ಮಾದಕ ದ್ರವ್ಯ ವಿರೋಧಿ ಅಭಿಯಾನವನ್ನು ಪ್ರಥಮ ದರ್ಜೆ ಕಾಲೇಜುಗಳಿಗೆ ತೆಗೆದುಕೊಂಡು ಹೋಗುವ ನಿಟ್ಟಿನಲ್ಲಿ ಪ್ರಥಮ ಹೆಜ್ಜೆ . ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನಲ್ಲಿ ತಂಬಾಕು ಮದ್ಯ ಮಾದಕ ದ್ರವ್ಯ ಇವುಗಳ ಬಗ್ಗೆ ಒಂದು ಗಂಟೆಗಳ ಕಾಲ ಡಾ.ಪಿ.ವಿ.ಭಂಡಾರಿ ಮಾತನಾಡಿದರು .ಜಿಲ್ಲಾಧಿಕಾರಿಯವರ ಆದೇಶದಂತೆ ಉಡುಪಿ ಜಿಲ್ಲೆಯ ಎಲ್ಲ ಕಾಲೇಜುಗಳಿಗೆ ಪತ್ರ ಹಾಕಿದ್ದೇವೆ .ಅದರಂತೆ ಮೊದಲ response ಬಂದದ್ದು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನಿಂದ.
ಮದ್ಯ ಮಾದಕ ದ್ರವ್ಯಗಳ ವಿರೋಧದಲ್ಲಿ ಪ್ರಥಮ ಹೆಜ್ಜೆ ಎಂದರೆ ನಮ್ಮ ಮಕ್ಕಳಿಗೆ ಅವುಗಳಿಂದಾಗುವ ದುಷ್ಪರಿಣಾಮಗಳ ಬಗ್ಗೆ ಸರಿಯಾದ ಮಾಹಿತಿ ನೀಡಬೇಕು. .ಕಾಲೇಜಿನವರು ಕೂಡ ಇಂತಹ ಪದಾರ್ಥಗಳು ಸುಲಭದಲ್ಲಿ ಸಿಗದ ಹಾಗೆ ಕ್ರಮ ವಹಿಸಬೇಕು ..ಗಾಂಜಾದ ಬಗ್ಗೆಯಂತೂ ಬಹಳಷ್ಟು ಅಪನಂಬಿಕೆಗಳು ಜನಮಾನಸದಲ್ಲಿ ಅದರಲ್ಲಿಯೂ ಯುವಜನರಲ್ಲಿ ಇವೆ .ಗಾಂಜಾ ಸೃಜನಶೀಲತೆಯನ್ನು ಹೆಚ್ಚಿಸುತ್ತದೆ ..ಮನುಷ್ಯನನ್ನು ಚುರುಕು ಮಾಡುತ್ತದೆ ..ವೈದ್ಯಕೀಯ ಕಾರಣಗಳಿಗೆ ಗಾಂಜಾವನ್ನು ಬಳಸುತ್ತಾರೆ ಮುಂತಾದ ಅಪನಂಬಿಕೆಗಳು ಜನಮಾನಸದಲ್ಲಿ ಇವೆ ..ಗಾಂಜಾ ಸೇವನೆ ಮಾನಸಿಕ ಕಾಯಿಲೆಗಳಿಗೆ ನಾಂದಿ ಅನ್ನುವುದು ಯುವಜನರು ತಿಳಿದುಕೊಳ್ಳಬೇಕು. ಗಾಂಜಾ ಸೇವನೆಯಿಂದ ಮಾನಸಿಕ ಕಾಯಿಲೆಗಳು .ಆತಂಕ ಮನೋಬೇನೆ ಖಿನ್ನತೆ ಸ್ಕಿಜೋಫ್ರಿನಿಯಾ ಅಥವಾ ಇಚ್ಛಿತ ಚಿತ್ತವಿಕಲತೆ ಇದನ್ನು ಹೋಲುವ ಮಾನಸಿಕ ಸಮಸ್ಯೆಗಳು ಮುಂತಾದ ಸಮಸ್ಯೆಗಳು ಉಂಟಾಗುತ್ತವೆ. ಬಹಳಷ್ಟು ಜನ ಒತ್ತಡವನ್ನು ಮರೆಯಲು ಮಾದಕ ದ್ರವ್ಯಗಳನ್ನು ಸೇದುತ್ತಾರೆ .