ದಿನಾಂಕ 21/೦9/2025ರಂದು ವಿಶ್ವ ಅಲ್ಜಿಮರ್ಸ್ ದಿನದ ಪ್ರಯುಕ್ತ ಜಾಗೃತಿ ಕಾರ್ಯಕ್ರಮವನ್ನು ಹಿರಿಯ ನಾಗರೀಕರಿಗಾಗಿ ಬ್ರಹ್ಮಾವರದ ರೋಟರಿ ಭವನದಲ್ಲಿ ಆಯೋಜಿಸಲಾಗಿತ್ತು.
ಕಮಲ್ ಎ ಬಾಳಿಗ ಚಾರಿಟೇಬಲ್ ಟ್ರಸ್ಟ್ ಮುಂಬೈ, ಡಾ. ಎ . ವಿ. ಬಾಳಿಗಾ ಸ್ಮಾರಕ ಆಸ್ಪತ್ರೆ, ಉಡುಪಿ, ರೋಟರಿ ಕ್ಲಬ್ ಬ್ರಹ್ಮಾವರ, ಹಿರಿಯ ನಾಗರಿಕ ವೇದಿಕೆ ಬ್ರಹ್ಮಾವರ, ಭಾರತೀಯ ವೈದ್ಯಕೀಯ ಸಂಘ ಉಡುಪಿ ಕರಾವಳಿ ಇವರ ಸಂಯುಕ್ತ ಆಶ್ರಯದಲ್ಲಿ ಈ ಕಾರ್ಯಕ್ರಮವು ಮೂಡಿಬಂದಿತು.
ಬೆಳಿಗ್ಗೆ 10 ಗಂಟೆಗೆ ಉದ್ಘಾಟನಾ ಸಮಾರಂಭದೊಂದಿಗೆ ಕಾರ್ಯಕ್ರಮದ ಆರಂಭವಾಯಿತು. ಸಭೆಯಲ್ಲಿ ಉದ್ಘಾಟಕರಾಗಿ ಶ್ರೀ ಎಂ ಭಾಸ್ಕರ್ ಶೆಟ್ಟಿ , ಅಧ್ಯಕ್ಷರು ಹಿರಿಯ ನಾಗರಿಕ ವೇದಿಕೆ ಬ್ರಹ್ಮಾವರ, ಮುಖ್ಯ ಅತಿಥಿಗಳಾಗಿ ರೊಟೇರಿಯನ್ ಸತೀಶ್ ಶೆಟ್ಟಿ, ಅಧ್ಯಕ್ಷರು ರೋಟರಿ ಕ್ಲಬ್ ಬ್ರಹ್ಮಾವರ, ಡಾ. ಸುರೇಶ್ ಶೆಣೈ, ಅಧ್ಯಕ್ಷರು ಭಾರತೀಯ ವೈದ್ಯಕೀಯ ಸಂಘ ಉಡುಪಿ ಕರಾವಳಿ, ಸಭಾಸದರುಗಳಾಗಿ ಡಾ. ಎ.ವಿ ಬಾಳಿಗಾ ಸ್ಮಾರಕ ಆಸ್ಪತ್ರೆಯ ಮನೋವೈದ್ಯರುಗಳಾದ ಡಾ ವಿರೂಪಾಕ್ಷ ದೇವರಮನೆ, ಡಾ. ದೀಪಕ್ ಮಲ್ಯ, ಡಾ. ಮಾನಸ ಈ .ಆರ್. ರೊಟೇರಿಯನ್ ಬಿ.ಎಮ್. ಭಟ್, ರೋಟೇರಿಯನ್ ಅಶೋಕ್ ಕುಮಾರ್ ಶೆಟ್ಟಿ, ಶ್ರೀ ರಾಜಾರಾಮ್ ಶೆಟ್ಟಿ ಅಧ್ಯಕ್ಷರು. ರೆಡ್ ಕ್ರಾಸ್ ಸಂಸ್ಥೆ ಇವರುಗಳು ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ಆರಂಭದಲ್ಲಿ ರೋಟೆರಿಯನ್ ಕವಿತಾ ಉದಯ್ ಕುಮಾರ್ ಇವರು ಪ್ರಾರ್ಥನೆಯನ್ನು ನೆರವೇರಿಸಿದರು. ತದನಂತರದಲ್ಲಿ ಮನೋವೈದ್ಯರಾದ ಡಾಕ್ಟರ್ ಮಾನಸ್ ಇವರು ಸರ್ವರನ್ನು ಸ್ವಾಗತಿಸಿದರು. ಉದ್ಘಾಟನೆಯನ್ನು ನೆರವೇರಿಸಿ ಉದ್ಘಾಟಕರು ಸಭೆಗೆ ಶುಭಾಶಯವನ್ನು ಕೋರಿದರು. ತದನಂತರದಲ್ಲಿ ಮುಖ್ಯ ಅತಿಥಿಗಳು ಸಭೆಯಲ್ಲಿ ಮಾತನಾಡಿ ದಿನದ ಮಹತ್ವವನ್ನ ತಿಳಿಸಿದರು. ನಂತರ ಎಲ್ಲಾ ಗಣ್ಯವರಿಗೂ ನೆನಪಿನ ಕಾಣಿಕೆಯನ್ನು ಹಿರಿಯ ಮನೋವೈದ್ಯರಾದ ಡಾ. ವಿರುಪಾಕ್ಷ ದೇವರಮನೆ ಇವರು ನೀಡಿದರು. ಡಾ. ವಿರೂಪಾಕ್ಷ ದೇವರಮನೆ ಇವರು ಸಭೆಯನ್ನುದ್ದೇಶಿಸಿ ಮಾತನಾಡಿ ಅಲ್ಜೀಮರ್ ಕಾಯಿಲೆಯ ಕುರಿತಾಗಿ ಕೆಲವು ಪ್ರಮುಖ ಅಂಶಗಳನ್ನು ತಿಳಿಸಿದರು. ರೊಟೇರಿಯನ್ ಉದಯ್ ಕುಮಾರ್ ಶೆಟ್ಟಿ ಅವರು ಸಭೆಗೆ ದಿನದ ಆಯೋಜನೆಯ ಕುರಿತು ತಿಳಿಸಿದರು.
ಕೊನೆಯಲ್ಲಿ ವಂದನಾರ್ಪಣೆಯನ್ನು ಶ್ರೀ ಅಲ್ಪಾನ್ಸು ಡಿಸೋಜಾ ಕಾರ್ಯದರ್ಶಿಗಳು ಹಿರಿಯ ನಾಗರಿಕ ವೇದಿಕೆ ಬ್ರಹ್ಮಾವರ ಇವರು ವಂದನಾರ್ಪಣೆಗೈದರು.
ಸಭಾ ಕಾರ್ಯಕ್ರಮದ ಆನಂತರ ಎರಡು ವಿಶೇಷ ಅವಧಿಗಳ ಮುಖಾಂತರ ಹಿರಿಯ ನಾಗರಿಕರಿಗೆ ಅಲ್ಜೀಮರ್ ಖಾಯಿಲೆಯ ಬಗ್ಗೆ ವೃದ್ಧಾಪ್ಯದಲ್ಲಿ ಬರುವ ಮರೆವಿನ ಸಮಸ್ಯೆಗಳ ಕುರಿತಾಗಿ ವಿಶೇಷವಾಗಿ ಮಾಹಿತಿ ನೀಡಲಾಯಿತು. ಈ ಮಾಹಿತಿ ಕಾರ್ಯಕ್ರಮವನ್ನು ಡಾ. ದೀಪಕ್ ಮಲ್ಯ ಹಾಗೂ ಡಾ. ಮಾನಸ್ ಈ. ಆರ್. ಇವರು ನಡೆಸಿಕೊಟ್ಟರು.








