ಏಡ್ಸ್ ರೋಗಕ್ಕಿಂತ ರೋಗದ ಭಯವೇ ರೋಗಿಯ ಮಾನಸಿಕ ಸ್ಥೈರ್ಯವನ್ನು ಕೆಡಿಸುತ್ತದೆ. ನೆನಪಿರಲಿ. ಎಚ್.ಐ.ವಿ ಪೀಡಿತರು ಎಲ್ಲರಂತೆ ಜೀವನ ನಡೆಸಬಹುದು. ಎಚ್.ಐ.ವಿ ಸೋಂಕಿತರು ತಾನು ಎಚ್.ಐ.ವಿ ಸೋಂಕಿತ ಎಂದು ತಿಳಿದಾಕ್ಷಣ, ಆಕಾಶವೇ ತಲೆಯ ಮೇಲೆ ಬಿದ್ದಂತೆ ವರ್ತಿಸುತ್ತಾರೆ.. ಇನ್ನು ಕೆಲವೇ ದಿನಗಳಲ್ಲಿ ತಾನು ಸಾಯುತ್ತೇನೆ ಎಂಬ ಭಯದಲ್ಲಿ ಊಟ, ನಿದ್ರೆ ಬಿಟ್ಟು ಚಿಂತೆಗೆ ಶರಣಾಗಿ ಮಾನಸಿಕವಾಗಿ ಕುಗ್ಗಿ ಹೋಗುತ್ತಾರೆ. ಈ ಚಿಂತೆಯಿಂದಲೇ ಇನ್ನೂ ಹತ್ತಿಪ್ಪತ್ತು ವರ್ಷ ಬಾಳಿ ಬದುಕಬೇಕಾದ ಜೀವ, ಒಂದೆರಡು ವರ್ಷದಲ್ಲಿಯೇ ಕೊರಗಿ ಕೊರಗಿ ಜೀವ ಬತ್ತಿ ಹೋಗುತ್ತದೆ. ಮಾನಸಿಕ ಚಿಂತೆ, ಒತ್ತಡ, ಅವಮಾನ, ಆತಂಕ, ಗಾಬರಿ ಮತ್ತು ಸಮಾಜದ ಪ್ರಶ್ನೆಗಳಿಗೆ ಹೆದರಿ ತನ್ನದಲ್ಲದ ತಪ್ಪಿಗೆ ಜೀವ ತೆರಬೇಕಾಗುತ್ತದೆ. ಈ ನಿಟ್ಟಿನಲ್ಲಿ ಇಂತಹ ಎಚ್.ಐ.ವಿ ಭಾದಿತರನ್ನು ಸಮಾಧಾನ ಮಾಡಿ ಸಾಂತ್ವನ ಹೇಳಿ ಅವರನ್ನು ಇತರರಂತೆ ಉಪಚರಿಸಿ, ಸಮಾಜದ ಮುಖ್ಯ ವಾಹಿನಿಗೆ ಸೇರಿಸಿಕೊಳ್ಳಬೇಕಾದ ಗುರುತರ ಜವಾಬ್ದಾರಿ ನಮ್ಮೆಲ್ಲರಿಗೂ ಇದೆ. ಪ್ರತಿ ವ್ಯಕ್ತಿಗೂ ಸಮಾಜದಲ್ಲಿ ಸ್ವತಂತ್ರವಾಗಿ ಜೀವಿಸುವ ಹಕ್ಕು ಇದೆ. ಅವರ ‘ಜೀವನ’ ಹಕ್ಕನ್ನು ಕಸಿಯುವ ಕೆಲಸ ಯಾರೂ ಮಾಡದೇ ಅಂತವರಿಗೆ ಮಾನಸಿಕ ಸ್ಥೈರ್ಯ, ಧೈರ್ಯ ಮತ್ತು ಸಾಂತ್ವನ ಹೇಳಬೇಕಾದ ಅನಿವಾರ್ಯತೆ ಮತ್ತು ತುರ್ತು ಅವಶ್ಯಕತೆ ಇದೆ.