ಇನ್ನು ಕೆಲವರು ನಿದ್ರೆಯಿಂದ ಎಚ್ಚರ ಇರಲಿ ಎಂದು ಕೆಲವು ಮಾತ್ರೆಗಳನ್ನು ಸೇವಿಸುತ್ತಾರೆ ..ಈ ಮಾತ್ರೆಗಳು ಅತಿಯಾಗಿ ಸೇವಿಸುವಾಗ ಒಂದು ಅಭ್ಯಾಸವಾಗಿ ಮಾರ್ಪಡುತ್ತದೆ .ಇದೊಂದು ಮಾನಸಿಕ ಕಾಯಿಲೆಯಾಗಿ ಹೋಗುತ್ತದೆ .ಈ ಪದಾರ್ಥಗಳ ಸೇವನೆಯಿಂದ ವಿದ್ಯಾರ್ಥಿಗಳ ವ್ಯಕ್ತಿತ್ವ ಮಾರ್ಪಡುತ್ತದೆ .ಹಲವರಲ್ಲಿ ಸಂಶಯ ಪ್ರವೃತ್ತಿ, ಆಕ್ರಮಣಕಾರಿ ಮನೋಭಾವ ,ಈ ಪದಾರ್ಥಗಳನ್ನು ತೆಗೆದುಕೊಳ್ಳುವಲ್ಲಿ ಕಳ್ಳತನ ಮಾಡುವುದು ,ದರೋಡೆ ಮಾಡುವುದು ಮುಂತಾದವುಗಳನ್ನು ಶುರು ಮಾಡುತ್ತಾರೆ .ಹಲವರು ಕಾನೂನಿನ ಚೌಕಟ್ಟನ್ನು ಮೀರಿ ಮುಂದೆ ಸಮಾಜ ವಿರೋಧಿ ವ್ಯಕ್ತಿತ್ವದವರು ಆಗುತ್ತಾರೆ .ಈ ಅಭ್ಯಾಸಗಳು ಚಕ್ರವ್ಯೂಹ ಇದ್ದ ಹಾಗೆ .ಒಳಗೆ ಹೋಗುವುದು ಸುಲಭ ಹೊರಗೆ ಬರುವುದು ಬಹಳ ಕಷ್ಟ ..ಚಿಕಿತ್ಸೆ ಪಡೆದವರಲ್ಲಿ ಹಲವರು ಪುನಃ ಈ ಅಭ್ಯಾಸವನ್ನು ಪ್ರಾರಂಭಿಸುತ್ತಾರೆ .ಆದ್ದರಿಂದ ಯುವಜನರು ಇಂತಹ ಅಭ್ಯಾಸಗಳಿಗೆ ಬಲಿಯಾಗದೆ ಮನಸ್ಸಿಗೆ ಖುಷಿ ಕೊಡುವ, ಒತ್ತಡವನ್ನು ಕಡಿಮೆ ಮಾಡುವ gym..ಪುಸ್ತಕ ಓದು ..ಪ್ರತಿನಿತ್ಯ ಓಡುವುದು ನಡೆಯುವುದು ಜಾಗಿಂಗ್ ಮಾಡುವುದು ಅಥವಾ ಸ್ವಿಮ್ಮಿಂಗ್ ..ಹಾಗೆಯೇ ಸೃಜನಶೀಲ ಚಟುವಟಿಕೆಗಳಾದ ಹಾಡು ,ಡ್ರಾಮಾ, ಜರ್ನಲ್ ಕ್ಲಬ್ ಮುಂತಾದವುಗಳಲ್ಲಿ ಗಮನಹರಿಸಿದರೆ ಒತ್ತಡ ಕಡಿಮೆಯಾಗುತ್ತದೆ ..ಪರಿಸರವನ್ನು ಉತ್ತಮಗೊಳಿಸುವ ಇಕೋ ಕ್ಲಬ್ ಸೈನ್ಸ್ ಕ್ಲಬ್ ಮುಂತಾದವುಗಳಲ್ಲಿ ಕೂಡ ಭಾಗವಹಿಸಬಹುದು .ನಿರಂತರ ಓದಿನ ನಡುವೆ ಇಂತಹ ಚಟುವಟಿಕೆಗಳು ಮನಸ್ಸಿಗೆ ಖುಷಿಯನ್ನು ಕೊಡುತ್ತದೆ .