Select Page

Date: October 4, 2025

ದಿನಾಂಕ 4.10.2025 ರಂದು ವಿಶ್ವ ಮಾನಸಿಕ ಆರೋಗ್ಯ ದಿನದ ಪ್ರಯುಕ್ತ ಲಯನ್ಸ್ ಜಿಲ್ಲೆ 317C, ಕಮಲ್ ಎ ಬಾಳಿಗಾ ಚಾರಿಟೇಬಲ್ ಟ್ರಸ್ಟ್ ಮುಂಬೈ, ಡಾ. ಎ.ವಿ. ಬಾಳಿಗಾ ಸ್ಮಾರಕ ಆಸ್ಪತ್ರೆ, ಉಡುಪಿ, ಭಾರತೀಯ ವೈದ್ಯಕೀಯ ಸಂಘ ಉಡುಪಿ ಕರಾವಳಿ ಹಾಗೂ ಇಂಡಿಯನ್ ಸೈಕಿಯಾಟ್ರಿಕ್ ಸೊಸೈಟಿ ಕರ್ನಾಟಕ ಚಾಪ್ಟರ್ ಇವರುಗಳ ಸಂಯುಕ್ತಾಶ್ರಯದಲ್ಲಿ ವಿಶ್ವ ಮಾನಸಿಕ ಆರೋಗ್ಯ ಜಾಗೃತಿ ಮತ್ತು ಉತ್ತಮ ನಡವಳಿ ಸಪ್ತಾಹ 2025 ರ ಉದ್ಘಾಟನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಅಭಯ ಪುನರ್ವಸತಿ ಕೇಂದ್ರದಲ್ಲಿ ಈ ಕಾರ್ಯಕ್ರಮ ಆಯೋಜನೆಗೊಂಡಿದ್ದು ಬೆಳಿಗ್ಗೆ 10 ಗಂಟೆಗೆ ಸಭಾಕಾರ್ಯಕ್ರಮ ಪ್ರಾರಂಭವಾಯಿತು. ಒಂಬತ್ತು ದಿನಗಳು ನಿರಂತರವಾಗಿ ನಡೆಯುವ ಈ ಸರಣಿ ಕಾರ್ಯಕ್ರಮದ ಉದ್ಘಾಟಕರಾಗಿ ಶ್ರೀಮತಿ ಸ್ವಪ್ನ ಸುರೇಶ್ (ಜಿಲ್ಲಾ ಗವರ್ನರ್, ಲಯನ್ಸ್ dist. 317C), ಅಧ್ಯಕ್ಷರಾಗಿ ಡಾ. ನಿಶಾಂತ್ ಭಟ್ (ಅಧ್ಯಕ್ಷರು,ಲಯನ್ಸ್ ಕ್ಲಬ್ ,ಮಣಿಪಾಲ) ಮುಖ್ಯ ಅತಿಥಿಗಳಾಗಿ ಡಾ. ಅನಿಲ್ ಕುಮಾರ್ ಎಂ ಎನ್ (ಅಧ್ಯಕ್ಷರು, ಇಂಡಿಯನ್ ಸೈಕ್ಯಾಟ್ರಿಕ್ ಸೊಸೈಟಿ ಕರ್ನಾಟಕ ಚಾಪ್ಟರ್), ಡಾ. ಪಿ. ವಿ. ಭಂಡಾರಿ (ನಿರ್ದೇಶಕರು ಡಾ. ಎ.ವಿ ಬಾಳಿಗಾ ಸಮೂಹ ಸಂಸ್ಥೆಗಳು, ಉಡುಪಿ) , ಲಯನ್ ಕೇಶವ್ ಅಮೀನ್ (ಲಯನ್ಸ್ ಗ್ಲೋಬಲ್ ಸರ್ವಿಸ್ ಟೀಮ್), ಲಯನ್ ಡಾ. ಎಚ್ ಗಣೇಶ್ ಪೈ (ಸಂಯೋಜಕರು ಮೆಂಟಲ್ ಹೆಲ್ತ್ ಅಂಡ್ ವೆಲ್ ಬೀಯಿಂಗ್ ವೀಕ್), ಲಯನ್ ಸುದರ್ಶನ್ ನಾಯಕ್ (ಪ್ರಾಂತೀಯ ಮುಖ್ಯಸ್ಥರು) ಇವರುಗಳು ಭಾಗವಹಿಸಿದ್ದರು. ಕಾರ್ಯಕ್ರಮದ ಆರಂಭದಲ್ಲಿ ಪ್ರಾರ್ಥನೆಯನ್ನು ಅಭಯ ಪುನರ್ವಸತಿ ಕೇಂದ್ರದ ನಿವಾಸಿಗಳಾದ ನಾಗವೇಣಿ ಮತ್ತು ಶಶಿಪ್ರಭಾ ಇವರು ನಡೆಸಿಕೊಟ್ಟರು. ಈ ಒಂಬತ್ತು ದಿನದ ಕಾರ್ಯಕ್ರಮಗಳನ್ನ ವಿವರಿಸುತ್ತಾ ಸಭೆಯಲ್ಲಿ ಇರುವಂತಹ ಗಣ್ಯರನ್ನು