Select Page

Date: May 31, 2022

ವಿಶ್ವ ತಂಬಾಕು ರಹಿತ ದಿನ ( ತಂಬಾಕಿನಿಂದ ಪರಿಸರವನ್ನು ರಕ್ಷಿಸಿ)

ದಿನಾಂಕ 31.05.2022 ರಂದು ಡಾ.ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆ, ಉಡುಪಿ ಇಲ್ಲಿ ಕಾನೂನು ಸೇವಾ ಪ್ರಾಧಿಕಾರ ಉಡುಪಿ ಜಿಲ್ಲೆ, ಕಮಲ್ ಬಾಳಿಗಾ ಚಾರಿಟೇಬಲ್ ಟ್ರಸ್ಟ್, ಮುಂಬಯಿ , ರೋಟರಿ ಕ್ಲಬ್ –ಮಣಿಪಾಲ ಇವರ ಜಂಟಿ ಆಶ್ರಯದಲ್ಲಿ ವಿಶ್ವ ತಂಬಾಕು ರಹಿತ ದಿನವನ್ನು “ತಂಬಾಕಿನಿಂದ ಪರಿಸರವನ್ನು ರಕ್ಷಿಸಿ* ಘೋಷವಾಕ್ಯದೊಂದಿಗೆ ಮಾಹಿತಿ ಕಾರ್ಯಕ್ರಮ ಆಯೋಜಿಸಲಾಯಿತು.

ಕಾರ್ಯಕ್ರಮವನ್ನು ಶ್ರೀಮತಿ ಶರ್ಮಿಳಾ ಎಸ್.  ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಸದಸ್ಯ ಕಾರ್ಯದರ್ಶಿಗಳು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಉಡುಪಿ, ಇವರು ಉದ್ಗಾಟಿಸಿ  ತಮ್ಮ ಉದ್ಘಾಟನ ಭಾಷಣದಲ್ಲಿ  ಯುವ ಜನಾಂಗ ಮಾದಕ ವಸ್ತುವಿಗೆ ಬಲಿಯಾಗುತ್ತಿದೆ ಸರಕಾರ ಇದರ ಬಗ್ಗೆ ಗಮನ ಹರಿಸಬೆಕು ಅಲ್ಲದೆ ತಂಬಾಕು ಸೇವನೆಯಿಂದ ಉಂಟಾಗುವ ಹಾನಿ ಮತ್ತು ಸಾವುಗಳು ಹೆಚ್ಚಾಗುತ್ತಿರುವ ಬಗ್ಗೆ ತಮ್ಮ ಕಳಾಜಿಯನ್ನು ವ್ಯಕ್ತಿ ಪಡಿಸುತ್ತ, ತಂಭಾಕಿನಿಂದ ಉಂಟಾಗುವ ತೊಂದರೆಗಳ ಬಗ್ಗೆ ಎಲ್ಲರಲ್ಲಿ ಅರಿವು ಇರಬೇಕು ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ.ಎ. ವಿ ಬಾಳಿಗಾ ಸಮೂಹ ಸಂಸ್ಥೆ  ನಿರ್ದೇಶಕರು  ಮತ್ತು ಮನೋವೈದ್ಯರಾದ ಡಾ. ಪಿ.ವಿ. ಭಂಡಾರಿಯವರು ತಂಬಾಕು ಉತ್ಪನ್ನದಿಂದ ಪರಿಸರದ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ  ಮತ್ತು ತಂಬಾಕಿನಿಂದ ವಿಮುಕ್ತಿ ಹೊಂದಲು ಇರುವ ಚಿಕಿತ್ಸೆಯ ಬಗ್ಗೆ ಸಂಕ್ಷಿಪ್ತ ಮಾಹಿತಿಯನ್ನು ತಮ್ಮ ಅಧ್ಯಕ್ಷೀಯ ಮಾತುಗಳಲ್ಲಿ ತಿಳಿಸಿದರು.

ಸಭಾ ಕಾರ್ಯಕ್ರಮದಲ್ಲಿ ಸಂಸ್ಥೆಯ ತಜ್ಞ ವೈದ್ಯರುಗಳಾದ ಡಾ.ವಿರುಪಕ್ಷ ದೇವರಮನೆ,  ಡಾ.  ದೀಪಕ್ ಮಲ್ಯ, ಡಾ  ಮಾನಸ ಡಾ ಸುನಿಲ್ ಜಿ ಹಾಗೂ ಸಂಸ್ಥೆಯ ಆಡಳಿತಾಧಿಕಾರಿಣಿ ಶ್ರೀಮತಿ ಸೌಜನ್ಯ ಶೆಟ್ಟಿ ಉಪಸ್ಥಿತರಿದ್ದರು.  ಶ್ರೀಮತಿ ಪದ್ಮಾ ರಾಘವೇಂದ್ರ ಪ್ರಾರ್ಥಿಸಿದರು , ಶ್ರೀ. ನಾಗರಾಜಮೂರ್ತಿ ಸ್ವಾಗತಿಸಿದರು , ಶ್ರೀ. ಮುಜಮಿಲ್ ವಂದಿಸಿದರು .  ಶ್ರೀ ಗಿರೀಶ್ ಎಂ.ಎನ್ ಕಾರ್ಯಕ್ರಮವನ್ನು ನಿರೂಪಿಸಿದರು ಸಭಾ ಕಾರ್ಯಕ್ರಮದ ಬಳಿಕ ನರ್ಸಿಂಗ್ ವಿದ್ಯಾರ್ಥಿಗಳು, ಆಟೋಚಾಲಕರು ಮಾಲಕರು ಹಾಗೂ ಆಸ್ಪತ್ರೆಯ ಒಳರೋಗಿಗಳಿಗೆ ತಂಬಾಕಿನಿಂದ ಉಂಟಾಗುವ ದುಷ್ಪರಿಣಾಮಗಳನ್ನು ಕುರಿತು  ವೈಜ್ಞಾನಿಕ ಮಾಹಿತಿ ಕಾರ್ಯಕ್ರಮ ನಡೆಸಲಾಯಿತು.