ದಿನಾಂಕ 29/6/2024ರಂದು ಬೆಳಿಗ್ಗೆ ಡಾ. ಎ. ವಿ. ಬಾಳಿಗ ಸ್ಮಾರಕ ಆಸ್ಪತ್ರೆ ಉಡುಪಿಯ ಕಮಲ್ ಎ. ಬಾಳಿಗ ಸಭಾಂಗಣ ದಲ್ಲಿ ಡಾ. ಎ. ವಿ. ಬಾಳಿಗ ಸ್ಮಾರಕ ಆಸ್ಪತ್ರೆ ಉಡುಪಿ ಮತ್ತು ಆಟಿಸಂ ಸೊಸೈಟಿ ಉಡುಪಿ ಇದರ ಜಂಟಿ ಆಶ್ರಯದಲ್ಲಿ ಸಂವೇದ ಮೊದಲ ಮಾಸಿಕ ಶಿಬಿರವನ್ನು ಶ್ರೀಮತಿ ಅಮಿತಾ ಪೈ ಅಧ್ಯಕ್ಷರು ಆಟಿಸಂ ಸೊಸೈಟಿ ಉಡುಪಿ ಮತ್ತು ಸಂಸ್ಥಾಪಕರು ಒನ್ ಗುಡ್ ಸ್ಟೆಪ್ ಇವರು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ವೇದಿಕೆಯಲ್ಲಿ ಆಸ್ಪತ್ರೆಯ ಮನೋವೈದ್ಯರಾದ ಡಾ ವಿರೂಪಾಕ್ಷ ದೇವರಮನೆ ಮತ್ತು ಆಸ್ಪತ್ರೆಯ ಆಡಳಿತಾಧಿಕಾರಿಗಳಾದ ಶ್ರೀಮತಿ ಸೌಜನ್ಯ ಶೆಟ್ಟಿ ಹಾಗೂ ಆಟಿಸಂ ಸೊಸೈಟಿ ಉಡುಪಿಯ ಕೊರ್ಡಿನೇಟರ್ ಆಗಿರುವ ಶ್ರೀಯುತ ಕಿರ್ತೇಶ್ ಮತ್ತು ಮಾಹಿತಿ ಕಾರ್ಯಗಾರದ ಸಂಪನ್ಮೂಲ ವ್ಯಕ್ತಿಯಾಗಿರುವ ಶ್ರೀಯುತ ನಾಗರಾಜ್ ಮೂರ್ತಿ ಮನಶಾಸ್ತ್ರಜ್ಞರು ಡಾ. ಎ. ವಿ. ಬಾಳಿಗ ಸ್ಮಾರಕ ಆಸ್ಪತ್ರೆ ಉಡುಪಿ ಇವರು ಉಪಸ್ಥಿತರಿದ್ದರು, ಕಾರ್ಯಕ್ರಮಕ್ಕೆ ಶ್ರೀಮತಿ ಗಾಯತ್ರಿ ಭಟ್ ಇವರು ಪ್ರಾರ್ಥಿಸಿದರು ಹಾಗೂ ಕಾರ್ಯಕ್ರಮವನ್ನು ನಿರೂಪಿಸಿದರು, ಶ್ರೀಯುತ ವಿಠ್ಠಲ್ ಭಕ್ತ ಇವರು ಸರ್ವರನ್ನು ಸ್ವಾಗತಿಸಿದರು, ಮತ್ತು ಶ್ರೀಯುತ ಆಯುಬ್ ಇವರು ವಂದಿಸಿದರು, ಸಭಾ ಕಾರ್ಯಕ್ರಮದ ನಂತರ ಮಾಹಿತಿ ಕಾರ್ಯಗಾರ ನಡೆಯಿತು, ಸಂಪನ್ಮೂಲ ವ್ಯಕ್ತಿಯಾದ ಶ್ರೀಯುತ ನಾಗರಾಜ್ ಮೂರ್ತಿ ಇವರು ಮಾಹಿತಿಯನ್ನು ನೀಡಿದರು, ತದನಂತರ ಯೋಗ ಚಿಕಿತ್ಸಕರಾದ ಕು. ಅನ್ವಿತಾ ಭಟ್ ಇವರಿಂದ ಯೋಗ ತರಗತಿ ನಡೆಯಿತು. ಮಾಹಿತಿ ಕಾರ್ಯಗಾರದ ನಂತರ ಪೋಷಕರಿಗೆ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನವನ್ನು ವಿತರಿಸಲಾಯಿತು. 30ಕ್ಕಿಂತ ಹೆಚ್ಚಿನ ಪೋಷಕರು ಕಾರ್ಯಕ್ರಮದ ಪ್ರಯೋಜನವನ್ನು ಪಡೆದರು.
