ದಿನಾಂಕ 16.11.2024 ರಂದು ವನ್ ಗುಡ್ ಸ್ಟೆಪ್ .ರಿ. ಬೆಂಗಳೂರು ಹಾಗೂ ಜೆನೆಸಿಸ್ ಪ್ಯಾಕೇಜಿಂಗ್ ಪ್ರೈವೇಟ್ .ಲಿಮಿಟೆಡ್ ಹಿರಿಯಡ್ಕ
ವೈದ್ಯಕೀಯ ಸಂಘ ಉಡುಪಿ ಕರಾವಳಿ.
ಕಮಲ್.ಎ.ಬಾಳಿಗ ಚಾರಿಟೇಬಲ್ ಟ್ರಸ್ಟ್. ರಿ.ಮುಂಬೈ ಡಾ.ಎ.ವಿ. ಬಾಳಿಗ ಸ್ಮಾರಕ ಆಸ್ಪತ್ರೆ ಉಡುಪಿ.
ಇವುಗಳ ಜಂಟಿ ಆಶ್ರಯದಲ್ಲಿ
ಬನ್ನಂಜೆ ಡಾ.ಬಿ.ಆರ್.ಅಂಬೇಡ್ಕರ್ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯ ಬನ್ನಂಜೆಯ ವಿದ್ಯಾರ್ಥಿಗಳಿಗೆ ನಿಲಯದಲ್ಲಿ ಆಯೋಜನೆ ಮಾಡಿದ ಉಚಿತ ಕಣ್ಣಿನ ತಪಾಸಣೆ ಹಾಗೂ ಆರೋಗ್ಯ ಶಿಬಿರವನ್ನು ಉದ್ಘಾಟನೆಯನ್ನು ವೈದ್ಯಕೀಯ ಸಂಘ ಉಡುಪಿ ಕರಾವಳಿಯ ಅಧ್ಯಕ್ಷರು ಹಾಗೂ ಮೂಳೆ ತಜ್ಞರಾದ ಡಾ.ಸುರೇಶ್ ಶೈಣೈ ರವರು ನೆರವೇರಿಸಿದರು ಈ ಸಂದರ್ಭದಲ್ಲಿ ಮಕ್ಕಳಲ್ಲಿ ಆರೋಗ್ಯದ ಮಾಹಿತಿ ಹಾಗೂ ಸಾಧಿಸುವ ಛಲ ಬಲಗೊಳ್ಳಬೇಕು ಎಂದು ಮಕ್ಕಳಿಗೆ ಕಿವಿ ಮಾತು ಹೇಳಿದರು.
ಒನ್ ಗುಡ್ ಸ್ಟೇಪ್ ನ ಸ್ಥಾಪಕಾರದ ಶ್ರೀಮತಿ ಅಮಿತಾ ಪೈ ಡಾ.ಎ.ವಿ ಬಾಳಿಗ ಸ್ಮಾರಕ ಅಸ್ಪತ್ರೆಯ ಕಣ್ಣಿನ ತಜ್ಞೆ ಡಾ.ಲಾವಣ್ಯ ಜಿ.ರಾವ್ ವೈದ್ಯಕೀಯ ಅಧಿಕಾರಿ ಡಾ.ಪವನ್ ರೆಡ್ಡಿ, ದಂತ ವೈದ್ಯರಾದ ಡಾ.ಸ್ವಪ್ನ ಹಾಗೂ ಉಡುಪಿಯ ಪ್ರಸೂತಿ ತಜ್ಞರಾದ ಡಾ.ವಿಜಯ,
ಡಾ.ಎ.ವಿ ಬಾಳಿಗ ಆಸ್ಪತ್ರೆಯ ಆಡಳಿತಾಧಿಕಾರಿ ಶ್ರೀಮತಿ ಸೌಜನ್ಯ ಶೆಟ್ಟಿ ಉಪಸ್ಥಿತಿ ಇದ್ದರು.
ವಿದ್ಯಾರ್ಥಿನಿ ನಿಲಯದ ವಾರ್ಡನ್ ಶ್ರೀಮತಿ ಲಲಿತ ಭಟ್ ಸ್ವಾಗತಿಸಿದರು.
ವಿದ್ಯಾರ್ಥಿನಿಯರಾದ ಕು.ಗೌತಮಿ ನಿರೂಪಿಸಿದರು ಕು.ಲಾವಣ್ಯ ಧನ್ಯವಾದಗಳನ್ನು ತಿಳಿಸಿ ದರು