Select Page

Date: October 18, 2024

ಕಮಲ್. ಎ. ಚಾರಿಟೇಬಲ್ ಟ್ರಸ್ಟ್, ಮುಂಬೈ ಹಾಗೂ ಡಾ. ಎ. ವಿ. ಬಾಳಿಗಾ ಸ್ಮಾರಕ ಆಸ್ಪತ್ರೆ, ದೊಡ್ಡಣಗುಡ್ಡೆ, ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ಇಂದು ತಾರೀಖು 18-10-2024 ರ ಶುಕ್ರವಾರದಂದು ಡಾ. ಎ. ವಿ. ಬಾಳಿಗಾ ಸ್ಮಾರಕ ಆಸ್ಪತ್ರೆಯಲ್ಲಿ ಮೂಳೆ ಸಾಂದ್ರತೆ ಮತ್ತು ಕೀಲು ತೊಂದರೆಗಳ ಉಚಿತ ತಪಾಸಣಾ ಶಿಬಿರವು ಬೆಳಿಗ್ಗೆ 9:00 ಗಂಟೆಯಿಂದ ಮಧ್ಯಾಹ್ನ 12:00 ಗಂಟೆಗಳ ಕಾಲ ನಡೆಯಿತು.
ಪ್ರಾರಂಭದಲ್ಲಿ ಸಭಾ ಕಾರ್ಯಕ್ರಮದಲ್ಲಿ ಡಾ. ಎ. ವಿ. ಬಾಳಿಗಾ ಸ್ಮಾರಕ ಆಸ್ಪತ್ರೆಯ‌ ವೈದ್ಯಕೀಯ ನಿರ್ದೇಶಕರಾದ ಡಾ. ಪಿ. ವೆಂಕಟರಾಯ ಭಂಡಾರಿಯವರು ಅಧ್ಯಕ್ಷತೆ ವಹಿಸಿದ್ದರು. ಮೂಳೆ ವೈದ್ಯರಾದ ಡಾ. ಕೇಶವ ನಾಯಕರು ಅತಿಥಿಯಾಗಿ ಪಾಲ್ಗೊಂಡಿದ್ದರು. ಡಾ. ಎ. ವಿ. ಬಾಳಿಗಾ ಸ್ಮಾರಕ ಆಸ್ಪತ್ರೆಯ‌ ವೈದ್ಯಾಧಿಕಾರಿಗಳಾದ ಡಾ. ಸುನಿಲ್ ಹಾಗೂ ಡಾ. ಪವನ್ ರೆಡ್ಡಿ ಮತ್ತು ಅನುಭವಿ ಫಿಸಿಯೋಥೆರಫಿಸ್ಟ್ ಶ್ರೀ ದಿನೇಶ್ ಅವರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಕುಮಾರಿ ಸಿಂಚನ ಪ್ರಾರ್ಥನೆಯ ಮೂಲಕ ವಿದ್ಯುಕ್ತವಾಗಿ ಚಾಲನೆ ನೀಡಿದರೆ, ಡಾ. ಪಿ. ವೆಂಕಟರಾಯ ಭಂಡಾರಿ ಹಾಗೂ ಡಾ. ಕೇಶವ ನಾಯಕರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ಮೂಳೆ ವೈದ್ಯರಾದ ಡಾ. ಕೇಶವ ನಾಯಕರು ಮೂಳೆಯ ಮಹತ್ವವನ್ನು ವಿವರಿಸುತ್ತಾ ಇಂದಿನ ತಪಾಸಣೆಯ ಅಂದರೆ ಮೂಳೆ ಸಾಂದ್ರತೆಯ ತಪಾಸಣೆಯ ಮಹತ್ವವನ್ನು ವಿವರಿಸಿದರು. ಅಧ್ಯಕ್ಷೀಯ‌ ಭಾಷಣದಲ್ಲಿ ಮಾತನಾಡಿದ ಡಾ. ಪಿ. ವೆಂಕಟರಾಯ ಭಂಡಾರಿಯವರು ಬಾಳಿಗಾ ಆಸ್ಪತ್ರೆ ಮಾನಸಿಕ ಆರೋಗ್ಯ ಕ್ಷೇತ್ರದಲ್ಲಿ ಮಾತ್ರವೇ‌ ಗುರುತಿಸಿಕೊಂಡಿದ್ದು, ಇನ್ನು ಮುಂದಕ್ಕೆ ದೈಹಿಕ ಆರೋಗ್ಯದ ವಿಭಾಗದಲ್ಲಿಯೂ ಮುಂದುವರೆಯುವ ಸಾಧ್ಯತೆಗಳ ಉಲ್ಲೇಖದೊಡನೆ ವಿವಿಧ ವಿಭಾಗಗಳನ್ನು ಪುನಶ್ಚೇತನಗೊಳಿಸುವ ಅಥವಾ ಹೊಸತಾಗಿ ಪ್ರಾರಂಭಿಸುವ ಕುರಿತಾದ ಮಾಹಿತಿಯನ್ನು ನೀಡಿದರು.
ಆಪ್ತಸಮಾಲೋಚಕರಾದ ಶ್ರೀ ವಿಶ್ವೇಶ್ವರ ಹೆಗಡೆಯವರು ಸ್ವಾಗತಿಸಿ ಕಾರ್ಯಕ್ರಮದ ನಿರೂಪಣೆಯನ್ನು ಮಾಡಿದರು. ಡಾ. ಎ. ವಿ. ಬಾಳಿಗಾ ಸ್ಮಾರಕ ಆಸ್ಪತ್ರೆಯ‌ ನರ್ಸಿಂಗ್ ಸೂಪರಿಂಟೆಂಡೆಂಟ್ ಆಗಿರುವ ಶ್ರೀಮತಿ ಪ್ರಮೀಳಾ ಅವರು ಕಾರ್ಯಕ್ರಮದ ಕೊನೆಯಲ್ಲಿ ಧನ್ಯವಾದ ಸಮರ್ಪಿಸಿದರು.
ಬೆಳಿಗ್ಗೆ 9:00 ರಿಂದ 12:00 ವರೆಗೆ ಮೂಳೆ ಸಾಂದ್ರತೆ ಮತ್ತು ಕೀಲು ತೊಂದರೆಗಳ ಉಚಿತ ತಪಾಸಣಾ ಶಿಬಿರದಲ್ಲಿ ಮೂಳೆ‌ ಸಾಂದ್ರತೆ ಪರೀಕ್ಷೆ ಮಾಡಿ, ಮೂಳೆ ವೈದ್ಯ ಡಾ. ಕೇಶವ ನಾಯಕರು ತಪಾಸಣೆ ಮಾಡಿ ಔಷಧಿಯೇನಾದರೂ ಅಗತ್ಯವಿದ್ದರೆ ಉಚಿತವಾಗಿ ಔಷಧಿಯನ್ನೂ ಸಹ‌ ವಿತರಿಸಲಾಯಿತು. ಒಟ್ಟು 80 ಕ್ಕೂ ಹೆಚ್ಚು ಮಂದಿಗಳು ಪ್ರಯೋಜನವನ್ನು ಪಡೆದರು.