Select Page

Date: June 26, 2025

Location: https://avbmhospital.org/event/world-drug-abuse-prevention-day-2025/

ದಿನಾಂಕ 26-6-2025, ಗುರುವಾರದಂದು ಮಣಿಪಾಲ್ ಅಕಾಡೆಮಿ ಹೈಯರ್ ಎಜುಕೇಷನ್ (ಮಾಹೆ), ಕಮಲ್ ಎ. ಬಾಳಿಗಾ ಚಾರೀಟೇಬಲ್ ಟ್ರಸ್ಟ್ ಮುಂಬೈ,ಡಾ. ಎ. ವಿ. ಬಾಳಿಗಾ ಸ್ಮಾರಕ ಆಸ್ಪತ್ರೆ ಉಡುಪಿ ಮತ್ತು ಉಡುಪಿ ಜಿಲ್ಲಾ ಪೊಲೀಸ್ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆ, ಕರ್ನಾಟಕ, ಉಡುಪಿ ಜಿಲ್ಲೆ ಇವರ ಜಂಟಿ ಆಶ್ರಯದಲ್ಲಿ ವಿಶ್ವ ಮಾದಕ ದ್ರವ್ಯ ವ್ಯಸನ ವಿರೋಧಿ ದಿನವನ್ನು ಕಸ್ತೂರ್ಬಾ ಮಣಿಪಾಲ ಆಸ್ಪತ್ರೆಯ ಡಾ. ಟಿ. ಎಂ. ಎ. ಪೈ ಸಭಾಂಗಣದಲ್ಲಿ ಆಚರಿಸಲಾಯಿತು.

ಈ ದಿನದ ಪ್ರಮುಖ ಉದ್ದೇಶ ಯುವಜನತೆಯಲ್ಲಿ ಮಾದಕ ದ್ರವ್ಯ ವ್ಯಸನದಿಂದ ಉಂಟಾಗುವ ದುಷ್ಪರಿಣಾಮದ ಕುರಿತು ಜಾಗೃತಿಯನ್ನು ಮೂಡಿಸುವುದು.

ಈ ವರ್ಷದ “ಧೈಯ ವಾಕ್ಯ : ಸರಪಳಿಗಳನ್ನು ಮುರಿಯುವುದು: ಮಾದಕದ್ರವ್ಯ ಅವಲಂಬನೆಯ ತಡೆಗಟ್ಟುವಿಕೆ, ಚಿಕಿತ್ಸೆ ಮತ್ತು ಚೇತರಿಕೆ.”

ಲೆಪ್ಟಿನೆಂಟ್ ಜನರಲ್ ಡಾ. ಎಂ. ಡಿ. ವೆಂಕಟೇಶ್, ಉಪ ಕುಲಾಧಿಪತಿಗಳು ಮಾಹೆ ಇವರು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ವ್ಯಸನಗಳು ಜಾಗತಿಕ ಸಮಸ್ಯೆಯಾಗಿದೆ, ಇದಕ್ಕೆ ಪರಿಹಾರ ಕಂಡುಕೊಳ್ಳಲು ದೊಡ್ಡ ಅಂದೋಲನದ ಅಗತ್ಯವಿದೆ ಎಂಬ ಸಂದೇಶ ಸಾರಿದರು.

ಡಾ. ಪಿ. ವಿ. ಭಂಡಾರಿ ನಿರ್ದೇಶಕರು, ಡಾ. ಎ. ವಿ. ಬಾಳಿಗಾ ಸಮೂಹ ಸಂಸ್ಥೆಗಳು, ಉಡುಪಿ ಇವರು ಮದ್ಯ ಮಾದಕ ವಸ್ತುಗಳ ಸೇವನೆಯಿಂದ ಯುವ ಜನತೆಯ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ತಿಳಿಸಿ ಕಾರ್ಯಕ್ರಮದ ಕುರಿತಾಗಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.

ಮುಖ್ಯ ಅತಿಥಿಯಾಗಿ ಶ್ರೀಮತಿ ಲೀಲಾಬಾಯಿ ಭಟ್ ಪ್ರಾಂಶುಪಾಲರು, ಸರಕಾರಿ ಪಿ. ಯು. ಕಾಲೇಜು, ಉಡುಪಿ ಇವರು ಯುವ ಜನತೆ ದೇಶದ ಆಸ್ತಿ, ವ್ಯಸನಗಳಿಗೆ ಬಲಿಯಾಗದಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿ ಎಂದು ನುಡಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀ ಹರಿರಾಮ್ ಶಂಕರ್ ಐ ಪಿ. ಎಸ್ ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿಗಳು, ಉಡುಪಿ ಜಿಲ್ಲೆ ಇವರು ವಿದ್ಯಾರ್ಥಿಗಳು ಮಾದಕ ವ್ಯಸನ ಹಾಗೂ ದುಶ್ಚಟಗಳಿಗೆ ಒಮ್ಮೆ ಬಲಿ ಬಿದ್ದರೆ ಬದುಕಿನಲ್ಲಿ ಎದ್ದು ಬರಲು ಕಷ್ಟ ಸಾಧ್ಯ. ಆದುದರಿಂದ ಜಾರದಂತೆ ಜಾಗೃತರಾಗಿರಬೇಕು ಎಂದು ಹೇಳಿದರು.

