Select Page

ನರಸಿಂಹ ಹತ್ತೊಂಬತ್ತು ವರ್ಷದ ಹುಡುಗ ಮೊದಲನೇ ಬಿಕಾಂನಲ್ಲಿ ಓದುತ್ತಿದ್ದ .ಸಣ್ಣವ ನಿಂದಲೂ ಆತನಿಗೆ ಚಾರ್ಟರ್ಡ್ ಅಕೌಂಟೆಂಟ್ ಆಗಬೇಕು ಎಂಬ ಒಂದು ಆಸೆ ಇತ್ತು .ಇದಕ್ಕೆ ಕಾರಣ ಆತನ ಮಾವ, ತಹಶೀಲ್ದಾರ್ ಕಚೇರಿಯಲ್ಲಿ ಎಫ್. ಡಿ.ಸಿಯಾಗಿದ್ದ ಇವರು ಸುಮಾರು ಆರೇಳು ಬಾರಿ ಚಾರ್ಟರ್ಡ್ ಅಕೌಂಟೆಂಟ್ ಪರೀಕ್ಷೆಯನ್ನು ತೆಗೆದುಕೊಂಡು ಪಾಸಾಗದೆ ಸರ್ಕಾರಿ ಕೆಲಸವನ್ನು ಸೇರಿದ್ದರು .ಸಣ್ಣವ ನಿಂದಲೂ ಈತನಿಗೆ ಹೇಳುತ್ತಿದ್ದರು ನೀನು ಚಾರ್ಟರ್ಡ್ ಅಕೌಂಟೆಂಟ್ ಆಗಬೇಕು ಎಂದು .ನರಸಿಂಹನ ತಂದೆ ಈತ ಸಣ್ಣವನಿರುವಾಗಲೇ ಆತ್ಮಹತ್ಯೆ ಮಾಡಿಕೊಂಡು ಸತ್ತು ಹೋಗಿದ್ದರು .ಈತ ಒಬ್ಬನೇ ಮಗ ,ತಾಯಿ ಬೇರೆಯವರ ಮನೆಗೆಲಸ ಮಾಡಿ ಹಾಗೆಯೇ ಈ ಎಫ್ .ಡಿ.ಸಿ ತಮ್ಮನ ಸಹಾಯದಿಂದ ಮಗನನ್ನು ಬೆಳೆಸಿದ್ದರು .ನರಸಿಂಹ ಬಿಕಾಂಗೆ ಬಂದ ಮೇಲೆ ಮೊದಲಿನಿಂದಲೇ ಓದತೊಡಗಿದ ಸಂಜೆ ಹೊತ್ತು ಸಿಎ ಇಂಟರ್ ಗೆ ಕುಳಿತುಕೊಳ್ಳಲು ಟ್ರೈನಿಂಗ್ ಅನ್ನು ಕೂಡ ಸೇರಿದ.ಈ ಟ್ರೈನಿಂಗ್ಗೆ ಸೇರಿದ ಮೇಲೆ ಅಲ್ಲಿ ಆತನಿಗೆ ಮೇರಿ ಎಂಬ ಹುಡುಗಿಯ ಪರಿಚಯವಾಯಿತು .ಹತ್ತೊಂಬತ್ತು ವರ್ಷದ ನರಸಿಂಹನಿಗೆ ಮೊದಮೊದಲು ಹುಡುಗಿಯರ ಹತ್ತಿರ ಮಾತನಾಡುವುದೆಂದರೆ ಸಂಕೋಚ .ಮೇರಿ ಒತ್ತಾಯದಿಂದ ಬಂದು ಈತನನ್ನು ಮಾತನಾಡಿಸುತ್ತಿದ್ದಳು .ಪ್ರತಿದಿನ ಸಂಜೆ ಟ್ರೈನಿಂಗ್ ಮುಗಿದ ಮೇಲೆ ಇಬ್ಬರು ಮಾತನಾಡಿಕೊಂಡು ಸಮಯ ಕಳೆಯುತ್ತಿದ್ದರು .ಮೇರಿಯ ಮನೆಗೆ ದಾರಿ ಒಂದು ಕಡೆಯಾದರೆ, ನರಸಿಂಹನದು ಇನ್ನೊಂದು ಕಡೆ.. ಆದರೂ ನರಸಿಂಹ ಅವಳನ್ನು ಬಿಟ್ಟು ಕೊನೆಗೆ ಮನೆಗೆ ಹೋಗುತ್ತಿದ್ದ .