Select Page

Date: February 5, 2020

ನಮ್ಮ ಆಸ್ಪತ್ರೆಯ ಮನೋವೈದ್ಯರಾದ ಡಾ ವಿರೂಪಾಕ್ಷ ಅವರ ನೇತೃತ್ವದಲ್ಲಿ “ಮದ್ಯವ್ಯಸನಿಗಳ ಮಕ್ಕಳು “ಇದರ ಬಗ್ಗೆ ಒಂದು ವಾರದ ಕಾರ್ಯಕ್ರಮಗಳು ನಡೆಯುಲಿವೆ, ಈ ಕಾರ್ಯಕ್ರಮಗಳು  ಫೆಬ್ರವರಿ 9 ಪ್ರಾರಂಭವಾಗಿ 15  ಫೆಬ್ರವರಿವರೆಗೂ ನಡೆಯಲಿವೆ. .ಸಂಶೋಧನೆಗಳು ತಿಳಿಸುವ ವಿಚಾರವೇನೆಂದರೆ ಮದ್ಯವ್ಯಸನಿಗಳ ಮಕ್ಕಳಲ್ಲಿ ತಮ್ಮ ಬಗ್ಗೆ ಆತ್ಮಾಭಿಮಾನದ ಕೊರತೆ ಇರುತ್ತದೆ .ಇವರುಗಳು ತಮ್ಮ ಮನೆಯಲ್ಲಿ ನಡೆಯುವ ಘಟನೆಗಳನ್ನು ಇನ್ನೊಬ್ಬರೊಂದಿಗೆ ಹಂಚಿಕೊಳ್ಳಲು ಕೂಡ ಆಗುವುದಿಲ್ಲ .ಖಿನ್ನತೆ, ಆತ್ಮಹತ್ಯೆಯ ಯೋಚನೆ ,ಸಂವಹನ ಕಲೆಯಲ್ಲಿ ಕೊರತೆ ,ಶಿಕ್ಷಣದಲ್ಲಿ ಹಿಂದೆ ಬೀಳುವುದು ,ಕಲಿಕಾ ತೊಂದರೆಗಳು ಬಹಳಷ್ಟು ಮಕ್ಕಳಲ್ಲಿ ಇರುತ್ತದೆ ಎಂಬುದು ಸಂಶೋಧನೆಗಳ ಅಂಬೋಣ .ಈ ಬಗ್ಗೆ ಹೆಚ್ಚಿನ ಗಮನವಹಿಸಿ ಆಸ್ಪತ್ರೆಯಲ್ಲಿ ಬರುವ ಮದ್ಯವ್ಯಸನಿಗಳ ಮಕ್ಕಳ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಿರುವ ಡಾ ವಿರೂಪಾಕ್ಷ ದೇವರಮನೆ ಅವರು ಪ್ರತಿ ವರ್ಷದಂತೆ ಈ ಬಾರಿಯೂ ಮದ್ಯವ್ಯಸನಿ ಮಕ್ಕಳು ಈ ಬಗ್ಗೆ ವಿವಿಧ ಕಾರ್ಯಕ್ರಮವನ್ನು  ಆಯೋಜಿಸುತ್ತಿದ್ದಾರೆ .ಈ ಬಾರಿ ಭಾರತೀಯ ವೈದ್ಯಕೀಯ ಸಂಘ ಮತ್ತು ರೋಟರಿ ಕ್ಲಬ್ ಉಡುಪಿ ಮಣಿಪಾಲ ನಮ್ಮ ಆಸ್ಪತ್ರೆಯೊಂದಿಗೆ ಕೈಜೋಡಿಸಿದೆ .ಏನೇನು ಕಾರ್ಯಕ್ರಮಗಳು ಇರುತ್ತವೆ ಎಂಬುದನ್ನು ಮುಂದೆ ತಿಳಿಸುತ್ತೇವೆ .ಆಸಕ್ತರು ಹೆಚ್ಚಿನ ಮಾಹಿತಿಗೆ ಡಾ.ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆ ದೂರವಾಣಿ ಸಂಖ್ಯೆ 0820-2535299 ಗೆ ಕರೆ ಮಾಡಿ ತಿಳಿದುಕೊಳ್ಳ ಬಹುದು.