ತಡೆಗಟ್ಟುವುದು ಹೇಗೆ ?
1. ಸುರಕ್ಷಿತವಾದ ಲೈಂಗಿಕ ಕ್ರಿಯೆಗಳು ಮತ್ತು ಕಾಂಡೋಮ್ವನ್ನು ಬಳಸತಕ್ಕದ್ದು.
2. ಅಸ್ವಾಭಾವಿಕ ಲೈಂಗಿಕ ಹವ್ಯಾಸಗಳಿಗೆ ಕಡಿವಾಣ ಹಾಕತಕ್ಕದ್ದು.
3. ಮಾಧಕ ದ್ರವ್ಯ ಬಳಸುವವರು ಹಚ್ಚೆ ಹಾಕಿಸಿಕೊಳ್ಳುವವರು ಒಮ್ಮೆ ಬಳಸಿದ ಸೂಜಿ ಪುನಃ ಬಳಸಬಾರದು.
ಕೊನೆಮಾತು:
ಎಚ್.ಐ.ವಿ ಸೋಂಕು ತಗಲಿದ ತಕ್ಷಣ ‘ಜೀವನ’ದ ಸರ್ವಸ್ವವನ್ನೂ ಕಳೆದುಕೊಂಡಂತೆ ವರ್ತಿಸಬಾರದು. ನಿರಂತರವಾದ ಔಷಧಿ ಮತ್ತು ಸಾಕಷ್ಟು ಮುಂಜಾಗರೂಕತೆ ವಹಿಸಿ, ದೇಹದ ಆರೋಗ್ಯ ವ್ಯವಸ್ಥೆ ಹಾಳಾಗದಂತೆ ನೋಡಿಕೊಳ್ಳಬೇಕು. ಸಾಕಷ್ಟು ಷೌಷ್ಟಿಕವಾದ ಆಹಾರ ಸೇವಿಸಬೇಕು. ಮನೋಬಲವನ್ನು ಹೆಚ್ಚಿಸುವ, ದೇಹದ ಮಾನಸಿಕ ಸಾಮಥ್ರ್ಯವನ್ನು ವೃದ್ಧಿಸುವ ಪ್ರಕ್ರಿಯೆಗಳಲ್ಲಿ ಹೆಚ್ಚು ಹೆಚ್ಚು ತೊಡಗಿಸಿಕೊಳ್ಳಬೇಕು. ಇದರ ಜೊತೆಗೆ ಕಾಲಕಾಲಕ್ಕೆ ವೈದ್ಯರನ್ನು ಬೇಟಿಯಾಗಿ, ಆಪ್ತ ಸಮಾಲೋಜನೆ ನಡೆಸಿ ಮನಸ್ಸಿನ ಗೊಂದಲಗಳನ್ನು ನಿವಾರಿಸಿಕೊಳ್ಳಬೇಕು. ಅದೇ ರೀತಿ ಸಮಾಜದ ಇತರರೂ ಎಚ್.ಐ.ವಿ ಸೋಂಕಿತರನ್ನು ಮಾನವೀಯ ಕಳಕಳಿಯಿಂದ ನೋಡಬೇಕು. ಸಮಾಜ ಅವರನ್ನು ನೋಡುವ ದೃಷ್ಟಿಕೋನ ಬದಲಾಗಬೇಕು. ಹಾಗಾದಲ್ಲಿ ಮಾತ್ರ ವಿಶ್ವ ಏಡ್ಸ್ ದಿನಾಚರಣೆಗೆ ಹೆಚ್ಚಿನ ಮೌಲ್ಯ ಬರಬಹುದು ಮತ್ತು ಅರ್ಥಪೂರ್ಣವಾಗಬಹುದು.
