Select Page

Date: February 12, 2023

Location: https://avbmhospital.org/event/children-of-alcoholics-week-february-12-18-2023/

ಕಾರ್ಕಳ:  ಮದ್ಯವ್ಯಸನವು ದುಡಿಯುವ ವರ್ಗಕ್ಕೆ ಬಹುದೊಡ್ಡ ಸಮಸ್ಯೆಯಾಗಿ ಪರಿಣಮಿಸುತ್ತಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್ ಎಲ್ ಮಂಜುನಾಥ್  ಹೇಳಿದರು. ಅವರು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ.) ಧರ್ಮಸ್ಥಳ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ.) ಕಾರ್ಕಳ ತಾಲೂಕು,  ಡಾ. ಎ. ವಿ. ಬಾಳಿಗಾ ಸ್ಮಾರಕ ಆಸ್ಪತ್ರೆ ಉಡುಪಿ ಇದರ ಸಹಯೋಗದಲ್ಲಿರ  ಕಾರ್ಕಳ ಜೋಡುರಸ್ತೆಯ  ರಾಜಪುರ ಸಾರಸ್ವತ ಸೊಸೈಟಿ ಯ ಆರ್. ಎಸ್. ಬಿ. ಸಭಾ ಭವನದಲ್ಲಿ ಭಾನುವಾರ ನಡೆದ ಮದ್ಯ ವ್ಯಸನಿಗಳ ಮಕ್ಕಳ ಜಾಗೃತಿ ಸಪ್ತಾಹದ ಉದ್ಘಾಟನಾ    ವ್ಯಸನಮುಕ್ತರ ಕುಟುಂಬೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು .   ಮದ್ಯವ್ಯಸನದಿಂದ ನೆಮ್ಮದಿ ಸಿಗುತ್ತದೆ ಎಂದು ಭಾವಿಸುವುದು ತಪ್ಪು ಅದರಿಂದ ದುಷ್ಪರಿಣಾಮಗಳೆ ಹೆಚ್ಚಿದೆ. ಮದ್ಯವ್ಯಸನದ ಸಾಮಾಜಿಕ  ಪಿಡುಗು ಅದನ್ನು  ನಾವು ಹೊಡೆದೋಡಿಸಬೇಕು. ನಾವೇ ಸಿದ್ದರಾಗಬೇಕು ಎಂದರು. ಡಾ. ಪಿ.ವಿ ಭಂಡಾರಿ ಯವರ ಸಾಮಾಜಿಕ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.  ಅವೆಮಣ್ಣಿನ ಅಕೃತಿ  ಅನಾವರಣ ಗೊಳಿಸಿ  ಮಾತನಾಡಿದ ಎ.ವಿ ಬಾಳಿಗ ಸಮೂಹ ಸಂಸ್ಥೆಗಳ ನಿರ್ದೇಶಕ  ಪಿ.ವಿ ಭಂಡಾರಿ ಮಾತನಾಡಿ ಸಮಾಜವನ್ನು  ಮದ್ಯ ವ್ಯಸನ ಮುಕ್ತ ಮಾಡಲು ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯು  ಮಹತ್ತರ ಪಾತ್ರ ವಹಿಸುತ್ತದೆ  ಅದರ ಸೇವೆ ಅಭಿನಂದನೀಯ ಎಂದರು. ಮನೋವೈದ್ಯ ವಿರೂಪಾಕ್ಷ ದೇವರುಮನೆ ಮಾತನಾಡಿ ವ್ಯಸನಮುಕ್ತರ ಕುಟುಂಬೋತ್ಸವ ಮೂಲಕ ಮನೆಯಲ್ಲಿ ಸಂತೋಷ ಪಸರಿಸಲಿ ಎಂದು ಶುಭಹಾರೈಸಿದರು.