Select Page

Date: June 21, 2022

ವಿಶ್ವ ಯೋಗ ದಿನ 21-06-2022 ಇದರ ಅಂಗವಾಗಿ ನಮ್ಮ ಸಂಸ್ಥೆಯ ವತಿಯಿಂದ ಆಸನ ಫೋಟೋ ಸ್ಪರ್ಧೆಯನ್ನು ಹಿರಿಯ ಮತ್ತು ಕಿರಿಯರ ವಿಭಾಗದಲ್ಲಿ ಆಯೋಜಿಸಲಾಗಿತ್ತು.‌ ಸುಮಾರು 50ಕ್ಕಿಂತ ಹೆಚ್ಚು ಸ್ಪರ್ಧಿಗಳು ಹಾಗೂ 100 ಕ್ಕೂ ಹೆಚ್ಚು ಫೋಟೋಗಳನ್ನು ಸ್ಪರ್ದಿಗಳು ಕಳುಹಿಸಿದ್ದರು. ತಜ್ಞರ ಸಲಹೆಯಮೆರೆಗೆ ಸೂಕ್ತ ಬಹುಮಾನವನ್ನು ವಿತರಿಸಲಾಯಿತು. ಯೋಗ ದಿನಾಚರಣೆಯ ಪ್ರಯುಕ್ತವಾಗಿ ಡಾ. ಎ. ವಿ. ಬಾಳಿಗಾ ಸಂಸ್ಥೆಯ ಅಂಗ ಸಂಸ್ಥೆಯಾದ ಅಭಯ ಪುನರ್ವಸತಿ ಕೇಂದ್ರ ಹಾಗೂ ಆಶ್ರಯ ಹಿರಿಯ ನಾಗರಿಕರ ಫಲನುಭವಿಗಳ ಸಮ್ಮುಖದಲ್ಲಿ ಕಾರ್ಯವನ್ನು ಆಯೋಜಿಸಲಾಗಿತ್ತು. ಮುಖ್ಯ ಅತಿಥಿಗಳಾಗಿ ಮನೋವೈದ್ಯರಾದ ಡಾ‌ ಹರಿದಾಸ್, ಇಂದ್ರಾಳಿ ಜಯಕರ ಶೆಟ್ಟಿ ಸಹಕಾರಿ ಯುನಿಯನ್ ಅಧ್ಯಕ್ಷರು ಹಾಗೂ ಡಾ. ಎ. ವಿ. ಬಾಳಿಗಾ ಸಂಸ್ಥೆಯ ನಿರ್ದೇಶಕರಾದ ಡಾ. ಪಿ. ವಿ. ಭಂಡಾರಿ ಇವರು ಉಪಸ್ಥಿತರಿದ್ದರು. ಹಾಗೆಯೇ ಸಂಸ್ಥೆಯ ಆಡಳಿತಾಧಿಕಾರಿಗಳಾದ ಶ್ರೀಮತಿ ಸೌಜನ್ಯ ಶೆಟ್ಟಿ ಹಾಗೂ ಮನೋವೈದ್ಯರುಗಳಾದ ಡಾ. ಮಾನಸ್ ಇ. ಆರ್., ಡಾ. ಪ್ರಣವ್ ಜೈನ್ ಮತ್ತು ಅಭಯ ಪುನರ್ವಸತಿ ಕೇಂದ್ರದ ಮ್ಯಾನೇಜರ್ ಶ್ರಿ ನಾಗರಾಜ್ ಟಿ.ಪಿ. ಇವರುಗಳು ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಕಾರ್ಯಕ್ರಮ ನಿರೂಪಣೆಯನ್ನು ಕುಮಾರಿ ಭಾಗ್ಯ ನಿರೂಪಿಸಿದರು ಮತ್ತು ಶ್ರೀಮತಿ ಪ್ರೇಮ, ಅನುಷ ಜಯಂತಿ ಪ್ರಾರ್ಥಿಸಿದರು. ನಮ್ಮ ಸಂಸ್ಥೆಯ ಫಲಾನುಭಾವಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು. ಯೋಗ ತಜ್ಞರಾದ ಕು. ಅನ್ವಿತ ಧನ್ಯವಾದವನ್ನು ಸಮರ್ಪಿಸಿದರು.