ನಮ್ಮ ಆಸ್ಪತ್ರೆಯ ಹೆಮ್ಮೆಯ ಕಾರ್ಯಕ್ರಮವಾದ ಮದ್ಯವ್ಯಸನ ವಿಮುಕ್ತಿ ಕಾರ್ಯಕ್ರಮವನ್ನು ಉಡುಪಿ ಜಿಲ್ಲಾಧಿಕಾರಿ ಶ್ರೀ ಜಗದೀಶ್ ಅವರು ಇಂದು ದೀಪ ಬೆಳಗಿಸಿ ಉದ್ಘಾಟನೆ ಮಾಡಿದರು ಕಾರ್ಯಕ್ರಮದಲ್ಲಿ ನಲವತ್ತ ನಾಲ್ಕು ಶಿಬಿರಾರ್ಥಿಗಳು ದಾಖಲಾಗಿದ್ದಾರೆ .ಶ್ರೀ ಜಗದೀಶ್ ಮದ್ಯವ್ಯಸನ ವಿಮುಕ್ತಿ ಬಗ್ಗೆ ಅನುಭವವನ್ನು ಬಹಳ ಚೆನ್ನಾಗಿ ಹಂಚಿಕೊಂಡರು .ಅವರು ವಿದ್ಯಾರ್ಥಿಯಾಗಿದ್ದಾಗ ಅವರ ಮನೆಯ ಸುತ್ತಮುತ್ತಲು ಮದ್ಯವ್ಯಸನಿಗಳ ಮನೆಯ ಹೆಣ್ಣುಮಕ್ಕಳು ಇವರ ಕಾಟ ತಡೆಯಲಾರದೆ ಅಳುತ್ತಿದ್ದರಂತೆ ಆ ಸಂದರ್ಭದಲ್ಲಿ ಇವರು ಅವರ ಊರಿನ ಅಬಕಾರಿ ಇಲಾಖೆಯ ಎರಡು ಅಂಗಡಿಗಳು ಹಾಗೂ ಇಪ್ಪತ್ತು ಕಳ್ಳಬಟ್ಟಿ ಮಾರುವವರು ಇವರನ್ನು ಹೇಗೆ convince ಮಾಡಿ ಹೆಂಡ ಮಾರಾಟ ನಿಲ್ಲಿಸಿದ್ದರು ..ಇದರಿಂದಾಗಿ ಕುಡಿಯುವವರ ಸಂಖ್ಯೆ ಕಡಿಮೆಯಾಗಿಲ್ಲ ಆದರೆ ಕುಡಿತದಿಂದ ತಾಯಂದಿರ ಸಮಸ್ಯೆಗಳು ಕಡಿಮೆಯಾದವು ಏಕೆಂದರೆ ಊರಿನಲ್ಲಿ ಹೆಂಡ ಸಿಗದೇ ಇರುವುದರಿಂದ ಸೈಕಲ್ ಹೊಡೆದುಕೊಂಡು ಅವರು ಪೇಟೆಗೆ ಹೋಗಿ ಕುಡಿದು ಬರುವಾಗ ಸುಸ್ತಾಗಿ ಬಂದು ಮಲಗಿಬಿಡುತ್ತಿದ್ದರು .ಅದೇ ರೀತಿ ಜಿಲ್ಲಾಧಿಕಾರಿಯಾಗಿ ತಾವು ಹೇಗೆ ಮದ್ಯವ್ಯಸನದ ಸಮಸ್ಯೆಗಳ ಬಗ್ಗೆ ಡಾ. ವಿರೂಪಾಕ್ಷ ದೇವರ ಮನೆಯವರು “ನೀನು ಒಂಟಿಯಲ್ಲ” ಪುಸ್ತಕ ಓದಿ ತಿಳಿದುಕೊಂಡೇ ಹಾಗೂ ಜಿಲ್ಲಾಧಿಕಾರಿಯಾಗಿ ತಾನು ಹೇಗೆ ಮದ್ಯ ಮಾರಾಟದ ಸೇಲ್ಸ್ ಬಗ್ಗೆ ಗಮನ ಕೊಡಬೇಕು ..ಸರ್ಕಾರಕ್ಕೆ ಉಡುಪಿ ಜಿಲ್ಲೆಯಿಂದ ಸಾವಿರ ಕೋಟಿ ತಿಂಗಳಿಗೆ ಮದ್ಯವ್ಯಸನದಿಂದ ಆದಾಯವಿದೆ ..ಆದರೆ ಭವಿಷ್ಯ ಅದೇ ಆದಾಯವನ್ನು ಜನರ ಅನಾರೋಗ್ಯ ಮತ್ತು ಕುಡಿತದಿಂದ ಸಮಸ್ಯೆಗಳಿಗೆ ವಿನಿಯೋಗಿಸಬೇಕಾಗುತ್ತದೆ ಎಂಬ ವಿಷಯಗಳನ್ನು ಬಿಡಿಸಿ ಹೇಳಿದರು ..