ದಿನಾಂಕ 01-01-2026 ಗುರುವಾರದಂದು ಬೆಳಿಗ್ಗೆ 10.30ಕ್ಕೆ ಕಮಲ್. ಎ. ಬಾಳಿಗಾ ಚಾರಿಟೇಬಲ್ ಟ್ರಸ್ಟ್, ಮುಂಬಯಿ; ಡಾ. ಎ. ವಿ. ಬಾಳಿಗಾ ಸ್ಮಾರಕ ಆಸ್ಪತ್ರೆ, ದೊಡ್ಡಣಗುಡ್ಡೆ, ಉಡುಪಿ ಮತ್ತು ಭಾರತೀಯ ವೈದ್ಯಕೀಯ ಸಂಘ ಉಡುಪಿ-ಕರಾವಳಿ ಇವರ ಜಂಟಿ ಆಶ್ರಯದಲ್ಲಿ 35ನೇ ಮದ್ಯವ್ಯಸನ ವಿಮುಕ್ತಿ ಮತ್ತು ವಸತಿ ಶಿಬಿರದ ಉದ್ಘಾಟನಾ ಸಮಾರಂಭವು ಡಾ. ಎ. ವಿ. ಬಾಳಿಗಾ ಸ್ಮಾರಕ ಆಸ್ಪತ್ರೆಯ ಕಮಲ್ ಎ. ಬಾಳಿಗಾ ಸಭಾಂಗಣದಲ್ಲಿ ನಡೆಯಿತು.
ಶ್ರೀ ವಿಶು ಶೆಟ್ಟಿ, ಸಮಾಜ ಸೇವಕರು ಮತ್ತು ಸದಸ್ಯರು, ಉಡುಪಿ ಜಿಲ್ಲಾ ಮಾನಸಿಕ ಆರೋಗ್ಯ ಪ್ರಾಧಿಕಾರ ಇವರು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ತಪ್ಪು ಮಾಡುವುದು ಸಹಜ ಅದನ್ನು ತಿದ್ದಿಕೊಳ್ಳುವ ಅವಕಾಶ ನಮ್ಮ ಕೈಯಲ್ಲಿದೆ. ಜೊತೆಗೆ ಬಾಳಿಗಾ ಆಸ್ಪತ್ರೆಯ ಸಮಾಜಮುಖಿ ಕಾರ್ಯಗಳ ಕುರಿತು ಪ್ರಶಂಸನೀಯ ಮಾತುಗಳನ್ನಾಡಿದರು.
ಮುಖ್ಯ ಅತಿಥಿಗಳಾಗಿ ಡಾ. ಪ್ರಕಾಶ್. ಸಿ. ತೋಳಾರ್, ಮನೋವೈದ್ಯರು, ಶ್ರೀ ಮಾತಾ ಆಸ್ಪತ್ರೆ, ಕುಂದಾಪುರ ಇವರು ಮದ್ಯವ್ಯಸನವೆಂಬುದು ಮನೋರೋಗ ಇದರ ಕುರಿತು ಜಾಗ್ರತಿಯ ಮಹತ್ವವನ್ನು ಅರಿತುಕೊಳ್ಳಬೇಕು ಎಂದು ಕರೆ ನೀಡಿದರು.