ಈ ಮಾತುಗಳು ಹಿರಿಯ ಲೇಖಕರಾದ ಮುರಳಿ ಮೋಹನ್ ಚಾಂತಾರು ಅವರು ಬರೆದದ್ದು ..ಈ ಬಗ್ಗೆ ನಾನು ಉಡುಪಿಯ ಡ್ಯಾಪ್ಕೋ ಸಂಸ್ಥೆ ನಡೆಸಿದಂತಹ ಎಚ್ಐವಿ ಮತ್ತು ಏಡ್ಸ್ ಕಾಯಿಲೆ ಇರುವವರ ಹೊಸ ಕಾನೂನುಗಳ ಬಗ್ಗೆ ಕಾರ್ಯಗಾರ…ಇದರಲ್ಲಿ ಭಾಗವಹಿಸುತ್ತಾ ಬಿಡಿಸಿ ಮಾತನಾಡಿದೆ .
ಇವಾಗಿನ ವೈದ್ಯಕೀಯ ವಿಜ್ಞಾನದ ಪ್ರಗತಿಯನ್ನು ನೋಡುವಾಗ ಎಚ್ಐವಿ ಇರುವವರ quality of life ಬಹಳಷ್ಟು ಬದಲಾಗಿದೆ ..ನನಗೆ ಗೊತ್ತಿರುವಂತೆ ಈಗ ಹೊಸದಾಗಿ ಚಲಾವಣೆಯಲ್ಲಿ ಇರುವಂತಹ ART ಮಾತ್ರೆಗಳು ಸಾಕಷ್ಟು ಬದಲಾವಣೆಗಳನ್ನು ತಂದಿವೆ .ಹಲವರು ಈಗ ನನ್ನಂತೆ ನಿಮ್ಮಂತೆ ಸಹಜ ಜೀವನವನ್ನು ನಡೆಸುತ್ತಿದ್ದಾರೆ
.
ಡ್ಯಾಪ್ಕೋ ಒಂದು ಹೊಸ ಪ್ರಯತ್ನವನ್ನು ಮಾಡುತ್ತಿದೆ .ಈ ಸಮಸ್ಯೆಗಳು ಇರುವವರು ತಾವೇ ಸಮುದಾಯದಲ್ಲಿ ಹೋಗಿ ಈ ಸಮಸ್ಯೆಗಳು ಇದ್ದು ಕೂಡ ತಾವು ಹೇಗೆ ಸಾಮಾನ್ಯ ಜೀವನವನ್ನು ನಡೆಸುತ್ತಿದ್ದೇವೆ ಎಂಬ ವಿಷಯವನ್ನು ಜನಸಾಮಾನ್ಯರಲ್ಲಿ ಪ್ರಚಾರ ಮಾಡಿದರೆ ಒಳ್ಳೆಯದು ಎಂಬ ಒಂದು ವಿಷಯವನ್ನು ಮನಗಂಡು peer counselling concept ಒಂದನ್ನು ಉಡುಪಿ ಜಿಲ್ಲೆಯಲ್ಲಿ ಕಾರ್ಯಗತಗೊಳಿಸಿದೆ .ಇಂದು ಜಿಲ್ಲಾ ನ್ಯಾಯಾಧೀಶರು ಬಂದು ಎಚ್ಐವಿ ಬಗ್ಗೆ ಹೊಸ ಕಾನೂನಿನ ಬಗ್ಗೆ ಕೂಡ ಅವರಿಗೆ ತಿಳಿ ಹೇಳಿದರು .ನಾನು ಮನೋವೈದ್ಯ ನಾಗಿ ಮಾನಸಿಕ ಸ್ಥಿರತೆಯನ್ನು ಕಾಪಾಡಿಕೊಳ್ಳಲು ಏನೆಲ್ಲಾ ಮಾಡಬಹುದು ? ಎಚ್ಐವಿ ಪಾಸಿಟಿವ್ ಎಂದು ಗೊತ್ತಾದ ಕೂಡಲೇ ಮನಸ್ಸಿಗೆ ಏನೊಂದು ಆಘಾತವಾಗುತ್ತದೆ ..grief process..