Select Page

Date: November 20, 2022

ದಿನಾಂಕ 19-11-2022 ರ ಶನಿವಾರ ಬೆಳಿಗ್ಗೆ 9.30ಕ್ಕೆ ಜಿಲ್ಲಾ ಪಂಚಾಯತ್, ಉಡುಪಿ; ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಉಡುಪಿ ಜಿಲ್ಲೆ;             ಡಾ. ಎ. ವಿ. ಬಾಳಿಗಾ ಸ್ಮಾರಕ ಆಸ್ಪತ್ರೆ ಉಡುಪಿ; ಚೈಲ್ಡ್ ಲೈನ್ 1098 ಉಡುಪಿ; ಭಾರತೀಯ ವೈದ್ಯಕೀಯ ಸಂಘ ಉಡುಪಿ- ಕರಾವಳಿ; ಕಮಲ್. ಎ. ಬಾಳಿಗಾ ಚಾರಿಟೇಬಲ್ ಟ್ರಸ್ಟ್ ಮುಂಬೈ; ರೋಟರಿ ಉಡುಪಿ ಹಾಗೂ ಶಿಕ್ಷಣ ಇಲಾಖೆ ಉಡುಪಿ ಇವರ ಜಂಟಿ ಆಶ್ರಯದಲ್ಲಿ ಮಕ್ಕಳ ದಿನಾಚರಣೆ ಮತ್ತು ಚೈಲ್ಡ್ ಲೈನ್ ಸೇ ದೋಸ್ತಿ ಸಪ್ತಾಹದ ಅಂಗವಾಗಿ ಮಕ್ಕಳ ಮಾರ್ಗದರ್ಶನಕ್ಕಾಗಿ “ಆಪ್ತಸಮಲೋಚಕರಾಗಿ ಶಿಕ್ಷಕರು” ಎಂಬ ವಿಷಯದ ಕುರಿತು ಒಂದು ದಿನದ ಮಾಹಿತಿ ಕಾರ್ಯಗಾರವನ್ನು ಡಾ. ಎ. ವಿ. ಬಾಳಿಗಾ ಸ್ಮಾರಕ ಆಸ್ಪತ್ರೆ ಉಡುಪಿಯ ಕಮಲ್. ಎ. ಬಾಳಿಗ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮವನ್ನು ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಉಡುಪಿಯ ಸದಸ್ಯ ಕಾರ್ಯದರ್ಶಿಯಾಗಿರುವ ಶ್ರೀಮತಿ ಶರ್ಮಿಳ ಎಸ್ ಇವರು ಉದ್ಘಾಟಿಸಿದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶ್ರೀ ಶಿವರಾಜ್, ಡಿಡಿಪಿಐ ಉಡುಪಿ; ಶ್ರೀ ಅಶೋಕ್ ಕಾಮತ್, ಉಪಪ್ರಾಂಶುಪಾಲರು ಡಯಟ್ ಉಡುಪಿ; ಶ್ರೀ ರಾಮಚಂದ್ರ ಉಪಾಧ್ಯಾಯ, ನಿರ್ದೇಶಕರು ಮಕ್ಕಳ ಸಹಾಯವಾಣಿ 1098 ಉಡುಪಿ; ರೋಟರಿಯನ್ ಗುರುರಾಜ್ ಭಟ್, ಕಾರ್ಯದರ್ಶಿ, ರೋಟರಿ ಉಡುಪಿ; ಶ್ರೀ ಚಂದ್ರೇ ಗೌಡ, ಕ್ಷೇತ್ರ ಶಿಕ್ಷಣಾಧಿಕಾರಿ ಉಡುಪಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಕ್ಕಳ ಶೋಷಣೆಯ ವಿರುದ್ಧ ನಾವೆಲ್ಲರೂ ಹೋರಾಡುತ್ತೇವೆ ಎಂದು ನೆರೆದಿದ್ದ ಎಲ್ಲರಿಗೂ ಶ್ರೀಮತಿ ಶರ್ಮಿಳ ಎಸ್ ಪ್ರಮಾಣವಚನವನ್ನು ಬೋಧಿಸಿದರು.

 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಾರತೀಯ ವೈದ್ಯಕೀಯ ಸಂಘ ಉಡುಪಿ ಕರಾವಳಿಯ ಅಧ್ಯಕ್ಷರು ಹಾಗೂ ಡಾ. ಎ. ವಿ. ಬಾಳಿಗ ಸ್ಮಾರಕ ಆಸ್ಪತ್ರೆ, ಉಡುಪಿಯ ವೈದ್ಯಕೀಯ ನಿರ್ದೇಶಕರು, ಖ್ಯಾತ ಮನೋವೈದ್ಯ ಡಾ. ಪಿ. ವಿ. ಭಂಡಾರಿಯವರು ವಹಿಸಿದ್ದರು.