ಡಾ. ಎ ವಿ ಬಾಳಿಗ ಸ್ಮಾರಕ ಆಸ್ಪತ್ರೆಯ ಆಡಳಿತ ಅಧಿಕಾರಿಗಳಾಗಿರುವಂತಹ ಶ್ರೀಮತಿ ಸೌಜನ್ಯ ಶೆಟ್ಟಿ ಇವರು ಸ್ವಾಗತಿಸಿದರು. ದೀಪ ಪ್ರಜ್ವಲನೆಯ ಮುಖಾಂತರ ಕಾರ್ಯಕ್ರಮದ ವಿದ್ಯುಕ್ತ ಆರಂಭವಾಯಿತು. ತದನಂತರ ಉದ್ಘಾಟಕರ ಮಾತುಗಳನ್ನಾಡಿ ಲಯನ್ಸ್ ಸಂಸ್ಥೆಯ ಸೇವಾ ಕಾರ್ಯಗಳನ್ನು ಶ್ರೀಮತಿ ಸ್ವಪ್ನ ಸುರೇಶ್ ಅವರು ತಿಳಿಸಿಕೊಟ್ಟರು. ಮುಖ್ಯ ಅತಿಥಿಗಳಾದ ಡಾ. ಅನಿಲ್ ಕುಮಾರ್ ಎಂ ಎನ್ ಇವರು ಮಾತನಾಡಿ ಈ ಕಾರ್ಯಕ್ರಮದ ಪ್ರಸ್ತುತತೆಯ ಬಗ್ಗೆ ತಿಳಿಸಿದರು. ನಂತರ ಮುಖ್ಯ ಅತಿಥಿಗಳಲ್ಲಿ ಓದುವರಾದ ಕಾರ್ಯಕ್ರಮದ ಮುಖ್ಯ ರೂವಾರಿಗಳಲ್ಲಿ ಒಬ್ಬರಾದ ಡಾ. ಟಿವಿ ಭಂಡಾರಿ ಇವರು ಮಾತನಾಡಿ ಒಂಬತ್ತು ದಿನಗಳ ಕಾರ್ಯಕ್ರಮದ ರೂಪರೇಷೆ ಸಂಯೋಜನೆಗೊಂಡ ಬಗೆಯ ಬಗ್ಗೆ ತಿಳಿಸಿದರು. ತದನಂತರ ಮತ್ತೂರು ಮುಖ್ಯ ಅತಿಥಿಗಳು ಹಾಗೂ ಈ ಕಾರ್ಯಕ್ರಮದ ಸಂಯೋಜಕರಾದ ಲಯನ್ ಡಾಕ್ಟರ್ ಎಚ್ ಗಣೇಶ್ ಪೈವರು ಮಾತನಾಡಿ ಕಾರ್ಯಕ್ರಮದ ಆ ಯೋಜನೆಯನ್ನು ಶ್ಲಾಘಿಸುತ್ತಾ ಪ್ರತೀ ವರ್ಷವೂ ಈ ಕಾರ್ಯಕ್ರಮವನ್ನು ಲಯನ್ಸ್ ಕ್ಲಬ್ ವತಿಯಿಂದ ಆಯೋಜಿಸುವುದಾಗಿ ಘೋಷಿಸಿದರು. ಲಯನ್ ಕೇಶವ್ ಅಮೀನ್ ಇವರು ಮಾತನಾಡಿ ಕಾರ್ಯಕ್ರಮಕ್ಕೆ ಶುಭ ಕೋರಿದರು. ವೇದಿಕೆಯಲ್ಲಿದ್ದ ಎಲ್ಲಾ ಗಣ್ಯರಿಗೂ ಬಂಧು ದೀರ್ಘಕಾಲೀನ ಮಾನಸಿಕ ರೋಗಿಗಳ ಹಗಲು ಆರೈಕೆ ಕೇಂದ್ರದ ಸದಸ್ಯರುಗಳಿಂದ ನೆನಪಿನ ಕಾಣಿಕೆಯನ್ನು ನೀಡಿ ಗೌರವಿಸಿದರು. ಅಧ್ಯಕ್ಷೀಯ ಭಾಷಣವನ್ನು ಮಾಡಿದ ಡಾ. ನಿಶಾಂತ ಭಟ್ ಇವರು ಕಾರ್ಯಕ್ರಮದ ಧ್ಯೇಯವನ್ನು ತಿಳಿಸಿ ಶುಭಕೋರಿದರು. ಶ್ರೀಮತಿ ಪದ್ಮ ರಾಘವೇಂದ್ರ ಇವರು ಎಲ್ಲಾ ಗಣ್ಯರಿಗೂ ವಂದನೆಗಳನ್ನು ಸಲ್ಲಿಸಿದರು. ಸಭಾ ಕಾರ್ಯಕ್ರಮದ ನಂತರ ಅಭಯ ಪುನರ್ವಸತಿ ಕೇಂದ್ರ ಹಾಗೂ ಬಂಧು ದೀರ್ಘಕಾಲಿನ ಮಾನಸಿಕ ರೋಗಿಗಳ ಹಗಲು ಆರೈಕೆ ಕೇಂದ್ರ ಇವರ ಸದಸ್ಯರುಗಳಿಂದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.