ಹೇಗೆ ವ್ಯಕ್ತಿ ಒಂದು ರೀತಿಯ ಶಾಕ್ ಮತ್ತು ಕಾಯಿಲೆ ನಿರಾಕರಣೆಯ(shock and denial) ಸ್ಥಿತಿಗೆ ತಲುಪುತ್ತಾನೆ ..ಆಮೇಲೆ ಕಾಯಿಲೆಯನ್ನು ಅರ್ಥ ಮಾಡಿಕೊಳ್ಳಲು ತೊಡಗುತ್ತಾನೆ .bargaining….ಈ ಕಾಯಿಲೆಯೊಂದಿಗೆ ಹೇಗೆ ಜೀವನ ಮಾಡುವುದು ಅನ್ನುವುದರ ಬಗ್ಗೆ ಯೋಚನೆ ಮಾಡುತ್ತಾನೆ ..ಇದೇ ಥರ ಸಮಸ್ಯೆ ಇರುವವರನ್ನು ಹುಡುಕುತ್ತಾನೆ …ಅವರೊಂದಿಗೆ ಮಾತನಾಡಿಕೊಂಡು ತಾನು ಒಂದು ಸ್ತಿಮಿತಕ್ಕೆ ಬರುತ್ತಾನೆ ..acceptance..ಎಚ್ಐವಿ ಸಮಸ್ಯೆ ಇದ್ದರೂ ಕೂಡ ಜನಸಾಮಾನ್ಯರಂತೆ ಬದುಕಲು ಸಾಧ್ಯ ಎಂಬುದನ್ನು ತಿಳಿದುಕೊಳ್ಳುತ್ತಾನೆ ..ಈ ಸಮಯದಲ್ಲಿ ಹಲವಾರು ಜನ ಹೆದರಿ ಕುಗ್ಗಿ ವಿವಿಧ ರೀತಿಯ ಮನೋ ಸಾಮಾಜಿಕ ಸಮಸ್ಯೆಗಳಿಗೆ ತುತ್ತಾಗುತ್ತಾರೆ ..ಈ ಕಾಯಿಲೆಯ ಬಗ್ಗೆ ನಿರಾಶಾವಾದ ಬಂದುಬಿಡುತ್ತದೆ ..ಇದು ಒಂದು ರೀತಿಯಲ್ಲಿ ಮರಣದಂಡನೆಯ ಶಿಕ್ಷೆ ಅನ್ನುವ ಹಾಗೆ ಜನ ವರ್ತಿಸುತ್ತಾರೆ .ಇದಕ್ಕೆ ಪ್ರಮುಖ ಕಾರಣಗಳಲ್ಲಿ ನಮ್ಮ ಸಮಾಜದಲ್ಲಿರುವ ಮೌಢ್ಯತೆ ..ಇಂತಹ ಕಾಯಿಲೆಗಳು ಇರುವಾಗ ಆ ಕಾಯಿಲೆ ಇರುವವರನ್ನು ದೂರ ಮಾಡುವುದು ,ಅವರು ಹೋಟೆಲ್ ಕೆಲಸಗಾರರ ಗಿದ್ದರೆ ಹೋಟೆಲ್ ಕೆಲಸದಿಂದ ಬಿಡಿಸುವುದು ..ಈ ಕಾಯಿಲೆ ಇರುವ ಮಕ್ಕಳಿಗೆ ಶಾಲೆಯಲ್ಲಿ ಅಡ್ಮಿಷನ್ ಕೊಡದೇ ಇರುವುದು ..ಮುಂತಾದ ಮೌಢ್ಯಗಳು ಈ ನಾಗರಿಕ ಸಮಾಜದಲ್ಲಿ ಇನ್ನೂ ನಡೆಯುತ್ತಲೇ ಇವೆ ..