ದಿನ ಒಂದೆರಡು ಗಂಟೆ ಈ ರೀತಿ ಸಮಯ ಕಳೆಯುತ್ತಿದ್ದ .ನರಸಿಂಹ ಏನೇನೋ ಕನಸು ಕಾಣಲು ಆರಂಭಿಸಿದ ..ತಾನು ಮದುವೆಯಾಗುವುದಾದರೆ ಮೇರಿಯನ್ನೇ..ಮೇರಿಗೆ ಈ ವಿಷಯವನ್ನು ತಿಳಿಸುವ ಧೈರ್ಯ ಮಾತ್ರ ಮಾಡಲಿಲ್ಲ .ಮೇರಿ ನರಸಿಂಹನ ಸ್ನೇಹವನ್ನು ಇಷ್ಟಪಡುತ್ತಿದ್ದಳು .ಆದರೆ ಅವಳಿಗೆ ಅವನ ಬಗ್ಗೆ ಬೇರೆ ಏನು “ಫೀಲಿಂಗ್ಸ್ “ಇರಲಿಲ್ಲ ..ಗಂಟೆಗಟ್ಟಲೆ ಇಬ್ಬರೂ ಮಾತನಾಡುತ್ತಿದ್ದರು ..ರಾತ್ರಿ ಹನ್ನೆರಡು ಗಂಟೆಯವರೆಗೆ ಮೊಬೈಲ್ನಲ್ಲಿ ಚಾಟ್ ಕೂಡ ಮಾಡುತ್ತಿದ್ದರು ..ಬರುಬರುತ್ತಾ ನರಸಿಂಹ ತನ್ನ ಜೀವನದ ಮುಖ್ಯ ಗುರಿ” ಚಾರ್ಟರ್ಡ್ ಅಕೌಂಟೆನ್ಸಿ “ಇದರ ಬಗ್ಗೆ ಆದ್ಯತೆಯನ್ನು ಬದಿಗಿಟ್ಟ ..ಹಿಂದಿನಂತೆ ಓದಲು ಅವನಿಗೆ ಆಗುತ್ತಿರಲಿಲ್ಲ ..ಇತ್ತ ಮಾವನ ಹಾಗೂ ಅಮ್ಮನ ಇಚ್ಛೆಯಂತೆ ಮಾರ್ಕ್ ಬರುತ್ತಿರಲಿಲ್ಲ ..ಅದೇ ಸಮಯದಲ್ಲಿ ಮೇರಿ ಒಂದು ದಿನ ತನ್ನ ಹೈಸ್ಕೂಲ್ ಫ್ರೆಂಡ್ ನೆವಿಲ್ ಅನ್ನು ಕರೆದುಕೊಂಡು ಬಂದಳು ..ಆತ ಹಾಸನದಲ್ಲಿ ಎಂಜಿನಿಯರಿಂಗ್ ಮಾಡುತ್ತಿದ್ದಾನೆ ಎಂದು ಪರಿಚಯಿಸಿದಳು ..ನರಸಿಂಹನ ಬಗ್ಗೆ ಹೇಳುತ್ತಾ ಈತ ನನ್ನ ಬೆಸ್ಟ್ ಫ್ರೆಂಡ್ ಎಂದು ನರಸಿಂಹನನ್ನು ಪರಿಚಯಿಸಿದಳು .ನೆವಿಲ್ ನ ಬಗ್ಗೆ ನರಸಿಂಹ ನೊಡನೆ ಹೇಳುತ್ತಾ ಈತನೇ ನಾನು ಮುಂದೆ ಮದುವೆಯಾಗುವ ಹುಡುಗ ಎಂಬುದನ್ನು ತಿಳಿಸಿದಳು ..ನರಸಿಂಹನಿಗೆ ಒಂದೇ ಸಮನೆ ಸಿಡಿಲು ಹೊಡೆದ ಹಾಗೆ ಆಯಿತು ..ಆತ ಈ ಮಾತುಗಳನ್ನು ಜೀವನದಲ್ಲಿ ನಿರೀಕ್ಷಿಸಿಯೇ ಇರಲಿಲ್ಲ …