ಹಾಗೆಯೇ ಅತಿಥಿಗಳಾಗಿ ಡಾ. ಅಶೋಕ್ ಕುಮಾರ್, ಮಕ್ಕಳ ತಜ್ಞರು ಹಾಗೂ ಅಧ್ಯಕ್ಷರು, ಭಾರತೀಯ ವೈದ್ಯಕೀಯ ಸಂಘ, ಉಡುಪಿ-ಕರಾವಳಿ ಇವರು ಶಿಬಿರಾರ್ಥಿಗಳು ಮದ್ಯವ್ಯಸನ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕಿವಿಮಾತನ್ನು ಹೇಳುವುದರ ಜೊತೆಗೆ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಡಾ. ಲತಾ ನಾಯಕ್, ಉಡುಪಿ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅಧಿಕಾರಿ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಉಡುಪಿ ಜಿಲ್ಲೆ ಇವರು ಆಯುಷ್ಮಾನ್ ಅಥವಾ ಸರ್ಕಾರದ ಯಾವುದೇ ಆರೋಗ್ಯ ಸಂಬಂಧೀ ಸವಲತ್ತುಗಳು ಮದ್ಯವ್ಯಸನದ ಕಾರಣದ ಅನಾರೋಗ್ಯಕ್ಕೆ ಲಭಿಸುವುದಿಲ್ಲ. ಆದುದರಿಂದ ಮದ್ಯವ್ಯಸನ ವಿಮುಕ್ತರಾಗುವ ಈ ಸದವಕಾಶವನ್ನು ಬಳಸಿಕೊಳ್ಳುವಂತೆ ಶಿಬಿರಾರ್ಥಿಗಳಲ್ಲಿ ಮನವಿ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಪಿ. ವಿ. ಭಂಡಾರಿ, ನಿರ್ದೇಶಕರು, ಡಾ. ಎ. ವಿ. ಬಾಳಿಗಾ ಸಮೂಹ ಸಂಸ್ಥೆಗಳು, ಉಡುಪಿ ಇವರು ವಹಿಸಿದ್ದರು ವೇದಿಕೆಯಲ್ಲಿ ಆಸ್ಪತ್ರೆಯ ಮನೋವೈದ್ಯರುಗಳಾದ ಡಾ. ವಿರೂಪಾಕ್ಷ ದೇವರಮನೆ, ಡಾ. ದೀಪಕ್ ಮಲ್ಯ ಮತ್ತು ಡಾ. ಮಾನಸ್ ಇ, ಆರ್. ಉಪಸ್ಥಿತರಿದ್ದರು. ಆಸ್ಪತ್ರೆಯಲ್ಲಿ ಮದ್ಯವಿಮುಕ್ತಿ ಚಿಕಿತ್ಸೆಯನ್ನು ಪಡೆದು 5 ವರ್ಷಕ್ಕಿಂತಲೂ ಹೆಚ್ಚಿನ ಸಮಯದಿಂದ ಮದ್ಯ ಮುಕ್ತ ಜೀವನವನ್ನು ನಡೆಸುತ್ತಾ ಬರುತ್ತಿರುವ 6 ಜನರನ್ನು ಸನ್ಮಾನಿಸಲಾಯಿತು. ಡಾ. ಎ. ವಿ. ಬಾಳಿಗಾ ಸ್ಮಾರಕ ಆಸ್ಪತ್ರೆಯ ಸಿಬ್ಬಂದಿಗಳಿಂದ ಮದ್ಯಪಾನದ ದುಷ್ಪರಿಣಾಮದ ಕುರಿತು ಸಮುದಾಯದಲ್ಲಿ ಪ್ರದರ್ಶಿಸಿದ ಬೀದಿನಾಟಕ “ವಿಮುಕ್ತಿ” ಯನ್ನು ಸಭಾ ಕಾರ್ಯಕ್ರಮದಲ್ಲಿ ಪ್ರದರ್ಶಿಸಲಾಯಿತು. ಕಾರ್ಯಕ್ರಮಕ್ಕೆ ಆಸ್ಪತ್ರೆಯ ಆಪ್ತಸಮಾಲೋಚಕರಾದ ಶ್ರೀಮತಿ ಪದ್ಮಾ ರಾಘವೇಂದ್ರ ಪ್ರಾರ್ಥಿಸಿದರು. ಆಸ್ಪತ್ರೆಯ ಆಡಳಿತಾಧಿಕಾರಿಯಾಗಿರುವ ಶ್ರೀಮತಿ ಸೌಜನ್ಯ ಶೆಟ್ಟಿ ಇವರು ಕಾರ್ಯಕ್ರಮದ ಕುರಿತು ಪ್ರಸ್ತಾವಿಕ ಮಾತುಗಳನ್ನಾಡುವ ಮೂಲಕ ಸರ್ವರನ್ನು ಸ್ವಾಗತಿಸಿದರು. ಮನಶಾಸ್ತ್ರಜ್ಞರಾದ ಶ್ರೀ ನಾಗರಾಜ್ ಮೂರ್ತಿ ಇವರು ವಂದಿಸಿದರು. ಕಾರ್ಯಕ್ರಮವನ್ನು ಆಪ್ತಸಮಾಲೋಚಕರಾದ ಶ್ರೀಮತಿ ದೀಪಶ್ರೀ ನಿರೂಪಿಸಿದರು. ಸುಮಾರು 50 ಶಿಬಿರಾರ್ಥಿಗಳು 35ನೆಯ ಶಿಬಿರದ ಪ್ರಯೋಜನವನ್ನು ಪಡೆದುಕೊಳ್ಳಲಿದ್ದಾರೆ.
