ಕಮಲ್ ಎ. ಬಾಳಿಗಾ ಚಾರಿಟೇಬಲ್ ಟ್ರಸ್ಟ್, ಮುಂಬಯಿ; ಡಾ. ಎ. ವಿ. ಬಾಳಿಗಾ ಸ್ಮಾರಕ ಆಸ್ಪತ್ರೆ ದೊಡ್ಡಣಗುಡ್ಡೆ, ಉಡುಪಿ; ಶ್ರೀ ಜನಾರ್ದನ ಮತ್ತು ಶ್ರೀ ಮಹಾಕಾಳಿ ದೇವಸ್ಥಾನ ಅಂಬಲಪಾಡಿ, ಉಡುಪಿ; ಭಾರತೀಯ ವೈದ್ಯಕೀಯ ಸಂಘ ಉಡುಪಿ-ಕರಾವಳಿ; ರೋಟರಿ ಕ್ಲಬ್ ಉಡುಪಿ-ಮಣಿಪಾಲ ಜಂಟಿಯಾಗಿ ಆಯೋಜಿಸುತ್ತಿರುವ 33ನೇ ಮದ್ಯವ್ಯಸನ ವಿಮುಕ್ತಿ ಮತ್ತು ವಸತಿ ಶಿಬಿರದ ಉದ್ಘಾಟನಾ ಸಮಾರಂಭವು ತಾರೀಖು 01-01-2025 ರಂದು ಸಾಯಂಕಾಲ 4:00 ಗಂಟೆಗೆ ಕಮಲ್ ಎ. ಬಾಳಿಗಾ ಸಭಾಗಂಣ,3 ನೇ ಮಹಡಿ, ಡಾ. ಎ.ವಿ. ಬಾಳಿಗಾ ಸ್ಮಾರಕ ಆಸ್ಪತ್ರೆ ಉಡುಪಿಯಲ್ಲಿ ನೆರವೇರಿತು.
ಶ್ರೀಮತಿ ಪೂರ್ಣಿಮಾ, ವೃತ್ತಿಪರ ಚಿಕಿತ್ಸಕರು, ಡಾ. ಎ. ವಿ. ಬಾಳಿಗಾ ಸ್ಮಾರಕ ಆಸ್ಪತ್ರೆ ದೊಡ್ಡಣಗುಡ್ಡೆ, ಉಡುಪಿ ಇವರ ಪ್ರಾರ್ಥನೆಯ ಮೂಲಕ ಕಾರ್ಯಕ್ರಮ ಪ್ರಾರಂಭವಾಯಿತು. ಶ್ರೀಮತಿ ಸೌಜನ್ಯ ಶೆಟ್ಟಿ, ಆಡಳಿತಾಧಿಕಾರಿ ಹಾಗೂ ಆಪ್ತಸಮಾಲೋಚಕಿ, ಡಾ. ಎ. ವಿ. ಬಾಳಿಗಾ ಸ್ಮಾರಕ ಆಸ್ಪತ್ರೆ ದೊಡ್ಡಣಗುಡ್ಡೆ, ಉಡುಪಿ ಇವರು ಕಾರ್ಯಕ್ರಮಕ್ಕೆ ಸರ್ವರನ್ನೂ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಡಾ. ಎನ್. ಬಿ. ವಿಜಯ್ ಬಲ್ಲಾಳ, ಧರ್ಮದರ್ಶಿಗಳು, ಶ್ರೀ ಜನಾರ್ದನ ಮತ್ತು ಶ್ರೀ ಮಹಾಕಾಳಿ ದೇವಸ್ಥಾನ ಅಂಬಲಪಾಡಿ, ಉಡುಪಿ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ ಶಿಬಿರಕ್ಕೆ ಶುಭಹಾರೈಸುವುದರ ಜೊತೆಗೆ ಮದ್ಯವ್ಯಸನ ಮುಕ್ತರಾಗುವಂತೆ ಶಿಬಿರಾರ್ಥಿಗಳಿಗೆ ತಿಳಿ ಹೇಳಿದರು.