ಇತ್ತ ಓದಲು ಆಗುತ್ತಿಲ್ಲ ಅತ್ತ ಈ ಒಂದು ಅಘಾತ ..ಬರುಬರುತ್ತಾ ನರಸಿಂಹ ಖಿನ್ನನಾದ ..ಬೇರೆಯವರೊಂದಿಗೆ ಮಾತನಾಡುವುದು ಕಡಿಮೆ ಮಾಡಿದೆ ..ನೆವಿಲ್ನ ಭೇಟಿಯಾಗಿ ಹತ್ತು ದಿನಗಳಾಗಿತ್ತು ..ಮೇರಿಗೆ ಒಂದು ಮೆಸೇಜ್ ಅನ್ನು ಮಾಡಿದ್ದ .”.ನನಗೆ ಜೀವನವೇ ಬೇಡ ಅಂತ ಅನ್ನಿಸುತ್ತಿದೆ “..ಇದೇ ವಿಷಯವನ್ನು ತನ್ನ ಇನ್ನೂ ಒಂದೆರಡು ಕ್ಲಾಸ್ ಮೇಟ್ ಗಳಿಗೆ ಹೇಳಿದ್ದ ..ತನಗೆ ಜೀವನದಲ್ಲಿ ಜಿಗುಪ್ಸೆ ಯಾಗಿದೆ ಬದುಕುವ ಆಸಕ್ತಿ ಇಲ್ಲ ಎಂದು ಫ್ರೆಂಡ್ ಗಳಿಗೆ ತಿಳಿಸಿದ್ದ ..ಕಾರಣ ಮಾತ್ರ ಏನು ಎಂದು ಯಾರೊಂದಿಗೂ ಚರ್ಚಿಸಲಿಲ್ಲ .HEART BROKEN SUICIDE SCENE .ಎಂಬ ಒಂದು ವಾಟ್ಸಾಪ್ ಸ್ಟೇಟಸ್ ಹಾಕಿದ್ದ ..ಇದನ್ನು ನೋಡಿದ ಮೇರಿ ಅದಕ್ಕೆ ಒಂದು ಸ್ಮೈಲಿ ಮೆಸೇಜ್ ಹಾಕಿದಳು ..ಯಾಕೆಂದರೆ ಅವಳಿಗೂ ಕೂಡ ಈತನ ಮನಸ್ಥಿತಿಯ ಬಗ್ಗೆ ಏನೂ ಗೊತ್ತಿರಲಿಲ್ಲ ..ನರಸಿಂಹನ ದುಗುಡ ದ್ವಿಗುಣವಾಯಿತು ..ತಾನು ಓದುತ್ತಿದ್ದ ಕೊಠಡಿಯಲ್ಲಿ ಫ್ಯಾನ್ ಒಂದಕ್ಕೆ ತನ್ನ ಪಂಚೆಯನ್ನು ಕಟ್ಟಿ ತನ್ನ ಕತ್ತಿಗೆ ಒಂದು ಉರುಳು ಬಿಗಿದುಕೊಂಡು ಸ್ಟೂಲ್ ಹತ್ತಿದ್ದ ..ಅದೃಷ್ಟವೋ ಎಂಬಂತೆ ಮುಚ್ಚಿದ್ದ ಬಾಗಿಲನ್ನು ನೋಡಿದ ಅಮ್ಮ ಬಡಬಡನೆ ಬಾಗಿಲು ಬಡಿದಳು..ಅನಿರೀಕ್ಷಿತ ಬಾಗಿಲ ಬಡಿತದಿಂದ ನರಸಿಂಹ ಹೆದರಿ ಕೆಳಗೆ ಬಿದ್ದ ..ಜೀವ ಉಳಿಯಿತು ಆದರೆ ಅಮ್ಮ ಗಾಬರಿಯಾಗಿ ದೃಶ್ಯ ನೋಡುತ್ತಿದ್ದಳು ..ನರಸಿಂಹನಿಗೆ ಎರಡು ವರ್ಷವಿರುವಾಗ ಇದೇ ರೀತಿ ಇದೇ ಕೊಠಡಿಯಲ್ಲಿ ಅವನ ಅಪ್ಪ ಕೂಡ ಉರುಳು ಬಿಗಿದುಕೊಂಡಿದ್ದ ..ಆತ ಸತ್ತೇ ಹೋಗಿದ್ದ ..ಅಳುತ್ತಾ ತಾಯಿ ನರಸಿಂಹನನ್ನು ತಬ್ಬಿಕೊಂಡು ಆತನನ್ನು ಮುದ್ದಾಡಿದಳು.
