ದಿನಾಂಕ 21.06.2023 ಬುಧವಾರ ಬೆಳಿಗ್ಗೆ 10:00 ಗಂಟೆಗೆ ವಿಶ್ವ ಯೋಗ ದಿನದ ಅಂಗವಾಗಿ ಡಾ ಎ ವಿ ಬಾಳಿಗಾ ಸ್ಮಾರಕ ಆಸ್ಪತ್ರೆ ಉಡುಪಿ,ಕಮಲ್ ಎ ಬಾಳಿಗ ಚಾರಿಟೇಬಲ್ ಟ್ರಸ್ಟ್ ಮುಂಬೈ ಇದರ ಜಂಟಿ ಆಶ್ರಯದಲ್ಲಿ ಏರ್ಪಡಿಸಿದ್ದ ಯೋಗ ದಿನಾಚರಣೆಯ ಕಾರ್ಯಕ್ರಮ ಜರುಗಿತು , ಮುಖ್ಯ ಅತಿಥಿಗಳಾಗಿ ಮಣಿಪಾಲದ ಕಸ್ತೂರ್ ಬಾ ಮೆಡಿಕಲ್ ಕಾಲೇಜಿನ ಆಯುರ್ವೇದ ವಿಭಾಗದ ಉಪನ್ಯಾಸಕರಾದ ಡಾಕ್ಟರ್ ಅನುಪಮಾ ವಿ ನಾಯಕ್ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು .ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ ಪಿ ವಿ ಭಂಡಾರಿ ವೈದ್ಯಕೀಯ ನಿರ್ದೇಶಕರು ಡಾ ಎ ವಿ ಬಾಳಿಗ ಸ್ಮಾರಕ ಆಸ್ಪತ್ರೆ ಉಡುಪಿ ಇವರು ವಹಿಸಿದ್ದರು ಹಾಗೂ ಈ ವೇದಿಕೆಯಲ್ಲಿ ಡಾ ಮಾನಸ್ ಇ ಆರ್, ದೀಪಕ್ ಮಲ್ಯ ಮನೋವೈದ್ಯರು, ಡಾ ಎ ವಿ ಬಾಳಿಗಾ ಸ್ಮಾರಕ ಆಸ್ಪತ್ರೆ, ಉಡುಪಿ ಹಾಗೂ ನೇತ್ರ ತಜ್ಞರಾದ ಡಾಕ್ಟರ್ ಲಾವಣ್ಯ ಜಿ ರಾವ್ ಉಪಸ್ಥಿತರಿದ್ದರು.ಆಸ್ಪತ್ರೆಯ ಆಡಳಿತಾಧಿಕಾರಿಣಿಯಗಿರುವ ಶ್ರೀಮತಿ ಸೌಜನ್ಯ ಶೆಟ್ಟಿ ಇವರು ಅತಿಥಿಗಳಿಗೆ ಸ್ವಾಗತ ಕೋರಿದರು . ಶ್ರೀಮತಿ ದೀಪಶ್ರೀ ಅವರು ನಿರೂಪಿಸಿದರು . ಮುಖ್ಯ ಅತಿಥಿಗಳಾದ ಡಾಕ್ಟರ್ ಅನುಪಮಾ ವಿ. ನಾಯಕ್ ಯೋಗದ ಮಹತ್ವ ಮತ್ತು ಜೀವನ ಶೈಲಿಯಲ್ಲಿ ಅದರ ಉಪಯೋಗವನ್ನು ತಿಳಿಸಿದರು. ನಂತರ ಮಾತನಾಡಿದ ಡಾ. ಮಾನಸ್ ಇ ಆರ್ ಮತ್ತು ಡಾಕ್ಟರ್ ದೀಪಕ್ ಮಲ್ಯ ರವರು ಯೋಗ ದಿನದ ಉದ್ದೇಶವನ್ನು ಹೇಳಿದರು. ಯೋಗ ದಿನಾಚರಣೆಯ ಪೂರಕವಾಗಿ ನಡೆದ ಯೋಗಾಸನ ವೀಡಿಯೋ ಸ್ಪರ್ಧೆಯ ಹಾಗೂ ಮಕ್ಕಳ ಮಾರ್ಗದರ್ಶನ ಕೇಂದ್ರದ ಮಕ್ಕಳಿಗೆ ನಡೆದ ಚಿತ್ರಕಲಾ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ತದನಂತರ ಆಸ್ಪತ್ರೆಯ ಬಂದು ಡೇ ಕೇರ್ ಸೆಂಟರ್ ಹಾಗೂ ಅಭಯದ ಪುನರ್ವಸತಿ ಕೇಂದ್ರ ಇದರ ಫಲಾನುಭವಿಗಳಿಂದ ಯೋಗಾಸನದ ನೃತ್ಯ ಮತ್ತು ಯೋಗದ ಮಹತ್ವದ ಬಗ್ಗೆ ಪ್ರಹಸನ ಪ್ರದರ್ಶಿಸಿದರು ಕಾರ್ಯಕ್ರಮದ ಕೊನೆಯ ಭಾಗವಾಗಿ ಆಸ್ಪತ್ರೆಯ ಯೋಗ ತಜ್ಞರಾದ ಕುಮಾರಿ ಅನ್ವಿತಾ ಇವರು ಆಶ್ರಿತ್ ನರ್ಸಿಂಗ್ ಕಾಲೇಜ್ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು ಹಾಗೂ ಉಪಸ್ಥಿತರಿರುವ ಎಲ್ಲರಿಗೂ ಧನ್ಯವಾದ ಸಮರ್ಪಣೆ ಮಾಡಿದರು.