Select Page

Date: January 10, 2023

ಡಾ. ಎ. ವಿ. ಬಾಳಿಗಾ ಸ್ಮಾರಕ ಆಸ್ಪತ್ರೆ, ಉಡುಪಿ; ಕಮಲ್ ಎ. ಬಾಳಿಗಾ ಚಾರಿಟೇಬಲ್ ಟ್ರಸ್ಟ್, ಮುಂಬಯಿ; ಭಾರತೀಯ ವೈದ್ಯಕೀಯ ಸಂಘ, ಉಡುಪಿ- ಕರಾವಳಿ; ಹಾಜಿ ಅಬ್ದುಲ್ಲಾ ಚಾರಿಟೇಬಲ್ ಟ್ರಸ್ಟ್, ಉಡುಪಿ ಇವರ ಜಂಟಿ ಆಶ್ರಯದಲ್ಲಿ 31ನೇ ಉಚಿತ ಮದ್ಯವ್ಯಸನ ವಿಮುಕ್ತಿ ಶಿಬಿರವು ದಿನಾಂಕ 01-01- 2023 ರಿಂದ 10-01-2023 ರ ವರೆಗೆ ಡಾ. ಎ.ವಿ. ಬಾಳಿಗಾ ಸ್ಮಾರಕ ಆಸ್ಪತ್ರೆ, ಉಡುಪಿ ಯ ಕಮಲ್ ಎ. ಬಾಳಿಗಾ ಸಭಾಂಗಣದಲ್ಲಿ ಯಶಸ್ವಿಯಾಗಿ  ನಡೆಯಿತು. ಒಟ್ಟು 45 ಶಿಬಿರಾರ್ಥಿಗಳು ಈ ಶಿಬಿರದ ಪ್ರಯೋಜವನ್ನು ಪಡೆದಿದ್ದಾರೆ. ಈ ಉಚಿತ ಶಿಬಿರದ ಸಮಾರೋಪ ಸಮಾರಂಭವು ಇಂದು ದಿನಾಂಕ 10-01-2023 ರ ಮಂಗಳವಾರದಂದು ನಡೆಯಿತು. ಸಮಾರೋಪ ಸಮಾರಂಭದಲ್ಲಿ ಶ್ರೀ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು, ಪಲಿಮಾರು ಮಠ, ಉಡುಪಿ ಇವರು ಹಿತವಚನವನ್ನು ನೀಡಿದರು. ಮುಖ್ಯ ಅತಿಥಿಗಳಾಗಿ ಶ್ರೀ ಶಂಕರ್ ನಾಯ್ಕ, ಸಹಾಯಕ ಔಷಧ ನಿಯಂತ್ರಕರು, ಉಡುಪಿ ವೃತ್ತ ಇವರು ಭಾವಪೂರ್ಣವಾಗಿ ಮಾತಾಡಿದರು. ಹಾವು ಚೇಳುಗಳಿಂದ ಕಚ್ಚಿಸಿಕೊಂಡು ಗುಡ್ಡಗಾಡುಗಳಲ್ಲಿ ಕಾಲಕಳೆಯುವ ಮದ್ಯವ್ಯಸನಿಗಳ ಮಕ್ಕಳ ಕುರಿತಾಗಿ ಹೇಳಿದರು. ಮದ್ಯವ್ಯಸನವನ್ನು ವರ್ಜಿಸುವುದೇ ಶ್ರೇಯಸ್ಕರ ಎಂದು ಅಭಿಪ್ರಾಯಪಟ್ಟರು.
