‘ಕೋವಿಡ್ ಸಂದರ್ಭ ವೈಜ್ಞಾನಿಕ ಮನೋಭಾವ‘; ಉಪನ್ಯಾಸ, ಪ್ರಾತ್ಯಕ್ಷಿಕೆ
ಡಾ.ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆಯಲ್ಲಿ ಇಂದು ‘ಕೋವಿಡ್ ಸಂದರ್ಭದಲ್ಲಿ ವೈಜ್ಞಾನಿಕ ಮನೋಭಾವ’ ಎಂಬ ಅಪರೂಪದ ಕಾರ್ಯಕ್ರಮ ನಡೆಯಿತು.
ಡಾ.ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆ ನಿರ್ದೇಶಕ ಡಾ. ಪಿವಿ. ಭಂಡಾರಿ ಅಧ್ಯಕ್ಷತೆ ವಹಿಸಿದ್ದರು. ‘ಕೋವಿಡ್ ಸಂದರ್ಭದಲ್ಲಿ ವೈಜ್ಞಾನಿಕ ಮನೋಭಾವ’ ಕುರಿತು ಡಾ. ಶ್ರೀನಿವಾಸ ಕಕ್ಕಿಲ್ಲಾಯ ಅವರು ನರ್ಸಿಂಗ್ ಮತ್ತು ಸಮಾಜ ಕಾರ್ಯ ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡಿದರು.ವಿಚಾರವಾದಿ ಡಾ.ನರೇಂದ್ರ ನಾಯಕ್, ವೈಜ್ಞಾನಿಕ ಮನೋಭಾವ ಎಂದರೇನು?ಕೊರೊನಾ ಯಾವ ರೀತಿ ಹರಡುತ್ತದೆ ಮತ್ತು ಯಾವ ರೀತಿ ಅದನ್ನು ತಡೆಗಟ್ಟಬಹುದು ಎಂಬ ಬಗ್ಗೆ ಪ್ರಾತ್ಯಕ್ಷಿಕೆ ನೀಡಿದರು. ಡಾಕ್ರಿಷ್ಣಮೋಹನ್ ರವರು ಕೋವಿಡ್ ೧೯ ವ್ಯಾಕ್ಸಿನ್ ಕುರಿತು ಮಾಹಿತಿಯನ್ನು ನೀಡಿದರು. ಡಾ. ಪಿ.ವಿ.ಭಂಡಾರಿಯವರು ಕೋವಿಡ್ ಸಂದರ್ಭದಲ್ಲಿನ ಒತ್ತಡ ಮತ್ತು ನಿರ್ವಣೆಯ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.