ದಿನಾಂಕ 10-01-2026 ಬೆಳಿಗ್ಗೆ 10.30ಕ್ಕೆ ಡಾ. ಎ. ವಿ. ಬಾಳಿಗ ಸ್ಮಾರಕ ಆಸ್ಪತ್ರೆ ಉಡುಪಿ; ಕಮಲ್. ಎ. ಬಾಳಿಗ ಚಾರಿಟೇಬಲ್ ಟ್ರಸ್ಟ್ ಮುಂಬೈ ಮತ್ತು ಭಾರತೀಯ ವೈದ್ಯಕೀಯ ಸಂಘ, ಉಡುಪಿ-ಕರಾವಳಿ ಇದರ ಜಂಟಿ ಆಶ್ರಯದಲ್ಲಿ 35ನೇ ಮದ್ಯವ್ಯಸನ ವಿಮುಕ್ತಿ ಮತ್ತು ವಸತಿ ಶಿಬಿರದ ಸಮರೋಪ ಸಮಾರಂಭವು ಡಾ. ಎ. ವಿ. ಬಾಳಿಗ ಸ್ಮಾರಕ ಆಸ್ಪತ್ರೆಯ ಕಮಲ್. ಎ. ಬಾಳಿಗ ಸಭಾಂಗಣದಲ್ಲಿ ನಡೆಯಿತು. ಮುಖ್ಯ ಅತಿಥಿಗಳಾಗಿ ಡಾ. ಎನ್. ಬಿ. ವಿಜಯ್ ಬಲ್ಲಾಳ ಧರ್ಮದರ್ಶಿಗಳು, ಶ್ರೀ ಜನಾರ್ದನ ಮತ್ತು ಶ್ರೀ ಮಹಾಕಾಳಿ ದೇವಸ್ಥಾನ, ಅಂಬಲಪಾಡಿ ಇವರು ಆಗಮಿಸಿದ್ದರು. ಅತಿಥಿಗಳಾಗಿ ಡಾ. ಸನತ್ ರಾವ್, ಚರ್ಮರೋಗ ತಜ್ಞರು, ಖಜಾಂಚಿ, ಭಾರತೀಯ ವೈದ್ಯಕೀಯ ಸಂಘ, ಉಡುಪಿ-ಕರಾವಳಿ ಆಗಮಿಸಿ ಶಿಬಿರಾರ್ಥಿಗಳಿಗೆ ಶುಭ ಕೋರಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಪಿ. ವೆಂಕಟರಾಯ ಭಂಡಾರಿ, ಮನೋವೈದ್ಯರು ಮತ್ತು ನಿರ್ದೇಶಕರು, ಡಾ. ಎ. ವಿ. ಬಾಳಿಗಾ ಸಮೂಹ ಸಂಸ್ಥೆಗಳು, ಉಡುಪಿ ಇವರು ವಹಿಸಿದ್ದರು. ವೇದಿಕೆಯಲ್ಲಿ ಡಾ. ವಿರೂಪಾಕ್ಷ ದೇವರಮನೆ, ಮನೋವೈದ್ಯರು ಡಾ. ದೀಪಕ್ ಮಲ್ಯ, ಡಾ. ಮಾನಸ್ ಇ. ಆರ್, ಮನೋವೈದ್ಯರು ಉಪಸ್ಥಿತರಿದ್ದರು. ಶ್ರೀಮತಿ ಪೂರ್ಣಿಮಾ, ವೃತ್ತಿಪರ ಚಿಕಿತ್ಸಕರು ಕಾರ್ಯಕ್ರಮಕ್ಕೆ ಪ್ರಾರ್ಥಿಸಿದರು. ಶ್ರೀಮತಿ ಪದ್ಮಾ ರಾಘವೇಂದ್ರ, ಆಪ್ತ ಸಮಾಲೋಚಕರು ಶಿಬಿರದ ಸಂಪೂರ್ಣ ವರದಿಯನ್ನು ವಾಚಿಸಿದರು. ಡಾ. ಮಾನಸ್. ಇ. ಆರ್ ,ಮನೋವೈದ್ಯರು ಸರ್ವರನ್ನು ಸ್ವಾಗತಿಸಿದರು. ಶ್ರೀಮತಿ ಸೌಜನ್ಯ ಶೆಟ್ಟಿ ಆಡಳಿತಾಧಿಕಾರಿಗಳು, ಡಾ. ಎ. ವಿ. ಬಾಳಿಗ ಸ್ಮಾರಕ ಆಸ್ಪತ್ರೆ ಇವರು ವಂದಿಸಿದರು. ಶ್ರೀಯುತ ವಿಶ್ವೇಶ್ವರ ಹೆಗಡೆ, ಮನಶಾಸ್ತ್ರಜ್ಞರು ಕಾರ್ಯಕ್ರಮವನ್ನು ನಿರೂಪಿಸಿದರು.









