ದಿನಾಂಕ 09-02-2025 ರಂದು ಕಮಲ್. ಎ. ಬಾಳಿಗಾ ಚಾರಿಟೇಬಲ್ ಟ್ರಸ್ಟ್, ಮುಂಬೈ; ಡಾ. ಎ. ವಿ. ಬಾಳಿಗಾ ಸ್ಮಾರಕ ಆಸ್ಪತ್ರೆ, ದೊಡ್ಡನಗುಡ್ಡೆ, ಉಡುಪಿ; ರೋಟರಿ ಕ್ಲಬ್ ಮಣಿಪಾಲ; ಭಾರತೀಯ ವೈದ್ಯಕೀಯ ಮಂಡಳಿ ಉಡುಪಿ-ಕರಾವಳಿ; ಒನ್ ಗುಡ್ ಸ್ಟೆಪ್ ಬೆಂಗಳೂರು ಹಾಗು ಯಕ್ಷಗಾನ ಕಲಾರಂಗ (ರಿ) ಉಡುಪಿ ಇವರ ಜಂಟಿ ಆಯೋಜನೆಯೊಂದಿಗೆ ಮದ್ಯ ವ್ಯಸನಿ ಪಾಲಕರ ಮಕ್ಕಳ ಜಾಗೃತಿ ಸಪ್ತಾಹ ಹಾಗು ನವಜೀವನ ಲೇ ಕೌನ್ಸಿಲಿಂಗ್ ತರಬೇತಿ ಕಾರ್ಯಾಗಾರದ 5 ನೇ ಬ್ಯಾಚ್ ನ ಉದ್ಘಾಟನಾ ಕಾರ್ಯಕ್ರಮವು ಬೆಳಿಗ್ಗೆ ಡಾ. ಎ. ವಿ. ಬಾಳಿಗಾ ಸ್ಮಾರಕ ಆಸ್ಪತ್ರೆಯ ಕಮಲ್. ಎ. ಬಾಳಿಗಾ ಸಭಾಂಗಣದಲ್ಲಿ ನೆರವೇರಿತು.
ಉದ್ಘಾಟಕರಾಗಿ ಡಾ. ರಾಜಲಕ್ಷ್ಮಿ, ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರು, ಅಧ್ಯಕ್ಷರಾಗಿ ಡಾ. ಪಿ. ವಿ. ಭಂಡಾರಿ, ನಿರ್ದೇಶಕರು, ಡಾ. ಎ. ವಿ. ಬಾಳಿಗಾ ಸಮೂಹ ಸಂಸ್ಥೆಗಳು, ಅತಿಥಿಗಳಾಗಿ ಡಾ. ಸುರೇಶ್ ಶೆಣೈ, ಅಧ್ಯಕ್ಷರು, ಭಾರತೀಯ ವೈದ್ಯಕೀಯ ಸಂಘ, ಉಡುಪಿ-ಕರಾವಳಿ, ರೊಟೇರಿಯನ್ ಶ್ರೀಮತಿ ಶಶಿಕಲಾ ರಾಜವರ್ಮ, ಉಪಾಧ್ಯಕ್ಷರು ರೋಟರಿ ಕ್ಲಬ್ ಮಣಿಪಾಲ, ಶ್ರೀಮತಿ ಅಮಿತಾ ಪೈ, ಸಂಸ್ಥಾಪಕರು ಒನ್ ಗುಡ್ ಸ್ಟೆಪ್ ಬೆಂಗಳೂರು, ಡಾ. ವಿರೂಪಾಕ್ಷ ದೇವರಮನೆ, ಮನೋವೈದ್ಯರು , ಡಾ. ಎ. ವಿ. ಬಾಳಿಗಾ ಸ್ಮಾರಕ ಆಸ್ಪತ್ರೆ, ಡಾ. ದೀಪಿಕಾ, ಭೌತಚಿಕಿತ್ಸಕರು (Physiotherapist) COA, ಶ್ರೀಮತಿ ಸೌಜನ್ಯ ಶೆಟ್ಟಿ, ಆಡಳಿತಾಧಿಕಾರಿಗಳು, ಡಾ. ಎ. ವಿ. ಬಾಳಿಗಾ ಸ್ಮಾರಕ ಆಸ್ಪತ್ರೆ, ಶ್ರೀಮತಿ ಫರೀದಾ, ಕಾರ್ಯದರ್ಶಿಗಳು, ರೋಟರಿ ಮಣಿಪಾಲ ಇವರು ಉಪಸ್ಥಿತರಿದ್ದರು.
ಸಮಾರಂಭದ ಆರಂಭ ಕು. ಸಾರಂಗಿಯವರ ಆಶಯ ಗೀತೆಯೊಂದಿಗೆ ಪ್ರಾರಂಭಗೊಂಡಿತು. ನಂತರ ಆಸ್ಪತ್ರೆಯ ಆಡಳಿತಾಧಿಕಾರಿಗಳಾದ ಶ್ರೀಮತಿ ಸೌಜನ್ಯ ಶೆಟ್ಟಿ ಇವರು ಮುನ್ನುಡಿಯೊಂದಿಗೆ ಸರ್ವರನ್ನೂ ಸ್ವಾಗತಿಸಿದರು. ಉದ್ಘಾಟಕರಾದ ಡಾ. ರಾಜಲಕ್ಷ್ಮಿಯವರು ಸರ್ವ ಸಭಾಸದರೊಂದಿಗೆ ಸಭೆಯನ್ನು ವಿದ್ಯುಕ್ತವಾಗಿ ಉದ್ಘಾಟಿಸಿ, ಕಾರ್ಯಕ್ರಮಕ್ಕೆ ಶುಭ ಆಶಯವನ್ನು ನುಡಿದರು. ನಂತರ ಎಲ್ಲಾ ಅತಿಥಿಗಳೂ ಕಾರ್ಯಕ್ರಮದ ಕುರಿತಾಗಿ ಮಾತನಾಡಿ ಅದರ ಆಶಯವನ್ನು ತಿಳಿಸಿದರು. ಸಭೆಗೆ ವಿಶೇಷ ಆಹ್ವಾನಿತರಾಗಿದ್ದ ಡಾ. ದೀಪಿಕಾ ಅವರು ಮದ್ಯ ವ್ಯಸನಿ ಪಾಲಕರಿಂದ ಮಕ್ಕಳ ಮೇಲಾಗುವ ಪರಿಣಾಮಗಳನ್ನು ತಮ್ಮ ಜೀವನ ಚಿತ್ರಣದೊಂದಿಗೆ ವಿವರಿಸಿದರು. ನೆನೆಪಿನ ಕಾಣಿಕೆ ವಿತರಿಸಿ ಅಧ್ಯಕ್ಷೀಯ ನುಡಿಗಳನ್ನಾಡಿದ ಡಾ. ಪಿ. ವಿ. ಭಂಡಾರಿ ಅವರು ಇಂದಿನ ಎರಡೂ ಕಾರ್ಯಕ್ರಮಗಳ ಮಹತ್ವವನ್ನು ವಿವರಿಸಿದರು.
ಕೊನೆಯಲ್ಲಿ ಶ್ರೀಮತಿ ದೀಪಶ್ರೀ, ಆಪ್ತಸಮಾಲೋಚಕರು ಇವರು ವಂದನಾರ್ಪಣೆಗೈದರು. ಶ್ರೀ ವಿಶ್ವೇಶ್ವರ ಹೆಗಡೆ ಇವರು ಕಾರ್ಯಕ್ರಮ ನಿರೂಪಣೆ ಮಾಡಿದರು.