ಎಚ್ಐವಿ ಪಾಸಿಟಿವ್ ರೋಗಿಗಳನ್ನು ಸರಿಯಾಗಿ ನೋಡದ ವೈದ್ಯರುಗಳು ಕೂಡ ಸಿಗುತ್ತಾರೆ ..ಇಂತಹ ನಿರಾಶಾದಾಯಕ ವಿಷಯಗಳ ಹೊರತಾಗಿಯೂ ಉಡುಪಿ ಜಿಲ್ಲೆಯ ಡ್ಯಾಪ್ಕೋ ಅಂತಹ ಸಂಸ್ಥೆಗಳು ಇವೆ ..ಈ ಕಾಯಿಲೆಯ ಜನರಲ್ಲಿ ಸಾಕಷ್ಟು ಅರಿವು ಮೂಡಿಸುವ ಕೆಲಸವನ್ನು ಡ್ಯಾಪ್ಕೋ ಸಂಸ್ಥೆಯ ಡಾ ಚಿದಾನಂದ ಸಂಜು ಮತ್ತು ಮಹಾಬಲೇಶ್ವರ್ ಇಂಥವರು ಮಾಡುತ್ತಾ ಇದ್ದಾರೆ ..ಬಹುಶಃ ಇದೇ ಕಾರಣದಿಂದ ನನ್ನನ್ನು ಕೂಡ ಇವತ್ತು ಈ ಕಾರ್ಯಕ್ರಮಕ್ಕೆ ಕರೆದಿದ್ದಾರೆ
.
ಈ ಕಾಯಿಲೆ ಬಂದ ಕೂಡಲೇ ಪ್ರಮುಖವಾದ ಮಾನಸಿಕ ಸಮಸ್ಯೆ ಎಂದರೆ ಈ ಕಾಯಿಲೆಯು ಒಟ್ಟಿಗೆ adjustement ಮಾಡಿಕೊಳ್ಳುವುದು ಕಷ್ಟ ..ಒಮ್ಮೆಲೇ ಎಲ್ಲ ಕನಸುಗಳು ನುಚ್ಚು ನೂರಾಗಿ ಬಿಡುತ್ತವೆ ..ಅದರಲ್ಲಿಯೂ ಹದಿಹರೆಯದ ಮಕ್ಕಳು ಯುವಜನರು ಈ ಸಮಸ್ಯೆಗೆ ತುತ್ತಾದಾಗ ಒಮ್ಮೆಲೇ ಹೆದರಿ ಬಿಡುತ್ತಾರೆ .adjustement disorder…ಎಂಬ ಈ ಸಮಸ್ಯೆಯಿಂದ ಹಲವಾರು ಜನ ಆತ್ಮಹತ್ಯೆಯ ಪ್ರಯತ್ನ ಮಾಡುವುದೂ ಉಂಟು ..ಎಚ್ಐವಿ ಪಾಸಿಟಿವ್ ಸ್ಟೇಟಸ್ ನೊಂದಿಗೆ ಬದುಕುವುದು ಹೇಗೆ ?ನನ್ನ ಜೀವನ ಮುಗಿದು ಹೋಯಿತು ,ನಾನು ಬದುಕಿ ಪ್ರಯೋಜನ ಇಲ್ಲ ಮುಂತಾದ ಆಲೋಚನೆಗಳು ಇವರನ್ನು ಕಾಡುತ್ತವೆ ..ಈ ಕಾಯಿಲೆಯ ಹೊರತಾಗಿಯೂ ಇಂದು ಸಮಾಜದಲ್ಲಿ ತಲೆ ಎತ್ತಿ ಬದುಕುತ್ತಿರುವ ಹಲವು ಕಥಾ ಪ್ರಸಂಗಗಳು ನಾನು ಕಣ್ಣಾರೆ ನೋಡಿದ್ದೇನೆ ..ಇವುಗಳ ಕುರಿತು ಬಿಡಿಸಿ ಮಾತನಾಡಿದೆ ..