ಡಾ. ಎ. ವಿ. ಬಾಳಿಗಾ ಸ್ಮಾರಕ ಆಸ್ಪತ್ರೆ, ದೊಡ್ಡಣಗುಡ್ಡೆ, ಉಡುಪಿಯಲ್ಲಿ ಇಂದು, ದಿನಾಂಕ 12-04-2025 ನೇ ಶನಿವಾರ, ಮಧ್ಯಾಹ್ನ ಗಂಟೆ 3:30ಕ್ಕೆ ಇನ್ವೆಂಜರ್ ಟೆಕ್ನಲೋಜಿಸ್ ಪ್ರೈ.ಲಿ., ಮಂಗಳೂರು ಇವರು ಕೊಡಮಾಡುವ ನೂತನ ಡಯಾಲಿಸಿಸ್ ಘಟಕವನ್ನು ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ ಶ್ರೀ ಶ್ರೀ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿಯವರು ತಮ್ಮ ಅಮೃತಹಸ್ತದಿಂದ ಉದ್ಘಾಟಿಸಿದರು.
ಈ ಉದ್ಘಾಟನಾ ಕಾರ್ಯಕ್ರಮದಲ್ಲಿ ಇನ್ವೆಂಜರ್ ಟೆಕ್ನಲೋಜಿಸ್ ಪ್ರೈ.ಲಿ., ಮಂಗಳೂರು ಇದರ ಪದಾಧಿಕಾರಿಗಳಾದ ಶ್ರೀ ಕೃಷ್ಣ ಮೋಹನ್ ಪೈ, ಸತ್ಯೇಂದ್ರ ಪೈ ಹಾಗೂ ಧರ್ಮೇಂದ್ರ ಮಲ್ಯ ಅವರು ಭಾಗವಹಿಸಿದ್ದರು. ಡಾ. ಎ. ವಿ. ಬಾಳಿಗಾ ಸ್ಮಾರಕ ಆಸ್ಪತ್ರೆ, ದೊಡ್ಡಣಗುಡ್ಡೆ, ಉಡುಪಿಯ ವೈದ್ಯಕೀಯ ನಿರ್ದೇಶಕರಾದ ಡಾ. ಭಂಡಾರಿಯವರು ಹಾಗೂ ಆಸ್ಪತ್ರೆಯ ಎಲ್ಲಾ ವೈದ್ಯರಾದಿಯಾಗಿ ಸಮಸ್ತ ಸಿಬ್ಬಂದಿ ವರ್ಗದವರು ಭಾಗವಹಿಸಿದರು.
ಡಾ. ಎ. ವಿ. ಬಾಳಿಗಾ ಸ್ಮಾರಕ ಆಸ್ಪತ್ರೆ, ದೊಡ್ಡಣಗುಡ್ಡೆ, ಉಡುಪಿಯಲ್ಲಿ ಡಯಾಲಿಸಿಸ್ ಸೇವೆ ಲಭ್ಯವಿದೆ. ಅಗತ್ಯವಿರುವವರು ಈ ಸೇವೆಯನ್ನು ಪಡೆದುಕೊಳ್ಳಬಹುದು.