ಆಪ್ತಸಮಲೋಚಕಾರದ ಶ್ರೀಮತಿ ಪದ್ಮ ರಾಘವೇಂದ್ರ ಪ್ರಾರ್ಥಿಸಿದರು. ಶ್ರೀರಾಮಚಂದ್ರ ಉಪಾಧ್ಯಾಯ ಇವರು ಸ್ವಾಗತಿಸಿದರು. ಮನಃಶಾಸ್ತ್ರಜ್ಞರಾದ ಶ್ರೀ ನಾಗರಾಜ್ ಮೂರ್ತಿ ವಂದಿಸಿದರು ಹಾಗೂ ದಾದಿಯರಾದ ಶ್ರೀಮತಿ ಪ್ರಮೀಳಾ ಡಿಸೋಜ ಮತ್ತು ಶ್ರೀಮತಿ ಶೈಲ ಡಿಕೋಸ್ಟಾ ಇವರು ನಿರೂಪಿಸಿದರು. ಉದ್ಘಾಟನಾ ಸಮಾರಂಭದ ನಂತರ ಮಾಹಿತಿ ಕಾರ್ಯಗಾರ ನಡೆಯಿತು.

  1. ಮಕ್ಕಳ ಶೋಷಣೆ, ಗುರುತಿಸುವಿಕೆ, ಮಕ್ಕಳ ಶೋಷಣೆಗೆ ಮನೋ ಸಾಮಾಜಿಕ ಕಾರಣಗಳು ಮತ್ತು ಶೋಷಣೆಯ ದೀರ್ಘಕಾಲಿಕ ಪರಿಣಾಮಗಳು ಈ ಕುರಿತಾದ ಮಾಹಿತಿಯನ್ನು ಮನೋವೈದ್ಯ ಹಾಗೂ ಲೇಖಕರಾದ ಡಾ. ಪಿ. ವಿ. ಭಂಡಾರಿಯವರು ನೀಡಿದರು.
  2. ಆಪ್ತ ಸಲಹೆಗಾರರಾಗಿ ಶಿಕ್ಷಕರು ವಿಷಯದ ಕುರಿತಾಗಿ ಶ್ರೀ ಅಶೋಕ ಕಾಮತ್ ರವರು ವಿವರಿಸಿದರು.
  3. ಕಲಿಕ ತೊಂದರೆ ಮತ್ತು ಕಾರಣಗಳ ಕುರಿತಾಗಿ ಮನಃಶಾಸ್ತ್ರಜ್ಞರಾದ ಶ್ರೀ ನಾಗರಾಜ್ ಮೂರ್ತಿಯವರು ಮಾಹಿತಿ ನೀಡಿದರು.
  4. ಹದಿಹರೆಯದವರ ವರ್ತನಾ ಸಮಸ್ಯೆಗಳ ವಿವರಣೆಯನ್ನು ಆಪ್ತಸಮಾಲೋಚಕಿಯಾದ ಶ್ರೀಮತಿ ಪದ್ಮ ರಾಘವೇಂದ್ರರವರು ನೀಡಿದರು.
  5. ಮೊಬೈಲ್ ಮತ್ತು ಅಂತರ್ಜಾಲದ ಸದ್ಬಳಕೆಯ ಬಗ್ಗೆ ಮಾಹಿತಿಯನ್ನು ಆಪ್ತಸಮಾಲೋಚಕಿಯಾದ ಶ್ರೀಮತಿ ಸೌಜನ್ಯ ಶೆಟ್ಟಿಯವರು ನೀಡಿದರು.
  6. ಬೆಳವಣಿಗೆಯ ತೊಂದರೆಗಳು ಮತ್ತು ಗುರುತಿಸುವಿಕೆಯ ಕುರಿತಾದ ಮಾಹಿತಿಯನ್ನು ಮನೋವೈದ್ಯ ಡಾ. ದೀಪಕ್ ಮಲ್ಯ ಮಾಹಿತಿ ನೀಡಿದರು.
  7. ಶಿಕ್ಷಕರಲ್ಲಿ ಒತ್ತಡ ನಿರ್ವಹಣೆಯ ಕುರಿತಾದ ಮಾಹಿತಿಯನ್ನು ಮನೋವೈದ್ಯ ಡಾ. ಮಾನಸ್. ಇ. ಆರ್ ಅವರು ನೀಡಿದರು.
  8. ಮಕ್ಕಳಲ್ಲಿ ಭಾವನಾತ್ಮಕ ಸಮಸ್ಯೆಗಳ ಕುರಿತಾಗಿ ಮನೋವೈದ್ಯ ಹಾಗೂ ಲೇಖಕರಾದ ಡಾ. ವಿರೂಪಾಕ್ಷ ದೇವರಮನೆಯವರು ಮಾಹಿತಿಯನ್ನು ನೀಡಿದರು.