Select Page

Date: July 2, 2022

ಜಿಲ್ಲಾ ಪಂಚಾಯತ್ ಉಡುಪಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಉಡುಪಿ, ಡಾ ಎ. ವಿ ಬಾಳಿಗಾ ಸ್ಮಾರಕ ಆಸ್ಪತ್ರೆ ಉಡುಪಿ, ಕಮಲ್ ಬಾಳಿಗಾ ಚಾರಿಟೇಬಲ್ ಟ್ರಸ್ಟ್ ಮುಂಬೈ ಇವರ ಸಂಯುಕ್ತ ಆಶ್ರಯದಲ್ಲಿ ಅಂತರಾಷ್ಟ್ರೀಯ ಮಾದಕ ವಸ್ತು ವಿರೋಧಿ ದಿನಾಚರಣೆ ಹಾರಾಡಿಯ ಸಮುದಾಯ ಭವನದಲ್ಲಿ ನಡೆಯಿತು. ವಿಷಯ:-ಮಾದಕ ವಸ್ತುಗಳಿಂದಾಗುವ ಆರೋಗ್ಯ ಮತ್ತು ಮಾನವೀಯ ಬಿಕ್ಕಟ್ಟುಗಳ ಸವಾಲುಗಳನ್ನು ಪರಿಹರಿಸುವುದು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ.ನಾಗಭೂಷಣ ಉಡುಪ ಎಚ್  ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಡಾ.ಚಿದಾನಂದ ಸಂಜು ಎಸ್. ವಿ  ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮಾಧಿಕಾರಿಗಳು.
ಡಾ ಮನು ಆನಂದ್ ಮನೋವೈದ್ಯರು- ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ. ಡಾ. ಮಾನಸ್ ಇ ಆರ್ ಮನೋವೈದ್ಯರು ಡಾ.ಎ. ವಿ ಬಾಳಿಗಾ ಸ್ಮಾರಕ ಆಸ್ಪತ್ರೆ ದೊಡ್ಡನಗುಡ್ಡೆ ಉಡುಪಿ. ಡಾ.ಪ್ರಣವ್ ಜೈನ್ ವೈದ್ಯರು ಡಾ ಎ. ವಿ ಬಾಳಿಗಾ ಸ್ಮಾರಕ ಆಸ್ಪತ್ರೆ ದೊಡ್ಡನಗುಡ್ಡೆ ಉಡುಪಿ.  ಇವರು  ಭಾಗವಹಿಸಿದರು ಡಾ.  ಪಿ.ವಿ ಭಂಡಾರಿ ಮನೋವೈದ್ಯರು ಹಾಗೂ ವೈದ್ಯಕೀಯ ನಿರ್ದೇಶಕರು ಡಾ ಎ.ವಿ ಬಾಳಿಗ ಸಮೂಹ ಸಂಸ್ಥೆ ದೊಡ್ಡನಗುಡ್ಡೆ ,ಉಡುಪಿ ಇವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು.
ಮಾಹಿತಿ ಕಾರ್ಯಗಾರ
ತಂಬಾಕು ಸೇವನೆ – ಕಾರಣಗಳು, ಪರಿಣಾಮಗಳು ಮತ್ತು ಚಿಕಿತ್ಸೆ ಈ ವಿಷಯದ ಕುರಿತು ಡಾ.ಪ್ರಣವ್ ಜೈನ್ ಮಾತನಾಡಿದರು.
ಡಾ ಮನುಆನಂದ್ ಇವರು ಮಾದಕ ವ್ಯಸನ ಮತ್ತು ಕಾನೂನು ಕುರಿತು ಮಾತನಾಡಿದರು.
ಮಾದಕ ವ್ಯಸನಕ್ಕೆ – ಕಾರಣಗಳು, ಪರಿಣಾಮಗಳು ಮತ್ತು ಚಿಕಿತ್ಸೆ ಈ ವಿಷಯದ ಬಗ್ಗೆ ಡಾ. ಮಾನಸ್ ಇ ಆರ್ ಮಾತನಾಡಿದರು.
ಧನ್ವಂತರಿ ನರ್ಸಿಂಗ್ ಕಾಲೇಜ್ ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಂಡರು