28 ನೇ ಮದ್ಯವ್ಯಸನ ವಿಮುಕ್ತಿ ಮತ್ತು ವಸತಿ ಶಿಬಿರವು ಕಮಲ್ ಎ.ಬಾಳಿಗಾ ಚಾರಿಟೆಬಲ್ ಟ್ರಸ್ಟ್, ಮುಂಬೈ ಡಾ.ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆ ದೊಡ್ಡಣಗುಡ್ಡೆ, ಭಾರತೀಯ ವೈದ್ಯಕೀಯ ಸಂಘ ಉಡುಪಿ-ಕರಾವಳಿ , ಹಾಜಿ ಅಬ್ದುಲ್ಲಾ ಚಾರಿಟೇಬಲ್ ಟ್ರಸ್ಟ್ ಉಡುಪಿ ಇವರ ಪ್ರಾಯೋಜಕತ್ವದಲ್ಲಿ ನಡೆಯಿತು.
ದಿನಾಂಕ 01.01.2021 ರಂದು 28ನೇ ಮದ್ಯ ವಿಮುಕ್ತಿ ಶಿಬಿರವನ್ನು ಡಾ. ಶಶಿಕಿರಣ್ ಉಮಾಕಾಂತ ವೈದ್ಯಕೀಯ ಅಧೀಕ್ಷಕರು ಮತ್ತು ಮುಖ್ಯಸ್ಥರು ಮೆಡಿಸಿನ್ ವಿಭಾಗ ಡಾ. ಟಿ.ಎಂ. ಎ ಪೈ ಆಸ್ಪತ್ರೆ ಉಡುಪಿ ಇವರು ಉದ್ಘಾಟಿಸಿದರು. ಪ್ರತಿ ವರ್ಷದಂತೆ ಮದ್ಯವ್ಯಸನ ವಿಮುಕ್ತಿಗೆ ಚಿಕಿತ್ಸೆ ಪಡೆದು ಮದ್ಯವ್ಯಸನದಿಂದ ಮುಕ್ತರಾದ 5 ಜನ ವ್ಯಸನ ಮುಕ್ತರಿಗೆ ಸನ್ಮಾನ ಮಾಡಲಾಯಿತು. ಈ ಸಂದರ್ಭದಲ್ಲಿ ಕರೋನ ತುರ್ತುಪರಿಸ್ಥಿಯಲ್ಲಿ ಸೇವೆ ಸಲ್ಲಿಸಿದ ಸಿಬ್ಬಂದಿ ವರ್ಗದವರಿಗೆ ಸನ್ಮಾನವನ್ನು ಮಾಡಲಾಯಿತು. ಶಿಬಿರದಲ್ಲಿ ಮುಖ್ಯ ಆತಿಥಿಗಳಾಗಿ ಮುಖ್ಯ ಅತಿಥಿಗಳಾಗಿ ಡಾ. ಶ್ರೀನಿವಾಸ್ ಭಟ್ ಮನೋವೈದ್ಯರು, , ವಿಭಾಗ ಮುಖ್ಯಸ್ಥರು, ಮಾನಸಿಕ ಆರೋಗ್ಯ ವಿಭಾಗ, ಕೆ.ಎಸ್. ಹೆಗ್ಡೆ ವೈದ್ಯಕೀಯ ಮಹಾ ವಿದ್ಯಾಲಯ ಮಂಗಳೂರು, ಡಾ. ಉಮೇಶ್ ಪ್ರಭು, ಅಧ್ಯಕ್ಷರು, ಭಾರತೀಯ ವೈದ್ಯಕೀಯ ಸಂಘ ( ಉಡುಪಿ-ಕರಾವಳಿ)ಭಾಗವಹಿಸಿದರು . ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಎ.ವಿ.ಬಾಳಿಗಾ ಸಮೂಹ ಸಂಸ್ಥೆಗಳ ನಿರ್ದೇಶಕರಾದ ಡಾ.ಪಿ.ವಿ.ಭಂಡಾರಿಯವರು ವಹಿಸಿದ್ದರು.
ಈ ಶಿಬಿರದಲ್ಲಿ ಒಟ್ಟು ಮೂವತ್ತು ಶಿಬಿರಾರ್ಥಿಗಳು ಭಾಗವಹಿಸಿದ್ದು 29 ಪುರುಷರು ಮತ್ತು ಒಬ್ಬರು ಮಹಿಳೆ ಇದ್ದು ಅವರಿಗೆ ನಮ್ಮ ಆಸ್ಪತ್ರೆಯ ಮಹಿಳೆಯರ ವಾರ್ಡಿನಲ್ಲಿ ಪ್ರತ್ಯೇಕ ವ್ಯವಸ್ಥೆಯನ್ನು ಮಾಡಲಾಗಿತ್ತು.
