Select Page

Date: July 27, 2024

 ಡಾ. ಎ. ವಿ. ಬಾಳಿಗಾ ಸ್ಮಾರಕ ಆಸ್ಪತ್ರೆಯ ಕಮಲ್. ಎ. ಬಾಳಿಗಾ ಸಭಾಗಂಣದಲ್ಲಿ ಡಾ. ಎ. ವಿ. ಬಾಳಿಗಾ ಸ್ಮಾರಕ ಆಸ್ಪತ್ರೆ, ಉಡುಪಿ; ಆಟಿಸಂ ಸೊಸೈಟಿ, ಉಡುಪಿ; ದ ಕನ್ಸ್‌ರ್ನ್ನ ಫಾ‌ರ್ ವರ್ಕಿಂಗ್ ಚಿಲ್ಡರ್ನ್, ಕುಂದಾಪುರ ಮತ್ತು ರೋಟರಿ ಕ್ಲಬ್, ಮಣಿಪಾಲ ಇವರ ಸಂಯುಕ್ತ ಆಶ್ರಯದಲ್ಲಿ
ಸಮುದಾಯ ಮಾನಸಿಕ ಆರೋಗ್ಯ ಕುರಿತು ಕಾರ್ಯಾಗಾರ ಮತ್ತು ಆಟಿಸಂ ಮಕ್ಕಳ ಪೋಷಣೆ ಉಪನ್ಯಾಸವನ್ನು ದೀಪ ಬೆಳಗಿಸುವುದರ ಮೂಲಕ ಶ್ರೀ ರವೀಂದ್ರ ಭಂಡಾರ್ಕರ್, ನಿವೃತ್ತ ಬ್ಯಾಂಕ್ ಅಧಿಕಾರಿ, ಮಣಿಪಾಲ ಇವರು ಉದ್ಘಾಟಿಸಿದರು. ಅತಿಥಿಗಳಾಗಿ ರೋ. ಸುಭಾಶ್ ಬಂಗೇರಾ, ಅಧ್ಯಕ್ಷರು, ರೋಟರಿ ಕ್ಲಬ್, ಮಣಿಪಾಲ; ರೋ. ಶ್ರೀಶ ಹೆಗ್ಡೆ ವೊಕೇಷನಲ್ ಸರ್ವಿಸ್ ಅಡಿಷನಲ್ ಡೈರೆಕ್ಟರ್ ರೋಟರಿ ಕ್ಲಬ್, ಮಣಿಪಾಲ ಮತ್ತು ಶ್ರೀ ಶ್ರೀನಿವಾಸ್ ಗಾಣಿಗ, ನಿರ್ದೇಶಕರು, ದ ಕನ್ಸರ್ನ್ಸ್ ಫಾರ್ ವರ್ಕಿಂಗ್ ಚಿಲ್ಡರ್ನ್, ಕುಂದಾಪುರ ಹಾಗೂ ಶ್ರೀಮತಿ ಕೃಪಾ ಎಮ್. ಎಮ್, ಸಹಾಯಕ ನಿರ್ದೇಶಕರು, ದ ಕನ್ಸರ್ನ್ಸ್ ಫಾರ್ ವರ್ಕಿಂಗ್ ಚಿಲ್ಡರ್ನ್, ಕುಂದಾಪುರ ಆಗಮಿಸಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಪಿ. ವಿ. ಭಂಡಾರಿ, ನಿರ್ದೇಶಕರು, ಡಾ. ಎ. ವಿ. ಬಾಳಿಗಾ ಸಮೂಹ ಸಂಸ್ಥೆಗಳು, ಉಡುಪಿ ಇವರು ವಹಿಸಿದ್ದರು. ವೇದಿಕೆಯಲ್ಲಿ ಆಸ್ಪತ್ರೆಯ ಮನೋವೈದ್ಯರಾಗಿರುವ ಡಾ. ವಿರೂಪಾಕ್ಷ ದೇವರಮನೆ, ಡಾ. ದೀಪಕ್ ಮಲ್ಯ, ಡಾ. ಮಾನಸ್. ಇ. ಆರ್ ಉಪಸ್ಥಿತರಿದ್ದರು.
ಬಂದು ಡೇ ಕೇರ್ ಸೆಂಟರ್ ನ ಶಿಬಿರಾರ್ಥಿಗಳು ಕಾರ್ಯಕ್ರಮಕ್ಕೆ ಪ್ರಾರ್ಥಿಸಿದರು. ಶ್ರೀಮತಿ ಪೂರ್ಣಿಮಾ, ವೃತ್ತಿಪರ ಚಿಕಿತ್ಸಕರು ಸರ್ವರನ್ನು ಸ್ವಾಗತಿಸಿದರು. ಶ್ರೀಮತಿ ರೂತ್ ಶೈನಿ, ವಾಕ್ ಶ್ರವಣ ಚಿಕಿತ್ಸಕರು ವಂದಿಸಿದರು. ಶ್ರೀಮತಿ ದೀಪಶ್ರೀ, ಆಪ್ತಸಮಾಲೋಚಕರು ಕಾರ್ಯಕ್ರಮವನ್ನು ನಿರೂಪಿಸಿದರು.
