Select Page

Date: October 10, 2024

ದಿನಾಂಕ 10-10-2024 ಗುರುವಾರದಂದು 10ಗಂಟೆಗೆ ಡಾ. ಎ. ವಿ. ಬಾಳಿಗ ಸ್ಮಾರಕ ಆಸ್ಪತ್ರೆ, ಉಡುಪಿ, ಕಮಲ್. ಎ. ಬಾಳಿಗ ಚಾರಿಟೇಬಲ್ ಟ್ರಸ್ಟ್ ಮುಂಬೈ, ಭಾರತೀಯ ವೈದ್ಯಕೀಯ ಸಂಘ ಉಡುಪಿ-ಕರಾವಳಿ ಮತ್ತು ಇಂಡಿಯನ್ ಸೆಕ್ಯಾಟ್ರಿಕ್ ಸೊಸೈಟಿ ಕರ್ನಾಟಕ ಚಾಪ್ಟರ್ ಇದರ ಜಂಟಿ ಆಶ್ರಯದಲ್ಲಿ ವಿಶ್ವ ಮಾನಸಿಕ ಆರೋಗ್ಯ ದಿನದ ಅಂಗವಾಗಿ ಆಸ್ಪತ್ರೆಯ ಸಿಬ್ಬಂದಿಯವರಲ್ಲಿ ಒತ್ತಡ ನಿರ್ವಹಣೆ ಎಂಬ ವಿಷಯದ ಕುರಿತು ಅರ್ಧ ದಿನದ ಮಾಹಿತಿ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಮಾಹಿತಿ ಕಾರ್ಯಾಗಾರದ ಉದ್ಘಾಟನೆಯನ್ನು
ಡಾ. ಸುರೇಶ್ ಶೆಣೈ, ಮೂಳೆ ರೋಗ ತಜ್ಞರು ಹಾಗೂ ಅಧ್ಯಕ್ಷರು ಭಾರತೀಯ ವೈದ್ಯಕೀಯ ಸಂಘ ಉಡುಪಿ-ಕರಾವಳಿ ಇವರು ನಡೆಸಿಕೊಟ್ಟರು, ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಡಾ. ಅನಿಲ್ ಕುಮಾರ್. ಎಂ. ಎನ್, ಸಹ ಪ್ರಾಧ್ಯಾಪಕರು ಮತ್ತು ಮನೋವೈದ್ಯರು ಕೆಎಂಸಿ ಮಣಿಪಾಲ ಮತ್ತು ಡಾ. ಶರತ್ ಚಂದ್ರ ರಾವ್, ಹೆರಿಗೆ ಮತ್ತು ಸ್ತ್ರೀ ರೋಗ ತಜ್ಞರು ಹಾಗೂ ಕಾರ್ಯದರ್ಶಿಗಳು ಭಾರತೀಯ ವೈದ್ಯಕೀಯ ಸಂಘ ಉಡುಪಿ-ಕರಾವಳಿ ಇವರು ಆಗಮಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಪಿ‌. ವಿ. ಭಂಡಾರಿ, ಮನೋವೈದ್ಯರು ಹಾಗೂ ವೈದ್ಯಕೀಯ ನಿರ್ದೇಶಕರು ಡಾ. ಎ. ವಿ. ಬಾಳಿಗ ಸಮೂಹ ಸಂಸ್ಥೆಗಳು ಉಡುಪಿ ಇವರು ವಹಿಸಿದ್ದರು. ಹಾಗೂ ಡಾ. ಎ. ವಿ. ಬಾಳಿಗ ಸ್ಮಾರಕ ಆಸ್ಪತ್ರೆಯ ಮನೋವೈದ್ಯರುಗಳಾದ ಡಾ. ದೀಪಕ್ ಮಲ್ಯ, ಮತ್ತು ಡಾ. ಮಾನಸ್ ಈ ಆರ್ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೆ ಶ್ರೀಯುತ ವಿಶ್ವೇಶ್ವರ, ಆಪ್ತಸಮಾಲೋಚಕರು ಇವರು ಪ್ರಾರ್ಥಿಸಿದರು‌. ಆಸ್ಪತ್ರೆಯ ಆಡಳಿತಾಧಿಕಾರಿಯಾಗಿರುವ ಶ್ರೀಮತಿ ಸೌಜನ್ಯ ಶೆಟ್ಟಿ ಇವರು ಸರ್ವರನ್ನು ಸ್ವಾಗತಿಸಿದರು ಮತ್ತು ಆಸ್ಪತ್ರೆಯ ಮನೋವೈದ್ಯರಾದ ಡಾ. ಮಾನಸ್. ಈ. ಆರ್ ವಂದಿಸಿದರು‌ ಶ್ರೀಮತಿ ದೀಪಶ್ರೀ, ಆಪ್ತಸಮಾಲೋಚಕರು ಕಾರ್ಯಕ್ರಮವನ್ನು ನಿರೂಪಿಸಿದರು.
ಸಭಾ ಕಾರ್ಯಕ್ರಮದ ನಂತರ ಮಾಹಿತಿ ಕಾರ್ಯಗಾರ ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಮನೋವೈದ್ಯರಾದ ಡಾ. ಅನಿಲ್ ಕುಮಾರ್ ಎಂ. ಎನ್ “ಆಸ್ಪತ್ರೆಯ ಸಿಬ್ಬಂದಿಯವರಲ್ಲಿ ಒತ್ತಡ ನಿರ್ವಹಣೆ” ಎಂಬ ವಿಷಯದ ಕುರಿತು ಮಾಹಿತಿ ನೀಡಿದರು. ನಂತರ ಯೋಗ ಚಿಕಿತ್ಸಕರಾದ ಕು. ಅನ್ವಿತಾ ಇವರು ಯೋಗ ಮತ್ತು ಒತ್ತಡ ನಿರ್ವಹಣೆ ಕುರಿತಾಗಿ ಮಾಹಿತಿ ಹಾಗೂ ಪ್ರಾತ್ಯಕ್ಷಿಕೆ ಕಾರ್ಯಕ್ರಮ ನೀಡಿದರು.
ಕಾರ್ಯಕ್ರಮದಲ್ಲಿ ಉಡುಪಿ ಪರಿಸರದಲ್ಲಿರುವ ಬೇರೆ ಬೇರೆ ಆಸ್ಪತ್ರೆಯ ಸುಮಾರು 60ಕ್ಕೂ ಹೆಚ್ಚಿನ ಸಿಬ್ಬಂದಿ ವರ್ಗದವರು ಇದರ ಪ್ರಯೋಜನವನ್ನು ಪಡೆದರು.