ಡಾ. ಎ. ವಿ. ಬಾಳಿಗ ಸಮೂಹ ಸಂಸ್ಥೆಯ ವತಿಯಿಂದ ವಿಶ್ವ ಹಿರಿಯ ನಾಗರಿಕರ ದಿನಾಚರಣೆಯು ಹಾರಾಡಿಯ ಡಾ. ಎ. ವಿ. ಬಾಳಿಗಾ ಹಿರಿಯ ನಾಗರಿಕರ ನಿವಾಸದಲ್ಲಿ ಬಾಳಿಗಾ ಸಂಸ್ಥೆಯ ಟ್ರಸ್ಟಿಯಾದ ಡಾ .ಆರ್. ವಿ ಬಾಳಿಗ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಮುಖ್ಯ ಅಥಿತಿಯಾಗಿ ಶ್ರೀಮತಿ ಸಂಧ್ಯಾ, ಶ್ರೀಯುತ ಅನಂತ ಇವರು ಭಾಗವಹಿಸಿದರು. ಕಮಲ್. ಎ. ಬಾಳಿಗಾ ಮೆಡಿಕಲ್ ಸೆಂಟರ್ ಹಾರಾಡಿ ಇದರ ಆರೋಗ್ಯ ಅಧಿಕಾರಿ ಡಾ. ಹರ್ಷವರ್ಧನ್ ಇವರು ಆರೋಗ್ಯ ಸಂರಕ್ಷಣೆ ಬಗ್ಗೆ, ಬಾಳಿಗ ಆಸ್ಪತ್ರೆಯ ಆಡಳಿತಾಧಿಕಾರಿ, ಲೇಖಕಿ ಶ್ರೀಮತಿ ಸೌಜನ್ಯ ಶೆಟ್ಟಿ ಇವರು ಮರೆಗುಳಿತನ ಕಾಯಿಲೆಯ ಬಗ್ಗೆ, ಶ್ರೀಮತಿ ಎಡ್ನಾ ರೋಡ್ರಿಗಸ್ ರವರು ದೈನಂದಿನ ಚಟುವಟಿಕೆ ಬಗ್ಗೆ ಸಂಪನ್ಮೂಲ ವ್ಯಕ್ತಿಗಳಾಗಿ ಮಾಹಿತಿ ನೀಡಿದರು. ಹಿರಿಯ ನಾಗರಿಕರಿಗಾಗಿ ನಡೆಸಿದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದರಿಗೆ ಬಹುಮಾನ ವಿತರಿಸಲಾಯಿತು. ಸಂಸ್ಥೆಯ ಮುಖ್ಯ ಲೆಕ್ಕಾಧಿಕಾರಿಗಳಾದ ಶ್ರೀಯುತ ಕರುಣಾಕರ ಶೆಟ್ಟಿಯವರು ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಆಶ್ರಯದ ಮೇಲ್ವಿಚಾರಕರಾದ ಶ್ರೀಯುತ ಗಣೇಶ್ ಕೋಟ್ಯಾನ್ ರವರು ಸ್ವಾಗತಿಸಿದರು. ವಿನಯ ಪೈ ಭಾರತಿ ಶೆಣೈ, ಜಯಶ್ರೀ ಭಟ್ ಪ್ರಾರ್ಥಿಸಿದರು. ಸಂಸ್ಥೆಯ ಸಿಬ್ಬಂದಿಗಳು, ಹಿರಿಯ ನಾಗರಿಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಡಾ. ಗೋಕುಲ್ ದಾಸ್ ಕಾಮತ್ ಧನ್ಯವಾದ ಸಮರ್ಪಿಸಿದರು. ಸಂಸ್ಥೆಯ ಸಮುದಾಯ ಕಾರ್ಯನಿರ್ವಾಹಕರಾದ ಶ್ರೀ ಸುರೇಶ್. ಎಸ್. ನಾವೂರು ರವರು ಕಾರ್ಯಕ್ರಮ ನಿರೂಪಿಸಿದರು.