ಜಿಲ್ಲಾಡಳಿತ ಉಡುಪಿ ಜಿಲ್ಲಾ ಪಂಚಾಯತ್ ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಇಲಾಖೆ ಉಡುಪಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಡುಪಿ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಉಡುಪಿ,ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಉಡುಪಿ ಕಮಲ್.ಎ. ಬಾಳಿಗ ಚಾರಿಟೇಬಲ್ ಟ್ರಸ್ಟ್ ಮುಂಬೈ ಡಾ.ಎ.ವಿ.ಬಾಳಿಗ ಸ್ಮಾರಕ ಆಸ್ಪತ್ರೆ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ನಶಾಮುಕ್ತ ಭಾರತ ಅಭಿಮಾನದ ಪ್ರಾಯೋಜಕತ್ವದಲ್ಲಿ 30 ನೇ ಮದ್ಯವ್ಯಸನ ವಿಮುಕ್ತಿ ಮತ್ತು ವಸತಿ ಶಿಬಿರದ ಸಮರೋಪ ಸಮಾರಂಭವು ಡಾ.ಎ.ವಿ ಬಾಳಿಗ ಆಸ್ಪತ್ರೆಯ ಕಮಲ್.ಎ.ಬಾಳಿಗ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿದ ನಮ್ಮ ಬದುಕು ನಮಗಾಗಿ ಮಾತ್ರವಲ್ಲ ನಮ್ಮನ್ನು ನಂಬಿದವರಿಗೂ ನಮ್ಮ ಬದುಕು ಅರ್ಪಣೆ ಯಾಗುತ್ತದೆ ಎಂದು ಜಿಲ್ಲಾ ಕಾನೂನು ಪ್ರಾಧಿಕಾರದ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಮಾನ್ಯ ಸದಸ್ಯ ಕಾರ್ಯದರ್ಶಿಗಳು ಶ್ರೀಮತಿ ಶರ್ಮಿಳಾ ಎಸ್.ಇವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ವಿಚಾರ ಮಂಡನೆ ಮಾಡಿದರು. ಶಿಬಿರಾರ್ಥಿಗಳು ತಮ್ಮ ಊರಿನಲ್ಲಿ ಕೂಡ ಮದ್ಯಮುಕ್ತ ಸಮಾಜ ನಿರ್ಮಿಸಲು ಸಹಕಾರ ನೀಡಿದರೆ ಯೋಜನೆಗಳು ಪರಿಣಾಮಕಾರಿಯಾಗುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕರು ಶ್ರೀಮತಿ ವೀಣಾ ವೀವಕನಂದ್ ಇವರು ನುಡಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅಧಿಕಾರಿ ಡಾ.ಚಿದಾನಂದ ಸಂಜು.ಎಸ್.ವಿ ಇವರು ಮಾತಾನಾಡುತ್ತ ಮದ್ಯವನ್ನು ತ್ಯಜಿಸಲು ಶಿಬಿರ ತುಂಬಾ ಸಹಕಾರಿಯಾಗಿದೆ.ಇದರ ಪ್ರಯೋಜನವನ್ನು ಪಡೆದು ನೀವು ಬದಲಾದರೆ ಸಮಾಜಕ್ಕೂ ಪ್ರೇರಣೆ ಎಂದು ತಿಳಿಸಿದರು. ತಾಲೂಕು ಆರೋಗ್ಯ ಅಧಿಕಾರಿಗಳು ಡಾ.ವಾಸುದೇವ್ ಇವರು ಮಾತಾನಾಡುತ್ತ ಮಾನವ ಸಂಪನ್ಮೂಲಗಳ ಮೇಲೆ ಮದ್ಯಪಾನದ ಸವಾರಿಯ ಬಗ್ಗೆ ತಿಳಿಸಿದರು.ಶಿಬಿರದಲ್ಲಿ ನಡೆದ ಚಟುವಟಿಕೆಗಳು ಶಿಸ್ತನ್ನು ಮೂಡಿಸಿ, ಬೆಳವಣಿಗೆಗೆ ಬದಲಾವಣೆಗೆ ಸಹಕಾರಿಯಾಗುತ್ತದೆ.ಸರಕಾರಗಳು ಇಂತಹ ಕಾರ್ಯಯೋಜನೆಯನ್ನು ಸಮಾಜಕ್ಕೆ ನೀಡಿದರೆ ಸಮಾಜಕ್ಕೆ ಉಪಯೋಗ ಆಗಬಹುದು ಎಂದು ಬಾಳಿಗ ಸಮೂಹ ಸಂಸ್ಥೆಯ ನಿರ್ದೇಶಕರು ಹಾಗೂ ಈ ಕಾರ್ಯಕ್ರಮದ ಅಧ್ಯಕ್ಷರಾದ ಡಾ.ಪಿ.ವಿ. ಭಂಡಾರಿ ನುಡಿದರು. ಶಿಬಿರದ ವರದಿಯನ್ನು ಅಪ್ತ ಸಮಾಲೋಚಕರಾದ ಶ್ರೀಮತಿ ಪದ್ಮ ರಾಘವೇಂದ್ರ ವಾಚಿಸಿದರು. ಶಿಬಿರಾರ್ಥಿಗಳಿಗಾಗಿ ನಡೆದ ಸ್ಪರ್ಧೆಗಳ ಬಹುಮಾನ ವಿತರಣೆಯನ್ನು ಸಚಿನ್ ಇವರು ನೆರವೇರಿಸಿದರು. ಬಾಳಿಗ ಸಂಸ್ಥೆಯ ಅಡಳಿತಾಧಿಕಾರಿ ಶ್ರೀಮತಿ ಸೌಜನ್ಯ ಶೆಟ್ಟಿ ಸ್ವಾಗತಿಸಿ,ಶಿಬಿರಾರ್ಥಿಗಳು ಪ್ರಾರ್ಥನೆ ಮಾಡಿದರು. ಅಪ್ತಸಮಲೋಚಕರಾದ ಶ್ರೀಮತಿ ದೀಪಾ ಇವರು ನಿರೂಪಿಸಿ ಮನಶಾಸ್ತ್ರಜ್ಞರಾದ ಶ್ರೀ.ನಾಗರಾಜ್ ಮೂರ್ತಿ ವಂದಿಸಿದರು.