Select Page

Date: October 23, 2021

 

ಕಮಲ್ ಎ ಬಾಳಿಗ ಚಾರಿಟೇಬಲ್ ಟ್ರಸ್ಟ್ ಮುಂಬೈ, ಡಾ ಎ ವಿ ಬಾಳಿಗ ಸ್ಮಾರಕ ಆಸ್ಪತ್ರೆ, ಉಡುಪಿ ಮಣಿಪಾಲ ಹೆರಿಗೆ ಮತ್ತು ಸ್ತ್ರೀ ರೋಗ ತಜ್ಞರ ಸಂಘ ಇವರ ಆಶ್ರಯದಲ್ಲಿ ವಿಶ್ವ ಋತುಬಂಧ ದಿನದ ಪ್ರಯುಕ್ತ ದಿನಾಂಕ 23/10/2021  ಋತುಬಂಧ ಕುರಿತು ಮಾಹಿತಿ  ಮತ್ತು ಮೂಳೆ ಸಾಂದ್ರತೆ ತಪಾಸಣ ಶಿಬಿರವನ್ನು  ಡಾ.  ಎ. ವಿ. ಬಾಳಿಗ ಸ್ಮಾರಕ ಆಸ್ಪತ್ರೆಯಲ್ಲಿ  ಆಯೋಜಿಸಲಾಯಿತು. ಈ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ  ಆಗಮಿಸಿದ ಡಾ.ಇಂದಿರಾ ಶಾನುಭಾಗ್ ಸ್ತ್ರೀ ರೋಗ ತಜ್ಞರು ಸಿಟಿ ಆಸ್ಪತ್ರೆ, ಉಡುಪಿ ಇವರು ಮಹಿಳೆಯರ ಋತುಬಂಧ, ಜೀವನ ಶೈಲಿ, ಸ್ವಚ್ಛತೆ, ಆಹಾರಕ್ರಮ ವ್ಯಾಯಾಮ ಯೋಗದ ಮಹತ್ವದ ಬಗ್ಗೆ ಮಾತನಾಡಿದರು. ಹಾಗೂ ಇನ್ನೋರ್ವ ಸಂಪನ್ಮೂಲ ವ್ಯಕ್ತಿಗಳಾದ ಡಾ. ರಾಜಲಕ್ಷ್ಮಿ , ಸ್ತ್ರೀ ರೋಗ ತಜ್ಞರು ಉಡುಪಿ ಇವರು ಮಹಿಳೆಯರ ಋತುಬಂಧದ ಬಗ್ಗೆ ಮಾಹಿತಿ ನೀಡಿದರು.   ಆಸ್ಪತ್ರೆಯ ಆಡಳಿತಾಧಿಕಾರಿಣಿಯಾದ ಶ್ರೀಮತಿ.  ಸೌಜನ್ಯ ಶೆಟ್ಟಿ ಉಪಸ್ಥಿತರಿದ್ದರು, ಕು.ಪಾವನ ಇವರಿಂದ ಪ್ರಾರ್ಥನೆ ಮಾಡಲಾಯಿತು, ನರ್ಸಿಂಗ್ ಸಿಬ್ಬಂದಿಯಾದ ಶ್ರೀಮತಿ. ಪ್ರಮೀಳಾ ಇವರು ಸ್ವಾಗತಿಸಿದರು. ಆಪ್ತಸಮಾಲೋಚಕಿಯಾದ ಶ್ರೀಮತಿ. ಪದ್ಮ ರಾಘವೇಂದ್ರ ವಂದಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು  ಕು. ಸುಚಿತ್ರ ಇವರು ನೆರವೇರಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಉಚಿತ ಮೂಳೆ ಖನಿಜ ಸಾಂದ್ರತೆ ತಪಾಸಣೆ ನಡೆಸಲಾಯಿತು. ದೊಡಣಗುಡ್ಡೆ ಪರಿಸರದ ಮಹಿಳೆಯರು ಕಾರ್ಯಕ್ರಮದ ಪ್ರಯೋಜನವನ್ನು ಪಡೆದರು