ಡಾ. ಗೀತಾ ಮಯ್ಯ, ನಿರ್ದೇಶಕರು, ವಿಧ್ಯಾರ್ಥಿ ವ್ಯವಹಾರಗಳ ವಿಭಾಗ ಮಾಹೆ ಇವರು ಸ್ವಾಗತಿಸಿದರು. ಡಾ. ಅರವಿಂದ್ ಕುಮಾರ್ ಪಾಂಡೆ ಉಪನಿರ್ದೇಶಕರು, ವಿಧ್ಯಾರ್ಥಿ ವ್ಯವಹಾರಗಳ ವಿಭಾಗ ಮಾಹೆ ಇವರು ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.

ಕುಮಾರಿ ಅನುಶ್ರೀ ಕಾರ್ಯಕ್ರಮಕ್ಕೆ ಪ್ರಾರ್ಥಿಸಿದರು. ಡಾ. ರಶ್ಮಿ ಯೋಗೇಶ್ ಪೈ, ಉಪ ನಿರ್ದೇಶಕರು, ವಿಧ್ಯಾರ್ಥಿ ವ್ಯವಹಾರಗಳ ವಿಭಾಗ ಮಾಹೆ ಇವರು ವಂದನಾರ್ಪಣೆ ಮಾಡಿದರು. ಕಾರ್ಯಕ್ರಮದ ನಿರೂಪಣೆಯನ್ನು ಡಾ. ರೀನಾ ಪರ್ವಿನ್ ಅಸೋಸಿಯೇಟ್ ಪ್ರೊಫೆಸರ್ ಕೆಎಂಸಿ ಮಣಿಪಾಲ್ ಇವರು ನೆರವೇರಿಸಿದರು.

ಈ ಕಾರ್ಯಾಗಾರದಲ್ಲಿ ಉಡುಪಿಯ ಪದವಿ ಪೂರ್ವ ಕಾಲೇಜಿನಲ್ಲಿ ನಾಯಕತ್ವ ಗುಣ ಹೊಂದಿರುವ ವಿದ್ಯಾರ್ಥಿಗಳು ಎನ್. ಎಸ್. ಎಸ್. / ಎನ್. ಸಿ. ಸಿ. /ಸ್ಕೌಟ್ಸ್ ಆಂಡ್ ಗೈಡ್ಸ್‌ನಲ್ಲಿ ಸಕ್ರಿಯವಾಗಿರುವ ಇಬ್ಬರು ವಿದ್ಯಾರ್ಥಿಗಳು ಮತ್ತು ನರ್ಸಿಂಗ್ ವಿಧ್ಯಾರ್ಥಿಗಳನ್ನೊಳಗೊಂಡ 373 ವಿದ್ಯಾರ್ಥಿಗಳು ಕಾರ್ಯಕ್ರಮದ ಪ್ರಯೋಜನವನ್ನು ಪಡೆದರು.

ಇವರಿಗೆ ಮಾದಕ ದ್ರವ್ಯ ವ್ಯಸನದಿಂದ ಉಂಟಾಗುವ ದುಷ್ಪರಿಣಾಮಗಳು, ಮಾದಕ ದ್ರವ್ಯ ವ್ಯಸನಿಯನ್ನು ಗುರುತಿಸುವ ಬಗೆ, ಕಾನೂನು ಚೌಕಟ್ಟಿನಲ್ಲಿ ಮಾದಕ ದ್ರವ್ಯವ್ಯಸನದಿಂದ ಎದುರಾಗುವ ಸಮಸ್ಯೆಗಳು, ಮಾದಕ ದ್ರವ್ಯ ವ್ಯಸನದಿಂದ ಹೊರಬರುವಲ್ಲಿ ನಮ್ಮ ಪಾತ್ರ ಎಂಬ ವಿಷಯದ ಕುರಿತು ಮಾಹಿತಿ ನೀಡಲಾಯಿತು.