ಶಿಬಿರಾರ್ಥಿಗಳಲ್ಲಿ ಇಬ್ಬರು ಶಿಬಿರಾರ್ಥಿಗಳಿಗೆ ನಡುಕ ಸನ್ನಿ 3 ಜನರಿಗೆ ಖಿನ್ನತೆ 4 ಜನರಿಗೆ ಬೈಪೊಲಾರ್ ಮಾನಸಿಕ ಅಸ್ವಸ್ಥತೆ, ಇಬ್ಬರಿಗೆ, ಆತಂಕ ಮನೋಬೇನೆ 4 ಜನರಿಗೆ ಇಚ್ಚಿತ್ತ ಚಿತ್ತವಿಕಲತೆ, ಒಬ್ಬರಿಗೆ ಅಪಸ್ಮಾರ, ಮೂವರು ಶಿಬಿರಾರ್ಥಿಗಳಿಗೆ ಹಾಗೂ ಇತರೆ ಮಾನಸಿಕ ಅಸ್ಪಸ್ಥತೆ ಇರುವುದು ಕಂಡು ಬಂದಿದೆ, ಹಾಗೆಯೇ ಇಬ್ಬರಲ್ಲಿ ಸಕ್ಕರೆ ಕಾಯಿಲೆ ಮತ್ತು 17 ಜನರಲ್ಲಿ ಲಿವರ್ ಸಂಬಂಧಿತ ಸಮಸ್ಯಗಳು ಕಂಡುಬಂದಿದೆ.
ಶಿಬಿರದ ಕಾರ್ಯಚಟುವಟಿಕೆಗಳು ದಿನಾಂಕ 02.0.2021 ಆರಂಭಗೊಂಡಿದ್ದು. ಬೆಳಿಗ್ಗೆ 7 ಗಂಟೆಗೆ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಯೋಗಭ್ಯಾಸವನ್ನು ಹೇಳಿಕೊಡಲಾಯಿತು. ಪ್ರತಿನಿತ್ಯ ಶಿಬಿರಾರ್ಥಿಗಳ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ನುರಿತ ತಜ್ಞರಿಂದ ತಪಾಸಣೆ ನಡೆಸಿ ಅಗತ್ಯ ಚಿಕಿತ್ಸೆಯನ್ನು ನೀಡಲಾಯಿತು. ವೈದ್ಯಕೀಯ ತಪಾಸಣೆಯ ನಂತರ ವೈದ್ಯರಿಂದ, ಮನಶಾಸ್ತ್ರಜ್ಞರಿಂದ ಹಾಗೂ ಆಪ್ತ ಸಮಾಲೋಚಕರಿಂದ ಮದ್ಯವ್ಯಸನದ ದುಷ್ಪರಿಣಾಮಗಳು, ತಂಬಾಕಿನ ದುಷ್ಪರಿಣಾಮಗಳು, ಮದ್ಯಪಾನದ ತವಕ ನಿರ್ವಹಣೆ , ಔಷಧಿಗಳ ಬಗ್ಗೆ ವಿವರಣಾತ್ಮಕವಾಗಿ ಮಾಹಿತಿ ನೀಡಲಾಯಿತು. ಮಾಹಿತಿ ಕಾರ್ಯಾಗಾರದ ನಂತರ ಶಿಬಿರಾರ್ಥಿಗಳ ಭಾವನಾತ್ಮಕ ಮತ್ತು ಮನೋ ಸಾಮಾಜಿಕ ಸಮಸ್ಯೆ ಮತ್ತು ಅವರಲ್ಲಿರುವ ದ್ವಂದ್ವಕ್ಕೆ ಸೂಕ್ತವಾದ ವೈಜ್ಞಾನಿಕ ಸಲಹೆಗಳನ್ನು ಆಪ್ತ ಸಮಾಲೋಚಕರಿಂದ ನೀಡಲಾಯಿತು. ಸಂಜೆ ಶಿಬಿರಾರ್ಥಿಗಳ ಮನರಂಜನೆಗಾಗಿ ಆಟೋಟಗಳು ಮತ್ತು ಮನರಂಜನೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು. ಪ್ರತಿದಿನ ಅನಾಮಿಕ ಅಮಲಿಗಳ ಸಭೆಯಲ್ಲಿ ಅನಾಮಿಕ ಅಮಲಿಗಳು ತಾವು ಹೇಗೆ ಮದ್ಯವ್ಯಸನ ದಿಂದ ತೊಂದರೆಗೆ ಒಳಗಾದರೂ ಮತ್ತು ಹೇಗೆ ಪರಿಹಾರವನ್ನು ಕಂಡುಕೊಂಡ ಬಗ್ಗೆ ತಮ್ಮ ಅನುಭವವನ್ನು ಶಿಬಿರಾರ್ಥಿಗಳೊಂದಿಗೆ ಹಂಚಿಕೊಂಡರು. ದಿನದ ಅಂತ್ಯಕ್ಕೆ ಅವರವ ಧಾರ್ಮಿಕ ನಂಬಿಕೆಗೆ ಅನುಗುಣವಾಗಿ ಭಜನೆ ಕಾರ್ಯಕ್ರಮವನ್ನು ಭಜನೆ ತಂಡಗಳಿಂದ, ಸಿಬ್ಬಂದಿಗಳು ಹಾಗೂ ಶಿಬಿರಾರ್ಥಿಗಳಿಂದ ನಡೆಸಲಾಯಿತು.
