ದಿನಾಂಕ 31-05-2024 ರ ಶುಕ್ರವಾರದಂದು ವಿಶ್ವ ತಂಬಾಕು ರಹಿತ ದಿನಾಚರಣೆಯ ಅಂಗವಾಗಿ ಡಾ. ಎ. ವಿ. ಬಾಳಿಗ ಸ್ಮಾರಕ ಆಸ್ಪತ್ರೆ, ಉಡುಪಿ ಮತ್ತು ಕಮಲ್. ಎ. ಬಾಳಿಗ ಚಾರಿಟೇಬಲ್ ಟ್ರಸ್ಟ್, ಮುಂಬೈ ಹಾಗೂ ಭಾರತೀಯ ವೈದ್ಯಕೀಯ ಸಂಘ, ಉಡುಪಿ-ಕರಾವಳಿ ಇದರ ಜಂಟಿ ಆಶ್ರಯದಲ್ಲಿ ಅರ್ಧ ದಿನದ ಮಾಹಿತಿ ಕಾರ್ಯಗಾರವು ಡಾ. ಎ. ವಿ. ಬಾಳಿಗ ಸ್ಮಾರಕ ಆಸ್ಪತ್ರೆಯ ಕಮಲ್. ಎ. ಬಾಳಿಗ ಸಭಾಂಗಣದಲ್ಲಿ ನಡೆಯಿತು.
ಈ ಮಾಹಿತಿ ಕಾರ್ಯಗಾರವನ್ನು ಪ್ರಸೂತಿ ಸ್ತ್ರೀರೋಗ ತಜ್ಞರು ಹಾಗೂ ಅಧ್ಯಕ್ಷರು ಭಾರತೀಯ ವೈದ್ಯಕೀಯ ಸಂಘ, ಉಡುಪಿ-ಕರಾವಳಿಯ ಅಧ್ಯಕ್ಷರಾದ ಡಾ. ರಾಜಲಕ್ಷ್ಮೀಯವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.
ಅತಿಥಿಗಳಾಗಿ ಶ್ರೀಮತಿ ಯಶೋಧ ಸಾಲಿಯನ್ ಉಪಪ್ರಾಂಶುಪಾಲರು ಶ್ರೀ ಆದರ್ಶ ಕಾಲೇಜ್ ಆಫ್ ನರ್ಸಿಂಗ್, ಉಡುಪಿ ಇವರು ಆಗಮಿಸಿದ್ದರು.
ವೇದಿಕೆಯಲ್ಲಿ ಆಸ್ಪತ್ರೆಯ ಆಡಳಿತಾಧಿಕಾರಿ ಶ್ರೀಮತಿ ಸೌಜನ್ಯ ಶೆಟ್ಟಿ ಇವರು ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಸ್ಪತ್ರೆಯ ಮನೋವೈದ್ಯರಾಗಿರುವ ಡಾ. ವಿರೂಪಾಕ್ಷ ದೇವರಮನೆಯವರು ವಹಿಸಿದ್ದರು.
ಶ್ರೀಮತಿ ಶ್ವೇತಾ. ಎಸ್. ನಾಯಕ್ ಕಾರ್ಯಕ್ರಮಕ್ಕೆ ಪ್ರಾರ್ಥಿಸಿದರು, ಆಪ್ತ ಸಮಾಲೋಚಕಿಯಾಗಿರುವ ಕುಮಾರಿ ರಕ್ಷಿತಾ ಎಂ ಸ್ವಾಗತಿಸಿದರು. ಆಪ್ತ ಸಮಾಲೋಚಕಿಯಾಗಿರುವ ಶ್ರೀಮತಿ ಪ್ರೀತಿ ಇವರು ವಂದಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಆಪ್ತ ಸಮಾಲೋಚಕಿಯಾಗಿರುವ ಶ್ರೀಮತಿ ದೀಪಶ್ರೀಯವರು ನಿರ್ವಹಿಸಿದರು.
ಸಭಾ ಕಾರ್ಯಕ್ರಮದ ನಂತರ ಮಾಹಿತಿ ಕಾರ್ಯಗಾರ ನಡೆಯಿತು. ಡಾ. ವಿರೂಪಾಕ್ಷ ದೇವರಮನೆ ಇವರು ತಂಬಾಕಿನ ದುಷ್ಪರಿಣಾಮಗಳ ಬಗ್ಗೆ ಮಾತನಾಡಿದರು. ಡಾ. ದೀಪಕ್ ಮಲ್ಯರವರು ತಂಬಾಕು ಮತ್ತು ಚಿಕಿತ್ಸೆಯ ಕುರಿತು ಮಾತನಾಡಿದರು ಹಾಗೂ ಡಾ. ಮಾನಸ್. ಈ. ರ್ ಇತರ ಅಮಲು ಪದಾರ್ಥಗಳ ಕುರಿತು ಮಾಹಿತಿ ನೀಡಿದರು.
ಆದರ್ಶ ಕಾಲೇಜ್ ಆಫ್ ನರ್ಸಿಂಗ್ ಮತ್ತು E C R ಸ್ಕೂಲ್ ಆಫ್ ನರ್ಸಿಂಗ್ ಮಧುವನ, ಅಚ್ಲಾಡಿಯ ವಿದ್ಯಾರ್ಥಿಗಳು ಕಾರ್ಯಕ್ರಮದ ಪ್ರಯೋಜನವನ್ನು ಪಡೆದರು.