ಇನ್ನೊಂದು ಪ್ರಮುಖ ಕಾಯಿಲೆ ಎಂದರೆ ಖಿನ್ನತೆ ..ಖಿನ್ನತೆಯಿಂದ ನಿದ್ರಾಹೀನತೆ ಹೆದರಿಕೆ ಹಸಿವೆ ಕಡಿಮೆ ಆತ್ಮಹತ್ಯೆ ಯತ್ನಗಳು ಅಳುತ್ತಾ ಇರುವುದು ನನಗೆ ಎಚ್ಐವಿ ಪಾಸಿಟಿವ್ ಇದ್ದದ್ದು ಏಡ್ಸ್ ಆಗಿಬಿಟ್ಟಿದೆ ಎಂದು ಪದೇ ಪದೇ ಅಂದುಕೊಳ್ಳುವುದು ರಕ್ತದ ಪರೀಕ್ಷೆಗಳನ್ನು ಮಾಡಿಸುವುದು ಮುಂತಾದವುಗಳನ್ನು ಮಾಡತೊಡಗುತ್ತಾರೆ .ಈ ಸಮಯದಲ್ಲಿ ಕೆಲವೊಮ್ಮೆ ಖಿನ್ನತೆ ನಿವಾರಕ ಮಾತ್ರೆಗಳನ್ನು ಕೂಡ ಕೊಡಬೇಕಾಗುತ್ತದೆ .ಇನ್ನು ಕೆಲವರಿಗೆ ಆಪ್ತ ಸಲಹೆ ಕೂಡ ಬೇಕಾಗುತ್ತದೆ ..
ಇನ್ನು ಕೆಲವರಿಗೆ ಕೆಲವೊಮ್ಮೆ ಈ ಎಚ್ಐವಿ ವೈರಾಣುವಿನ ಬಗ್ಗೆ ಓದಿ ಹೆದರಿಕೆ ತೀವ್ರ ಉಂಟಾಗಿ ಕೆಲವರು ಚಿತ್ತ ವಿಕಲತೆಯಿಂದ ಬಳಲುತ್ತಾರೆ ..ಯಾರೋ ತನಗೆ ಈ ಕಾಯಿಲೆ ಬರುವಂತೆ ಮಾಡಿದ್ದರು , ಮಾಟ ಮಾಡಿದ್ದಾರೆ ಮಂತ್ರ ಮಾಡಿದ್ದಾರೆ …ಮುಂತಾದ ಭ್ರಮೆಗಳು ಉಂಟಾಗಿ reactive psychosis…ಎಂಬ ಕಾಯಿಲೆ ಉಂಟಾಗಬಹುದು ಹಾಗೆಯೇ ಈ ವೈರಾಣು ಮಿದುಳಿನ ಮೇಲೆ ಪ್ರಭಾವ ಉಂಟು ಮಾಡಿ ಕೆಲವೊಮ್ಮೆ organic psychosis ಉಂಟು ಮಾಡಬಹುದು ಹಾಗೆಯೇ ರೋಗ ನಿರೋಧಕ ಶಕ್ತಿ ಕಡಿಮೆಯಾಗುವಾಗ ಕೆಲವರಲ್ಲಿ ನೆನಪಿನ ಶಕ್ತಿ ಕಡಿಮೆಯಾಗುವುದು ,ದೈನಂದಿನ ಚಟುವಟಿಕೆಗಳಲ್ಲಿ ಸಮಸ್ಯೆಗಳು ಉಂಟಾಗುವುದು ,ಗುರುತು ಹಿಡಿಯುವುದು ಹೊರಗೆ ಓಡಾಡುವುದು ಇವೆಲ್ಲದರಲ್ಲೂ ಸಮಸ್ಯೆಗಳು ಉಂಟಾಗಬಹುದು ..ಇದು ಕೆಲವೊಮ್ಮೆ ಮರೆಗುಳಿತನ dementia ಉಂಟಾಗುವಂತೆ ಮಾಡುತ್ತದೆ ..