ದಿನಾಂಕ 05.01.2021 ರಂದು ಮದ್ಯವ್ಯಸನಿಗಳ ಮಕ್ಕಳಿಗೆ ಪ್ರತಿ ವರ್ಷದಂತೆ ಮದ್ಯವ್ಯಸನದ ವಿರುದ್ಧ ಮಕ್ಕಳ ಸೈನ್ಯ ಎಂಬ ತಲೆಬರಹದಡಿಯಲ್ಲಿ ನೀನು ಒಂಟಿಯಲ್ಲ ಎಂಬ ಸಂದೇಶವನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಶಿಬಿರಾರ್ಥಿಗಳ ಕುಟುಂಬದವರಿಗೆ ಕೌಟುಂಬಿಕ ಸಂದೇಶವನ್ನು ಕೌಟುಂಭಿಕ ಸಭೆಯಲ್ಲಿ ನೀಡಲಾಯಿತು. ಈ ಸಂದರ್ಭದಲ್ಲಿ ಆಹ್ವಾನಿತ ವಿಶೇಷ ಅತಿಥಿಗಳಿಂದ ಶಿಬಿರಾರ್ಥಿಗಳಿಗೆ ಬದಲಾವಣೆಯ ಬಗ್ಗೆ ಸಂದೇಶವನ್ನು ಒದಗಿಸಲಾಯಿತು.
ದಿನಾಂಕ 10.01.2021 ರಂದು ಸಮಾರೋಪ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಶ್ರೀ. ದಯಾನಂದ ಜಿ. ಕತ್ತಲ್‌ಸಾರ್, ಅಧ್ಯಕ್ಷರು, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಇವರು ಭಾಗವಹಿಸಿ ತಮ್ಮ ಮುಖ್ಯ ಭಾಷಣದಲ್ಲಿ ಕೆಲವರು ದೈವ ಹಾಗೂ ದೇವರ ಆರಾಧನೆಯ ಹೆಸರಿನಲ್ಲಿ ಮದ್ಯ ಸೇವನೆ ಮಾಡಲಾಗುತ್ತದೆ ಆರಾಧನೆಯಲ್ಲಿ ಮದ್ಯಪಾನ ಮಾಡ ಬೇಕಾಗಿಲ್ಲ ಕೇವಲ ಭಕ್ತಿಯ ಮೂಲಕವೇ ದೇವರ ಕೃಪೆಗೆ ಪಾತ್ರರಾಗಬಹುದು ಎಂದು ತಿಳಿಸಿದರು. ಡಾ. ಮಮತಾ, ವೈದ್ಯಕೀಯ ಅಧೀಕ್ಷಕರು, ಎಸ್. ಡಿ. ಎಂ. ಆಯುರ್ವೇದ ಆಸ್ಪತ್ರೆ, ಉಡುಪಿ. ಶ್ರೀ. ದೇವರಾಜ್ ಶೆಟ್ಟಿಗಾರ್, ಹಿರಿಯ ವಕೀಲರು, ಉಡುಪಿ ಡಾ. ವಿನಾಯಕ್ ಶೆಣ್ಯೆ ಉಪಾಧ್ಯಕ್ಷರು , ಭಾರತೀಯ ವೈದ್ಯಕೀಯ ಸಂಘ ,ಉಡುಪಿ-ಕರಾವಳಿ, ಇವರು ಮುಖ್ಯ ಆತಿಥಿಗಳಾಗಿ ಭಾಗವಹಿಸಿದರು ಡಾ. ಎ.ವಿ.ಬಾಳಿಗಾ ಸಮೂಹ ಸಂಸ್ಥೆಗಳ ನಿರ್ದೇಶಕರಾದ ಡಾ. ಪಿ.ವಿ.ಭಂಡಾರಿಯವರು ಅಧ್ಯಕ್ಷತೆ ವಹಿಸಿದ್ದರು.