ಕೂಡಲೇ ತನ್ನ ತಮ್ಮನಿಗೆ ಫೋನ್ ಮಾಡಿ ತಿಳಿಸಿದಳು.ಡಾ.ಸಿಆರ್ ಚಂದ್ರಶೇಖರ್ ಅವರ ಪುಸ್ತಕಗಳನ್ನು ಓದಿದ್ದ ನರಸಿಂಹನ ಮಾವ ಈ ಘಟನೆಯನ್ನು ಗಮನಿಸಿ ಆತನನ್ನು ತಮ್ಮ ಊರಿನ ಜಿಲ್ಲಾಸ್ಪತ್ರೆಯ ಮನೋವೈದ್ಯರ ಹತ್ತಿರ ಕರೆದುಕೊಂಡು ಹೋದರು ..
ಮನೋವೈದ್ಯರ ಪ್ರಕಾರ ನರಸಿಂಹ ADJUSTEMENT DISORDER Brief Depressive Reaction ಎಂಬ ಕಾಯಿಲೆಯಿಂದ ಬಳಲುತ್ತಿದ್ದ.
ಹದಿಹರೆಯದ ಪ್ರಾಯ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಮುಖ ವಯಸ್ಸುಗಳಲ್ಲಿ ಒಂದು ..ಹದಿಹರೆಯದ ಮಕ್ಕಳಲ್ಲಿ ಸಾವು ಸಂಭವಿಸುವ ಪ್ರಮುಖ ಕಾರಣಗಳಲ್ಲಿ ಆತ್ಮಹತ್ಯೆ ಒಂದು ..ಪರೀಕ್ಷಾ ಆತಂಕ ,ಸ್ನೇಹಿತರ ವಿರಹ ವೇದನೆ ,ಭಗ್ನ ಪ್ರೇಮ ,ಇತರರ ಮುಂದೆ ಅವಮಾನ ಆಗುವುದು ,ಕೀಳರಿಮೆ ,ಹೆದರಿಕೆ ,ಹಣಕಾಸಿನ ತೀವ್ರ ಸಮಸ್ಯೆ ,ಫೀಡ್ಸ್ ಅಥವಾ ಏಡ್ಸ್ ನಂತಹ ಕಾಯಿಲೆಗಳು ..ಇಂತಹ ಕಾರಣಗಳಿಂದ ಹೆದರಿ ಹದಿಹರೆಯದ ಮಕ್ಕಳು ಆತ್ಮಹತ್ಯೆಯ ಪ್ರಯತ್ನವನ್ನು ಮಾಡುತ್ತಾರೆ ..ನರಸಿಂಹನ ಸಮಸ್ಯೆಯನ್ನು ಗಮನಿಸಿದಾಗ ಅವನ ತಂದೆ ಆತ್ಮಹತ್ಯೆ ಮಾಡಿಕೊಂಡಿದ್ದರು ..ಯಾರ ಕುಟುಂಬದಲ್ಲಿ ಹತ್ತಿರದ ಸಂಬಂಧಿಕರು ಆತ್ಮಹತ್ಯೆ ಮಾಡಿಕೊಂಡಿರುತ್ತಾರೋಅಂಥವರು ಆತ್ಮಹತ್ಯೆ ಮಾಡಿಕೊಳ್ಳುವ ಚಾನ್ಸ್ ಹೆಚ್ಚು ..ಇನ್ನೊಂದು ಗಮನಿಸಬೇಕಾದ ವಿಷಯವೆಂದರೆ ನರಸಿಂಹ ತನಗೆ ಆತ್ಮಹತ್ಯೆಯ ಯೋಚನೆ ಬರುತ್ತಿದೆ ಎಂಬ ಮಾತನ್ನು ತನ್ನ ಮಿತ್ರರಿಗೆ ಮತ್ತು ಮೇರಿಗೆ ತಿಳಿಸಿದ್ದ ..ಯಾರೂ ಕೂಡ ಅದನ್ನು ಅಷ್ಟು ಸೀರಿಯಸ್ಸಾಗಿ ತೆಗೆದುಕೊಂಡಿರಲಿಲ್ಲ ..