Select Page

Date: October 30, 2025

ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಟ್ರಸ್ಟಿ ಹಾಗೂ ಡಾ. ಎ.ವಿ. ಬಾಳಿಗಾ ಸ್ಮಾರಕ ಆಸ್ಪತ್ರೆಯ ವ್ಯವಸ್ಥಾಪನಾ ಸಮಿತಿಯ ಗೌರವಾಧ್ಯಕ್ಷನಾಗಿ, ಇಂದು ಡಾ. ಎ.ವಿ. ಬಾಳಿಗಾ ಸ್ಮಾರಕ ಆಸ್ಪತ್ರೆ, ದೊಡ್ಡಣಗುಡ್ಡೆ, ಉಡುಪಿಯಲ್ಲಿ ನಡೆದ 2000ನೇ ಮದ್ಯವರ್ಜನ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದು ನನಗೆ ಅತ್ಯಂತ ಸಂತೋಷ ಮತ್ತು ಹೆಮ್ಮೆಯ ಕ್ಷಣ. ನಮ್ಮ ಈ ಸೇವೆಯ ನಿರಂತರತೆ, ಸಮುದಾಯದ ಆರೋಗ್ಯದ ಕಡೆಗೆ ನಮ್ಮ ಬದ್ಧತೆಯನ್ನು ಎತ್ತಿ ಹಿಡಿಯುತ್ತದೆ.
ಈ ಶಿಬಿರವು ಮಧ್ಯವರ್ಜನ ಶಿಬಿರ ವ್ಯವಸ್ಥಾಪನ ಸಮಿತಿ ದೊಡ್ಡಣಗುಡ್ಡೆ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್ (ರಿ) ಉಡುಪಿ, ಕಮಲ್ ಎ ಬಾಳಿಗಾ ಚಾರಿಟೇಬಲ್ ಟ್ರಸ್ಟ್ ಮತ್ತು ಡಾ. ಎ.ವಿ ಬಾಳಿಗ ಸ್ಮಾರಕ ಆಸ್ಪತ್ರೆ, ದೊಡ್ಡಣಗುಡ್ಡೆ ಉಡುಪಿ ತಾಲೂಕು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ) ಉಡುಪಿ ತಾಲೂಕು ಇದರ ಆಶ್ರಯದಲ್ಲಿ ನಡೆಯುತ್ತಿದೆ.
💐 ಸಮಾರಂಭದ ವಿವರಗಳು, ಗಣ್ಯರು ಮತ್ತು ಸ್ಪೂರ್ತಿದಾಯಕ ಮಾತುಗಳು
ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಭಾರತೀಯ ಮನೋವೈದ್ಯಕಿಯಾ ಸಂಘ, ಕರ್ನಾಟಕ ಶಾಖೆಯ ಅಧ್ಯಕ್ಷರಾದ ಶ್ರೀ ಡಾ!! ಅನಿಲ್ ಕುಮಾರ್ M N ಅವರು ದೀಪ ಬೆಳಗಿಸುವ ಮೂಲಕ ನೆರವೇರಿಸಿ ಶುಭ ಹಾರೈಸಿದರು. ಮದ್ಯವ್ಯಸನ ಮತ್ತು ಅದರಿಂದಾಗುವ ಆರೋಗ್ಯ ಸಮಸ್ಯೆಗಳ ಬಗ್ಗೆ ಅವರು ನೀಡಿದ ಮಾರ್ಗದರ್ಶನ ಎಲ್ಲರಲ್ಲೂ ಹೊಸ ಚಿಂತನೆ ಮೂಡಿಸಿತು.
ಅವರ ಮಾತುಗಳಲ್ಲಿನ ಆಳವಾದ ಸಾಮಾಜಿಕ ಕಳಕಳಿಗೆ ಉದಾಹರಣೆ ಈ ಡೈಲಾಗ್:
“ಇಪ್ಪತ್ತು ವರುಷ ಕುಡಿದು ಈಗ ಬಿಡಲು ಬಂದವನು, ‘ಸ್ವಾಮಿ, ಈ ಚಿಕಿತ್ಸೆಯಿಂದ ಏನಾದರೂ ತೊಂದರೆ ಇದೆಯಾ?’ ಅಂತ ಕೇಳಿದ.” – ಡಾ!! ಅನಿಲ್ ಕುಮಾರ್ M N, ಅಧ್ಯಕ್ಷರು, ಮನೋವೈದ್ಯಕಿಯಾ ಸಂಘ ಕರ್ನಾಟಕ ಶಾಖೆ.
