Select Page

Date: June 21, 2025

ದಿನಾಂಕ 21/6/2025 ಶನಿವಾರ ದಂದು ಡಾ ಎ ವಿ ಬಾಳಿಗ ಸ್ಮಾರಕ ಆಸ್ಪತ್ರೆ ಉಡುಪಿ ಆಯುರ್ವೇದ ಮತ್ತು ಯೋಗ ಚಿಕಿತ್ಸಾ ವಿಭಾಗ ಇವರ ಆಶ್ರಯದಲ್ಲಿ ಯೋಗ ದಿನಾಚರಣೆಯನ್ನು ಡಾ ಎ ವಿ ಬಾಳಿಗ ಸ್ಮಾರಕ ಆಸ್ಪತ್ರೆಯ ಕಮಲ್ ಎ ಬಾಳಿಗ ಸಭಾಂಗಣ ದಲ್ಲಿ ಆಚರಿಸಲಾಯಿತು.ಈ ವರ್ಷದ ಧ್ಯೇಯ ವಾಕ್ಯ “ಏಕಭೂಮಿ ಏಕ ಆರೋಗ್ಯ” ಕಾರ್ಯಕ್ರಮವನ್ನು ಡಾ ಚರಿಷ್ಮಾ ಶೆಟ್ಟಿ B A M S,MSc yoga ಇವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಒತ್ತಡ ನಿರ್ವಹಣೆಯಲ್ಲಿ ಮತ್ತು ಆರೋಗ್ಯ ಶೈಲಿ ಜೀವನದಲ್ಲಿ ಯೋಗದ ಮಹತ್ವವನ್ನು ತಿಳಿಸಿದರು,ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಪಿ ವಿ ಭಂಡಾರಿ ,ವೈದ್ಯಕೀಯ ನಿರ್ದೇಶಕರು ಡಾ ಎ ವಿ ಬಾಳಿಗ ಸಮೂಹ ಸಂಸ್ಥೆಗಳು ಉಡುಪಿ ಇವರು ವಹಿಸಿದ್ದರು.ವೇದಿಕೆಯಲ್ಲಿ ಮನೋವೈದ್ಯರಾದ ಡಾ ವಿರುಪಾಕ್ಷ ದೇವರಮನೆ,ಡಾ ದೀಪಕ್ ಮಲ್ಯ,ಡಾ ಮಾನಸ್ ಈ ಆರ್, ಮತ್ತು ಆಸ್ಪತ್ರೆಯ ವೈದ್ಯಾಧಿಕಾರಿ ಡಾ ಶ್ರೀಕರ್ ಮಲ್ಯ,ಮತ್ತು ಆಯುರ್ವೇದ ವೈದ್ಯಾಧಿಕಾರಿಯಾದ ಡಾ ಸುನಿಲ್ ಕುಮಾರ್ ಜಿ ಹಾಗೂ ಆಸ್ಪತ್ರೆಯ ಆಡಳಿತಾಧಿಕಾರಿಯಾದ ಶ್ರೀಮತಿ ಸೌಜನ್ಯ ಶೆಟ್ಟಿ ಹಾಗೂ ಆಸ್ಪತ್ರೆಯ ಯೋಗ ಚಿಕಿತ್ಸ ಕರಾದ ಶ್ರೀಮತಿ ಇಲ ಶೆಟ್ಟಿ ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ಆಸ್ಪತ್ರೆಯ ಆಡಳಿತಾಧಿಕಾರಿಯಾದ ಶ್ರೀಮತಿ ಸೌಜನ್ಯ ಶೆಟ್ಟಿ ಉಪಸ್ಥಿತರಿದ್ದರು,ಕಾರ್ಯಕ್ರಮಕ್ಕೆ ಬಂಧು ಹಗಲು ಆರೈಕೆ ಕೇಂದ್ರದ ನಿವಾಸಿಯಾದ ಕುಮಾರಿ ಶಶಿರೇಖಾ ಇವರು ಪ್ರಾರ್ಥಿಸಿದರು,ಬಂಧು ಹಗಲು ಆರೈಕೆ ಕೇಂದ್ರದ ನಿವಾಸಿಯಾದ ಅಮೃತ್ ಕುಮಾರ್ ಸ್ವಾಗತಿಸಿ,ಅಭಯ ಪುನರ್ವಸತಿ ಕೇಂದ್ರದ ನಿವಾಸಿಯಾದ ಶ್ರೀಮತಿ ನಾಗವೇಣಿ ಇವರು ವಂದಿಸಿದರು,ಆಪ್ತಸಮಾಲೋಚಕರಾದ ಶ್ರೀಮತಿ ದೀಪಶ್ರೀ ಕಾರ್ಯಕ್ರಮವನ್ನು ನಿರೂಪಿಸಿದರು,
ಕಾರ್ಯಕ್ರಮದ ಪ್ರಯೋಜನವನ್ನು ನರ್ಸಿಂಗ್, ಮನಶಾಸ್ತ್ರಜ್ಞ ವಿದ್ಯಾರ್ಥಿಗಳು ಪಡೆದರು.

ಸಭಾ ಕಾರ್ಯಕ್ರಮದ ನಂತರ ಡಾ ಎ ವಿ ಬಾಳಿಗ ಸ್ಮಾರಕ ಆಸ್ಪತ್ರೆ ಉಡುಪಿಯ ಬಂಧು ಹಗಲು ಆರೈಕೆ ಕೇಂದ್ರ ಮತ್ತು ಅಭಯ ಪುನರ್ವಸತಿ ಕೇಂದ್ರದ ನಿವಾಸಿಗರಿಂದ ಯೋಗಾಸನಗಳು,ಯೋಗ ಗೀತೆ,ಯೋಗ ನೃತ್ಯ ಒಳಗೊಂಡ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ತದ ನಂತರ ಆಸ್ಪತ್ರೆಯ ಯೋಗ ಚಿಕಿತ್ಸಾಕರಾದ ಶ್ರೀಮತಿ ಇಲ ಶೆಟ್ಟಿ ಇವರಿಂದ ನರ್ಸಿಂಗ್ ಹಾಗೂ ಮನಶಾಸ್ತ್ರಜ್ಞ ವಿದ್ಯಾರ್ಥಿಗಳಿಗೆ ಯೋಗಾಸನ ನಡೆಸಲಾಯಿತು