Select Page

Date: November 22, 2025

ದಿನಾಂಕ 22/11/2025ರಂದು ಕಮಲ್ ಎ. ಬಾಳಿಗಾ ಚಾರಿಟೇಬಲ್ ಟ್ರಸ್ಟ್, ಮುಂಬಯಿ ಡಾ. ಎ. ವಿ. ಬಾಳಿಗಾ ಸ್ಮಾರಕ ಆಸ್ಪತ್ರೆ, ದೊಡ್ಡಣಗುಡ್ಡೆ,ಭಾರತೀಯ ವೈದ್ಯಕೀಯ ಸಂಘ ಉಡುಳಿ ಕರಾವಳಿ ಮತ್ತು ಆಟಿಸಂ ಸೊಸೈಟಿ ಆಫ್ ಉಡುಪಿ ಇವರ ಜಂಟಿ ಆಶ್ರಯದಲ್ಲಿ ಮಕ್ಕಳ ಹಬ್ಬ ಕಾರ್ಯಕ್ರಮವು ಡಾ. ಎ. ವಿ. ಬಾಳಿಗಾ ಸ್ಮಾರಕ ಆಸ್ಪತ್ರೆಯ ಕಮಲ್ ಎ. ಬಾಳಿಗಾ ಸಭಾಂಗಣದಲ್ಲಿ ನಡೆಯಿತು.ಕಾರ್ಯಕ್ರಮವನ್ನು ಡಾ. ಶ್ವೇತಾ,ವೈದ್ಯಾಧಿಕಾರಿಗಳು, ಪ್ರಾಥಮಿಕ ಆರೋಗ್ಯ ಕೇಂದ್ರ, ನಂದಳಿಕೆ ಇವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರರು.ಅಧ್ಯಕ್ಷತೆಯನ್ನು ಡಾ. ಪಿ. ವಿ. ಭಂಡಾರಿ, ನಿರ್ದೇಶಕರು, ಡಾ. ಎ. ವಿ. ಬಾಳಿಗೆ ಸಮೂಹ ಸಂಸ್ಥೆಗಳು, ಉಡುಪಿ ಇವರು ವಹಿಸಿದ್ದರು, ವೇದಿಕೆಯಲ್ಲಿ ಮನೋವೈದ್ಯರಾದ ಡಾ. ವಿರೂಪಾಕ್ಷ ದೇವರಮನೆ, ಮತ್ತು ಡಾ. ಮಾನಸ್ ಈ. ಆರ್ ಉಪಸ್ಥಿತರಿದ್ದರು.ಕಾರ್ಯಕ್ರಮಕ್ಕೆ ಮಾಸ್ಟರ್ ಅನ್ಮೋಲ್ ಪ್ರಾರ್ಥಿಸಿದರು, ಕುಮಾರಿ ಜೇನಿಷಾ ಸರ್ವರನ್ನು ಸ್ವಾಗತಿಸಿದರು, ಕುಮಾರಿ ಸಿಂಚನಾ ಕಾರ್ಯಕ್ರಮಕ್ಕೆ ವಂದಿಸಿದರು ,ಕುಮಾರಿ ಸ್ವಾತಿ ಮತ್ತು ಮಾಸ್ಟರ್ ಸಾತ್ವಿಕ್ ಕಾರ್ಯಕ್ರಮವನ್ನು ನಿರೂಪಿಸಿದರು,ಸಭಾ ಕಾರ್ಯಕ್ರಮದ ನಂತರ ಯೋಗ ತಜ್ಞರಾದ ಶ್ರೀಮತಿ ಇಳಾ ಇವರಿಂದ ಮನೋರಂಜನಾತ್ಮಕ ಯೋಗಾಸನವನ್ನು ಮಕ್ಕಳಿಗೆ ಹೇಳಿ ಕೊಡಲಾಯಿತು,ನಂತರ ಚಿತ್ರ ಕಲಾ ಹಾಗೂ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಿ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು.ಆಗಮಿಸಿದ ಎಲ್ಲಾ ಮಕ್ಕಳಿಗೂ ಸಮಾಧಾನಕರ ಬಹುಮಾನವನ್ನು ನೀಡಲಾಯಿತು.ತದ  ನಂತರ ಮಕ್ಕಳಿಂದ ಮನರಂಜನಾ ಕಾರ್ಯಕ್ರಮ ನಡೆಯಲ್ಪಟ್ಟಿತು.
60ಕ್ಕೂ ಹೆಚ್ಚಿನ ಮಕ್ಕಳು ಕಾರ್ಯಕ್ರಮದ ಪ್ರಯೋಜನವನ್ನು ಪಡೆದರು.