ಸಭೆಯ ಅಧ್ಯಕ್ಷತೆಯನ್ನು ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಶ್ರೀ ಶಂಕರ್ ಕುಲಾಲ್ ವಹಿಸಿದ್ದರು.
ಉಪಸ್ಥಿತರಿದ್ದ ಗಣ್ಯರು:
ಮುಖ್ಯ ಅತಿಥಿಗಳಾಗಿ ನಾನು, ಪಿ.ವಿ. ಭಂಡಾರಿ (ವೈದ್ಯಕೀಯ ನಿರ್ದೇಶಕರು, ಡಾ. ಎ.ವಿ ಬಾಳಿಗಾ ಸ್ಮಾರಕ ಆಸ್ಪತ್ರೆ), ಹಾಗೆಯೇ,
ಡಾ. ಅಶೋಕ್ ಕುಮಾರ್: ಅಧ್ಯಕ್ಷರು, ಭಾರತೀಯ ವೈದ್ಯಕೀಯ ಸಂಘ ಮತ್ತು ಮಕ್ಕಳ ತಜ್ಞರು , ಅನುಷಾ ಮಕ್ಕಳ ಕ್ಲಿನಿಕ್ (ಇವರು ಮಾತನಾಡಿ ಭಾರತೀಯ ವೈದ್ಯಕೀಯ ಸಂಘದ ಸದಸ್ಯರುಗಳು ಈ ಸಾಮಾಜಿಕ ಕಳಕಳಿಯ ಕೆಲಸದಲ್ಲಿ ತೊಡಗಿರುವುದು ಖುಷಿ ತಂದಿದೆ ಎಂದರು).
ಶ್ರೀ ಪ್ರಸನ್ನ ಕುಮಾರ್: ಭಾರತೀಯ ಜೈನ್ ಮಿಲನ್ ಅಧ್ಯಕ್ಷರು.
ಶ್ರೀ ನಾಗರಾಜ್ ಶೆಟ್ಟಿ: ನಿರ್ದೇಶಕರು SKDRDP ಉಡುಪಿ ಜಿಲ್ಲೆ.
ಶ್ರೀ ನೀರೇ ಕೃಷ್ಣಶೆಟ್ಟಿ: ಅಧ್ಯಕ್ಷರು, ಜಿಲ್ಲಾ ಜನಜಾಗ್ರತಿ ವೇದಿಕೆ ಉಡುಪಿ.
ಶ್ರೀ ಸುಂದರ್ ಜೆ ಕಲ್ಮಾಡಿ: ಅಧ್ಯಕ್ಷರು, ಸ್ಥಾಯಿ ಸಮಿತಿ ನಗರಸಭೆ ಉಡುಪಿ.
ಶ್ರೀ ಸತ್ಯಾನಂದ ನಾಯಕ್: ಅಧ್ಯಕ್ಷರು, ತಾಲೂಕು ಜನಜಾಗ್ರತಿ ವೇದಿಕೆ ಉಡುಪಿ.
ಜಿಲ್ಲಾ ಜನಜಾಗ್ರತಿ ವೇದಿಕೆ ಉಡುಪಿಯ ಸದಸ್ಯರಾದ ಶ್ರೀ ಮಹಾಬಲ ಶೆಟ್ಟಿ ಮತ್ತು ಕೋಶಾಧಿಕಾರಿ ಶ್ರೀಮತಿ ಸೌಜನ್ಯ ಶೆಟ್ಟಿ ಕೂಡ ಉಪಸ್ಥಿತರಿದ್ದರು.
ನಮ್ಮ ಆಸ್ಪತ್ರೆಯ ವೈದ್ಯರಾದ ಡಾ. ದೀಪಕ್ ಮಲ್ಯ, ಡಾ. ವಿರುಪಾಕ್ಷ ದೇವರಮನೆ, ಡಾ. ಮಾನಸ್… ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಆರಂಭದಲ್ಲಿ ಉಡುಪಿ ತಾಲೂಕು ಕ್ಷೇತ್ರ ಯೋಜನಾಧಿಕಾರಿಗಳಾದ ಶ್ರೀ ಸುರೇಂದ್ರ ನಾಯಕ್ ಅವರು ಸ್ವಾಗತಿಸಿದರು. ಮೇಲ್ವಿಚಾರಕರಾದ ಶ್ರೀ ಬಾಲಚಂದ್ರ ನಿರೂಪಿಸಿದರು. ಜನಜಾಗೃತಿ ಮೇಲ್ವಿಚಾರಕರಾದ ಶ್ರೀ ನಿತೇಶ್ ವಂದಿಸಿದರು.