Select Page

Date: April 2, 2022

ವಿಶ್ವ ಆಟಿಸಂ ಜಾಗೃತಿ ದಿನಾಚರಣೆಯ ಪ್ರಯುಕ್ತ ಡಾ ಎ ವಿ ಬಾಳಿಗಾ ಸ್ಮಾರಕ  ಆಸ್ಪತ್ರೆ ಉಡುಪಿ ,ಆಟಿಸಂ ಸೊಸೈಟಿ ಉಡುಪಿ ಮತ್ತು ರೋಟರಿ ಕ್ಲಬ್ ಮಣಿಪಾಲ ಇವರ ಜಂಟಿ ಆಶ್ರಯದಲ್ಲಿ ,ಆಟಿಸಂ ಅರಿವಿನ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಯಿತು.
 ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಅತಿಥಿಗಳನ್ನು  ಡಾ.ಪ್ರಿಯದರ್ಶಿನಿ  ಸ್ವಾಗತಿಸಿ ಪ್ರಾಸ್ತಾವಿಕ ಮಾತನ್ನಾಡಿದರು. ‍
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ಶ್ರೀಮತಿ ವೀಣಾ ವಿವೇಕಾನಂದರವರು ಕಾರ್ಯಕ್ರಮವನ್ನು  ಉದ್ಘಾಟಿಸಿ ಸರ್ಕಾರ,ಜನಪ್ರತಿನಿಧಿಗಳು,ಸಂಬಂಧಪಟ್ಟ ಸಂಘ ಸಂಸ್ಥೆಗಳು ಹಾಗೂ ಅದರ ಜೊತೆಗೆ ಪೋಷಕರು ಸೇರಿ ಪ್ರಯತ್ನಿಸಿದರೆ ಆಟಿಸಂ ಇರುವಂತಹ ಮಕ್ಕಳಿಗೆ ಹೆಚ್ಚಿನ ನೆರವು ಸಿಗುವಂತೆ  ಮಾಡಬಹುದು ಎಂದರು.
 ಸಂಪನ್ಮೂಲ ವ್ಯಕ್ತಿಯಾದ  ಶ್ರೀಮತಿ ರೇಖಾ ರಾವ್ ಅಟಿಸಂ ಲಕ್ಷಣಗಳನ್ನು ಮಕ್ಕಳಲ್ಲಿ ಬೇಗ ಪತ್ತೆಹಚ್ಚುವುದರಿಂದ ಸಮಸ್ಯೆಯ ತೀವ್ರತೆಯನ್ನು  ಕಡಿಮೆಗೊಳಿಸಬಹುದು.ಆಟಿಸಂ ಮಗುವಿನದ್ದಾಗಲಿ ಅಥವಾ ಪೋಷಕರದ್ದಾಗಲಿ ಸಮಸ್ಯೆಯಲ್ಲ, ಇದೊಂದು ಸ್ಥಿತಿ ಎಂಬುದನ್ನು ನಾವೆಲ್ಲ ಅರ್ಥಮಾಡಿಕೊಳ್ಳುವುದರ ಜೊತೆಗೆ ಒಪ್ಪಿಕ್ಕೊಳುವುದು ಮುಖ್ಯ. ಆಟಿಸಂ ಮಗುವನ್ನು ನಿರಂತರವಾಗಿ ಚಿಕಿತ್ಸಕರ ಬಳಿ ಕರೆದುಕೊಂಡು ಹೋಗುವುದರಿಂದ ಸಾಕಷ್ಟು ಕಲಿಕೆಗೆ ಅನುಕೂಲಕರ ಸಲಹೆ ಸೂಚನೆಗಳು ಸಿಗುತ್ತದೆ , ಮಕ್ಕಳ  ಆಸಕ್ತಿ ಚಟುವಟಿಕೆಗಳನ್ನು ತಿಳಿದುಕೊಂಡು ಪ್ರೋತ್ಸಾಹಿಸಿ.,ಚಟುವಟಿಕೆಯ ಮೂಲಕ ಕಲಿಸಿ. ಕಲಿತ ವಿಷಯಕ್ಕೆ ಪುನರ್ಬಲನವನ್ನು ನೀಡಿ.ಮಗುವನ್ನು
ದುರ್ಬಲಗೊಳಿಸುವ ಯಾವುದೇ  ಚಟುವಟಿಕೆಗಳಾಗಲಿ,ತಿನಿಸಾಗಲಿ ನೀಡದಿರಿ.ಸಾಮಾನ್ಯ ಮಗುವಿನಂತೆ ನೋಡಿ,ದಿನನಿತ್ಯದ ವಿಷಯಗಳನ್ನು ಚರ್ಚಿಸಿ,ಹೇಳಿದ್ದೆಲ್ಲಾ ಅರ್ಥಮಾಡಿಕೊಳ್ಳಬೇಕು ಎಂಬ ಅತೀ ನಿರೀಕ್ಷೆ ಬೇಡ. ಸ್ವತಂತ್ರವಾಗಿ ಕೆಲಸ ಮಾಡಲು ಪ್ರೋತ್ಸಾಹಿಸಿ.ಸಹನೆ ಕಳೆದುಕೊಳ್ಳುಬೇಡಿ, ಯಾವುದೇ ಕಾರಣಕ್ಕೂ ಮಗುವನ್ನು ದಂಡಿಸಬೇಡಿ.ಎಂಬ ಕಿವಿಮಾತನ್ನು ಹೇಳಿದರು.
 ಆಟಿಸಂ ಚಿಕಿತ್ಸೆಯನ್ನು  ಸಾಮಾನ್ಯ ಜನರೂ ಆರ್ಥಿಕವಾಗಿ  ನಿಭಾಯಿಸಲು ಅನುಕೂಲವಾಗುವಂತೆ  ಉಡುಪಿಯಲ್ಲೂ ಒಂದು ಚಿಕಿತ್ಸಾ ಕೇಂದ್ರ ನಿರ್ಮಾಣವಾದರೆ ಉತ್ತಮ ಎಂಬ ಸಲಹೆಯನ್ನು . ಕಾರ್ಯಕ್ರಮದ ಅಧ್ಯಕ್ಷರಾದ ಡಾ ಪಿ ವಿ ಭಂಡಾರಿ ಹೇಳಿದರು.
   ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀಮತಿ ಐಡಾ ಡಿಸೋಜಾ,ಡಾ. ವಿರೂಪಾಕ್ಷ ದೇವರಮನೆ,ಡಾ.ಗೌರಿ ,ಟಿಡ್ಡಿ ಆಂಡ್ರ್ಯೂಸ್ ಉಪಸ್ಥಿತರಿದ್ದರು.   ಕುಮಾರಿ ಸುಚಿತ್ರ ಮತ್ತು ಶ್ರೀಮತಿ ಪೂರ್ಣಿಮಾ  ಕಾರ್ಯಕ್ರಮವನ್ನು ನಿರೂಪಿಸಿದರು. ಶ್ರೀಮತಿ ಸೌಜನ್ಯ ಶೆಟ್ಟಿ ವಂದಿಸಿದರು.