ಎಚ್ಐವಿ ಪಾಸಿಟಿವ್ ಎಂಬುದು ಯಾವ ವಯಸ್ಸಿನಲ್ಲಿ ಉಂಟಾಯಿತು ಅನ್ನುವುದರ ಮೇಲೆ ಒತ್ತಡಗಳು ಕೂಡ ಬೇರೆ ಬೇರೆ ರೀತಿಯಲ್ಲಿ ಇರುತ್ತವೆ .ಕೆಲವರಿಗೆ ಹದಿಹರೆಯದ ಪ್ರಾಯದಲ್ಲಿ ಇನ್ನು ಕೆಲವರಿಗೆ ಮದ್ಯ ವಯಸ್ಕರಾಗಿರುವ ಗೊತ್ತಾಗುತ್ತದೆ ..ಹದಿಹರೆಯದ ಪ್ರಾಯದಲ್ಲಿ ಗೊತ್ತಾದರೆ ಆ ಪ್ರಾಯದ ಚಂಚಲತೆ ಇನ್ನಷ್ಟು ಸಮಸ್ಯೆಗಳನ್ನು ಉಂಟು ಮಾಡುತ್ತದೆ ..ಆ ಸಂದರ್ಭದಲ್ಲಿ ಹಲವಾರು ಕನಸುಗಳು ಇದ್ದು ಆ ಕನಸುಗಳು ನುಚ್ಚುನೂರಾದಾಗ ಖಿನ್ನತೆ ಆತ್ಮಹತ್ಯೆ ಯೋಚನೆ ಉಂಟಾಗುವ ಸಾಧ್ಯತೆಗಳು ಬಹಳಷ್ಟು ಇರುತ್ತವೆ ..ಹಾಗೆಯೇ ಮಧ್ಯವಯಸ್ಕರು ಆಗಿರುವಾಗ ಆ ಸಂದರ್ಭದಲ್ಲಿ ದೇಹದಲ್ಲಿ ಉಂಟಾಗುವ ಹಾರ್ಮೋನ್ ಸ್ಥಿತ್ಯಂತರಗಳು ಖಿನ್ನತೆ ಮನೋ ಚಂಚಲತೆ ಮುಂತಾದವುಗಳನ್ನು ಜಾಸ್ತಿ ಮಾಡಬಹುದು ..
ಈ ಕಾಯಿಲೆಗಳಿಂದ ಬಳಲಿದ ಎಚ್ಐವಿ ಪಾಸಿಟಿವ್ ವ್ಯಕ್ತಿಗಳು ಮನೋವೈದ್ಯರ ಮನೋ ಸಾಮಾಜಿಕ ಕಾರ್ಯಕರ್ತರ ಸಹಾಯ ಪಡೆಯಬೇಕು ..ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ಇವರು ಮಾಡಬೇಕಾದ ಪ್ರಮುಖ ಬದಲಾವಣೆಯೆಂದರೆ ೧.ದುಶ್ಚಟಗಳನ್ನು ತ್ಯಜಿಸುವುದು ೨.ಪ್ರತಿ ದಿನ ಒಂದು ಗಂಟೆ ವ್ಯಾಯಾಮ ೩.ತಮ್ಮ ಆಹಾರದಲ್ಲಿ ಬದಲಾವಣೆ ಅಂದರೆ ಕರೆದ ಪದಾರ್ಥಗಳನ್ನು junk food ಮುಂತಾದವುಗಳನ್ನು ತ್ಯಜಿಸುವುದು ..ಸಕ್ಕರೆ ಕಾಯಿಲೆಯಂತಹ ಕಾಯಿಲೆ ಏನಾದರೂ ಇದ್ದರೆ ಆ ಸಂದರ್ಭದಲ್ಲಿ ಅನ್ನ ರಾಗಿ ಜೋಳ ಮುಂತಾದವುಗಳನ್ನು ಕಡಿಮೆ ತಿಂದು ಪ್ರೊಟೀನ್ ಹಸಿರು ತರಕಾರಿ ಬೇಯಿಸಿದ ಮೀನು ಮೊಟ್ಟೆ ಮಾಂಸ ತಿನ್ನುವುದು ಒಳಿತು ೪.