ಆತ್ಮಹತ್ಯೆಯ ಯೋಚನೆ ಮಾಡುವವರು ಹೆಚ್ಚಾಗಿ ಈ ವಿಚಾರಗಳನ್ನು ಪ್ರೀತಿಪಾತ್ರರಿಗೆ ನೇರವಾಗಿ ಅಥವಾ ಪರೋಕ್ಷವಾಗಿ ತಿಳಿಸಿರುತ್ತಾರೆ ..ಈ ರೀತಿ ಯಾರಾದರೂ ನಿಮ್ಮ ಪ್ರೀತಿಪಾತ್ರರು ನಿಮಗೆ ಮೆಸೇಜ್ ಮಾಡಿದ್ದರೆ ಅಥವಾ ಹೇಳುತ್ತಿದ್ದರೆ ಅವರ ಬಗ್ಗೆ ಸ್ವಲ್ಪ ಎಚ್ಚರದಿಂದ ಗಮನಿಸಿ ..ಇಂಥವರನ್ನು ಮನೋ ಶಾಸ್ತ್ರಜ್ಞರಲ್ಲಿ ಕರೆದುಕೊಂಡು ಹೋಗುವ ಪ್ರಯತ್ನವನ್ನು ಮಾಡಿ ..ಮನೋವೈದ್ಯರು ನರಸಿಂಹನ ಹತ್ತಿರ ಸುಮಾರು ಒಂದು ಗಂಟೆ ಮಾತನಾಡಿದರು ..ನರಸಿಂಹ ತನ್ನ ಮನಸ್ಸಿನಲ್ಲಿ ಇದ್ದದ್ದನ್ನೆಲ್ಲಾ ಬಿಚ್ಚಿ ಹೇಳಿದ್ದ .ನರಸಿಂಹನಿಗೆ ಮನಸ್ಸು ಹಗುರವಾಯಿತು ..ಆತ ತನ್ನಲ್ಲಿದ್ದ ಹಲವಾರು ನಿರರ್ಥಕ ತಿರುಚು ಯೋಚನೆಗಳ cognitive distortionsಬಗ್ಗೆ ಮನೋವೈದ್ಯರಿಂದ ತಿಳಿದುಕೊಂಡ ..ಮರಿಯೊಂದಿಗೆ ಆತನು ತನ್ನ ಸ್ನೇಹ ಎಂಬ definition ಬಗ್ಗೆ ಏನೂ ಚರ್ಚಿಸಿರಲಿಲ್ಲ ..ಅವಳು ಆತನನ್ನು ಒಬ್ಬ ಉತ್ತಮ ಮಿತ್ರ ಎಂದು ಮಾತ್ರ ತಿಳಿದುಕೊಂಡಿದ್ದಳು ..ಆದರೆ ಈತ ಮಾತ್ರ ಅವಳನ್ನು ಪ್ರೇಯಸಿ ಮುಂದೆ ತನ್ನ ಮಡದಿ ಎಂಬ ಯೋಚನೆಯನ್ನು ಮಾಡಿಕೊಂಡಿದ್ದ ..ಹದಿಹರೆಯದ ಹಾಗೆ ..ಹದಿಹರೆಯದಲ್ಲಿ ಉಂಟಾಗುವ ಹಲವು ಪ್ರೇಮ ಪ್ರಸಂಗಗಳು ಕೇವಲ ಒಂದೇ ದಿಕ್ಕಿನ ದಾಗಿ ಇರುತ್ತವೆ ..ONE SIDED LOVE..ಮರಿಯೊಂದಿಗೆ ಏನೇನೋ ವಿಚಾರಗಳನ್ನು ಮಾತನಾಡಿದ್ದ ನರಸಿಂಹ ತನ್ನ ಮನಸ್ಸಿನಲ್ಲಿದ್ದ ಮೂಲ ವಿಚಾರಗಳನ್ನು ಎಂದು ಮಾತನಾಡಿರಲಿಲ್ಲ ..ಇತ್ತ ಈ ಬಲಿಯಾಗಿ ಓದುವುದನ್ನು ಕೂಡ ಕಡಿಮೆ ಮಾಡಿದ್ದ ..ಇತ್ತ ಸರಿಯಾಗಿ ಓದಲಿಲ್ಲ ಅನ್ನುವ ಒತ್ತಡ ಅತ್ತ ಈ ಭಗ್ನಪ್ರೇಮ ಆತನನ್ನು ಒಮ್ಮೆಲೇ ಖಿನ್ನತೆಗೆ ಒಳಗಾಗುವಂತೆ ಮಾಡಿತ್ತು ..