ಮುಖ್ಯ ಅತಿಥಿಗಳಾದ ಡಾ. ಸುರೇಶ್ ಶೆಣೈ, ಕೀಲು ಮತ್ತು ಮೂಳೆರೋಗ ತಜ್ಞರು, ಅಧ್ಯಕ್ಷರು, ಭಾರತೀಯ ವೈದ್ಯಕೀಯ ಸಂಘ, ಉಡುಪಿ-ಕರಾವಳಿ ಇವರೂ ಸಹ ಇಂತಹ ಶಿಬಿರಗಳ ಮಹತ್ವವನ್ನು ವಿವರಿಸಿ, ಸದುಪಯೋಗ ಪಡೆಯುವಂತೆ ಶಿಬಿರಾರ್ಥಿಗಳಿಗೆ ತಿಳಿಸಿದರು.
ಏಳು ಮಂದಿ ಮದ್ಯ ವ್ಯಸನ ವಿಯುಕ್ತರಿಗೆ ಸನ್ಮಾನವನ್ನು ಮಾಡಲಾಯಿತು. ಒಂದಿಬ್ಬರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಂಡರು.
ಡಾ. ಅನಿಲ್ ಕುಮಾರ್ ಎಮ್. ಎನ್., ಸಹ ಪ್ರಾಧ್ಯಾಪಕರು, ಮನೋ ವೈದ್ಯಕೀಯ ವಿಭಾಗ, ಕೆ. ಎಮ್. ಸಿ. ಮಣಿಪಾಲ ಹಾಗೂ ನಿಯೋಜಿತ ಅಧ್ಯಕ್ಷರು, ಭಾರತೀಯ ಮನೋವೈದ್ಯಕೀಯ ಸಂಘ, ಕರ್ನಾಟಕ ಶಾಖೆ ಮತ್ತು Rtn, ಸುಭಾಷ್ ಬಂಗೇರ, ಅಧ್ಯಕ್ಷರು, ರೋಟರಿ ಕ್ಲಬ್ ಮಣಿಪಾಲ ಇವರುಗಳೂ ಸಹ ಶಿಬಿರಕ್ಕೆ ಶುಭ ಹಾರೈಸಿದರು.
ಕಾರ್ಯಕ್ರಮದ ಕೊನೆಯಲ್ಲಿ ಅಧ್ಯಕ್ಷರಾದ ಡಾ. . ಪಿ. ವಿ. ಭಂಡಾರಿ, ನಿರ್ದೇಶಕರು, ಡಾ. ಎ. ವಿ. ಬಾಳಿಗಾ ಸಮೂಹ ಸಂಸ್ಥೆಗಳು, ಉಡುಪಿ ಇವರು ಅಧ್ಯಕ್ಷೀಯ ಭಾಷಣವನ್ನು ಮಾಡಿದರು.
ಕಾರ್ಯಕ್ರಮದ ನಿರೂಪಣೆಯನ್ನು ಶ್ರೀಮತಿ ಪ್ರಮೀಳಾ ಡಿಸೋಜಾ, ದಾದಿಯರ ಮೇಲ್ವಿಚಾರಕರು, ಡಾ. ಎ. ವಿ.ಬಾಳಿಗಾ ಸ್ಮಾರಕ ಆಸ್ಪತ್ರೆ, ಉಡುಪಿ ಇವರು ನಿರ್ವಹಿಸಿದರೆ, ಶ್ರೀ ನಾಗರಾಜ ಮೂರ್ತಿ, ಮನಃಶಾಸ್ತ್ರಜ್ಞರು, ಡಾ. ಎ. ವಿ. ಬಾಳಿಗಾ ಸಮೂಹ ಸಂಸ್ಥೆಗಳು, ಉಡುಪಿ ಇವರು ಧನ್ಯವಾದವನ್ನು ಸಮರ್ಪಿಸಿದರು. ಜನವರಿ ೧೦ ರ ವರೆಗೆ ಈ ೩೩ನೇ ಮದ್ಯವ್ಯಸನ ವಿಮುಕ್ತಿ ಮತ್ತು ವಸತಿ ಶಿಬಿರವು ಒಟ್ಟು ಹತ್ತು ದಿನಗಳ ಕಾಲ ನಡೆಯಲಿದೆ.