ದಿನಾಂಕ 21-06-2024 ರಂದು ಡಾ. ಎ. ವಿ. ಬಾಳಿಗ ಸ್ಮಾರಕ ಆಸ್ಪತ್ರೆ ಉಡುಪಿಯ ಆಯುರ್ವೇದ ಮತ್ತು ಯೋಗ ವಿಭಾಗದ ಆಶ್ರಯದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯು ಡಾ. ಎ. ವಿ. ಬಾಳಿಗಾ ಸ್ಮಾರಕ ಆಸ್ಪತ್ರೆಯ ಕಮಲ್. ಎ. ಬಾಳಿಗ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಡಾ. ಮೊಹಮ್ಮದ್ ರಫೀಕ್, ನಿರ್ದೇಶಕರು, ಬೀಚ್ ಹೀಲಿಂಗ್ ಹೋಮ್, ಹೂಡೆ, ಉಡುಪಿ ಇವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಎ. ವಿ. ಬಾಳಿಗಾ ಸಮೂಹ ಸಂಸ್ಥೆಗಳ ವೈದ್ಯಕೀಯ ನಿರ್ದೇಶಕರಾದ ಡಾ. ಪಿ. ವಿ. ಭಂಡಾರಿಯವರು ವಹಿಸಿದ್ದರು. ವೇದಿಕೆಯಲ್ಲಿ ಆಸ್ಪತ್ರೆಯ ಮನೋವೈದ್ಯರಾದ ಡಾ. ವಿರೂಪಾಕ್ಷ ದೇವರಮನೆ, ಡಾ. ದೀಪಕ್ ಮಲ್ಯ, ಡಾ. ಮಾನಸ್ ಇ. ಆರ್ ಹಾಗೂ ಡಾ. ಸುನೀಲ್ ಕುಮಾರ್ ಜಿ ಆಯುರ್ವೇದ ವೈಧ್ಯಾದಿಕಾರಿಗಳು ಮತ್ತು ಆಸ್ಪತ್ರೆಯ ಆಡಳಿತಾಧಿಕಾರಿ ಶ್ರೀಮತಿ ಸೌಜನ್ಯ ಶೆಟ್ಟಿ ಇವರು ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೆ ಅಭಯ ಪುನರ್ವಸತಿ ಕೇಂದ್ರದ ನಿವಾಸಿಗರು ಪ್ರಾರ್ಥಿಸಿದರು. ಆಸ್ಪತ್ರೆಯ ಆಯುರ್ವೇದ ಮನೋವೈದ್ಯರು ಡಾ. ಕಾವ್ಯ ಟಿ ಸರ್ವರನ್ನು ಸ್ವಾಗತಿಸಿದರು. ಶ್ರೀಮತಿ ದೀಪಶ್ರೀ ನಿರೂಪಿಸಿದರು ಮತ್ತು ಯೋಗ ಚಿಕಿತ್ಸಕರಾದ ಕುಮಾರಿ ಅನ್ವಿತಾ ಭಟ್ ವಂದಿಸಿದರು.
ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತ ಆಯೋಜಿಸಿದ್ದ ಯೋಗಾಸನ ಸ್ಪರ್ಧೆ ಮತ್ತು ಭಾಷಣ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನವನ್ನು ವಿತರಿಸಲಾಯಿತು.
ಸಭಾ ಕಾರ್ಯಕ್ರಮದ ನಂತರ ಅಭಯ ಪುನರ್ವಸತಿ ಕೇಂದ್ರದ ನಿವಾಸಿಗರು ಹಾಗೂ ಬಂಧು ಡೇ ಕೇರ್ ಸೆಂಟರ್ ನ ನಿವಾಸಿಗರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.