31 ನೇ ಮದ್ಯವ್ಯಸನ ವಿಮುಕ್ತಿ ಶಿಬಿರವು ದಿನಾಂಕ : 1-1-2023 ರಂದು ಡಾ. ಎ. ವಿ. ಬಾಳಿಗಾ ಸ್ಮಾರಕ ಆಸ್ಪತ್ರೆ, ದೊಡ್ಡಣಗುಡ್ಡೆ, ಉಡುಪಿಯ ಕಮಲ್ ಎ. ಬಾಳಿಗಾ ಸಭಾಂಗಣದಲ್ಲಿ ಸಾಂಗವಾಗಿ ನೆರವೇರಿತು. ಕಮಲ್. ಎ. ಬಾಳಿಗಾ ಚಾರಿಟೇಬಲ್ ಟ್ರಸ್ಟ್, ಮುಂಬೈ; ಭಾರತೀಯ ವೈದ್ಯಕೀಯ ಸಂಘ, ಉಡುಪಿ-ಕರಾವಳಿ; ಹಾಜಿ ಅಬ್ದುಲ್ಲಾ ಚಾರಿಟೇಬಲ್ ಟ್ರಸ್ಟ್, ಉಡುಪಿ ಸಂಸ್ಥೆಗಳ ಸಹಯೋಗದೊಂದಿದೆ ಕಮಲ್. ಎ. ಬಾಳಿಗಾ ಸಭಾಗಣದಲ್ಲಿ ಜನವರಿ 1 ರಿಂದ 10 ರ ವರೆಗೆ 31 ನೆಯ ಉಚಿತ ಮದ್ಯವರ್ಜನ ಶಿಬಿರದ ಆಯೋಜನೆಯನ್ನು ಮಾಡಿದೆ. ಈ ಶಿಬಿರವನ್ನು ಪ್ರಸಾದ್ ನೇತ್ರಾಲಯದ ವಿದ್ಯಕೀಯ ನಿರ್ದೇಶಕರು ಹಾಗೂ ನೇತ್ರತಜ್ಞರಾದ ಡಾ. ಕೃಷ್ಣ ಪ್ರಸಾದ್ ಇವರು ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಕೆ. ಎಂ. ಸಿ. ಮಣಿಪಾಲದಲ್ಲಿ ಅಸೋಸಿಯೇಟ್ ಪ್ರೊಫ಼ೆಸರ್ ಆಗಿರುವ ಡಾ. ಮುರಳೀಧರ್ ಎಂ. ಕುಲಕರ್ಣಿಯವರು. ಸಭಾಧ್ಯಕ್ಷರಾಗಿ ಡಾ. ಎ. ವಿ. ಬಾಳಿಗಾ ಸ್ಮಾರಕ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. ಪಿ. ವೆಂಕಟರಾಯ ಭಂಡಾರಿಯವರು ಅನಿವಾರ್ಯ ಕಾರಣದಿಂದ ಭಾಗವಹಿಸಲಿಲ್ಲ. ಇವರುಗಳೊಂದಿದೆ ವೇದಿಕೆಯಲ್ಲಿ ಡಾ. ಎ. ವಿ. ಬಾಳಿಗಾ ಸ್ಮಾರಕ ಆಸ್ಪತ್ರೆಯ ತಜ್ಞ ಮನೋವೈದ್ಯರುಗಳಾದ ಡಾ. ವಿರೂಪಾಕ್ಷ ದೇವರಮನೆ, ಡಾ. ದೀಪಕ್ ಮಲ್ಯ, ಡಾ, ಮಾನಸ್ ಅವರು ಉಪಸ್ಥಿತರಿದ್ದರು.