ನರಸಿಂಹ ಯಾರೊಂದಿಗೂ ಈ ವಿಷಯಗಳ ಬಗ್ಗೆ ಚರ್ಚಿಸುತ್ತಿರಲಿಲ್ಲ ..ಹಲವು ಒಳ್ಳೆಯ ಮಿತ್ರರ ಇದ್ದರು ಆದರೆ ಅವರೊಡನೆ ಚರ್ಚೆ ಮಾಡಲು ಏನೋ ಒಂದು ರೀತಿಯ ಹಿಂಜರಿಕೆ ..ಹದಿಹರೆಯದವರು ಗಮನಿಸಬೇಕೆ ನೆಂದರೆ ಯಾರಾದರೂ ಒಬ್ಬ ಮಿತ್ರನೊಂದಿಗೆ ಒಳ್ಳೆಯ ನಂಟನ್ನು ಇಟ್ಟುಕೊಳ್ಳಿ ..ನಿಮ್ಮ ಮನಸ್ಸಿನಲ್ಲಿರುವ ಆಲೋಚನೆಗಳ ಬಗ್ಗೆ ಅವರೊಡನೆ ಮಾತನಾಡಿ ..A PROBLEM SHARED IS PROBLEM HALVED,A PROBLEM KEPT IN MIND IS PROBLEM DOUBLED..ಇದು ಯಾವಾಗಲೂ ನೆನಪಿಟ್ಟುಕೊಳ್ಳಿ ..
ನರಸಿಂಹನ ಈ ನೈಜ ಜೀವನದ ಘಟನೆಯಿಂದ ನಮಗೆ ತಿಳಿಯುವುದೇನೆಂದರೆ ಆತ್ಮಹತ್ಯೆಯ ಯೋಚನೆ ಕ್ಷಣಿಕ ..ಮನೆಯಲ್ಲಿ ಯಾರಾದರೂ ಆತ್ಮಹತ್ಯೆ ಮಾಡಿಕೊಂಡಿದ್ದರೆ ಅಂತವರ ಕುಟುಂಬದಲ್ಲಿ ಆತ್ಮಹತ್ಯೆ ಪ್ರಯತ್ನ ಹೆಚ್ಚು ..ಆತ್ಮಹತ್ಯೆ ಮಾಡಿಕೊಳ್ಳುವವರು ಪ್ರೀತಿಪಾತ್ರರಿಗೆ ತಾವು ಆತ್ಮಹತ್ಯೆ ಮಾಡಿಕೊಳ್ಳಬಹುದು ಎಂಬುದನ್ನು ನೇರವಾಗಿ ಅಥವಾ ಪರೋಕ್ಷವಾಗಿ ತಿಳಿಸುತ್ತಾರೆ ..ಆತ್ಮಹತ್ಯೆ ಪ್ರಯತ್ನ ಮಾಡುತ್ತೇನೆ ಅನ್ನುವವರಿಗೆ ನಿಮಗೆ ಗೊತ್ತಾದ ಕೂಡಲೇ ಮನೋವೈದ್ಯರು ತೀರ ಕರೆದುಕೊಂಡು ಹೋಗುವುದು ಒಳ್ಳೆಯದು .ನರಸಿಂಹನಿಗೆ ಬಹಳಷ್ಟು ನಿದ್ರಾಹೀನತೆ ಇತ್ತು ಹೆದರಿಕೆ ಹಿಂಜರಿಕೆ ಇತ್ತು ಅದಕ್ಕೆ ಅಗತ್ಯ ಮಾತ್ರೆಗಳನ್ನು ಕೊಡಲಾಯಿತು .ನರಸಿಂಹ ಗುಣಮುಖನಾದ ಮುಂದೆ ಸಿಎ ಪರೀಕ್ಷೆ ಇಂಟರನ್ನು ಕೂಡ ಪಾಸಾದ ..ಈಗ ಹೆಸರಾಂತ ಆಡಿಟರ್ ಒಬ್ಬರ ಅಡಿಯಲ್ಲಿ ಆರ್ಟಿಕಲ್ ಶಿಪ್ ಮಾಡುತ್ತಿದ್ದಾನೆ ..