ರೆಟಿನಾ ಕ್ಲಿಕನ್ ಉದ್ಟಾಟನೆ ಮತ್ತು ಅಭಯ ಪುನರ್ವಸತಿ ಕೇಂದ್ರದ ವಾರ್ಷಿಕೋತ್ಸವ
ದಿನಾಂಕ ೨೬ ೦೪.೨೦೨೨ ರೆಟಿನಾ ಕ್ಲಿನಿಕ್ ನ ಉದ್ಘಾಟನೆ ಹಾಗೂ ಅಭಯ ಪುನರ್ವಸತಿ ಕೇಂದ್ರದ ವಾರ್ಷಿಕೋತ್ಸವ ಸಮಾರಂಭವನ್ನು ಡಾ. ಎ.ವಿ.ಬಾಳಿಗಾರವ ಜನ್ಮದಿನದ ಪ್ರಯುಕ್ತ ಹಮ್ಮಿಕೊಳ್ಳಲಾಯಿತು.


ಕಮಲ್ ಎ ಬಾಳಿಗ ಮೆಡಿಕಲ್ ಸೆಂಟರ್ ನಲ್ಲಿ ರೆಟಿನಾ ಕ್ಲಿನಿಕ್ ನ ಉದ್ಘಾಟನೆಯನ್ನು ಶ್ರೀ. ಕೌಶಲ್ ವೋರ್, ವ್ಯವಸ್ಥಪಾಕ ನಿರ್ದೇಶಕರು, ಮೇಸಲಿ ಇಂಡಿಯಾ ಪ್ಯಾಕೇಜಿಂಗ್ ಪ್ರೆ.ಲಿ.ಉಡುಪಿ ಇವರು ನೆರವೇರಿಸಿದರು. ಈ ಸಂದರ್ಭದಲ್ಲಿ ಡಾ. ಎ.ವಿ.ಬಾಳಿಗಾ ಹಾಗೂ ಕಮಲ್ ಎ. ಬಾಳಿಗಾರವರ ಪ್ರತಿಮೆಗಳಿಗೆ ಶ್ರೀ. ಕೌಶಲ್ ವೋರ್ ಹಾಗೂ ಮಂಜೇಶ್ವರ್ ಸುರೇಶ್ ಪ್ರಭು ನಿವೃತ ತಾಂತ್ರಿಕ ಉಪನಿರ್ದೇಶಕರು, ಮತ್ತು ಸಿ,ಇ,ಓ. ಜಿ.ಸಿ.ಸಿ. ಮಣಿಪಾಲ ಇವರು ಹೂವಿನ ಹಾರವನ್ನು ಹಾಕುವ ಮೂಲಕ ಗೌರವ ಸೂಚಿಸಿದರು. ಡಾ. ಎ.ವಿ.ಬಾಳಿಗಾ ಸಮೂಹ ಸಂಸ್ಥೆಗಳ ಸಮುದಾಯ ಭವನದಲ್ಲಿ ಸಭಾ ಕಾರ್ಯಕ್ರಮವನ್ನು ಮುಂದುವರೆಸಲಾಯಿತು. ಶ್ರೀ. ಕೌಶಲ್ ವೋರ್ ಜ್ಯೋತಿ ಬೆಳಗುವುದರ ಮೂಲಕ ಉದ್ಘಾಟನೆಯನ್ನು ಮಾಡಿ ಶುಭ ಹಾರೈಸಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ. ಬ್ರಹ್ಮಾವರ ತಾಲ್ಲೂಕಿನ ತಹಶಿಲ್ದಾರ ಮತ್ತು ದಂಡಾಧಿಕಾರಿಗಳಾದ ಶ್ರೀ. ರಾಜಶೇಖರ್ ಮೂರ್ತಿಯವರು ಡಾ. ಎ.ವಿ.ಬಾಳಿಗಾರವರು ದೇಶಕ್ಕೆ ನೀಡಿದ ಕೂಡುಗೆಯ ಕುರಿತು ಮಾತನಾಡಿದರು. ಈ ಸಂದರ್ಭದಲ್ಲಿ ನಮ್ಮ ಸಂಸ್ಥೆಯ ವತಿಯಿಂದ ನಡೆಸುವ ಹಲವು ಸಮಾಜಮುಖಿ ಕಾರ್ಯಕ್ರಮಗಳಿಗೆ ಧನ ಸಹಾಯವನ್ನು ಮಾಡಿರುವ ಶ್ರೀಮತಿ ಅಮಿತಾ ಪೈ, ಸ್ಥಾಪಕರು, ಒನ್ ಗುಡ್ ಸ್ಟೆಪ್, ಬೆಂಗಳೂರು, ಶ್ರೀ. ರಾಮ್ ಕೆದಿಲಾಯ, ಸಿ.ಇ.ಓ. ಮತ್ತು ಸ್ಥಾಪಕರು, ಟೀಮೈನಸ್, ಕ್ಯಾಲೀಪೂರ್ನಿಯಾ ಯು.ಎಸ್.ಎ. ಶ್ರೀ. ಮಂಜೇಶ್ವರ್ ಸುರೇಶ್ ಪ್ರಭು ಇವರನ್ನು ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಶ್ರೀ. ರಾಮ್ ಕೆದಿಲಾಯ , ಶ್ರೀ. ವೆಂಕಟೇಶ್ ಕೆದಿಲಾಯ, ಶ್ರೀಮತಿ. ಅಮಿತಾ ಪೈ, ಡಾ. ಲಾವಣ್ಯ ಜಿಲ್ ರಾವ್ ಉಪಸ್ಥಿತರಿದ್ದರು, ಡಾ. ಎ.ವಿ.ಬಾಳಿಗಾ ಚಾರೀಟಿಸ್ ನ ವಿಶ್ವಸ್ಥರಾದ ಡಾ. ಆರ್.ವಿ.ಬಾಳಿಗಾ ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು, ಸಂಸ್ಥೆಯ ನಿರ್ದೇಶಕರಾದ, ಡಾ. ಪಿ.ವಿ.ಭಂಡಾರಿಯವರು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನು ಹೇಳಿದರು, ಸಂಸ್ಥೆಯ ಆಡಳಿತಾಧಿಕಾರಿಣಿಯಾದ ಶ್ರೀಮತಿ ಸೌಜನ್ಯ ಶೆಟ್ಟಿ ಯವರು ಧನ್ಯವಾದ ಸಮರ್ಪಣೆಯನ್ನು ನೆರವೇರಿಸಿಕೊಟ್ಟರು. ಕಾರ್ಯಕ್ರಮವನ್ನು ಶ್ರೀಮತಿ ಪದ್ಮ ರಾಘವೇಂದ್ರ ಹಾಗೂ ಶ್ರೀಮತಿ ಅಕ್ಷಯಾ ಪ್ರಕಾಶ್ ನಿರೂಪಿಸಿದರು