ತಾವು ಹೇಗೆ ಕೆಲಸ ಸಿಗುವ ಮುಂಚೆ ಒಂದು ಬಾರನ್ನು ನಡೆಸುತ್ತಿದ್ದರು ಎಂಬುದನ್ನು ಕೂಡ ತಿಳಿಸಿದರು ..ಕೆಎಂಸಿ ಮಣಿಪಾಲದ ಮಾನಸಿಕ ಆರೋಗ್ಯ ವಿಭಾಗದ ಮುಖ್ಯಸ್ಥರಾದ ಪ್ರೊಫೆಸರ್ ಪಿಎಸ್ವಿಎನ್ ಶರ್ಮಾ ಅವರು ಬಾಳಿಗಾ ಸಮೂಹ ಸಂಸ್ಥೆಗಳ ಮದ್ಯ ವ್ಯಸನ ವಿಮುಕ್ತಿ ಚಿಕಿತ್ಸೆಯತ್ತ ಸಮುದಾಯದಲ್ಲಿ ಸತತವಾಗಿ ಮಾಡುತ್ತಿರುವ ಕೆಲಸಗಳನ್ನು ಶ್ಲಾಘಿಸಿದರು .ಐಎಂಎ ಅಧ್ಯಕ್ಷ ಉಮೇಶ್ ಪ್ರಭು ಅವರು ಮದ್ಯವ್ಯಸನ ಮುಕ್ತಿಯಲ್ಲಿ ವೈದ್ಯರುಗಳ ಪಾತ್ರ ಮುಖ್ಯವಾದದ್ದು ..ಹಲವೊಮ್ಮೆ ಆಪರೇಷನ್ ನಂತರ ರೋಗಿಗಳು ಮದ್ಯವ್ಯಸನ ಬಿಟ್ಟಾಗ ನಡುಕ ಸನ್ನಿಗೆ ಒಳಗಾಗುವುದರ ಬಗ್ಗೆ ತಿಳಿಸಿದರು .ರೋಟರಿ ಅಧ್ಯಕ್ಷ ರಾಜವರ್ಮ ಅರಿಗ ಅವರು ರೋಟರಿ ಸಂಸ್ಥೆ ಪೋಲಿಯೋ ನಿರ್ಮೂಲನದಲ್ಲಿ ಮಾಡಿರುವ ಮಹತ್ವದ ಕೆಲಸ ..ಮದ್ಯವ್ಯಸನ ಮುಕ್ತಿ ಅಂತಹ ಸಮಾಜಮುಖಿ ಕೆಲಸದಲ್ಲಿ ರೋಟರಿ ಯಾವಾಗಲೂ ಆಸಕ್ತಿ ಹೊಂದಿದೆ ಎಂಬ ವಿಚಾರವನ್ನು ತಿಳಿಸಿದರು .ಸಮುದಾಯದಲ್ಲಿ ಮದ್ಯ ವ್ಯಸನ ತ್ಯಜಿಸಿ ಐದು ವರ್ಷಕ್ಕೂ ಹೆಚ್ಚು ಇದ್ದ ೫ ಜನರನ್ನು ಸನ್ಮಾನಿಸಲಾಯಿತು .
ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಡಾ.ಪಿ.ವಿ ಭಂಡಾರಿ ಅವರು ಮಾತನಾಡಿ ಒಂದು ನಿಮಿಷಕ್ಕೆ ಆರು ಜನ ಮದ್ಯವ್ಯಸನದಿಂದ ಸಾಯುತ್ತಿದ್ದರೆ .ಮದ್ಯ ವ್ಯಸನದಿಂದ ಉಂಟಾಗುವ ಸಮಸ್ಯೆಗಳನ್ನು ಗಮನಿಸಿದರೆ ೧ ೮% ಆತ್ಮಹತ್ಯೆಗಳು ೨೭%ರಸ್ತೆ ಅಪಘಾತಗಳು ೧ ೩%ಅಪಸ್ಮಾರ ಅಥವಾ ಫೀಡ್ಸ್ ಕಾಯಿಲೆ ೧೮%ಜನರ ನಡುವೆ ನಡೆಯುವ ಆಕ್ರಮಣಕಾರಿ ಗಲಾಟೆಗಳು ೪೮%ಲಿವರ್ ಸಿರೋಸಿಸ್ ೨೬%ಬಾಯಿಯ ಕ್ಯಾನ್ಸರ್ ೨೬% ಮೇದೋಜೀರಕ ಗ್ರಂಥಿಯ ಊತ ೨೦%ಟಿಬಿ ಕಾಯಿಲೆ ೧ ೧%ಕರುಳಿನ ಕ್ಯಾನ್ಸರ್ ಗಳು ೫%ಸ್ತನದ ಕ್ಯಾನ್ಸರ್ ಗಳು ೭% ಬಿಪಿಯಿಂದ ಬರುವ ಹೃದಯದ ಕಾಯಿಲೆ ..ಇವೆಲ್ಲಕ್ಕೂ ಮದ್ಯಪಾನ ಕಾರಣ ಎಂಬುದನ್ನು ತಿಳಿಸಿದರು