ಸಭಾ ಕಾರ್ಯಕ್ರಮದ ನಂತರ ಮಾಹಿತಿ ಕಾರ್ಯಗಾರ ನಡೆಯಿತು. ನಮ್ಮ ಭೂಮಿ NGO ನ ಸಿಬ್ಬಂದಿ ವರ್ಗದವರಿಗೆ ಆಸ್ಪತ್ರೆಯ ಮನೋವೈದ್ಯರಾಗಿರುವ ಡಾ. ಪಿ. ವಿ. ಭಂಡಾರಿ, ಡಾ. ವಿರೂಪಾಕ್ಷ ದೇವರಮನೆ, ಡಾ. ದೀಪಕ್ ಮಲ್ಯ, ಡಾ. ಮಾನಸ್. ಇ. ಆರ್ ಮತ್ತು ಆಡಳಿತಾಧಿಕಾರಿ ಶ್ರೀಮತಿ ಸೌಜನ್ಯ ಶೆಟ್ಟಿ, ಆಪ್ತಸಮಾಲೋಚಕರಾಗಿರುವ ಶ್ರೀಮತಿ ಪದ್ಮ ರಾಘವೇಂದ್ರ ಇವರು ಮಾನಸಿಕ ಕಾಯಿಲೆಗಳ ಕುರಿತು ಮಾಹಿತಿ ನೀಡಿದರು.
ಆಟಿಸಂ ಮಕ್ಕಳ ಪೋಷಕರಿಗೆ ಶ್ರೀಮತಿ ದಿವ್ಯಶ್ರೀ ಮನಶಾಸ್ತ್ರಜ್ಞರು, ಮೈ ಎಂಪವರ್ ಥೆರಪಿ ಕ್ಲಿನಿಕ್, ಕೆನಡಾ ಇವರು ಪೋಷಣೆಯ ಬಗ್ಗೆ ಮಾಹಿತಿ ನೀಡಿದರು. ನಂತರ ಆಸ್ಪತ್ರೆಯ ಯೋಗ ಚಿಕಿತ್ಸಕರಾದ ಕುಮಾರಿ ಅನ್ವಿತರವರು ಮನಸಿನ ಸಮತೋಲನ ಹಾಗೂ ಒತ್ತಡ ನಿರ್ವಹಣೆಯ ಕುರಿತು ಮಾತನಾಡಿದರು.
ಶ್ರೀ ಶ್ರೀನಿವಾಸ್ ಗಾಣಿಗ, ನಿರ್ದೇಶಕರು, ದ ಕನ್ಸರ್ನ್ಸ್ ಫಾರ್ ವರ್ಕಿಂಗ್ ಚಿಲ್ಡರ್ನ್, ಕುಂದಾಪುರ ಹಾಗೂ ಶ್ರೀಮತಿ ಕೃಪಾ ಎಮ್. ಎಮ್, ಸಹಾಯಕ ನಿರ್ದೇಶಕರು, ವ ಕನ್ಸರ್ನ್ಸ್ ಫಾರ್ ವರ್ಕಿಂಗ್ ಚಿಲ್ಡರ್ನ್ ಕುಂದಾಪುರ ಇವರಿಗೆ ರೋಟರಿ ಕ್ಲಬ್ ಮಣಿಪಾಲ್ ಇದರ ವತಿಯಿಂದ ಸನ್ಮಾನಿಸಲಾಯಿತು.
ರೋಟರಿ ಕ್ಲಬ್ ಮಣಿಪಾಲ್ ಇದರ ವತಿಯಿಂದ ಪೋಷಕರಿಗೆ ಆಟಿಸಂ ಮಕ್ಕಳ ಲಾಲನೆ ಪಾಲನೆ ಕುರಿತಾದ ಪುಸ್ತಕವನ್ನು ವಿತರಿಸಲಾಯಿತು.
ಆಟಿಸಂ ಸೊಸೈಟಿ ಉಡುಪಿ ಮತ್ತು ಯು ಚಾನಲ್ ಉಡುಪಿ ಇದರ ಸಂಯುಕ್ತ ಆಶ್ರಯದಲ್ಲಿ ಸ್ವಲೀನತೆ ಅರಿವಿನ ಹರಿವು ಎಂಬ ಮಾಸಿಕ ಸಂಚಿಕೆಯನ್ನು ಡಾ. ಪಿ. ವಿ. ಭಂಡಾರಿಯವರು ಬಿಡುಗಡೆ ಮಾಡಿದರು.
ಕಾರ್ಯಕ್ರಮದಲ್ಲಿ ಮಾಸ್ಟರ್ ವಯ್ ಅವರ ಚಿತ್ರಗಳನ್ನು ಪ್ರದರ್ಶನಕ್ಕೆ ಮತ್ತು ಮಾರಾಟಕ್ಕೆ ಇಡಲಾಗಿತ್ತು.