ಡಾ. ನರೇಂದ್ರ ಕುಮಾರ್, ಮೂಳೆರೋಗ ತಜ್ಞರು ಮತ್ತು ವೈದ್ಯಕೀಯ ನಿರ್ದೇಶಕರು, ಸುನಾಗ್ ಆಸ್ಪತ್ರೆ, ಉಡುಪಿ ಇವರು ಅತ್ಯಂತ ಕಾಳಜಿಯುಕ್ತವಾಗಿ ಮದ್ಯವರ್ಜನೆಯ ಬಗ್ಗೆ ಹೆಳುತ್ತಾ ಇಂತಹ ಶಿಬಿರಗಳ ಆಯೋಜನೆ ಕಡಿಮೆಯಾಗುತ್ತಾ ಬಂದು ಆರೋಗ್ಯವಂತ ಸಮಾಜದ ನಿರ್ಮಾಣವಾಗಬೇಕೆಂದು ಹೇಳಿರುವುದು ಅತ್ಯಂತ ವಿಶೇಷವೂ, ಪ್ರಮುಖವೂ ಆದ ಅಂಶ. ಡಾ. ಕೇಶವ್ ನಾಯಕ್, ಮೂಳೆರೋಗ ತಜ್ಞರು, ಹೈ-ಟೆಕ್ ಆಸ್ಪತ್ರೆ, ಉಡುಪಿ ಹಾಗೂ ಕಾರ್ಯದರ್ಶಿ, ಐ.ಎಮ್. ಎ. ಉಡುಪಿ-ಕರಾವಳಿ ಇವರು ಉಪಸ್ಥಿತರಿದ್ದರು. ಡಾ. ಎ. ವಿ. ಬಾಳಿಗಾ ಸ್ಮಾರಕ ಆಸ್ಪತ್ರೆ, ಉಡುಪಿಯ ಮನೋವೈದ್ಯರುಗಳಾದ ಡಾ. ವಿರೂಪಾಕ್ಷ ದೇವರಮನೆಯವರು ತಮ್ಮ ಅಧ್ಯಕ್ಷೀಯ‌ ನುಡಿಯಲ್ಲಿ ಶಿಬಿರದಲ್ಲಿ ಶಿಬಿರಾರ್ಥಿಗಳಾಗಿ ಭಾಗವಹಿಸಿದವರಿಗೆ ಸೂಚನೆಗಳನ್ನು ಮಾರ್ಗಸೂಚಿಗಳನ್ನು ಮರೆಯದೇ ನೀಡಿದರು. ಡಾ. ಎ. ವಿ. ಬಾಳಿಗಾ ಸ್ಮಾರಕ ಆಸ್ಪತ್ರೆ, ಉಡುಪಿಯ ಮನೋವೈದ್ಯರುಗಳಾದ ಡಾ. ದೀಪಕ್ ಮಲ್ಯ, ಡಾ. ಮಾನಸ್ ಈ. ಆರ್ ಉಪಸ್ಥಿತರಿದ್ದರು. ಆಪ್ತಸಮಾಲೋಚಕಿಯಾದ ಶ್ರೀಮತಿ ಪೂರ್ಣಿಮಾರವರು ಸ್ತುತಿಯ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರೆ ಕಾರ್ಯಕ್ರಮವನ್ನು ಆಪ್ತಸಮಾಲೋಚಕಿಯಾದ ಶ್ರೀಮತಿ ಪದ್ಮಾ ರಾಘವೇಂದ್ರ ಅವರು ನಿರೂಪಿಸಿದರು. ಆಪ್ತಸಮಾಲೋಚಕಿಯಾದ ಶ್ರೀಮತಿ ದೀಪಶ್ರಿಯವರು ಶಿಬಿರದ ವರದಿಯನ್ನು ವಾಚಿಸಿದರು. ಆಡಳಿತಾಧಿಕಾರಿಣಿಯಾದ ಶ್ರೀಮತಿ ಸೌಜನ್ಯ‌ ಶೆಟ್ಟಿಯವರು ಶ್ರೀ ಶ್ರೀ ಪಲಿಮಾರು ಶ್ರೀಗಳವರ ಕುರಿತಾಗಿ ಅಚ್ಚುಕಟ್ಟಾದ ವಿವರಗಳುಳ್ಳ ಮಾಹಿತಿಯನ್ನು ನೀಡಿದರೆ ಕೊನೆಯಲ್ಲಿ ಶ್ರೀ ನಾಗರಾಜ ಮೂರ್ತಿಯವರು ಧನ್ಯವಾದವನ್ನು ಸಲ್ಲಿಸಿದರು.