ಹಾಸಿಗೆ ಇದ್ದಷ್ಟು ಕಾಲು ಚಾಚಿ ಎನ್ನುವುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು .೫.ಬೇರೆಯವರೊಟ್ಟಿಗೆ ತುಲನೆ ಮಾಡಿಕೊಳ್ಳುವುದು ,ಬೇರೆಯವರು ನನ್ನನ್ನು ಹಾಗೆ ನೋಡಬೇಕು ಹೀಗೆ ನೋಡಬೇಕು ಎಂಬ ಅಪೇಕ್ಷೆ ..ಪೈಪೋಟಿಯ ಜೀವನ ಇವುಗಳನ್ನು ಕಡಿಮೆ ಮಾಡಬೇಕು .ನನಗೆ ಅತ್ಯಂತ ಆಸಕ್ತಿದಾಯಕ ವಿಷಯಗಳಲ್ಲಿ psychoneuroimmunoendocrinology..ಅಂದರೆ ನಮ್ಮ ಯೋಚನೆಗಳು ನಮ್ಮ ಮನೋಸ್ಥಿತಿ ನಮ್ಮ ದೇಹದ ನರಮಂಡಲ ರೋಗ ನಿರೋಧಕ ಶಕ್ತಿ ಹಾಗೂ ರಸದೂತ ಗಳ ಮೇಲೆ ಪರಿಣಾಮವನ್ನು ಬೀರುತ್ತದೆ …ನಾವು ಧೈರ್ಯವಾಗಿದ್ದರೆ ನಮ್ಮ ಕಾಯಿಲೆಗಳು ಉಲ್ಬಣಗೊಳ್ಳದೆ ನಾವು ನಮ್ಮ ಜೀವನ ಶೈಲಿಯನ್ನು ಬದಲಿಸಿಕೊಂಡು ಯಾವುದೇ ಕಾಯಿಲೆ ಇದ್ದರೂ ಧೈರ್ಯವಾಗಿ ಬದುಕಬಹುದು …ಮನಸ್ಸಿನಲ್ಲಿ ವಿಶ್ವಾಸವಿದ್ದರೆ ತಲೆಯಲ್ಲಿ ಜ್ಞಾನವಿದ್ದರೆ ಯಾವುದೇ ಪರಿಸ್ಥಿತಿಯಿಂದ ಪಾರಾಗಬಹುದು ಎಂಬ ವಿಷಯವನ್ನು ದೃಢೀಕರಿಸುತ್ತೇನೆ ..
ಮೂಢನಂಬಿಕೆಗಳನ್ನು ತ್ಯಜಿಸಿ ವೈಜ್ಞಾನಿಕ ಚಿಂತನೆಗಳನ್ನು ಮಾಡಿ ವೈಜ್ಞಾನಿಕ ಚಿಕಿತ್ಸೆಗಳನ್ನು ಪಡೆಯಿರಿ ..ಸಮಸ್ಯೆಗಳಿದ್ದಾಗ ಇನ್ನೊಬ್ಬರೊಂದಿಗೆ ಹಂಚಿಕೊಳ್ಳಿ ಆಗ ಸಮಸ್ಯೆಯೂ ಕಡಿಮೆಯಾಗುತ್ತದೆ ..ಬೇಡ ಅನ್ನಿಸುವ ಕೆಲಸಗಳನ್ನು ಬೆಲ್ಲ ಎಂದು ಹೇಳಿ ಬೇರೆಯವರ ಒತ್ತಾಯಕ್ಕೆ ಯಾವುದೇ ಕೆಲಸಗಳನ್ನು ಒಪ್ಪಿಕೊಳ್ಳಬೇಡಿ ..ಎಲ್ಲರ ಹತ್ತಿರ ಒಳ್ಳೆಯವರಾಗಲು ಪ್ರಯತ್ನಿಸಬೇಡಿ
..
ಡಾ ಪಿ ವಿ ಭಂಡಾರಿ, ಮನೋವೈದ್ಯರು ಉಡುಪಿ