಾಗುವ ಸಾಧ್ಯತೆ ಇದೆ ಹಾಗು ಇದರಿಂದ ಕೂಡ ಮಿದುಳಿಗೆ ಹಾನಿ ಉಂಟಾಗಬಹುದು .                              ಕುಡಿಯುವ ಮೊದಲು ತಿನ್ನಿರಿ: ಕುಡಿಯುವ ಮೊದಲು ಊಟ ಮಾಡುವುದರಿಂದ ನಿಮ್ಮ ದೇಹದಲ್ಲಿ ಆಲ್ಕೋಹಾಲ್ ಹೀರಿಕೊಳ್ಳುವುದು ನಿಧಾನವಾಗುತ್ತದೆ ,ಹಾಗು ದೇಹದ ಮೇಲೆ ಮಿದುಳಿನ ಮೇಲೆ ಆಲ್ಕೋಹಾಲ್ ಪರಿಣಾಮವನ್ನು ಕಡಿಮೆ ಮಾಡುತ್ತದೆ. ಬೇರೆ ಬೇರೆ ತರಹದ ಮಾದಕ ಪದಾರ್ಥಗಳನ್ನು ಮಿಶ್ರಣ ಮಾಡುವುದನ್ನು ತಪ್ಪಿಸಿ: ಮದ್ಯದೊಂದಿಗೆ ಪ್ರಿಸ್ಕ್ರಿಪ್ಷನ್ ಔಷಧಿಗಳು ಮತ್ತು ಮನರಂಜನಾ ಔಷಧಗಳು ಸೇರಿದಂತೆ ಇತರ ಪದಾರ್ಥಗಳೊಂದಿಗೆ ಮದ್ಯ ಉಪಯೋಗಿಸುವುದು ಬ್ಲ್ಯಾಕ್ಔಟ್ನ ಅಪಾಯವನ್ನು ಹೆಚ್ಚಿಸುತ್ತದೆ ಮತ್ತು ಅಪಾಯಕಾರಿ ಪರಿಣಾಮಗಳನ್ನು ಉಂಟುಮಾಡಬಹುದು. ಕೊನೆಯಲ್ಲಿ ಹೇಳುವುದು ಎಂದರೆ ನಿಮ್ಮ ಅರೋಗ್ಯ ಹಿತರಕ್ಷಣೆಯ ದ್ರಷ್ಟಿಯಿಂದ ಮದ್ಯಪಾನ ತ್ಯಜಿಸುವುದೇ ಒಳ್ಳೆಯದು .ಜವಾಬ್ದಾರಿಯುತ ಮದ್ಯ ಪಾನ ಮಾಡುವವರಲ್ಲೂ ಬ್ಲಾಕ್ ಔಟ್ ಸಂಭವಿಸಿದನ್ನು ನೋಡಿದ್ದೇನೆ .ಹಾಗೆ ಕುಡಿತ ಬಿಡುವ ಯೋಚನೆ ಇಲ್ಲ ಅಂದಾದರೂ ಕೂಡ ನಿಮ್ಮ ಅರೋಗ್ಯ ಮತ್ತು ಸುರಕ್ಷತೆ ಪ್ರಥಮ ಆದ್ಯತೆ ಆಗಲಿ